ವಾಚಕರಿಂದ ಪ್ರಶ್ನೆಗಳು
ಯೋಬನು ಜೀವಿಸಿದ್ದ ಸಮಯದಲ್ಲಿ, ಯೆಹೋವನಿಗೆ ನಂಬಿಗಸ್ತನಾಗಿದ್ದ ಒಬ್ಬನೇ ಮಾನವನು ಅವನಾಗಿದ್ದನೆಂದು ಯೋಬ 1:8 ರಿಂದ ನಾವು ತಿಳಿಯತಕ್ಕದ್ದೋ?
ಇಲ್ಲ. ಯೋಬ 1:8 ರಿಂದ ಈ ತೀರ್ಮಾನವು ಸಮರ್ಥಿಸಲ್ಪಡುವುದಿಲ್ಲ, ಅದನ್ನುವುದು:
“ಆಗ ಯೆಹೋವನು—ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ ಎಂದು ಸೈತಾನನಿಗೆ ಹೇಳಿದನು.” ತದ್ರೀತಿಯ ಗುಣ ನಿರ್ಣಯವನ್ನು ಯೋಬ 2:3 ರಲ್ಲಿಯೂ ದೇವರು ಒದಗಿಸುತ್ತಾ, ಸೈತಾನನ್ನು ಕೇಳಿದ್ದು: “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ? ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ.”
ದೇವರು ಯಾರನ್ನು ನಂಬಿಗಸ್ತರಾಗಿ ಸ್ವೀಕರಿಸಿದನೋ ಆ ಜೀವಿಸಿರುವ ಮಾನವರಲ್ಲಿ ಯೋಬನು ಒಬ್ಬನೇ ಆಗಿರಲಿಲ್ಲವೆಂದು ಯೋಬನ ಪುಸ್ತಕವು ತಾನೇ ಸೂಚಿಸುತ್ತದೆ. 32 ನೆಯ ಅಧ್ಯಾಯದ ಆರಂಭದಲ್ಲಿ, ನಾವು ಎಲೀಹುವಿನ ಕುರಿತು ಓದುತ್ತೇವೆ. ಎಲೀಹು ಯುವಕನಾಗಿದ್ದಾಗ್ಯೂ, ಯೋಬನ ಒಳನೋಟದ ತಪ್ಪನ್ನು ತಿದ್ದದನ್ದು ಮತ್ತು ಸತ್ಯ ದೇವರನ್ನು ಮಹಿಮೆಪಡಿಸಿದ್ದನು.—ಯೋಬ 32:6–33:6, 31-33; 35:1–36:2.
ಆದಕಾರಣ, ‘ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ’ ಎಂಬ ದೇವರ ಹೇಳಿಕೆಯು, ಯಥಾರ್ಥಚಿತ್ತನಾದ ಮನುಷ್ಯನೋಪಾದಿ ಯೋಬನು ವಿಶಿಷ್ಟವಾಗಿ ಎದ್ದುಕಾಣುವವನಾಗಿದನ್ದೆಂಬ ಅರ್ಥದಲ್ಲಿರಲೇಬೇಕು. ಐಗುಪ್ತದಲ್ಲಿ ಯೋಸೇಫನ ಮರಣ ಮತ್ತು ದೇವರ ಪ್ರವಾದಿಯಾಗಿ ಮೋಶೆಯು ಸೇವೆ ಆರಂಭಿಸಿದ ಸಮಯ ಈ ಎರಡರ ನಡುವಣ ಕಾಲದಲ್ಲಿ ಯೋಬನು ಜೀವಿಸಿದ್ದನೆಂಬದು ಸಂಭವನೀಯ. ಆ ಕಾಲಾವಧಿಯಲ್ಲಿ ಇಸ್ರಾಯೇಲ್ಯರು ಬಹು ಸಂಖ್ಯೆಯಲ್ಲಿ ಐಗುಪ್ತದಲ್ಲಿ ನಿವಾಸಿಸಿದ್ದರು. ಅವರೆಲ್ಲರು ದೇವರಿಗೆ ಅಪನಂಬಿಗಸ್ತರೂ ಅಸ್ವೀಕರಣೀಯರೂ ಆಗಿದ್ದರೆಂದು ನೆನಸಲು ಯಾವ ಕಾರಣವೂ ಇಲ್ಲ; ಯೆಹೋವನಲ್ಲಿ ಭರವಸೆಯಿಟ್ಟಿದ್ದ ಅನೇಕರು ಪ್ರಾಯಶಃ ಅಲ್ಲಿದ್ದಿರಬಹುದು. (ವಿಮೋಚನಕಾಂಡ 2:1-10; ಇಬ್ರಿಯ 11:23) ಆದರೂ, ಯೋಸೇಫನಿಗಿದ್ದ ಹಾಗೆ, ಒಂದು ಪ್ರಧಾನ ಪಾತ್ರವನ್ನು ಅವರಲ್ಲಿ ಯಾರೂ ವಹಿಸಿರಲಿಲ್ಲ, ಅಥವಾ ಇಸ್ರಾಯೇಲ್ ಜನಾಂಗವನ್ನು ಐಗುಪ್ತದಿಂದ ಹೊರಗೆ ನಡಿಸಿದರಲ್ಲಿ ಮೋಶೆಯು ಇದ್ದಂತೆ, ಸತ್ಯಾರಾಧನೆಯ ಸಂಬಂಧದಲ್ಲಿ ಎದ್ದುಕಾಣುವ ಆರಾಧಕರೂ ಅವರಾಗಿರಲಿಲ್ಲ.
ಬೇರೆ ಕಡೆಯಲ್ಲಿ ಜೀವಿಸಿದ್ದರೂ, ಗಮನಾರ್ಹ ಸಮಗ್ರತೆಯ ಒಬ್ಬ ಮನುಷ್ಯನಿದ್ದನು. “ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದನು.”—ಯೋಬ 1:1.
ಹೀಗೆ ಯೆಹೋವನು ಯೋಬನನ್ನು ನಂಬಿಕೆ ಮತ್ತು ಭಕ್ತಿಯ ಎದ್ದುಕಾಣುವ ಅಥವಾ ಗಮನಾರ್ಹ ಮಾದರಿಯಾಗಿ ತಿಳಿಸ ಸಾಧ್ಯವಿತ್ತು. ತದ್ರೀತಿಯಲ್ಲಿ, ಬೈಬಲ್ ಲೇಖಕರಾದ ಯೆಹೆಜ್ಕೇಲ ಮತ್ತು ಯಾಕೋಬರು ಯೋಬನನ್ನು ನೀತಿ ಮತ್ತು ತಾಳ್ಮೆಯ ಒಂದು ಮಾದರಿಯೋಪಾದಿ ಪ್ರತ್ಯೇಕವಾಗಿ ಪೂರ್ವ ನಿದರ್ಶಿಸಿದ್ದಾರೆ.—ಯೆಹೆಜ್ಕೇಲ 14:14; ಯಾಕೋಬ 5:11.