ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮಹಾಶಕ್ತನಾಗಿರುವ ಯೆಹೋವನು
    ಕಾವಲಿನಬುರುಜು—2000 | ಮಾರ್ಚ್‌ 1
    • 5. ಯೆಹೋವನ ಕಾರ್ಯಗಳಲ್ಲಿ ಆತನ ಶಕ್ತಿಯ ಯಾವ ಪುರಾವೆಯನ್ನು ನಾವು ಕಂಡುಕೊಳ್ಳುತ್ತೇವೆ?

      5 ದಾವೀದನಂತೆ ನಾವು ‘ದೇವರ ಕೃತಿಗಳಿಗಾಗಿ ಹುಡುಕುವಲ್ಲಿ’ ಆತನ ಶಕ್ತಿಯನ್ನು ಎಲ್ಲೆಲ್ಲೂ, ಅಂದರೆ ಮಾರುತದಲ್ಲಿ, ಅಲೆಗಳಲ್ಲಿ, ಗುಡುಗುಮಿಂಚುಗಳಲ್ಲಿ, ಭೋರ್ಗರೆಯುವ ನದಿಗಳಲ್ಲಿ ಹಾಗೂ ಭವ್ಯವಾದ ಪರ್ವತಗಳಲ್ಲಿ ನೋಡಸಾಧ್ಯವಿದೆ. (ಕೀರ್ತನೆ 111:2, NW; ಯೋಬ 26:12-14) ಅಷ್ಟುಮಾತ್ರವಲ್ಲ, ಯೆಹೋವನು ಯೋಬನಿಗೆ ಜ್ಞಾಪಿಸಿದಂತೆ, ಪ್ರಾಣಿಗಳು ಸಹ ಆತನ ಬಲಕ್ಕೆ ಸಾಕ್ಷ್ಯವನ್ನು ನೀಡುತ್ತವೆ. ಇವುಗಳಲ್ಲಿ ನೀರಾನೆ ಅಥವಾ ನೀರ್ಗುದುರೆಯು ಇದೆ. ಯೆಹೋವನು ಯೋಬನಿಗೆ ಹೇಳಿದ್ದು: “ಅದರ ಬಲವು ಸೊಂಟದಲ್ಲಿಯೂ . . . ಅದರ ಎಲುಬುಗಳು ಕಬ್ಬಿಣದ ಹಾರೆಗಳಂತೆಯೂ” ಇದೆ. (ಯೋಬ 40:15-18) ಕಾಡುಹೋರಿಯ ಭಯಹುಟ್ಟಿಸುವಂತಹ ಶಕ್ತಿಯು ಸಹ ಬೈಬಲ್‌ ಸಮಯಗಳಲ್ಲಿ ಪ್ರಸಿದ್ಧವಾಗಿತ್ತು. “ಸಿಂಹಗಳ ಬಾಯಿಂದಲೂ ಕಾಡುಕೋಣಗಳ [“ಕಾಡುಹೋರಿಗಳ,” NW] ಕೊಂಬುಗಳಿಂದಲೂ” ತನ್ನನ್ನು ಉಳಿಸುವಂತೆ ದಾವೀದನು ಪ್ರಾರ್ಥಿಸಿದನು.—ಕೀರ್ತನೆ 22:21; ಯೋಬ 39:9-11.

      6. ಶಾಸ್ತ್ರವಚನಗಳಲ್ಲಿ ಹೋರಿ ಯಾವುದನ್ನು ಚಿತ್ರಿಸುತ್ತದೆ, ಮತ್ತು ಏಕೆ? (ಪಾದಟಿಪ್ಪಣಿಯನ್ನು ನೋಡಿ.)

      6 ಹೋರಿಗಿರುವ ಶಕ್ತಿಯ ಕಾರಣ, ಅದನ್ನು ಬೈಬಲಿನಲ್ಲಿ ಯೆಹೋವನ ಶಕ್ತಿಯ ಸಂಕೇತವಾಗಿ ಉಪಯೋಗಿಸಲಾಗಿದೆ.c ಅಪೊಸ್ತಲ ಯೋಹಾನನು ನೋಡಿದಂತಹ ಯೆಹೋವನ ಸಿಂಹಾಸನದ ದರ್ಶನವು ನಾಲ್ಕು ಜೀವಿಗಳನ್ನು ಚಿತ್ರಿಸುತ್ತದೆ, ಅದರಲ್ಲಿ ಒಂದರ ಮುಖವು ಹೋರಿಯಂತಿತ್ತು. (ಪ್ರಕಟನೆ 4:6, 7) ಈ ಕೆರೂಬಿಯರು ಚಿತ್ರಿಸಿದಂತಹ ಯೆಹೋವನ ನಾಲ್ಕು ಪ್ರಮುಖ ಗುಣಗಳಲ್ಲಿ ಶಕ್ತಿಯೂ ಒಂದಾಗಿತ್ತು ಎಂಬುದು ಸುವ್ಯಕ್ತ. ಇತರ ಗುಣಗಳು ಪ್ರೀತಿ, ವಿವೇಕ, ಮತ್ತು ನ್ಯಾಯವಾಗಿದೆ. ಶಕ್ತಿಯು ದೇವರ ವ್ಯಕ್ತಿತ್ವದ ಬಹಳ ಪ್ರಾಮುಖ್ಯ ಅಂಶವಾಗಿರುವ ಕಾರಣ, ಆತನ ಶಕ್ತಿಯ ಕುರಿತು ಹಾಗೂ ಅದನ್ನು ಆತನು ಹೇಗೆ ಬಳಸುತ್ತಾನೆ ಎಂಬುದರ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳುವುದು, ನಾವು ಆತನಿಗೆ ಹತ್ತಿರವಾಗುವಂತೆ ಮಾಡುವುದು ಮಾತ್ರವಲ್ಲ, ನಮಗಿರುವ ಯಾವುದೇ ಶಕ್ತಿಯನ್ನು ಉಪಯೋಗಿಸುವುದರಲ್ಲಿ ಆತನ ಮಾದರಿಯನ್ನು ಅನುಕರಿಸುವಂತೆ ಸಹಾಯಮಾಡುವುದು.—ಎಫೆಸ 5:1.

  • ಮಹಾಶಕ್ತನಾಗಿರುವ ಯೆಹೋವನು
    ಕಾವಲಿನಬುರುಜು—2000 | ಮಾರ್ಚ್‌ 1
    • c ಬೈಬಲಿನಲ್ಲಿ ಉಲ್ಲೇಖಿಸಲ್ಪಟ್ಟಿರುವ ಕಾಡುಹೋರಿಯು, ಕಾಡೆತ್ತುಗಳು (ಲ್ಯಾಟಿನ್‌ ಭಾಷೆಯಲ್ಲಿ ಯೂರಸ್‌) ಆಗಿದ್ದಿರಸಾಧ್ಯವಿದೆ. ಎರಡು ಸಾವಿರ ವರ್ಷಗಳ ಹಿಂದೆ, ಈ ರೀತಿಯ ಪ್ರಾಣಿಗಳು ಗಾಲ್‌ ದೇಶದಲ್ಲಿ (ಈಗ ಫ್ರಾನ್ಸ್‌) ಕಂಡುಬಂದವು ಮತ್ತು ಅವುಗಳ ಕುರಿತು ಜೂಲಿಯಸ್‌ ಸೀಸರ್‌ ಈ ರೀತಿಯಲ್ಲಿ ಬರೆದನು: “ಈ ಯೂರಿ ಗಾತ್ರದಲ್ಲಿ ಆನೆಗಿಂತ ಸ್ವಲ್ಪ ಚಿಕ್ಕದಾಗಿರುವುದಾದರೂ, ಅವುಗಳು ಸ್ವಭಾವದಲ್ಲಿ, ಬಣ್ಣದಲ್ಲಿ ಹಾಗೂ ದೇಹದ ರಚನೆಯಲ್ಲಿ ಹೋರಿಗಳಂತಿವೆ. ಅವುಗಳ ಶಕ್ತಿ ಹಾಗೂ ವೇಗವು ಮಹತ್ತಾದದ್ದು; ಮನುಷ್ಯನಾಗಲಿ ಪ್ರಾಣಿಯಾಗಲಿ ಒಮ್ಮೆ ಅವುಗಳ ಕಣ್ಣಿಗೆ ಬಿದ್ದವೆಂದರೆ, ಯಾವುದೇ ಕಾರಣಕ್ಕೂ ಅವುಗಳಿಗೆ ಹಾನಿಯನ್ನು ಮಾಡದೇ ಬಿಡುವುದಿಲ್ಲ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ