ಯೆಹೋವನಲ್ಲಿ ಆಶ್ರಯವನ್ನು ಪಡೆಯಿರಿ
“ಯೆಹೋವನೇ, ನಿನ್ನ ಮರೆಹೊಕ್ಕಿದ್ದೇನೆ.”—ಕೀರ್ತನೆ 31:1.
1. ಯೆಹೋವನ ಆಶ್ರಯ ಒದಗಿಸುವ ಸಾಮರ್ಥ್ಯವನ್ನು ಕೀರ್ತನೆ 31 ಹೇಗೆ ಅಭಿವ್ಯಕ್ತಿಸುತ್ತದೆ?.
ಒಂದು ಇಂಪಾದ ಸರ್ವವು, ಮನಸ್ಸು ಮತ್ತು ಶರೀರದಲ್ಲಿ ಆಯಾಸಗೊಂಡಿದ್ದರೂ ತನ್ನನ್ನೇ ಯೆಹೋವನ ಮೇಲೆ ಹಾಕಿಕೊಳ್ಳುವ, ಒಬ್ಬ ಮನುಷ್ಯನ ಕುರಿತು ಹಾಡುತ್ತದೆ. ಆ ಪವಿತ್ರ ಪದ್ಯದ ಪದಗಳು, ನಂಬಿಕೆ ವಿಜಯಿಯಾಗುತ್ತದೆಂದು ಹೇಳುತ್ತವೆ. ಸರ್ವಶಕ್ತನ ಕಾದಿರುವ ಬಾಹುಗಳಲ್ಲಿ ಈ ಮನುಷ್ಯನು, ಅಟಿಕ್ಟೊಂಡು ಬರುವ ಹಿಂಸಕರಿಂದ ಆಶ್ರಯವನ್ನು ಕಂಡುಕೊಳ್ಳುತ್ತಾನೆ. “ಯೆಹೋವನೇ, ನಿನ್ನ ಮರೆಹೊಕ್ಕಿದ್ದೇನೆ;” ಎಂದು ಕೀರ್ತನೆಯು ಮುಂದುವರಿಯುತ್ತದೆ. “ನನಗೆ ಎಂದಿಗೂ ಆಶಾಭಂಗಪಡಿಸಬೇಡ. ನಿನ್ನ ನೀತಿಗನುಸಾರವಾಗಿ ನನ್ನನ್ನು ರಕ್ಷಿಸು.”—ಕೀರ್ತನೆ 31:1.
2. (ಎ) ಯಾವ ಎರಡು ಸ್ತಂಭಗಳ ಮೇಲೆ ಆಧಾರಿಸಿ ನಮ್ಮ ಕೋಟೆಯಾಗಿ ಯೆಹೋವನಲ್ಲಿ ನಾವು ಭರವಸೆ ಇಡಬಲ್ಲೆವು? (ಬಿ) ಯೆಹೋವನು ಯಾವ ರೀತಿಯ ದೇವರಾಗಿದ್ದಾನೆ?
2 ಆ ಕೀರ್ತನೆಗಾರನಿಗೆ ಒಂದೇ—ಅತ್ಯುತ್ತಮವಾದ—ಆಶ್ರಯವಿದೆ! ಇತರ ವಿಷಯಗಳು ಸಂಶಯಾಸ್ಪದವಾಗಿರಲಿ, ಆದರೆ ಈ ನಿಜತ್ವ ಉಳಿಯುತ್ತದೆ: ಯೆಹೋವನು ಅವನ ಪ್ರಬಲ ಸ್ಥಾನವೂ, ಅವನ ಕೋಟೆಯೂ ಆಗಿದ್ದಾನೆ. ಅವನ ಭರವಸೆಯು ಎರಡು ದೃಢ ಸ್ತಂಭಗಳ ಮೇಲೆ ನೆಟ್ಟಿರುತ್ತದೆ. ಒಂದು, ಯೆಹೋವನು ನಾಚಿಕೆಗೀಡುಮಾಡದಿರುವ ಅವನ ನಂಬಿಕೆ, ಮತ್ತು ಎರಡು, ಆತನ ಸೇವಕನನ್ನು ಶಾಶ್ವತವಾಗಿ ಬಿಟ್ಟುಬಿಡುವುದಿಲ್ಲ ಎಂಬ ಅರ್ಥದ, ಯೆಹೋವನ ನೀತಿ. ಆತನ ನಂಬಿಗಸ್ತ ಸೇವಕರನ್ನು ನಾಚಿಕೆಗೀಡುಮಾಡುವ ದೇವರು ಆತನಲ್ಲ; ಆತನು ವಾಗ್ದಾನವನ್ನು ಮುರಿಯುವವನಲ್ಲ. ಬದಲಿಗೆ, ಆತನು ಸತ್ಯದ ದೇವರಾಗಿದ್ದಾನೆ ಮತ್ತು ಆತನಲ್ಲಿ ಶ್ರದ್ಧಾಪೂರ್ವಕ ಭರವಸೆಯನ್ನಿಡುವವರಿಗೆ ಪ್ರತಿಫಲ ಕೊಡುವಾತನಾಗಿದ್ದಾನೆ. ಕೊನೆಗೆ, ನಂಬಿಕೆಗೆ ಪ್ರತಿಫಲವು ದೊರಕುವುದು! ವಿಮೋಚನೆಯು ಬರುವುದು!—ಕೀರ್ತನೆ 31:5, 6.
3. ಕೀರ್ತನೆಗಾರನು ಯೆಹೋವನನ್ನು ಹೇಗೆ ಮಹಿಮೆಪಡಿಸುತ್ತಾನೆ?
3 ದುಃಖ ಮತ್ತು ತೀವ್ರ ವ್ಯಥೆಯ ಆಳಗಳಿಂದ ಭರವಸೆಯ ಪರಮಾವಧಿಗೆ ಏಳುವ ತರಂಗಿತ ರಾಗಗಳೊಂದಿಗೆ ತನ್ನ ಸಂಗೀತವನ್ನು ರಚಿಸುವಾಗ, ಕೀರ್ತನೆಗಾರನು ಅಂತಸ್ಥ ಬಲವನ್ನು ಕಂಡುಕೊಳ್ಳುತ್ತಾನೆ. ಯೆಹೋವನ ನಿಷ್ಠೆಯ ಪ್ರೀತಿಗಾಗಿ ಅವನು ಆತನನ್ನು ಮಹಿಮೆಪಡಿಸುತ್ತಾನೆ. ಅವನು ಹಾಡುವುದು: “ಮುತ್ತಿಗೆಹಾಕಲ್ಪಟ್ಟಿರುವ ನಗರದಲ್ಲಿದ್ದ ನನಗೆ ತನ್ನ ಕೃಪೆಯನ್ನು ಆಶ್ಚರ್ಯಕರವಾಗಿ ತೋರಿಸಿದ ಯೆಹೋವನಿಗೆ ಸ್ತೋತ್ರ.”—ಕೀರ್ತನೆ 31:21.
ರಾಜ್ಯ ಘೋಷಕರ ಬಲಿಷ್ಠ ಪಲ್ಲವಿ
4, 5. (ಎ)ಇಂದು ಯಾವ ಬಲಿಷ್ಠವಾದ ಪಲ್ಲವಿಯು ಯೆಹೋವನನ್ನು ಸ್ತುತಿಸುತ್ತದೆ, ಮತ್ತು ಅವರಿದನ್ನು ಕಳೆದ ಸೇವಾ ವರ್ಷದಲ್ಲಿ ಹೇಗೆ ಮಾಡಿರುತ್ತಾರೆ? (12-15 ಪುಟಗಳಲ್ಲಿರುವ ತಃಖ್ತೆಯನ್ನು ನೋಡಿ.) (ಬಿ) ರಾಜ್ಯ ಘೋಷಣೆಯ ಪಲ್ಲವಿಯಲ್ಲಿ ಜೊತೆಗೂಡಲು ಇಷ್ಟವುಳ್ಳ ವ್ಯಕ್ತಿಗಳು ಇರುವರೆಂದು ಜ್ಞಾಪಕಾಚರಣೆಯ ಹಾಜರಿಯು ಯಾವ ವಿಧದಲ್ಲಿ ತೋರಿಸಿಕೊಡುತ್ತದೆ. (ತಃಖ್ತೆಯನ್ನು ನೋಡಿ.) (ಸಿ) ನಿಮ್ಮ ಸಭೆಯಲ್ಲಿ ಯಾವ ಗುಂಪು ಪಲ್ಲವಿಯಲ್ಲಿ ಜೊತೆ ಸೇರುವ ಸ್ಥಾನದಲ್ಲಿರಬಹುದು?
4 ಇಂದು, ಆ ಕೀರ್ತನೆಯ ಮಾತುಗಳು ಮತ್ತೊಮ್ಮೆ ಜೀವ ತಾಳಿವೆ. ಯೆಹೋವನಿಗೆ ಸ್ತುತಿಯ ಪದ್ಯಗಳನ್ನು ಯಾವುದೇ ದುಷ್ಟ ವಿರೋಧಿಯ ಮೂಲಕ, ಯಾವುದೇ ನೈಸರ್ಗಿಕ ವಿಪತ್ತಿನ ಮೂಲಕ, ಯಾ ಯಾವುದೇ ಆರ್ಥಿಕ ಬಾಧೆಯ ಮೂಲಕ ಅದುಮಿಡಲು ಸಾಧ್ಯವಿಲ್ಲ; ಸತ್ಯವಾಗಿಯೂ, ಯೆಹೋವನ ಪ್ರೀತಿಯ ದಯೆಯು ಆತನ ಜನರಿಗೆ ಅದ್ಭುತಕರವಾಗಿರುತ್ತದೆ. ಕಳೆದ ಸೇವಾ ವರ್ಷದಲ್ಲಿ ಲೋಕವ್ಯಾಪಕವಾಗಿ, 231 ದೇಶಗಳಲ್ಲಿ, ಪರಮಾವಧಿಗೇರುವ 47,09,889 ಜನರ ಬಲಿಷ್ಠ ಪಲ್ಲವಿಯು ದೇವರ ರಾಜ್ಯದ ಸಂದೇಶವನ್ನು ಹಾಡಿತು. ಕ್ರಿಸ್ತ ಯೇಸುವಿನ ಮೂಲಕವಾಗಿರುವ ಯೆಹೋವನ ಸ್ವರ್ಗೀಯ ರಾಜ್ಯವು ಅವರನ್ನು ನಿರಾಶೆಗೊಳಿಸಲಾರದ ಒಂದು ಆಶ್ರಯವಾಗಿದೆ. ಕಳೆದ ವರ್ಷ, ಈ ರಾಜ್ಯದ ಘೋಷಕರ 73,070 ಸಭೆಗಳು ಒಟ್ಟು 1,05,73,41,972 ತಾಸುಗಳನ್ನು ಸುವಾರ್ತೆ ಸಾರುವ ಕೆಲಸದಲ್ಲಿ ವಿನಿಯೋಗಿಸಿದವು. ಇದರ ಪರಿಣಾಮವಾಗಿ 2,96,004 ವ್ಯಕ್ತಿಗಳು ದೇವರಿಗೆ ತಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸೂಚಿಸಿದರು. ಕೀಯವ್, ಯೂಕ್ರೇನ್ನಲ್ಲಿ ಈ ಕಳೆದ ಆಗಸ್ಟ್ನಲ್ಲಿ ಜರುಗಿದ ದೈವಿಕ ಬೋಧನೆ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಹಾಜರಿದ್ದವರೆಲ್ಲರಿಂದ ಎಂತಹ ಒಂದು ಅದ್ಭುತ ಆಶ್ಚರ್ಯವು ಅನುಭವಿಸಲ್ಪಟ್ಟಿತು. ಯೆಹೋವನ ಸಾಕ್ಷಿಗಳ ಇತಿಹಾಸದಲ್ಲಿ ಒಂದು ಅತಿ ಗಮನಾರ್ಹವಾದ—ಎಂದೂ ನೋಡಿರದ ನಿಜ ಕ್ರೈಸ್ತರ ಅತಿ ದೊಡ್ಡ ದಾಖಲಿತ ಸಾಮುದಾಯಿಕ ದೀಕ್ಷಾಸ್ನಾನದ—ಘಟನೆಯನ್ನು ಅವರು ನೋಡಿದರು! ಯೆಶಾಯ 54:2, 3 ರಲ್ಲಿ ಪ್ರವಾದಿಸಿದಂತೆ, ದೇವರ ಜನರು ಹಿಂದೆಂದೂ ಕಂಡಿಲ್ಲದ ಸಂಖ್ಯೆಗಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ.
5 ಆದಾಗ್ಯೂ, ದೇವರ ರಾಜ್ಯದ ಸಿದ್ಧರಾಗಿರುವ ಹೆಚ್ಚಿನ ಪ್ರಜೆಗಳು ಈ ಪಲ್ಲವಿಯಲ್ಲಿ ಜೊತೆ ಸೇರಲು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಕಳೆದ ವರ್ಷ, ಯೇಸುವಿನ ಮರಣದ ಜ್ಞಾಪಕಾಚರಣೆಯಲ್ಲಿ ದಿಗ್ಭ್ರಮೆ ಹಿಡಿಸುವ 1,18,65,765 ಮೊತ್ತ ಜನರು ಹಾಜರಾಗಿದ್ದರು. ಈ ಸೇವಾ ವರ್ಷದಲ್ಲಿ ಇವರಲ್ಲಿ ಅನೇಕರು ಮನೆಯಿಂದ ಮನೆಗೆ ರಾಜ್ಯದ ಸಂಗೀತವನ್ನು ಹಾಡಲು ಯೋಗ್ಯತೆ ಪಡೆಯುವರು ಎಂದು ನೀರಿಕ್ಷೆ ಇದೆ. ಆ ಪ್ರತೀಕ್ಷೆಯು ಸತ್ಯದ ವೈರಿ, ಪಿಶಾಚನಾದ ಸೈತಾನನನ್ನು ಎಷ್ಟೊಂದು ಕ್ರೋಧಿತನನ್ನಾಗಿ ಮಾಡಬೇಕು!—ಪ್ರಕಟನೆ 12:12, 17.
6, 7. ಯೆಹೋವನ ಸಹಾಯದಿಂದ ಒಬ್ಬ ಅಭಿರುಚಿಯುಳ್ಳ ವ್ಯಕ್ತಿಯು ದೆವ್ವ ಪೀಡೆಯನ್ನು ಹೇಗೆ ಜಯಿಸಿದನು ಎಂಬುದನ್ನು ವಿವರಿಸಿರಿ.
6 ಇತರರು ಆ ಬಲಿಷ್ಠವಾದ ಪಲ್ಲವಿಯೊಂದಿಗೆ ತಮ್ಮ ಸರ್ವಗಳನ್ನು ಕೂಡಿಸುವುದನ್ನು ತಡೆಯಲು ಸೈತಾನನು ಪ್ರಯತ್ನಿಸುವನು. ಉದಾಹರಣೆಗಾಗಿ, ಥಾಯ್ಲೆಂಡಿನಲ್ಲಿನ ಪ್ರಚಾರಕರು ದೆವ್ವ ಪೀಡನೆಯಿಂದ ಬಾಧಿತರಾಗುವ ಜನರನ್ನು ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಾರೆ. ಆದಾಗ್ಯೂ, ಅನೇಕ ಯಥಾರ್ಥರು ಯೆಹೋವನ ಸಹಾಯದಿಂದ ಬಿಡುಗಡೆ ಹೊಂದಿರುತ್ತಾರೆ. ಕುತೂಹಲದಿಂದ ಒಬ್ಬ ಮಾಂತ್ರಿಕನನ್ನು ಭೇಟಿ ಮಾಡಿದ ಅನಂತರ, ಒಬ್ಬ ಮನುಷ್ಯನು ಹತ್ತು ವರುಷಗಳವರೆಗೆ ದೆವ್ವಗಳ ಶಕ್ತಿಯಡಿಯಲ್ಲಿದ್ದನು. ಒಬ್ಬ ಪಾದ್ರಿಯ ಸಹಾಯದಿಂದ ಅವುಗಳ ಶಕಿಯ್ತಿಂದ ಸ್ವತಂತ್ರನಾಗಲು ಅವನು ಪ್ರಯತ್ನಿಸಿದನು, ಆದರೆ ಆವನು ಯಾವುದೇ ನಿಜ ಪ್ರಗತಿಯನ್ನು ಅನುಭವಿಸಲಿಲ್ಲ. ಯೆಹೋವನ ಸಾಕ್ಷಿಗಳ ಒಬ್ಬ ಪೂರ್ಣ ಸಮಯದ ಶುಶ್ರೂಷಕನು ಆ ಮನುಷ್ಯನೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಿದನು ಮತ್ತು ದೆವ್ವ ಶಕಿಯ್ತಿಂದ ಸ್ವತಂತ್ರನಾಗುವ ಒಂದೇ ಮಾರ್ಗವನ್ನು—ಸತ್ಯದ ನಿಷ್ಕ್ರಷ್ಟ ಜ್ಞಾನವನ್ನು ತೆಗೆದುಕೊಳ್ಳುವುದು, ಯೆಹೋವ ದೇವರಲ್ಲಿ ನಂಬಿಕೆಯನ್ನು ಇಡುವುದು, ಮತ್ತು ಆತನನ್ನು ಪ್ರಾರ್ಥನೆಯಲ್ಲಿ ವಿನಂತಿಸುವುದು—ಬೈಬಲಿನಿಂದ ಅವನಿಗೆ ಕಲಿಸಿದನು.—1 ಕೊರಿಂಥ 2:5; ಫಿಲಿಪ್ಪಿ 4:6, 7; 1 ತಿಮೊಥೆಯ 2:3, 4.
7 ಈ ಚರ್ಚೆಯ ಆ ರಾತ್ರಿಯ ಬಳಿಕ, ದೆವ್ವ ಮಾಧ್ಯಮವಾಗಿರಲು ಹಿಂತಿರುಗದಿರುವಲ್ಲಿ ಆ ಮನುಷ್ಯನನ್ನು ಬೆದರಿಸಿದ ಅವನ ಸತ್ತ ತಂದೆಯ ಕನಸನ್ನು ಅವನು ಕಂಡನು. ಅವನ ಕುಟುಂಬವು ಕಷ್ಟಾನುಭವಿಸಲಾರಂಭಿಸಿತು. ಹಿಂದೆ ತಿರುಗಲು ಇಷ್ಟವಿಲ್ಲದೆ, ಆ ಮನುಷ್ಯನು ಅವನ ಬೈಬಲ್ ಪಾಠಗಳನ್ನು ಮುಂದುವರಿಸಿದನು ಮತ್ತು ಕೂಟಗಳಿಗೆ ಹಾಜರಾಗಲಾರಂಭಿಸಿದನು. ಆ ಅಧ್ಯಯನಗಳೊಂದರಲ್ಲಿ, ಭೂತಾರಾಧನಾ ಸಂಸ್ಕಾರಗಳಲ್ಲಿ ಬಳಸುವ ವಸ್ತುಗಳು ಕೆಲವೊಮ್ಮೆ ದೆವ್ವಗಳ ಶಕಿಯ್ತಿಂದ ಸ್ವತಂತ್ರವಾಗಲು ಪ್ರಯತ್ನಿಸುವ ಜನರನ್ನು ಪೀಡಿಸಲು ದೆವ್ವಗಳಿಗೆ ಒಂದು ಮಾರ್ಗವಾಗಿರಬಲ್ಲದೆಂದು ಆ ಪಯನೀಯರನು ವಿವರಿಸಿದನು. ಒಂದು ತಾಯಿತಿಯಂತೆ ಅವನು ಬಳಸಿದ್ದ ಸ್ವಲ್ಪ ತೈಲದ ಜ್ಞಾಪಕ ಆ ಮನುಷ್ಯನಿಗಾಯಿತು. ಅದನ್ನಾತನು ಹೊರಗೆ ಬಿಸಾಡಬೇಕೆನ್ನುವುದನ್ನು ಈಗ ಅರಿತನು. ಅದನ್ನು ತೊಲಗಿಸಿದಂದಿನಿಂದ, ದುಷ್ಟ ಆತ್ಮಗಳ ಮೂಲಕ ಅವನು ಪುನಃ ಪೀಡಿಸಲ್ಪಡಲಿಲ್ಲ. (ಹೋಲಿಸಿ ಎಫೆಸ 6:13; ಯಾಕೋಬ 4:7, 8.) ಅವನು ಮತ್ತು ಅವನ ಹೆಂಡತಿ ಅಧ್ಯಯನದಲ್ಲಿ ಉತ್ತಮವಾಗಿ ಪ್ರಗತಿಯನ್ನು ಮಾಡುತ್ತಿದ್ದಾರೆ ಮತ್ತು ಬೈಬಲ್ ಬೋಧನೆಗಾಗಿ ಕ್ರಮವಾಗಿ ಕೂಟಗಳನ್ನು ಹಾಜರಾಗುತ್ತಾರೆ.
8, 9. ಯಾವ ಇತರ ಅಡಿತ್ಡಡೆಗಳನ್ನು ಕೆಲವು ರಾಜ್ಯ ಘೋಷಕರು ಜಯಿಸಿರುತ್ತಾರೆ?
8 ಇತರ ಅಡಿತ್ಡಡೆಗಳು ಸುವಾರ್ತೆಯ ಧ್ವನಿಯನ್ನು ಕುಂದಿಸಬಹುದು. ಘಾನದಲ್ಲಿ ಅತಿ ದಬ್ಬಾಳಿಕೆಯ ಆರ್ಥಿಕ ಪರಿಸ್ಥಿತಿಯ ಕಾರಣ, ಕೆಲಸಗಾರರು ಉದ್ಯೋಗರಹಿತರಾಗಿದ್ದಾರೆ. ಇದು ಜೀವನದ ಕನಿಷ್ಟ ಆವಶ್ಯಕತೆಗಳನ್ನು ಪಡೆಯುವುದನ್ನು ನಿಜ ಸಮಸ್ಯೆಯನ್ನಾಗಿ ಮಾಡುತ್ತದೆ. ಜೀವನಾವಶ್ಯಕತೆಗಳ ಬೆಲೆಯು ಗಗನಕ್ಕೇರಿದೆ. ಯೆಹೋವನ ಜನರು ಇದನ್ನು ಹೇಗೆ ನಿಭಾಯಿಸುತ್ತಿದ್ದಾರೆ? ತಮ್ಮಲ್ಲಿಯೇ ಭರವಸೆ ಇಡುವುದರ ಮೂಲಕ ಅಲ್ಲ, ಆದರೆ ಯೆಹೋವನಲ್ಲಿ ಭರವಸೆಯನ್ನಿಡುವುದರ ಮೂಲಕ. ಉದಾಹರಣೆಗಾಗಿ, ಒಂದು ದಿನ ಒಬ್ಬ ಮನುಷ್ಯನು ಒಂದು ಮುಚ್ಚಿದ ಲಕೋಟೆಯೊಂದನ್ನು ಶಾಖಾ ಕಚೇರಿಯ ಸ್ವಾಗತದ ಮೇಜಿನ ಮೇಲೆ ಬಿಟ್ಟು ಹೋದನು. ಆ ಲಕೋಟೆಯಲ್ಲಿ 200 ಡಾಲರ್, ಯಾ ಮೂರು ತಿಂಗಳ ಕನಿಷ್ಠ ವೇತನವಿತ್ತು. ಆ ಲಕೋಟೆಯು ಒಂದು ಅನಾಮಧೇಯ ಕಾಣಿಕೆ ಕೊಡುವಾತನಿಂದ ಬಂದಿತ್ತು, ಆದರೆ ಸುತ್ತುಹಾಳೆಯ ಮೇಲೆ ಈ ಬರವಣಿಗೆ ಇತ್ತು: “ನಾನು ನನ್ನ ಕೆಲಸವನ್ನು ಕಳೆದುಕೊಂಡರೂ, ಯೆಹೋವನು ನನಗೆ ಇನ್ನೊಂದನ್ನು ಒದಗಿಸಿದನು. ನಾನು ಆತನಿಗೆ ಮತ್ತು ಆತನ ಮಗ ಯೇಸು ಕ್ರಿಸ್ತನಿಗೆ ಅಭಾರಿಯಾಗಿದ್ದೇನೆ. ಅಂತ್ಯವು ಬರುವ ಮುಂಚೆ ದೇವರ ರಾಜ್ಯದ ಸುವಾರ್ತೆಯ ಪ್ರಸರಿಸುವಿಕೆಯಲ್ಲಿ ಸಹಾಯಿಸಲು, ನಾನು ವಿನಯಶೀಲ ಕಾಣಿಕೆಯನ್ನು ಇದರೊಂದಿಗೆ ಇಡುತ್ತಿದ್ದೇನೆ.”—ಹೋಲಿಸಿ 2 ಕೊರಿಂಥ 9:11.
9 ಯೆಹೋವನಿಗೆ ಸ್ತುತಿಯ ಬಲಿಷ್ಠವಾದ ಪಲ್ಲವಿಯಲ್ಲಿ ಜೊತೆಗೂಡುವವರನ್ನು ತರಬೇತಿಗೊಳಿಸಲು ಕೂಟದ ಹಾಜರಿಯು ಸಹಾಯಿಸುತ್ತದೆ. (ಹೋಲಿಸಿ ಕೀರ್ತನೆ 22:22.) ಹೀಗೆ, ಹಾಂಡುರಸ್ನ ದಕ್ಷಿಣ ಭಾಗದಲ್ಲಿ, ಎಲ್ ಹಾರ್ಡಾನ್ ಎಂದು ಕರೆಯಲ್ಪಡುವ ಒಂದು ಸಭೆ ಇದೆ. ಈ ಸಣ್ಣ ಗುಂಪಿನ ಕುರಿತು ಏನು ವಿಶೇಷ? ಅದು ಅವರ ನಂಬಿಗಸ್ತ ಕೂಟದ ಹಾಜರಿಯಾಗಿದೆ. ಆ ಹತ್ತೊಂಬತ್ತು ಪ್ರಚಾರಕರಲ್ಲಿ, 12 ಪ್ರಚಾರಕರು ಪ್ರತಿಯೊಂದು ವಾರ ಕೂಟಗಳನ್ನು ಹಾಜರಾಗಲು ಒಂದು ಅಗಲವಾದ ನದಿಯನ್ನು ದಾಟಿ ಬರಬೇಕು. ಬಂಡೆಗಳನ್ನು ಮೆಟ್ಟುಗಲ್ಲುಗಳನ್ನಾಗಿ ಬಳಸುವ ಮೂಲಕ ಆ ನದಿಯನ್ನು ಅವರು ದಾಟಶಕ್ತರಾಗುವುದರಿಂದ, ಮಳೆಯಿಲ್ಲದ ಕಾಲದಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿರುವುದಿಲ್ಲ. ಆದಾಗ್ಯೂ, ಮಳೆಗಾಲದಲ್ಲಿ ಪರಿಸ್ಥಿತಿಗಳು ಬದಲಾಗುತ್ತವೆ. ಯಾವುದು ಒಮ್ಮೆ ಪ್ರತಿಬಂಧಕವಲ್ಲದ ನೀರಿನ ಹರವಾಗಿತ್ತೊ ಅದು ಈಗ, ತನ್ನ ಹಾದಿಯಲ್ಲಿರುವುದೆಲ್ಲವನ್ನು ಕೊಚ್ಚಿಕೊಂಡುಹೋಗುವ ರಭಸ ಪ್ರವಾಹವಾಗುತ್ತದೆ. ಈ ಅಡಿಯ್ಡನ್ನು ಗೆಲ್ಲಲು, ಸಹೋದರ ಮತ್ತು ಸಹೋದರಿಯರು ಉತ್ತಮ ಈಜುಗಾರರಾಗಿರಬೇಕು. ದಾಟುವ ಮೊದಲು, ಕೂಟದ ತಮ್ಮ ಬಟ್ಟೆಗೆಳನ್ನು ಒಂದು ಟೀನಾ(ಲೋಹದ ಡಬ್ಬಿ)ದೊಳಗೆ ಹಾಕುತ್ತಾರೆ ಮತ್ತು ಅನಂತರ ಅದನ್ನು ಪ್ಲ್ಯಾಸ್ಟಿಕ್ ಚೀಲದಿಂದ ಮುಚ್ಚುತ್ತಾರೆ. ಬಲಿಷ್ಠ ಈಜುಗಾರನು ಆ ಟೀನಾವನ್ನು ತೇಲುಬುರುಡೆಯಾಗಿ ಬಳಸುತ್ತಾನೆ ಮತ್ತು ಆ ಗುಂಪು ದಾಟುವಂತೆ ನಾಯಕತ್ವ ವಹಿಸುತ್ತಾನೆ. ಇನ್ನೊಂದು ದಡಕ್ಕೆ ಸುರಕ್ಷಿತವಾಗಿ ತಲುಪಿದಾನಂತರ, ಅವರು ತಮ್ಮನ್ನು ಒಣಗಿಸಿಕೊಳ್ಳುತ್ತಾರೆ, ಬಟ್ಟೆಯುಟ್ಟುಕೊಳ್ಳುತ್ತಾರೆ, ಮತ್ತು ಹರ್ಷಭರಿತರಾಗಿ ಮತ್ತು ಹೊಳಪಿನ ಶುಭ್ರತೆಯೊಂದಿಗೆ ರಾಜ್ಯ ಸಭಾಗೃಹಕ್ಕೆ ತಲಪುತ್ತಾರೆ.—ಕೀರ್ತನೆ 40:9.
ನಾವು ನಿವಾಸಿಸಬಹುದಾದ ಒಂದು ಕೋಟೆ
10. ಒತ್ತಡದ ಸಮಯಗಳಲ್ಲಿ ನಾವು ಯೆಹೋವನ ಕಡೆಗೆ ಯಾಕೆ ತಿರುಗಬಲ್ಲೆವು?
10 ನೀವು ನೇರವಾದ ದೆವ್ವಾಕ್ರಮಣಕ್ಕೆ ಒಳಗಾಗಿರಲಿ ಯಾ ಇತರ ಮೂಲಗಳಿಂದ ಒತ್ತಡಕ್ಕೊಳಗಾಗಿರಲಿ ಯೆಹೋವನು ನಿಮ್ಮ ಭದ್ರವಾದ ನೆಲೆಯಾಗಿರಬಲ್ಲನು. ಆತನನ್ನು ಪ್ರಾರ್ಥನೆಯಲ್ಲಿ ಕೂಗಿ ಕರೆಯಿರಿ. ಆತನು ತನ್ನ ಜನರ ಅತಿ ಸೂಕ್ಷ್ಮ ನರಳನ್ನೂ ಗಮನಕೊಟ್ಟು ಕೇಳುತ್ತಾನೆ. ಕೀರ್ತನೆಗಾರನು ಅದನ್ನು ಸತ್ಯವೆಂದು ಕಂಡುಕೊಂಡು, ಬರೆದದ್ದು: “ಕಿವಿಗೊಟ್ಟು ಕೇಳಿ ಬೇಗ ನನ್ನನ್ನು ಬಿಡಿಸು; ನನ್ನನ್ನು ರಕ್ಷಿಸುವ ಆಶ್ರಯಗಿರಿಯೂ ದುರ್ಗಸ್ಥಾನವೂ ಆಗಿರು. ನೀನೇ ನನ್ನ ಬಂಡೆಯೂ ಕೋಟೆಯೂ ಆಗಿದ್ದೀಯಲ್ಲಾ; ಆದದರಿಂದ ನಿನ್ನ ಹೆಸರಿನ ನಿಮಿತ್ತ ದಾರಿತೋರಿಸಿ ನನ್ನನ್ನು ನಡಿಸು.”—ಕೀರ್ತನೆ 31:2-4.
11. ಯೆಹೋವನ ದುರ್ಗವು ತಾತ್ಕಾಲಿಕ ಸ್ಥಾನವಾಗಿರುವುದಿಲ್ಲ ಎಂಬುದಕ್ಕೆ ಕಾರಣವನ್ನು ವಿವರಿಸಿರಿ.
11 ಯೆಹೋವನು ಕೇವಲ ತಾತ್ಕಾಲಿಕ ಆಶ್ರಯವನ್ನಷ್ಟೇಯಲ್ಲ, ನಾವು ಭದ್ರತೆಯಲ್ಲಿ ನಿವಾಸಿಸಬಹುದಾದ ಒಂದು ಆಕ್ರಮಣಾಸಾಧ್ಯವಾದ ಕೋಟೆಯನ್ನು ಒದಗಿಸುತ್ತಾನೆ. ಆತನ ಮುಂದಾಳುತ್ವ ಮತ್ತು ಮಾರ್ಗದರ್ಶನೆಯು ಆತನ ಜನರನ್ನು ನಿರೀಕ್ಷೆಗೆಡಿಸಿರುವುದಿಲ್ಲ. ಸೈತಾನ ಮತ್ತು ಆತನ ಸಂತಾನದ ಎಲ್ಲಾ ಕುಟಿಲ ಕಾರ್ಯಗಳನ್ನು ದೈವಿಕ ಶಕ್ತಿಯು ಅನುಪಯುಕ್ತವನ್ನಾಗಿ ಮಾಡುವುದು. (ಎಫೆಸ 6:10, 11) ಯೆಹೋವನಲ್ಲಿ ನಾವು ಪೂರ್ಣ ಹೃದಯದಿಂದ ಭರವಸೆ ಇಡುವಾಗ, ಆತನು ನಮ್ಮನ್ನು ಸೈತಾನನ ಪಾಶದಿಂದ ಹೊರಕ್ಕೆಳೆಯುವನು. (2 ಪೇತ್ರ 2:9) ಕಳೆದ ನಾಲ್ಕು ವರ್ಷಗಳಲ್ಲಿ, ಯೆಹೋವನ ಸಾಕ್ಷಿಗಳ ಸಾರುವ ಕಾರ್ಯವು ಸುಮಾರು 35 ದೇಶಗಳಲ್ಲಿ ಪುನಃ ಆರಂಭವಾಗಿದೆ. ಮತ್ತೂ, ಸಾಮಾಜಿಕ, ಆರ್ಥಿಕ, ಯಾ ರಾಜಕೀಯ ಪರಿಸ್ಥಿತಿಗಳು ಸುವಾರ್ತೆ ಸಾರುವುದನ್ನು ತಡೆಯುವಂಥಾ ಲೋಕದ ಸ್ಥಳಗಳಲ್ಲಿ, ಕುರಿಗಳಂಥ ಕೆಲವು ಜನರು ತಮ್ಮನ್ನು ಹೆಚ್ಚು ಸರಾಗವಾಗಿ ತಲಪಸಾಧ್ಯವಾಗುವ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಜಪಾನ್ ಅಂತಹ ಒಂದು ಸ್ಥಳವಾಗಿದೆ.
12. ಜಪಾನಿನಲ್ಲಿ ಒಬ್ಬ ಪಯನೀಯರನು ಹೇಗೆ ಯೆಹೋವನನ್ನು ತನ್ನ ಕೋಟೆಯನ್ನಾಗಿ ಮಾಡಿಕೊಂಡನು?
12 ಜಪಾನಿನಲ್ಲಿ ಕಡಲಾಚೆಗಳಿಂದ ತಾತ್ಕಾಲಿಕ ಕೆಲಸಗಾರರ ಜನಪ್ರವಾಹವಿದೆ, ಮತ್ತು ಅನೇಕ ವಿದೇಶೀ ಭಾಷೆಗಳ ಸಭೆಗಳು ಸ್ಥಾಪನೆಗೊಂಡಿವೆ. ಈ ವಿದೇಶೀ ಭಾಷೆಯ ಕ್ಷೇತ್ರವು ಎಷ್ಟು ಫಲದಾಯಕವಾಗಿದೆ ಎಂದು ಒಂದು ಜಪಾನಿ ಸಭೆಯಲ್ಲಿನ ಒಬ್ಬ ಸಹೋದರನ ಅನುಭವವು ದೃಷ್ಟಾಂತಿಸುತ್ತದೆ. ಎಲ್ಲಿ ಹೆಚ್ಚಿನ ಅಗತ್ಯವಿದೆಯೋ ಅಲ್ಲಿ ಹೋಗಿ ಸೇವಿಸಲು ಅವನು ಬಯಸಿದ್ದನು. ಆದಾಗ್ಯೂ, ಅವನೆಲ್ಲಿದ್ದನೋ ಅಲ್ಲಿ ಅವನು ಆಗಲೆ ಹತ್ತು ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದನು. ಆವನ ಸ್ನೇಹಿತರಲ್ಲೊಬ್ಬನು ಕುಚೋದ್ಯವಾಗಿ ಹೀಗಂದನು: “ಎಲ್ಲಿ ಅಗತ್ಯವು ಇನ್ನೂ ಹೆಚ್ಚಿದೆಯೋ ಅಲ್ಲಿಗೆ ನೀನು ಹೋಗುವಲ್ಲಿ, 20 ಬೈಬಲ್ ಅಧ್ಯಯನಗಳನ್ನು ನಡೆಸಬೇಕಾದಿತು!” ಅವನು ಒಂದು ನೇಮಕವನ್ನು ಪಡೆದನು ಮತ್ತು ಹಿರೋಶಿಮಕ್ಕೆ ಹೋದನು. ಹೇಗೂ, ನಾಲ್ಕು ತಿಂಗಳುಗಳಾನಂತರ, ಅವನಿಗೆ ಕೇವಲ ಒಂದು ಬೈಬಲ್ ಅಧ್ಯಯನವಿತ್ತು. ಒಂದು ದಿನ ಅವನು ಪೋರ್ಚುಗೀಸ್ ಭಾಷೆಯನ್ನು ಮಾತ್ರ ಮಾತಾಡುವ ಬ್ರೆಜೀಲಿನ ಮನುಷ್ಯನನ್ನೇ ಭೇಟಿಯಾದನು. ಸಹೋದರನು ಆ ಮನುಷ್ಯನೊಂದಿಗೆ ಸಂಭಾಷಿಸಶಕ್ತನಾಗದರ್ದಿಂದ, ಅವನು ಒಂದು ಪೋರ್ಚುಗೀಸ್ ಪಠ್ಯ ಪುಸ್ತಕವನ್ನು ಕೊಂಡುಕೊಂಡನು. ಕೆಲವು ಸರಳ ಸಂಭಾಷಣಾ ಅಭಿವ್ಯಕ್ತಿಗಳನ್ನು ಕಲಿತಾದ ಅನಂತರ, ಅವನು ಮತ್ತೊಮ್ಮೆ ಆ ಮನುಷ್ಯನನ್ನು ಭೇಟಿಯಾದನು. ಸಹೋದರನು ಪೋರ್ಚುಗೀಸ್ ಭಾಷೆಯಲ್ಲಿ ಅವನನ್ನು ಅಭಿವಂದಿಸಿದಾಗ, ಆ ಮನುಷ್ಯನು ಆಶ್ಚರ್ಯಗೊಂಡನು ಮತ್ತು, ಒಂದು ದೊಡ್ಡ ಮುಗುಳುನಗೆಯೊಂದಿಗೆ, ಬಾಗಲನ್ನು ಅಗಲವಾಗಿ ತೆರೆದನು ಮತ್ತು ಅವನನ್ನು ಒಳಕ್ಕೆ ಆಮಂತ್ರಿಸಿದನು. ಒಂದು ಬೈಬಲ್ ಅಧ್ಯಯನವು ಆರಂಭಗೊಂಡಿತು. ಬೇಗನೆ ಆ ಸಹೋದರನು 22 ಅಧ್ಯಯನಗಳನ್ನು ನಡೆಸುತ್ತಿದ್ದನು, ಅವುಗಳಲ್ಲಿ 14 ಪೋರ್ಚುಗೀಸ್ನಲ್ಲಿ, 6 ಸ್ಪ್ಯಾನಿಷ್ನಲ್ಲಿ, ಮತ್ತು 2 ಜ್ಯಾಪನೀಸ್ನಲ್ಲಿ!
ಭರವಸೆಯೊಂದಿಗೆ ಸಾರುವುದು
13. ನಾವು ಯೆಹೋವನನ್ನು ಸೇವಿಸುವಂತೆ ಯಾರೂ ನಮ್ನನ್ನು ನಾಚಿಕೆಗೊಳಿಸಲು ಪ್ರಯತ್ನಿಸಬಾರದೇಕೆ?
13 ಯೆಹೋವನ ಜನರು ಯೆಹೋವನು ಅವರ ಆಶ್ರಯವೆಂದು ಪೂರ್ಣ ನಂಬಿಕೆಯೊಂದಿಗೆ ದೃಢಭರವಸೆಯಿಂದ ರಾಜ್ಯದ ಸಂಗೀತವನ್ನು ಹಾಡುತ್ತಾರೆ. (ಕೀರ್ತನೆ 31:14) ಯೆಹೋವನು ತನ್ನ ಮಾತನ್ನು ನೆರವೇರಿಸುವ ಕಾರಣ, ಅವರು ನಾಚಿಕೆಗೀಡಾಗರು—ಯೆಹೋವನು ಅವರನ್ನು ಅಪಮಾನಿಸನು ಏಕೆಂದರೆ ಆತನು ತನ್ನ ವಚನವನ್ನು ನೆರವೇರಿಸುವನು. (ಕೀರ್ತನೆ 31:17) ಪಿಶಾಚನು ಮತ್ತು ಅವನ ಪಿಶಾಚಿ ಯೋಧರು ನಾಚಿಕೆಗೀಡಾಗುವರು. ನಾಚಿಕೆಯಿಂದ ಸ್ವತಂತ್ರವಾದ ಸಂದೇಶವನ್ನು ಸಾರಲು ಯೆಹೋವನ ಜನರು ಆಜ್ಞಾಪಿಸಲ್ಪಟ್ಟಿರುವುದರಿಂದ, ಇತರ ಜನರಿಂದ ನಾಚಿಕೆಗೊಳಿಸಲ್ಪಟ್ಟವರಾಗಿ ಅವರು ಸಾರುವುದಿಲ್ಲ. ಯೆಹೋವನು, ಮತ್ತು ಆತನ ಮಗನು, ಜನರು ತನ್ನನ್ನೇ ಆರಾಧಿಸುವಂತೆ ಪ್ರಚೋದಿಸುವ ವಿಧಾನವು ಅದಾಗಿರುವುದಿಲ್ಲ. ಯೆಹೋವನ ಒಳ್ಳೇತನಕ್ಕೆ ಮತ್ತು ಪ್ರೀತಿಯ ದಯೆಗೆ ಜನರ ಹೃದಯಗಳು ನಂಬಿಕೆಯಿಂದ ಮತ್ತು ಗಣ್ಯತೆಯಿಂದ ತುಂಬಿರುವಾಗ, ಅವರ ಹೃದಯದ ಉತ್ತಮ ಸ್ಥಿತಿಯು ಅವರ ಬಾಯಿಗಳು ಮಾತಾಡುವಂತೆ ಪ್ರೇರಿಸುತ್ತದೆ. (ಲೂಕ 6:45) ಹೀಗೆ, ಪ್ರತಿಯೊಂದು ತಿಂಗಳು ಸೇವೆಯಲ್ಲಿ ನಾವು ಎಷ್ಟೇ ಸಮಯವನ್ನು ವ್ಯಯಿಸಲಿ, ವಿಶೇಷವಾಗಿ ಆ ಸಮಯವು ನಾವು ಮಾಡಶಕ್ತನಾದ ಅತ್ಯುತ್ತಮ ಸಮಯವನ್ನು ಪ್ರತಿನಿಧಿಸುವಲ್ಲಿ, ಅದು ಒಳ್ಳೆಯದಾಗಿದೆ, ಲಜ್ಜಾಪೂರ್ಣವಲ್ಲ. ಯೇಸು ಮತ್ತು ಆತನ ತಂದೆಯಿಂದ ಆ ವಿಧವೆಯ ಕಾಸುಗಳು ಪೂರ್ಣವಾಗಿ ಗಣ್ಯಮಾಡಲ್ಪಡಲಿಲ್ಲವೇ?—ಲೂಕ 21:1-4.
14. ಪಯನೀಯರ್ ಕೆಲಸದ ಕುರಿತು ನೀವು ಯಾವ ಹೇಳಿಕೆಗಳನ್ನು ಮಾಡಬಲ್ಲಿರಿ? (ತಃಖ್ತೆಯನ್ನು ಕೂಡ ನೋಡಿ.)
14 ಪ್ರಚಾರಕರ ಹೆಚ್ಚುತ್ತಿರುವ ಸಂಖ್ಯೆಗೆ, ಆರಾಧನೆಯಲ್ಲಿ ಪೂರ್ಣಾತ್ಮದಿಂದಿರುವುದು ಪಯನೀಯರ ಸೇವೆಯನ್ನು ಒಳಗೊಂಡಿರುತ್ತದೆ—ಕಳೆದ ವರ್ಷ 8,90,231 ಪಯನೀಯರರ ಉಚ್ಚಾಂಕವಿತ್ತು! ಹಿಂದಿನ ವರ್ಷಗಳ ಅಭಿವೃದ್ಧಿಯನ್ನು ಕಾಪಾಡಿಕೊಳ್ಳುವಲ್ಲಿ, ಈ ಸಂಖ್ಯೆಯು ಪ್ರಾಯಶಃ 10,00,000 ವನ್ನು ದಾಟಬಹುದು. ನೈಜಿರೀಯದಲ್ಲಿ ಒಬ್ಬ ಸಹೋದರಿಯು ಪಯನೀಯರ ಶ್ರೇಣಿಯಲ್ಲಿ ಹೇಗೆ ಸೇರಿಕೊಂಡಳೆಂದು ಮುಂದಿನ ಅನುಭವವು ತೋರಿಸುತ್ತದೆ. ಅವಳು ಬರೆಯುವುದು: “ನಾನು ಪ್ರೌಢ ಶಾಲೆಯನ್ನು ಮುಗಿಸುವುದಕ್ಕಿರುವಾಗಲೆ, ಯೆಹೋವನ ಸಾಕ್ಷಿಗಳ ಪಯನೀಯರ್ ಶಾಲೆಯನ್ನು ಹಾಜರಾಗುವವರಿಗೋಸ್ಕರ ಅಡಿಗೆ ಮಾಡುವುದರಲ್ಲಿ ಸಹಾಯಿಸಲು ಹೋದೆ. ನನ್ನ ಅಜಿಗ್ಜಿಂತಲೂ ದೊಡ್ಡವರಾದ ಇಬ್ಬರು ಸಹೋದರಿಯರನ್ನು ಅಲ್ಲಿ ನಾನು ಭೇಟಿಯಾದೆ. ಅವರು ಶಾಲೆಯನ್ನು ಹಾಜರಾಗುವ ಪಯನೀಯರರೆಂದು ನಾನು ಕಂಡುಕೊಂಡಾಗ, ನಾನು ನನ್ನಷ್ಟಕ್ಕೆ ಆಲೋಚಿಸಿದ್ದು, ‘ಅವರು ಇಬ್ಬರು ಪಯನೀಯರಿಂಗ್ ಮಾಡಶಕ್ತರಾಗಿರುವಲ್ಲಿ, ನನ್ನನ್ನು ಯಾವುದು ತಡೆಹಿಡಿಯುತ್ತದೆ?’ ಹೀಗೆ ನನ್ನ ಶಾಲೆಯಾದಾನಂತರ, ನಾನು ಕೂಡ ಕ್ರಮದ ಪಯನೀಯರಳಾದೆ.”
15. ಇತರರು ಯೆಹೋವನಲ್ಲಿ ಆಶ್ರಯ ತೆಗೆದುಕೊಳ್ಳುವಂತೆ ಅವಿಧಿ ಸಾಕ್ಷಿ ಕಾರ್ಯವು ಯಾವ ವಿಧದಲ್ಲಿ ದಾರಿಯನ್ನು ತೆರೆಯಬಲ್ಲದು?
15 ಎಲ್ಲರು ಪಯನೀಯರರಾಗಲು ಸಾಧ್ಯವಿಲ್ಲ, ಆದರೆ ಅವರು ಸಾಕ್ಷಿಕೊಡಬಲ್ಲರು. ಬೆಲ್ಚಿಯಮ್ನಲ್ಲಿ ಒಬ್ಬಾಕೆ 82 ವರುಷ ಪ್ರಾಯದ ಸಹೋದರಿಯು ಮಾಂಸ ಕೊಂಡುಕೊಳ್ಳಲು ಅಂಗಡಿಗೆ ಹೋಗಿದ್ದಳು. ಕಟುಕನ ಹೆಂಡತಿ, ಇತ್ತೀಚೆಗಿನ ರಾಜಕೀಯ ಉತ್ಪವ್ಲನದಿಂದಾಗಿ ಬಹಳಷ್ಟು ಕದಡಲ್ಪಟ್ಟದ್ದನ್ನು ಅವಳು ಗಮನಿಸಿದಳು. ಆದುದರಿಂದ ಸಹೋದರಿಯು ಅವಳ ಕ್ರಯಪಟ್ಟಿಯನ್ನು ಪಾವತಿ ಮಾಡಿದಾಗ ನೋಟುಗಳೊಂದಿಗೆ ಯೆಹೋವನ ಸಾಕ್ಷಿಗಳು ಏನು ನಂಬುತ್ತಾರೆ? ಎಂಬ ಕಿರುಹೊತ್ತಗೆಯನ್ನು ಇಟ್ಟಿದ್ದಳು. ಸಹೋದರಿಯು ಆ ಅಂಗಡಿಗೆ ಹಿಂತಿರುಗಿದಾಗ, ಕಟುಕನ ಹೆಂಡತಿ, ಒಂದು ಗಳಿಗೆಯ ಹಿಂಜರಿಕೆಯಿಲ್ಲದೆ, ಮೂರನೇ ಲೋಕ ಯುದ್ಧದ ಸಾಧ್ಯತೆಯ ಕುರಿತು ಬೈಬಲ್ ಏನು ಹೇಳುತ್ತದೆಂದು ಕೇಳಿದಳು. ಸಹೋದರಿಯು ಅವಳಿಗಾಗಿ ನಿಜ ಶಾಂತಿ ಮತ್ತು ಭದ್ರತೆ—ನೀವದನ್ನು ಹೇಗೆ ಕಂಡುಕೊಳ್ಳಬಲ್ಲಿರಿ? ಎಂಬ ಇಂಗ್ಲಿಷ್ ಪುಸ್ತಕವನ್ನು ತಂದುಕೊಟ್ಟಳು. ಕೆಲವು ದಿನಗಳಾನಂತರ, ಆ ವೃದ್ಧ ಸಹೋದರಿಯು ಕಟುಕನ ಅಂಗಡಿಯೊಳಗೆ ಹೆಜ್ಜೆಗಳನ್ನಿಟ್ಟ ಕೂಡಲೆ, ಕಟುಕನ ಹೆಂಡತಿಯಲ್ಲಿ ಅವಳನ್ನು ಕೇಳಲು ಹೆಚ್ಚಿನ ಪ್ರಶ್ನೆಗಳು ಇದ್ದವು. ಈ ಹೆಂಗಸಿಗಾಗಿ ಸಹೋದರಿಯು ಸಹಾನುಭೂತಿಪಟ್ಟಳು; ಅವಳು ನೇರವಾಗಿ ಬೈಬಲ್ ಅಧ್ಯಯನವನ್ನು ನೀಡಬೇಕಾಯಿತು, ಮತ್ತು ಅದು ಸ್ವೀಕರಿಸಲ್ಪಟ್ಟಿತು. ಈಗ, ಆ ಕಟುಕನ ಹೆಂಡತಿಯು ದೀಕ್ಷಾಸ್ನಾನ ಪಡೆಯಬಯಸುತ್ತಾಳೆ. ಕಟುಕನ ವಿಷಯದಲ್ಲೇನು? ಅವನು ಆ ಕಿರುಹೊತ್ತಗೆಯನ್ನು ಓದಿದನು ಮತ್ತು ಈಗ ಅವನು ಕೂಡ ಬೈಬಲ್ ಅಧ್ಯಯನವನ್ನು ಪಡೆದುಕೊಳ್ಳುತ್ತಿದ್ದಾನೆ.
‘ಒಳ್ಳೇತನದ ಒಂದು ನಿಧಿ’
16. ತನ್ನ ಜನರಿಗಾಗಿ ಒಳ್ಳೇತನದ ನಿಧಿಯನ್ನು ಯೆಹೋವನು ಬದಿಗಿಟ್ಟಿರುತ್ತಾನೆ ಹೇಗೆ?
16 ಈ ಒತ್ತಡಮಯ ಕೊನೇ ದಿನಗಳಲ್ಲಿ, ಯಾರು ಆತನಲ್ಲಿ ಆಶ್ರಯವನ್ನು ಪಡೆದಿರುತ್ತಾರೋ ಅವರಿಗೆ “ತನ್ನ ಕೃಪೆಯನ್ನು ಆಶ್ಚರ್ಯಕರವಾಗಿ” ಯೆಹೋವನು ತೋರಿಸಿರುವುದಿಲ್ಲವೆ? ಪ್ರೀತಿಯ, ಸಂರಕ್ಷಿಸುವ ತಂದೆಯೋಪಾದಿ, ಯೆಹೋವನು ತನ್ನ ಭೂಮಿಯ ಮಕ್ಕಳಿಗಾಗಿ ಒಳ್ಳೇತನದ ಒಂದು ನಿಧಿಯನ್ನು ಬದಿಗಿಟ್ಟಿರುತ್ತಾನೆ. “ಸದ್ಭಕ್ತರಿಗೋಸ್ಕರ ನೀನು ಇಟ್ಟುಕೊಂಡಿರುವ ಮೇಲೂ ಆಶ್ರಿತರಿಗೋಸ್ಕರ ನೀನು ಎಲ್ಲರ ಮುಂದೆ ಮಾಡಿದ ಉಪಕಾರಗಳೂ ಎಷ್ಟೋ ವಿಶೇಷವಾಗಿವೆ,” ಎಂದು ಕೀರ್ತನೆಗಾರನು ಅನ್ನುವಂತೆಯೆ, ಎಲ್ಲ ವೀಕ್ಷಕರ ಎದುರಲ್ಲಿ ಆತನು ಅವರ ಮೇಲೆ ಸಂತೋಷವನ್ನು ಸುರಿಸುತ್ತಿದ್ದಾನೆ.—ಕೀರ್ತನೆ 31:19, 21.
17-19. ಘಾನದಲ್ಲಿ, ಒಬ್ಬ ಮುದುಕನು ತನ್ನ ಮದುವೆಯನ್ನು ಕಾನೂನುಬದ್ಧ ಮಾಡಿದರ್ದ ಮೂಲಕ ಏನು ಒಳ್ಳೇದು ಫಲಿಸಿತು?
17 ಆದುದರಿಂದ, ಲೌಕಿಕ ಜನರು ಯೆಹೋವನನ್ನು ಆರಾಧಿಸುವವರ ಪ್ರಾಮಾಣಿಕತೆಗೆ ಸಾಕ್ಷಿಗಳಾಗುತ್ತಾರೆ, ಮತ್ತು ಅವರು ಚಕಿತರಾಗುತ್ತಾರೆ. ಉದಾಹರಣೆಗಾಗಿ, ಘಾನದಲ್ಲಿ 96 ವರ್ಷ ಪ್ರಾಯದ ಮನುಷ್ಯನು ವಿವಾಹ ನೊಂದಣಿಗಾರನ ಕಚೇರಿಗೆ ಹೋದನು ಮತ್ತು ಅವನ ಎಪ್ಪತ್ತು ವರ್ಷಗಳ ಕಾನೂನುಬದ್ಧವಲ್ಲದ ಸಾಮಾನ್ಯ ಕಾನೂನಿನ ವಿವಾಹವನ್ನು ಈಗ ನೊಂದಾಯಿಸಿಕೊಳ್ಳುವಂತೆ ವಿನಂತಿಸಿದನು. ವಿವಾಹ ಅಧಿಕಾರಿಯು ತಲ್ಲಣಗೊಂಡು, ಕೇಳಿದ್ದು: “ನೀನು ಹಾಗೆ ಮಾಡಲು ಬಯಸುವಿ ಎಂಬುದು ಖಚಿತವೋ? ಅದೂ ನಿನ್ನ ಪ್ರಾಯದಲ್ಲಿ?”
18 ಆ ಮನುಷ್ಯನು ವಿವರಿಸಿದ್ದು: “ನನಗೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಬೇಕು ಮತ್ತು ಲೋಕದ ಅಂತ್ಯದ ಮೊದಲು ಅತಿ ಪ್ರಾಮುಖ್ಯ ಕೆಲಸದಲ್ಲಿ—ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ—ಭಾಗಿಯಾಗಬೇಕು. ಈ ಕೆಲಸವು ನಿತ್ಯ ಜೀವಕ್ಕೆ ನಡಿಸುತ್ತದೆ. ಯೆಹೋವನ ಸಾಕ್ಷಿಗಳು, ವಿವಾಹ ನೊಂದಣಿಯ ಮೇಲಿನ ಕಾನೂನು ಸೇರಿರುವ, ಪೌರ ಕಾನೂನನ್ನು ಪಾಲಿಸುತ್ತಾರೆ. ಹೀಗಿರುವಲ್ಲಿ ದಯಮಾಡಿ ನನಗೋಸ್ಕರ ನೊಂದಣಿಯನ್ನು ಮಾಡಿಸಿ.” ಆ ಅಧಿಕಾರಿಯು ಸ್ತಬ್ಧನಾದನು. ನೊಂದಣಿ ಕಾರ್ಯಗಳನ್ನು ನಡೆಸಿದನು, ಮತ್ತು ಆ ವೃದ್ಧನು ಈಗ ಕಾನೂನುಬದ್ಧ ವಿವಾಹವುಳ್ಳವನಾಗಿ ಸಂತೋಷದಿಂದ ತೆರಳಿದನು.—ಹೋಲಿಸಿ ರೋಮಾಪುರ 12:2.
19 ಅದಾದ ಬಳಿಕ, ವಿವಾಹ ನೊಂದಣಿಗಾರನು ಅವನು ಕೇಳಿದ್ದ ವಿಷಯಗಳ ಮೇಲೆ ಆಲೋಚಿಸಿದನು. “ಯೆಹೋವನ ಸಾಕ್ಷಿಗಳು . . . ಅತಿ ಪ್ರಾಮುಖ್ಯ ಕೆಲಸ . . . ಲೋಕದ ಅಂತ್ಯ . . . ದೇವರ ರಾಜ್ಯ . . . ನಿತ್ಯ ಜೀವ.” ಒಬ್ಬ 96 ವರ್ಷ ಪ್ರಾಯದವನ ಜೀವಿತದಲ್ಲಿ ಇದೆಲ್ಲವೂ ಯಾವ ಅರ್ಥವನ್ನು ಹೊಂದಿದೆ ಎಂಬುದರ ಕುರಿತು ಅವನು ತಬ್ಬಿಬ್ಬಾಗುತ್ತಾನೆ ಮತ್ತು ಆ ವಿಷಯದೊಳಗೆ ಇನ್ನೂ ಹೆಚ್ಚನ್ನು ತಿಳಿಯಬಯಸಿ ಸಾಕ್ಷಿಗಳಿಗಾಗಿ ಹುಡುಕಲು ನಿರ್ಧರಿಸಿದನು. ಅವನು ಒಂದು ಬೈಬಲ್ ಅಧ್ಯಯನವನ್ನು ಸ್ವೀಕರಿಸಿದನು ಮತ್ತು ತ್ವರಿತ ಪ್ರಗತಿಯನ್ನು ಮಾಡಿದನು. ಈ ವಿವಾಹ ನೊಂದಣಿಗಾರನು ಇಂದು ಸ್ನಾನಿತ ಸಾಕ್ಷಿಯಾಗಿದ್ದಾನೆ. ಹೀಗೆ, ಇತರರು ಸಣ್ಣ ವಿಷಯಗಳೆಂದು ಗಮನಿಸುವವುಗಳಲ್ಲೂ ನಾವು ಯೆಹೋವನಿಗೆ ವಿಧೇಯರಾಗುವಾಗ, ಅದು ನಮಗೆ ಮತ್ತು ನಮ್ಮ ನಡತೆಗೆ ಸಾಕ್ಷಿಗಳಾಗಿರುವವರಿಗೆ ಎಣಿಸಿಲ್ಲದ ಒಳಿತಿನಲ್ಲಿ ಫಲಿಸಬಹುದು.—ಹೋಲಿಸಿ 1 ಪೇತ್ರ 2:12.
20. ಮ್ಯಾನ್ಮಾರ್ನಲ್ಲಿ, ಒಬ್ಬ ಯುವ ಸಹೋದರಿಯ ಪ್ರಾಮಾಣಿಕತೆಯು ಉತ್ತಮ ಸಾಕ್ಷಿ ನೀಡುವಿಕೆಗೆ ಹೇಗೆ ನಡಿಸಿತು?
20 ಸತ್ಯವು ತಮ್ಮನ್ನು ಪ್ರಾಮಾಣಿಕ ಜನರನ್ನಾಗಿ ರೂಪಿಸುವಂತೆ ಬಿಟ್ಟಿರುವ ವೃದ್ಧರು ಈ ಅಪ್ರಾಮಾಣಿಕ ಲೋಕದಲ್ಲಿ ಯುವಕರಿಗಾಗಿ ಒಂದು ಉತ್ತಮ ಮಾದರಿಯನ್ನು ಇಡುತ್ತಾರೆ. ಆ ತರಹದ ಒಂದು ಯುವ ಸಹೋದರಿ ಮ್ಯಾನ್ಮಾರ್ನಲ್ಲಿ ಜೀವಿಸುತ್ತಾಳೆ. ಅವಳು ಹತ್ತು ಮಕ್ಕಳ ಒಂದು ಬಡ ಮತ್ತು ವಿನೀತ ಕುಟುಂಬದಿಂದ ಬರುತ್ತಾಳೆ. ಪಿಂಚಣಿದಾರನಾದ ತಂದೆಯು ಒಬ್ಬ ಕ್ರಮದ ಪಯನೀಯರನು. ಒಂದು ದಿನ ಶಾಲೆಯಲ್ಲಿ, ಆ ಸಹೋದರಿಗೆ ಒಂದು ವಜ್ರದ ಉಂಗುರವು ಸಿಕ್ಕಿತು ಮತ್ತು ಒಡನೆಯೇ ಅವಳದನ್ನು ಉಪಾಧ್ಯಾಯಿನಿಯ ಬಳಿಗೆ ಕೊಂಡೊಯ್ಯುತ್ತಾಳೆ. ಮರುದಿನ ತರಗತಿಯು ನೆರೆದಾಗ, ಆ ಉಂಗುರ ಹೇಗೆ ಸಿಕ್ಕಿತು ಮತ್ತು ಅದನ್ನು ಅದರ ಒಡತಿಗೆ ಹಿಂತಿರುಗಿಸಲು ಕೊಡಲ್ಪಟ್ಟ ವಿಧಾನವನ್ನು ಉಪಾಧ್ಯಾಯಿನಿಯು ತರಗತಿಗೆ ತಿಳಿಸಿದಳು. ಅನಂತರ ಅವಳು ಆ ಯುವ ಸಹೋದರಿಗೆ ಇಡೀ ತರಗತಿಯ ಎದುರು ಎದ್ದು ನಿಲ್ಲಲು ಮತ್ತು ಇತರ ಮಕ್ಕಳು ಅದನ್ನು ಇಟ್ಟುಕೊಳ್ಳಲು ಆಯ್ದುಕೊಳ್ಳಬಹುದಿತ್ತೆಂದು ತಿಳಿದೂ, ಅವಳು ಇದನ್ನು ಯಾಕೆ ಮಾಡಿದಳು ಎಂದು ವಿವರಿಸುವಂತೆ ಕೇಳಿಕೊಂಡಳು. ಆ ಸಹೋದರಿಯು ತಾನು ಒಬ್ಬ ಯೆಹೋವನ ಸಾಕ್ಷಿಯಾಗಿದ್ದೇನೆ ಮತ್ತು ತನ್ನ ದೇವರು ಕಳ್ಳತನವನ್ನು ಯಾ ಯಾವುದೇ ವಿಧದ ಅಪ್ರಾಮಾಣಿಕತೆಯನ್ನು ಇಷ್ಟಪಡುವುದಿಲ್ಲವೆಂದು ವಿವರಿಸಿದಳು. ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ಒಂದೇ ತೆರದಲ್ಲಿ ಸಾಕ್ಷಿ ನೀಡಲು ಉತ್ತಮ ಸಂದರ್ಭವನ್ನು ನಮ್ಮ ಯುವ ಸಹೋದರಿಗೆ ಕೊಡುತ್ತಾ, ಇಡೀ ಶಾಲೆಯು ಇದರ ಕುರಿತು ಕೇಳಿತು.
21. ಯುವ ಜನರು ಯೆಹೋವನಲ್ಲಿ ಭರವಸೆ ಇಡುವಾಗ, ಅವರ ನಡತೆಯು ಆತನ ಮೇಲೆ ಹೇಗೆ ಪ್ರತಿಬಿಂಬಿಸುತ್ತದೆ?
21 ಬೆಲ್ಚಿಯಮ್ನಲ್ಲಿ ಅಧ್ಯಾಪಕನೊಬ್ಬನು ಯೆಹೋವನ ಸಾಕ್ಷಿಗಳ ಬಗ್ಗೆ ಒಂದು ಅಭಿರುಚಿಕರ ಹೇಳಿಕೆಯನ್ನು ಕೊಟ್ಟನು. ವಿದ್ಯಾರ್ಥಿಗಳಲ್ಲಿ, ಒಬ್ಬಾಕೆ ಯುವ ಸಹೋದರಿಯೂ ಆಗಿದ್ದಂತಹವಳ ನಡತೆಯನ್ನು ಅವಲೋಕಿಸಿದನು. ಅವನು ಅಂದದ್ದು: “ಯೆಹೋವನ ಸಾಕ್ಷಿಗಳ ಬಗ್ಗೆ ಈಗ ವಿಭಿನ್ನ ಅಭಿಪ್ರಾಯ ನನಗಿದೆ. ಪೂರ್ವ ಕಲ್ಪಿತ ಅಭಿಪ್ರಾಯವು ಅವರು ಕನಿಷ್ಠ ಸೈರಣೆಯುಳ್ಳ ಜನರಾಗಿರುವರೆಂದು ಆಲೋಚಿಸುವಂತೆ ನಡೆಸಿತು. ಅವರ ಸೂತ್ರಗಳನ್ನು ಒಪ್ಪಂದ ಮಾಡಿಕೊಳ್ಳದೆ ಇದ್ದಾಗ್ಯೂ, ಅವರು ಅತಿ ಹೆಚ್ಚು ಸೈರಣೆಯುಳ್ಳವರಾಗಿ ಪರಿಣಮಿಸಿದರು.” ಅಧ್ಯಾಪಕರ ಮೂಲಕ ಅವರ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಒಂದು ಬಹುಮಾನವು ಕೊಡಲ್ಪಡುತ್ತದೆ. ಇತರ ಬಹುಮಾನಗಳ ಮಧ್ಯೆ ಒಂದು ಬಹುಮಾನವು ನೀತಿತತ್ವಗಳಲ್ಲಿನ ವ್ಯಾಸಂಗ ಕ್ರಮಕ್ಕಾಗಿ ಇದೆ. ಮೂರು ಕ್ರಮಾನುಗತ ವರುಷಗಳಲ್ಲಿ, ಮೂರು ಶ್ರೇಷ್ಠ ಗ್ರೇಡ್ಗಳಿಗಾಗಿ ಬಹುಮಾನಗಳನ್ನು ಯೆಹೋವನ ಸಾಕ್ಷಿಗಳ ಮಕ್ಕಳಿಗೆ ಈ ಅಧ್ಯಾಪಕರು ಕೊಟ್ಟರು. ಯಾರ ನಿಷ್ಠೆಯ ಭರವಸೆಯು ಯೆಹೋವನಲ್ಲಿದೆಯೋ ಅವರಿಗೆ ಹೀಗೆ ಅನೇಕ ಬಾರಿ ಸಂಭವಿಸುತ್ತದೆ.—ಕೀರ್ತನೆ 31:23.
22. ಕೀರ್ತನೆ 31ರ ಜಯದ ಸಮಾಪ್ತಿಯು ಯಾವುದಾಗಿದೆ, ಮತ್ತು ಈ ವಿಷಯಗಳ ವ್ಯವಸ್ಥೆಯ ಅಂತ್ಯವಾಗುವ ದಿನಗಳಲ್ಲಿ ಅದು ನಮ್ಮನ್ನು ಸಹಾಯಿಸುವುದು ಹೇಗೆ?
22 ಕೀರ್ತನೆ 31 ಒಂದು ಜಯದ ಸಮಾಪ್ತಿಯೊಂದಿಗೆ ಧ್ವನಿಸುತ್ತದೆ: “ಯೆಹೋವನನ್ನು ನಿರೀಕ್ಷಿಸುವವರೇ, ದೃಢವಾಗಿರ್ರಿ; ನಿಮ್ಮ ಹೃದಯವು ಧೈರ್ಯದಿಂದಿರಲಿ.” (ಕೀರ್ತನೆ 31:24) ಆದುದರಿಂದ, ಸೈತಾನನ ದುಷ್ಟ ವ್ಯವಸ್ಥೆಯ ಅಂತ್ಯಗೊಳ್ಳುವ ದಿನಗಳನ್ನು ನಾವು ಎದುರಿಸುತ್ತಿರುವಾಗ, ನಮ್ಮನ್ನು ಬಿಟ್ಟುಬಿಡುವುದರ ಬದಲು, ಯೆಹೋವನು ನಮ್ಮ ಅತಿ ಸಮೀಪಕ್ಕೆ ಬರುವನು ಮತ್ತು ತನ್ನ ಸ್ವಂತ ಬಲವನ್ನು ನಮ್ಮೊಳಗೆ ಹಾಕುವನು. ಯೆಹೋವನು ನಂಬಿಗಸ್ತನಾಗಿದ್ದಾನೆ ಮತ್ತು ವಿಫಲಗೊಳ್ಳುವುದಿಲ್ಲ. ಆತನು ನಮ್ಮ ಆಶ್ರಯ; ಮತ್ತು ನಮ್ಮ ಬುರುಜು.—ಜ್ಞಾನೋಕ್ತಿ 18:10.
ನಿಮಗೆ ನೆನಪಿದೆಯೆ?
▫ ನಾವು ಭರವಸೆಯಿಂದ ಯೆಹೋವನನ್ನು ನಮ್ಮ ಆಶ್ರಯವನ್ನಾಗಿ ಯಾಕೆ ಮಾಡಬಲ್ಲೆವು?
▫ ಧೈರ್ಯದಿಂದ ರಾಜ್ಯ ಸ್ತುತಿಯನ್ನು ಹಾಡುತ್ತಿರುವ ಒಂದು ಬಲಿಷ್ಠ ಪಲ್ಲವಿ ಇದೆ ಎಂಬುದಕ್ಕೆ ಯಾವ ರುಜುವಾತು ಇದೆ?
▫ ಸೈತಾನನ ಬಲೆಯು ಯೆಹೋವನ ಜನರನ್ನು ಸಿಕ್ಕಿಸಿಕೊಳ್ಳಲಾರದೆಂದು ನಾವು ಯಾಕೆ ಭರವಸೆಯಿಂದಿರಬಲ್ಲೆವು?
▫ ತನ್ನ ಆಶ್ರಯವನ್ನು ಪಡೆದುಕೊಳ್ಳುವವರಿಗಾಗಿ ಯೆಹೋವನು ಯಾವ ನಿಧಿಯನ್ನು ಬದಿಗಿಟ್ಟಿದ್ದಾನೆ?
[ಪುಟ 12-15 ರಲ್ಲಿರುವಚಿತ್ರಗಳು]
ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 1993 ನೆಯ ಸೇವಾ ವರ್ಷದ ವರದಿ
(See volume)
[ಪುಟ 16,17 ರಲ್ಲಿರುವಚಿತ್ರಗಳು]
ಯೆಹೋವನಲ್ಲಿ ಆಶ್ರಯವನ್ನು ತೆಗೆದುಕೊಳ್ಳುವವರು—47,09,889 ಪ್ರಬಲ—ರಾಜ್ಯ ಘೋಷಕರ ಬಲಿಷ್ಠ ಪಲ್ಲವಿಯಾಗುತ್ತಾರೆ!
1. ಸೆನಿಗಲ್
2. ಬ್ರೆಜೀಲ್
3. ಚಿಲಿ
4. ಬೊಲಿವಿಯ