ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋವನು, ಮಹತ್ಕಾರ್ಯಗಳನ್ನು ನಡಿಸುವಾತನು
    ಕಾವಲಿನಬುರುಜು—1992 | ಡಿಸೆಂಬರ್‌ 15
    • 8. ಯೆಹೋವನೊಂದಿಗೆ ನಮಗೆ ಯಾವ ಆಪ್ತತೆ ಇರಸಾಧ್ಯವಿದೆ, ಮತ್ತು ತನ್ನ ಒಳ್ಳೇತನವನ್ನು ಅವನು ಹೇಗೆ ವ್ಯಕ್ತಪಡಿಸಿದ್ದಾನೆ?

      8 ದಾವೀದನು ಇನ್ನೂ ಉದ್ರೇಕದಿಂದ ಬಲವಾದ ವಿನಂತಿಯನ್ನು ಮಾಡುತ್ತಾನೆ: “ಕರ್ತನೇ, [ಯೆಹೋವನೇ, NW] ನೀನು ಒಳ್ಳೆಯವನೂ ಕ್ಷಮಿಸುವವನೂ ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದೀಯಲ್ಲಾ. ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗಳ ಶಬ್ದವನ್ನು ಲಾಲಿಸು. ನೀನು ಸದುತ್ತರವನ್ನು ದಯಪಾಲಿಸುವಿಯೆಂದು ನಂಬಿ ನನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನನ್ನೇ ಕರೆಯುವೆನು.” (ಕೀರ್ತನೆ 86:5-7) “ಯೆಹೋವನೇ,” ಎಂಬ ಈ ಪದ ಆಪ್ತತೆಯಿಂದ ನಾವು ಪುನಃ ಪುನಃ ಪುಳಕಿತಗೊಳ್ಳುತ್ತೇವೆ! ಪ್ರಾರ್ಥನೆಯ ಮೂಲಕ ನಿರಿಂತರವೂ ನಾವು ಬೆಳೆಸಬಹುದಾದ ಆಪ್ತತೆಯು ಆದಾಗಿರುತ್ತದೆ. ಇನ್ನೊಂದು ಸಂದರ್ಭದಲ್ಲಿ ದಾವೀದನು ಪ್ರಾರ್ಥಿಸಿದ್ದು: “ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ದ್ರೋಹಗಳನ್ನು ಮನಸ್ಸಿನಲ್ಲಿಡದೆ ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಸು.” (ಕೀರ್ತನೆ 25:7) ಯೇಸುವಿನ ವಿಮೋಚನೆಯನ್ನು ಒದಗಿಸುವದರಲ್ಲಿ, ಪಶ್ಚಾತ್ತಾಪ ಪಟ್ಟ ಪಾಪಿಗಳಿಗೆ ಕರುಣೆಯನ್ನು ತೋರಿಸಿದ್ದರಲ್ಲಿ, ಮತ್ತು ಅವನ ನಿಷ್ಠೆಯ ಮತ್ತು ಗಣ್ಯತೆಯುಳ್ಳ ಸಾಕ್ಷಿಗಳಿಗೆ ಪ್ರೀತಿ-ದಯೆಗಳನ್ನು ಸುರಿಸಿದ್ದರಲ್ಲಿ, ಯೆಹೋವನು ಒಳ್ಳೇತನದ ಸಾರವೇ ಆಗಿದ್ದಾನೆ.—ಕೀರ್ತನೆ 100:3-5; ಮಲಾಕಿಯ 3:10.

      9. ಪಶ್ಚಾತ್ತಾಪ ಪಟ್ಟ ಪಾಪಿಗಳು ತಮ್ಮ ಹೃದಯಕ್ಕೆ ತಕ್ಕೊಳ್ಳಬೇಕಾದ ಆಶ್ವಾಸನೆ ಏನಾಗಿದೆ?

      9 ನಮ್ಮ ಹಿಂದಿನ ಪಾಪಗಳಿಗಾಗಿ ಪರಿತಪಿಸುತ್ತಿರಬೇಕೋ? ಈಗ ನಮ್ಮ ಕಾಲುಗಳನ್ನು ನೇರವಾದ ಮಾರ್ಗದಲ್ಲಿ ನಡಿಸುತ್ತಿರುವುದಾದರೆ, ಪಶ್ಚಾತ್ತಾಪ ಪಟ್ಟವರಿಗೆ ಯೆಹೋವನಿಂದ “ವಿಶ್ರಾಂತಿಕಾಲಗಳು” ಬರುವದರ ಕುರಿತು ಅಪೊಸ್ತಲ ಪೇತ್ರನ ಆಶ್ವಾಸನೆಯು ನಮ್ಮ ನೆನಪಿಗೆ ತರುವಾಗ, ನಾವು ಮೇಲೆತ್ತಲ್ಪಡುತ್ತೇವೆ. (ಅ. ಕೃತ್ಯಗಳು 3:19) ಯೆಹೋವನಿಗೆ ಪ್ರಾರ್ಥನೆಯಲ್ಲಿ ನಿಕಟವಾಗಿ, ನಮ್ಮನ್ನು ಪ್ರೀತಿಯಿಂದ ಕರೆದಾತನಾದ ನಮ್ಮ ವಿಮೋಚಕನಾದ ಯೇಸುವಿನ ಮೂಲಕ ಇಟ್ಟುಕೊಳ್ಳೋಣ, ಆತನು ಪ್ರೀತಿಯಿಂದ ಅಂದದ್ದು: “ಎಲೈಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು.” ಇಂದು ನಿಷ್ಠ ಸಾಕ್ಷಿಗಳು ಯೇಸುವಿನ ಅಮೂಲ್ಯವಾದ ಹೆಸರಿನಲ್ಲಿ ಯೆಹೋವನಿಗೆ ಪ್ರಾರ್ಥಿಸುತ್ತಿರುವಲ್ಲಿ, ಅವರು ಖಂಡಿತವಾಗಿಯೂ ವಿಶ್ರಾಂತಿಯನ್ನು ಕಂಡುಕೊಳ್ಳುತ್ತಾರೆ.—ಮತ್ತಾಯ 11:28, 29; ಯೋಹಾನ 15:16.

  • ಯೆಹೋವನು, ಮಹತ್ಕಾರ್ಯಗಳನ್ನು ನಡಿಸುವಾತನು
    ಕಾವಲಿನಬುರುಜು—1992 | ಡಿಸೆಂಬರ್‌ 15
    • 13. ಹೆತ್ತವರು ಮತ್ತು ಅವರ ಮಕ್ಕಳು ಯೆಹೋವನ ಒಳ್ಳೇತನವನ್ನು ತಾವಾಗಿಯೇ ಹೇಗೆ ದೊರಕಿಸಿಕೊಳ್ಳಬಹುದು?

      13 ನಿಸ್ಸಂದೇಹವಾಗಿ, ಯೆಹೋವನ ಒಳ್ಳೇತನದ ಮೇಲೆ ಆತುಕೊಳ್ಳುವ ಅವಶ್ಯಕತೆಯ ಕುರಿತು ದಾವೀದನು ತನ್ನ ಮಗನಾದ ಸೊಲೊಮೋನನ ಹೃದಯದಲ್ಲಿ ನೆಟ್ಟಿದ್ದನು. ಹೀಗೆ, ಸೊಲೊಮೋನನು ತನ್ನ ಸ್ವಂತ ಮಗನಿಗೆ ಹೇಗೆ ಹೇಳಶಕ್ತನಾದನು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು. ನೀನೇ ಬುದ್ಧಿವಂತನು ಎಂದೆಣಿಸದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.” (ಜ್ಞಾನೋಕ್ತಿ 3:5-7) ತದ್ರೀತಿಯಲ್ಲಿ ಹೆತ್ತವರು ಇಂದು, ಯೆಹೋವನೊಡನೆ ಭರವಸಪೂರ್ವಕವಾಗಿ ಹೇಗೆ ಪ್ರಾರ್ಥಿಸುವದು ಮತ್ತು ನಿರ್ದಯಿ ಲೋಕದ ಆಕ್ರಮಣಗಳನ್ನು—ಶಾಲೆಯಲ್ಲಿ ಸಂಗಾತಿಗಳ ಒತ್ತಡ ಮತ್ತು ಅನೈತಿಕತೆಯನ್ನು ಮಾಡಲು ಶೊಧನೆಗಳು ಇವೇ ಮುಂತಾದವುಗಳನ್ನು—ನಿಭಾಯಿಸುವುದು ಹೇಗೆ ಎಂದು ತಮ್ಮ ಚಿಕ್ಕಮಕ್ಕಳಿಗೆ ಕಲಿಸಬೇಕಾಗಿದೆ. ಪ್ರತಿದಿನ ಸತ್ಯಕ್ಕನುಸಾರ ನಿಮ್ಮ ಮಕ್ಕಳೊಡನೆ ಜೀವಿಸುವದು ಅವರ ಎಳೆಯ ಹೃದಯಗಳಲ್ಲಿ ಯೆಹೋವನಿಗಾಗಿ ನಿಜ ಪ್ರೀತಿ ಮತ್ತು ಅವನ ಮೇಲೆ ಪ್ರಾರ್ಥನಾಪೂರ್ವಕ ಆತುಕೊಳ್ಳುವಿಕೆಯ ಪ್ರಭಾವವನ್ನು ಒತ್ತಬಹುದು.—ಧರ್ಮೊಪದೇಶಕಾಂಡ 6:4-9; 11:18, 19.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ