ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಶಿಸ್ತಿನ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು
    ಕಾವಲಿನಬುರುಜು—2003 | ಅಕ್ಟೋಬರ್‌ 1
    • ಬೈಬಲಾದರೋ ಶಿಸ್ತನ್ನು ತೀರ ಭಿನ್ನವಾದ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. “ಮಗನೇ, ಯೆಹೋವನ ಶಿಕ್ಷೆಯನ್ನು [“ಶಿಸ್ತನ್ನು,” NW] ತಾತ್ಸಾರಮಾಡಬೇಡ” ಎಂದು ಬುದ್ಧಿವಂತ ರಾಜ ಸೊಲೊಮೋನನು ಬರೆದನು. (ಜ್ಞಾನೋಕ್ತಿ 3:11) ಈ ಮಾತುಗಳು ಸರ್ವಸಾಮಾನ್ಯವಾದ ಶಿಸ್ತಿಗಲ್ಲ, ಬದಲಾಗಿ ‘ಯೆಹೋವನ ಶಿಸ್ತಿಗೆ’ ಅಂದರೆ ದೇವರ ಅತ್ಯುಚ್ಚ ಮೂಲತತ್ತ್ವಗಳ ಮೇಲಾಧಾರಿತವಾದ ಶಿಸ್ತಿಗೆ ಸೂಚಿಸುತ್ತವೆ. ಅಂಥ ಶಿಸ್ತು ಮಾತ್ರ ಆತ್ಮಿಕವಾಗಿ ಪ್ರತಿಫಲದಾಯಕ ಮತ್ತು ಪ್ರಯೋಜನದಾಯಕವಾಗಿರುತ್ತದೆ ಹಾಗೂ ಅಪೇಕ್ಷಣೀಯವೂ ಆಗಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಮಾನವ ಆಲೋಚನೆಯ ಮೇಲೆ ಆಧಾರಿತವಾಗಿರುವ ಮತ್ತು ಯೆಹೋವನ ಅತ್ಯುಚ್ಚ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿರದ ಶಿಸ್ತು ಅನೇಕವೇಳೆ ದೌರ್ಜನ್ಯಕರವೂ ವೇದನಾಮಯವೂ ಆಗಿರುತ್ತದೆ. ಇದರಿಂದಾಗಿಯೇ ಅನೇಕರಿಗೆ ಶಿಸ್ತಿನ ಕಡೆಗೆ ನಕಾರಾತ್ಮಕ ಮನೋಭಾವವಿದೆ.

      ಯೆಹೋವನ ಶಿಸ್ತನ್ನು ಅಂಗೀಕರಿಸುವಂತೆ ನಮ್ಮನ್ನು ಏಕೆ ಪ್ರಚೋದಿಸಲಾಗಿದೆ? ಶಾಸ್ತ್ರವಚನಗಳಲ್ಲಿ ದೈವಿಕ ಶಿಸ್ತನ್ನು, ತನ್ನ ಮಾನವ ಸೃಷ್ಟಿಜೀವಿಗಳಿಗಾಗಿರುವ ದೇವರ ಪ್ರೀತಿಯ ಒಂದು ಅಭಿವ್ಯಕ್ತಿಯೋಪಾದಿ ವರ್ಣಿಸಲಾಗಿದೆ. ಹೀಗೆ, ಸೊಲೊಮೋನನು ಹೇಳುತ್ತಾ ಮುಂದುವರಿದದ್ದು: “ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.”​—ಜ್ಞಾನೋಕ್ತಿ 3:12.

      ಶಿಸ್ತು ಮತ್ತು ಶಿಕ್ಷೆ​—ವ್ಯತ್ಯಾಸವೇನು?

      ಬೈಬಲಿನಲ್ಲಿ ವ್ಯಕ್ತಪಡಿಸಲ್ಪಟ್ಟಿರುವಂಥ ರೀತಿಯ ಶಿಸ್ತಿನಲ್ಲಿ, ಮಾರ್ಗದರ್ಶನ, ಉಪದೇಶ, ತರಬೇತಿ, ತಿದ್ದುವಿಕೆ, ತಿದ್ದುಪಾಟು, ಹಾಗೂ ಶಿಕ್ಷೆಯಂಥ ಅನೇಕ ಅಂಶಗಳು ಒಳಗೂಡಿವೆ. ಆದರೂ, ಪ್ರತಿಯೊಂದು ಅಂಶದಲ್ಲಿಯೂ ಯೆಹೋವನ ಶಿಸ್ತು ಪ್ರೀತಿಯಿಂದ ಪ್ರಚೋದಿಸಲ್ಪಟ್ಟದ್ದಾಗಿದೆ, ಮತ್ತು ಇದರ ಗುರಿಯು ಶಿಸ್ತನ್ನು ಪಡೆದುಕೊಳ್ಳುವವನು ಪ್ರಯೋಜನವನ್ನು ಪಡೆದುಕೊಳ್ಳಬೇಕೆಂಬುದೇ ಆಗಿದೆ. ಯೆಹೋವನು ತಿದ್ದುಪಾಟನ್ನು ನೀಡಲಿಕ್ಕಾಗಿ ಕೊಡುವ ಶಿಸ್ತು, ಕೇವಲ ಶಿಕ್ಷೆಯ ಉದ್ದೇಶದಿಂದ ಎಂದಿಗೂ ಕೊಡಲ್ಪಡುವುದಿಲ್ಲ.

  • ಶಿಸ್ತಿನ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು
    ಕಾವಲಿನಬುರುಜು—2003 | ಅಕ್ಟೋಬರ್‌ 1
    • ಈ ಶಿಕ್ಷಾ ಕೃತ್ಯಗಳು “ಭಕ್ತಿಹೀನರಾಗಿ ಬದುಕುವವರ ಗತಿ ಇಂಥದೆಂದು ಸೂಚಿಸುವದಕ್ಕಾಗಿ” ಯಾವ ಅರ್ಥದಲ್ಲಿ ಒಂದು ನಮೂನೆಯನ್ನಿಟ್ಟವು? ಥೆಸಲೊನೀಕದವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ನಮ್ಮ ದಿನವನ್ನು, ದೇವರು ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ “ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವ” ಸಮಯವಾಗಿ ಸೂಚಿಸುತ್ತಾನೆ. ಪೌಲನು ಕೂಡಿಸಿ ಹೇಳಿದ್ದು: “ಅಂಥವರು . . . ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.” (2 ಥೆಸಲೊನೀಕ 1:​8-10) ಅಂಥ ಶಿಕ್ಷೆಯನ್ನು ಯಾರು ಪಡೆದುಕೊಳ್ಳುತ್ತಾರೋ ಅವರಿಗೆ ಏನನ್ನೊ ಕಲಿಸಲಿಕ್ಕಾಗಿ ಅಥವಾ ಅವರನ್ನು ಪರಿಷ್ಕರಿಸಲಿಕ್ಕಾಗಿ ಆ ಶಿಕ್ಷೆಯು ಕೊಡಲ್ಪಡುವುದಿಲ್ಲ ಎಂಬುದು ಸುಸ್ಪಷ್ಟ. ಆದರೂ, ತನ್ನ ಶಿಸ್ತನ್ನು ಅಂಗೀಕರಿಸುವಂತೆ ಯೆಹೋವನು ತನ್ನ ಆರಾಧಕರಿಗೆ ಕರೆಕೊಡುವಾಗ, ಆತನು ಪಶ್ಚಾತ್ತಾಪರಹಿತ ಪಾಪಿಗಳಿಗೆ ಕೊಡುವಂಥ ಶಿಕ್ಷೆಗೆ ಸೂಚಿಸುತ್ತಿಲ್ಲ ಎಂಬುದು ನಿಶ್ಚಯ.

      ಬೈಬಲು ಯೆಹೋವನನ್ನು ಪ್ರಧಾನವಾಗಿ ಶಿಕ್ಷಿಸುವವನೋಪಾದಿ ವರ್ಣಿಸುವುದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಅದಕ್ಕೆ ಬದಲಾಗಿ, ಅನೇಕ ಬಾರಿ ಆತನನ್ನು ಪ್ರೀತಿಭರಿತ ಉಪದೇಶಕನೋಪಾದಿ ಅಥವಾ ತಾಳ್ಮೆಯುಳ್ಳ ತರಬೇತುಗಾರನೋಪಾದಿ ವರ್ಣಿಸಲಾಗಿದೆ. (ಯೋಬ 36:22; ಕೀರ್ತನೆ 71:17; ಯೆಶಾಯ 54:13) ಹೌದು, ತಿದ್ದುಪಾಟಿನ ಉದ್ದೇಶದಿಂದ ಕೊಡಲ್ಪಡುವ ದೈವಿಕ ಶಿಸ್ತು ಯಾವಾಗಲೂ ಪ್ರೀತಿ ಹಾಗೂ ತಾಳ್ಮೆಯಿಂದ ಕೂಡಿದ್ದಾಗಿರುತ್ತದೆ. ಶಿಸ್ತಿನ ಉದ್ದೇಶವನ್ನು ಅರ್ಥಮಾಡಿಕೊಳ್ಳುವ ಮೂಲಕ, ಕ್ರೈಸ್ತರು ಶಿಸ್ತನ್ನು ಯೋಗ್ಯವಾದ ಮನೋಭಾವದಿಂದ ಸ್ವೀಕರಿಸಲು ಮತ್ತು ಅದನ್ನು ಇತರರಿಗೆ ನೀಡಲು ಹೆಚ್ಚು ಉತ್ತಮವಾದ ಸ್ಥಿತಿಯಲ್ಲಿರುವರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ