ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lff ಪಾಠ 50
  • ಸುಖ ಸಂಸಾರ ಸಾಧ್ಯ!—ಭಾಗ 2

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸುಖ ಸಂಸಾರ ಸಾಧ್ಯ!—ಭಾಗ 2
  • ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೆಚ್ಚನ್ನ ತಿಳಿಯೋಣ
  • ನಾವೇನು ಕಲಿತ್ವಿ
  • ಇದನ್ನೂ ನೋಡಿ
  • ಹೆತ್ತವರೇ, ಯೆಹೋವನನ್ನು ಪ್ರೀತಿಸೋಕೆ ಮಕ್ಕಳಿಗೆ ಸಹಾಯ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಹೆತ್ತವರೇ, ನಿಮ್ಮ ಮಕ್ಕಳಿಗೆ ಪ್ರೀತಿಯಿಂದ ತರಬೇತಿಕೊಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಆತ್ಮಿಕವಾಗಿ ಬಲವಾಗಿರುವ ಕುಟುಂಬವನ್ನು ಕಟ್ಟುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
ಇನ್ನಷ್ಟು
ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
lff ಪಾಠ 50
ಪಾಠ 50. ಒಂದು ಕುಟುಂಬ ಸುಂದರವಾದ ಕೆರೆಯ ಕಟ್ಟೆ ಮೇಲೆ ಕುಳಿತು ಮಾತಾಡುತ್ತಿದ್ದಾರೆ.

ಪಾಠ 50

ಸುಖ ಸಂಸಾರ ಸಾಧ್ಯ!—ಭಾಗ 2

ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ

ಯೆಹೋವ ದೇವರು ಮಕ್ಕಳನ್ನ ಅಪ್ಪ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟಿದ್ದಾನೆ. ಅವರನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಆತನು ಬಯಸುತ್ತಾನೆ. ಅದಕ್ಕೆ ಹೆತ್ತವರಿಗೆ ಬೇಕಾದ ಸಲಹೆಗಳನ್ನ ಕೊಟ್ಟಿದ್ದಾನೆ. ಯೆಹೋವ ದೇವರು ಮಕ್ಕಳಿಗೂ ಸಲಹೆಗಳನ್ನ ಕೊಟ್ಟಿದ್ದಾನೆ. ಆ ಸಲಹೆಗಳನ್ನ ಪಾಲಿಸೋದ್ರಿಂದ ಮಕ್ಕಳಿಗೆ ಒಳ್ಳೇದಾಗುತ್ತೆ. ಎಲ್ಲರೂ ಯೆಹೋವನ ಮಾತನ್ನ ಪಾಲಿಸುವಾಗ ಕುಟುಂಬ ಖುಷಿಖುಷಿಯಾಗಿರುತ್ತೆ.

1. ಯೆಹೋವ ದೇವರು ಹೆತ್ತವರಿಗೆ ಯಾವ ಸಲಹೆ ಕೊಟ್ಟಿದ್ದಾನೆ?

ಹೆತ್ತವರು ಮಕ್ಕಳನ್ನ ಪ್ರೀತಿಸಬೇಕು, ಅವರ ಜೊತೆ ಹೆಚ್ಚು ಸಮಯ ಕಳೆಯಬೇಕು ಅಂತ ಯೆಹೋವನು ಬಯಸುತ್ತಾನೆ. ಯಾವುದೇ ಹಾನಿಯಾಗದಂತೆ ಅವರನ್ನ ಸಂರಕ್ಷಿಸಬೇಕು ಮತ್ತು ಬೈಬಲಿನಲ್ಲಿ ಹೇಳಿರೋ ಪ್ರಕಾರ ಅವರಿಗೆ ತರಬೇತಿ ಕೊಡಬೇಕು ಅಂತನೂ ಯೆಹೋವನು ಬಯಸುತ್ತಾನೆ. (ಜ್ಞಾನೋಕ್ತಿ 1:8) ಅಪ್ಪಂದಿರಿಗೆ ಬೈಬಲ್‌ ಹೀಗೆ ಹೇಳುತ್ತೆ: “ಯೆಹೋವ ಹೇಳೋ ತರಾನೇ ಅವ್ರಿಗೆ [ನಿಮ್ಮ ಮಕ್ಕಳಿಗೆ] ಕಲಿಸ್ತಾ, ತರಬೇತಿ ಕೊಡ್ತಾ ಬೆಳೆಸಿ.” (ಎಫೆಸ 6:4 ಓದಿ.) ಮಕ್ಕಳನ್ನ ಬೆಳೆಸುವ ಜವಾಬ್ದಾರಿಯನ್ನ ಬೇರೆ ಯಾರಿಗೂ ಕೊಡದೆ ಹೆತ್ತವರೇ ಮಾಡಬೇಕು. ಅದಕ್ಕಾಗಿ ಬೈಬಲ್‌ ಮಾರ್ಗದರ್ಶನವನ್ನ ಪಾಲಿಸಬೇಕು. ಆಗ ಯೆಹೋವ ದೇವರಿಗೆ ತುಂಬ ಖುಷಿಯಾಗುತ್ತೆ.

2. ಯೆಹೋವ ದೇವರು ಮಕ್ಕಳಿಗೆ ಯಾವ ಸಲಹೆ ಕೊಟ್ಟಿದ್ದಾನೆ?

ಯೆಹೋವ ದೇವರು ಮಕ್ಕಳಿಗೆ, “ಎಲ್ಲ ವಿಷ್ಯದಲ್ಲಿ ನಿಮ್ಮ ಅಪ್ಪಅಮ್ಮನ ಮಾತು ಕೇಳಿ” ಅಂತ ಹೇಳಿದ್ದಾನೆ. (ಕೊಲೊಸ್ಸೆ 3:20 ಓದಿ.) ಮಕ್ಕಳು ಅಪ್ಪ ಅಮ್ಮನ ಮಾತು ಕೇಳಿ ಅವರಿಗೆ ಗೌರವ ಕೊಟ್ಟಾಗ, ಅಪ್ಪ ಅಮ್ಮನಿಗೆ ಮತ್ತು ಯೆಹೋವ ದೇವರಿಗೆ ತುಂಬ ಖುಷಿಯಾಗುತ್ತೆ. (ಜ್ಞಾನೋಕ್ತಿ 23:22-25) ಈ ವಿಷಯದಲ್ಲಿ ಯೇಸು ಒಳ್ಳೇ ಮಾದರಿ ಇಟ್ಟಿದ್ದಾನೆ. ಯೇಸು ಪರಿಪೂರ್ಣನಾಗಿದ್ರೂ ಆತನ ಅಪ್ಪ ಅಮ್ಮನ ಮಾತು ಕೇಳಿ ಅವರಿಗೆ ಗೌರವ ಕೊಟ್ಟನು.—ಲೂಕ 2:51, 52.

3. ನೀವು ಕುಟುಂಬವಾಗಿ ಹೇಗೆ ಯೆಹೋವನಿಗೆ ಆಪ್ತರಾಗಬಹುದು?

ನೀವು ಹೆತ್ತವರಾಗಿದ್ದರೆ ನಿಮ್ಮ ತರಾನೇ ನಿಮ್ಮ ಮಕ್ಕಳು ಯೆಹೋವನನ್ನು ಪ್ರೀತಿಸಬೇಕು ಅಂತ ಬಯಸುತ್ತೀರ ಅನ್ನೋದರಲ್ಲಿ ಎರಡು ಮಾತಿಲ್ಲ. ಆದ್ರೆ ಅದು ಹೇಗೆ ಸಾಧ್ಯ? ಬೈಬಲ್‌ ಏನು ಹೇಳುತ್ತೆ ಅಂತ ನೋಡಿ: “ಇದನ್ನ ನಿಮ್ಮ ಮಕ್ಕಳ ಹೃದಯದಲ್ಲಿ ಅಚ್ಚೊತ್ತಬೇಕು. ಮನೇಲಿ ಕೂತಿರುವಾಗ ದಾರೀಲಿ ನಡಿವಾಗ ಮಲಗುವಾಗ ಏಳುವಾಗ ನೀವು ಇದ್ರ ಬಗ್ಗೆ ಅವ್ರ ಹತ್ರ ಮಾತಾಡಬೇಕು.” (ಧರ್ಮೋಪದೇಶಕಾಂಡ 6:7) ಇಲ್ಲಿ “ಅಚ್ಚೊತ್ತಬೇಕು” ಅನ್ನೋದರ ಅರ್ಥ ಮನಸ್ಸಿಗೆ ನಾಟಿಸಬೇಕು ಅಥವಾ ಪದೇಪದೇ ಹೇಳಬೇಕು ಅಂತಾಗಿದೆ. ಆಗಲೇ ಆ ವಿಷಯ ನಿಮ್ಮ ಮಕ್ಕಳ ಮನಸ್ಸಲ್ಲಿ ತುಂಬ ಕಾಲ ಉಳಿಯುತ್ತೆ. ಈ ವಚನದಲ್ಲಿ ಹೇಳೋ ಹಾಗೆ ಸಾಧ್ಯವಾದಾಗೆಲ್ಲಾ ನಿಮ್ಮ ಮಕ್ಕಳಿಗೆ ಯೆಹೋವ ದೇವರ ಬಗ್ಗೆ ಹೇಳೋಕೆ ಅವಕಾಶಗಳನ್ನ ಹುಡುಕಬೇಕು. ಪ್ರತಿವಾರ ಕುಟುಂಬ ಆರಾಧನೆಗಾಗಿ ಸಮಯವನ್ನ ಮಾಡಿಕೊಳ್ಳೋದು ತುಂಬ ಒಳ್ಳೇದು. ಒಂದುವೇಳೆ ನಿಮಗೆ ಮಕ್ಕಳು ಇಲ್ಲದಿದ್ದರೆ ಪ್ರತಿವಾರ ನೀವಿಬ್ಬರೂ ಒಟ್ಟಿಗೆ ದೇವರ ಬಗ್ಗೆ ಕಲಿಯೋದ್ರಿಂದ ತುಂಬ ಪ್ರಯೋಜನ ಪಡೆದುಕೊಳ್ಳುತ್ತೀರ.

ಹೆಚ್ಚನ್ನ ತಿಳಿಯೋಣ

ಕುಟುಂಬದಲ್ಲಿ ಸಂತೋಷವಾಗಿ ಮತ್ತು ಸುರಕ್ಷಿತವಾಗಿ ಇರಲಿಕ್ಕೆ ಸಹಾಯ ಮಾಡುವ ಕೆಲವು ಒಳ್ಳೇ ಸಲಹೆಗಳನ್ನ ನೋಡಿ.

4. ನಿಮ್ಮ ಮಕ್ಕಳಿಗೆ ಪ್ರೀತಿಯಿಂದ ತರಬೇತಿ ಕೊಡಿ

ಮಕ್ಕಳಿಗೆ ತರಬೇತಿ ಕೊಡೋದು ಅಷ್ಟು ಸುಲಭ ಅಲ್ಲ. ಇದನ್ನ ಮಾಡಕ್ಕೆ ಬೈಬಲ್‌ ಹೇಗೆ ಸಹಾಯ ಮಾಡುತ್ತೆ? ಯಾಕೋಬ 1:19, 20 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಅಪ್ಪ ಅಮ್ಮ ಮಕ್ಕಳ ಜೊತೆ ಪ್ರೀತಿಯಿಂದ ಹೇಗೆ ಮಾತಾಡಬಹುದು?

  • ಅಪ್ಪ ಅಮ್ಮ ಕೋಪದಲ್ಲಿರುವಾಗa ಯಾಕೆ ಮಕ್ಕಳಿಗೆ ಶಿಸ್ತು ಕೊಡಬಾರದು?

ಒಬ್ಬ ತಂದೆ ಮಗನ ಹತ್ತಿರ ಕುಳಿತು ಮಾತಾಡುತ್ತಿದ್ದಾನೆ, ಮಗನ ಕೈಯಲ್ಲಿ ಒಂದು ಬಾಲ್‌ ಇದೆ. ಪಕ್ಕದಲ್ಲಿ ಒಡೆದು ಹೋಗಿರುವ ಒಂದು ಪಾಟ್‌ ಇದೆ.

5. ನಿಮ್ಮ ಮಕ್ಕಳನ್ನ ಸಂರಕ್ಷಿಸಿ

ಮಕ್ಕಳನ್ನ ಸಂರಕ್ಷಿಸಬೇಕಾದ್ರೆ ಅವರಿಗೆ ಲೈಂಗಿಕತೆಯ ಬಗ್ಗೆ ಹೇಳಿಕೊಡೋದು ತುಂಬ ಪ್ರಾಮುಖ್ಯ. ಆದರೆ ಆ ವಿಷಯದ ಬಗ್ಗೆ ಮಕ್ಕಳ ಹತ್ತಿರ ಮಾತಾಡಕ್ಕೆ ನಿಮಗೆ ಕಷ್ಟ ಆಗುತ್ತಿದೆಯಾ? ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ.

ವಿಡಿಯೋ: ನಿಮ್ಮ ಮಕ್ಕಳನ್ನು ಕೆಟ್ಟ ವಿಷಯಗಳಿಂದ ಸಂರಕ್ಷಿಸಿ (2:58)

  • ಲೈಂಗಿಕತೆಯ ಬಗ್ಗೆ ತಮ್ಮ ಮಕ್ಕಳಿಗೆ ಹೇಳೋಕೆ ಕೆಲವು ಹೆತ್ತವರಿಗೆ ಯಾಕೆ ಮುಜುಗರ ಅನಿಸುತ್ತೆ?

  • ಲೈಂಗಿಕತೆಯ ಬಗ್ಗೆ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ತಿಳಿಸಿದ್ದಾರೆ?

ಬೈಬಲಿನಲ್ಲಿ ಮುಂಚೆನೇ ತಿಳಿಸಿದ ಹಾಗೆ ಸೈತಾನನ ಈ ಲೋಕ ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ ಹೋಗುತ್ತಾ ಇದೆ. 2 ತಿಮೊತಿ 3:1, 13 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ವಚನ 13ರಲ್ಲಿ ಹೇಳಿರುವಂತೆ ಕೆಲವು ಕೆಟ್ಟವರು ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಈ ವಿಷಯವನ್ನ ಮನಸ್ಸಿನಲ್ಲಿಟ್ಟು ಹೆತ್ತವರು ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಮತ್ತು ಇಂಥ ದುಷ್ಟರಿಂದ ಕಾಪಾಡಿಕೊಳ್ಳೋದು ಹೇಗೆ ಅನ್ನೋದರ ಬಗ್ಗೆ ಕಲಿಸೋದು ಯಾಕೆ ಪ್ರಾಮುಖ್ಯ?

ನಿಮಗೆ ಗೊತ್ತಿತ್ತಾ?

ಹೆತ್ತವರು ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ತಿಳುವಳಿಕೆಯನ್ನ ಮೂಡಿಸೋದು ಮತ್ತು ಲೈಂಗಿಕ ದೌರ್ಜನ್ಯದಿಂದ ತಮ್ಮನ್ನು ಕಾಪಾಡಿಕೊಳ್ಳೋದು ಹೇಗೆ ಅಂತ ಕಲಿಸೋದು ತುಂಬ ಪ್ರಾಮುಖ್ಯ. ಅದಕ್ಕಾಗಿ ಯೆಹೋವನ ಸಾಕ್ಷಿಗಳು ಕೆಲವು ಪ್ರಕಾಶನಗಳನ್ನ ಬಿಡುಗಡೆ ಮಾಡಿದ್ದಾರೆ. ಉದಾಹರಣೆಗೆ,

  • ನಿಮ್ಮ ಮಕ್ಕಳನ್ನು ಸಂರಕ್ಷಿಸಿ (1:52)

  • ಮಹಾ ಬೋಧಕನಿಂದ ಕಲಿಯೋಣ, ಪಾಠ 10 ಮತ್ತು 32

  • “ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಿ” (ಎಚ್ಚರ! ನಂ. 4 2016)

6. ಮಕ್ಕಳೇ ನಿಮ್ಮ ಹೆತ್ತವರನ್ನ ಗೌರವಿಸಿ

ಮಕ್ಕಳು ಮತ್ತು ಯುವಜನರು ಗೌರವದಿಂದ ಮಾತಾಡುವ ಮೂಲಕ ಹೆತ್ತವರಿಗೆ ಮರ್ಯಾದೆ ಕೊಡಬೇಕು. ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.

ವಿಡಿಯೋ: ಹೆತ್ತವರ ಜೊತೆ ಮಾತಾಡೋದು ಹೇಗೆ? (2:19)

  • ಹದಿವಯಸ್ಸಿನ ಮಕ್ಕಳು ತಮ್ಮ ಹೆತ್ತವರ ಜೊತೆ ಗೌರವದಿಂದ ಮಾತಾಡೋದು ಯಾಕೆ ಪ್ರಾಮುಖ್ಯ?

  • ಮಕ್ಕಳು ಹೆತ್ತವರಿಗೆ ಗೌರವ ತೋರಿಸೋ ರೀತಿಯಲ್ಲಿ ಹೇಗೆ ಮಾತಾಡಬಹುದು?

ಜ್ಞಾನೋಕ್ತಿ 1:8 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಅಪ್ಪ ಅಮ್ಮ ಬುದ್ಧಿ ಹೇಳುವಾಗ ಮಕ್ಕಳು ಹೇಗೆ ನಡೆದುಕೊಳ್ಳಬೇಕು?

7. ಕುಟುಂಬವಾಗಿ ಯೆಹೋವ ದೇವರನ್ನ ಆರಾಧಿಸಿ

ಯೆಹೋವನ ಸಾಕ್ಷಿಗಳ ಕುಟುಂಬಗಳು ಪ್ರತಿವಾರ ತಪ್ಪದೇ ಕುಟುಂಬ ಆರಾಧನೆಯನ್ನ ಮಾಡುತ್ತಾರೆ. ಕುಟುಂಬ ಆರಾಧನೆ ಹೇಗಿರಬೇಕು? ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.

ವಿಡಿಯೋ: ಕುಟುಂಬ ಆರಾಧನೆ—ಸವಾಲುಗಳು ಮತ್ತು ಆಶೀರ್ವಾದಗಳು (8:04)

  • ಪ್ರತಿವಾರ ತಪ್ಪದೇ ಕುಟುಂಬ ಆರಾಧನೆಯನ್ನ ಹೇಗೆ ಮಾಡಬಹುದು?

  • ಎಲ್ಲರಿಗೂ ಪ್ರಯೋಜನವಾಗುವ ಮತ್ತು ಎಲ್ಲರೂ ಆನಂದಿಸುವ ಕುಟುಂಬ ಆರಾಧನೆಯನ್ನ ಹೇಗೆ ಮಾಡಬಹುದು?—ಈ ಪಾಠದಲ್ಲಿರುವ ಆರಂಭದ ಚಿತ್ರ ನೋಡಿ.

  • ನಿಮ್ಮ ಮನೆಯಲ್ಲಿರೋ ಎಲ್ಲರೂ ಒಟ್ಟಿಗೆ ಕುಟುಂಬ ಆರಾಧನೆ ಮಾಡೋಕೆ ಯಾಕೆ ಕಷ್ಟ ಆಗಬಹುದು?

ದೇವರ ನಿಯಮ ಪುಸ್ತಕದಲ್ಲಿರುವ ವಿಷಯಗಳ ಬಗ್ಗೆ ಇಸ್ರಾಯೇಲಿನ ಕುಟುಂಬಗಳು ಯಾವಾಗಲೂ ಮಾತಾಡ್ತಾ ಇರಬೇಕು ಅಂತ ದೇವರು ಬಯಸಿದನು. ಧರ್ಮೋಪದೇಶಕಾಂಡ 6:6, 7 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಈ ಮಾತನ್ನ ನೀವು ಹೇಗೆ ಪಾಲಿಸಬಹುದು?

ನಿಮ್ಮ ಕುಟುಂಬ ಆರಾಧನೆಯನ್ನ ಹೀಗೂ ಮಾಡಬಹುದು:

  • ಕೂಟಗಳಿಗೆ ತಯಾರಿ ಮಾಡಿ.

  • ನಿಮ್ಮ ಕುಟುಂಬಕ್ಕೆ ಇಷ್ಟವಿರುವ ಒಂದು ಬೈಬಲ್‌ ಘಟನೆಯನ್ನ ಓದಿ, ಚರ್ಚಿಸಿ.

  • ನಿಮಗೆ ಚಿಕ್ಕ ಮಕ್ಕಳಿದ್ರೆ jw.orgನಲ್ಲಿ ಮಕ್ಕಳಿಗಾಗಿ ಇರುವ ಚಟುವಟಿಕೆಗಳನ್ನ ಡೌನ್‌ಲೋಡ್‌ ಮಾಡಿ ಅಥವಾ ಪ್ರಿಂಟ್‌ ಮಾಡಿಕೊಳ್ಳಿ.

  • ನಿಮಗೆ ಹದಿವಯಸ್ಸಿನ ಮಕ್ಕಳಿರೋದಾದ್ರೆ jw.orgನಲ್ಲಿರೋ ಹದಿವಯಸ್ಸಿನವರಿಗಾಗಿ ಇರುವ ಲೇಖನಗಳನ್ನ ಚರ್ಚಿಸಿ.

  • ಬೈಬಲಿನಲ್ಲಿರುವ ಒಂದು ಘಟನೆಯನ್ನ ನಿಮ್ಮ ಮಕ್ಕಳ ಜೊತೆ ಅಭಿನಯಿಸಿ.

  • jw.orgನಲ್ಲಿರುವ ಯಾವುದಾದರೂ ಒಂದು ವಿಡಿಯೋ ನೋಡಿ ಮತ್ತು ಚರ್ಚಿಸಿ.

ಕೆಲವರು ಹೀಗಂತಾರೆ: “ಬೈಬಲಿನಲ್ಲಿರೋ ವಿಷಯಗಳನ್ನ ಅರ್ಥಮಾಡಿಕೊಳ್ಳೋಕೆ ಮಕ್ಕಳಿಗೆ ತುಂಬಾ ಕಷ್ಟ.”

  • ನೀವೇನು ಹೇಳುತ್ತೀರಾ?

ನಾವೇನು ಕಲಿತ್ವಿ

ಹೆತ್ತವರು ಮಕ್ಕಳನ್ನ ಪ್ರೀತಿಸಬೇಕು, ಅವರಿಗೆ ತರಬೇತಿ ಕೊಡಬೇಕು ಮತ್ತು ಅವರನ್ನ ಸಂರಕ್ಷಿಸಬೇಕು ಅಂತ ಯೆಹೋವನು ಬಯಸುತ್ತಾನೆ; ಮಕ್ಕಳು ಹೆತ್ತವರನ್ನ ಗೌರವಿಸಬೇಕು ಅವರ ಮಾತನ್ನ ಕೇಳಬೇಕು ಅಂತ ಬಯಸುತ್ತಾನೆ. ಅಷ್ಟೇ ಅಲ್ಲ, ಕುಟುಂಬದಲ್ಲಿರೋ ಎಲ್ಲರೂ ಒಟ್ಟಾಗಿ ಆತನನ್ನ ಆರಾಧಿಸಬೇಕು ಅಂತನೂ ಬಯಸುತ್ತಾನೆ.

ನೆನಪಿದೆಯಾ

  • ಹೆತ್ತವರು ಮಕ್ಕಳಿಗೆ ಹೇಗೆ ತರಬೇತಿ ಕೊಡಬೇಕು ಮತ್ತು ಸಂರಕ್ಷಿಸಬೇಕು?

  • ಮಕ್ಕಳು ಹೇಗೆ ತಮ್ಮ ಹೆತ್ತವರನ್ನ ಗೌರವಿಸಬೇಕು?

  • ಕುಟುಂಬ ಆರಾಧನೆಗಾಗಿ ಪ್ರತಿವಾರ ಸಮಯ ಮಾಡ್ಕೊಳ್ಳೋದ್ರಿಂದ ಏನು ಪ್ರಯೋಜನ ಇದೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಹದಿವಯಸ್ಸಿಗೆ ಕಾಲಿಡುತ್ತಿರುವ ನಿಮ್ಮ ಮಕ್ಕಳಿಗೆ ಸಹಾಯ ಮಾಡುವ ಕೆಲವು ಸಲಹೆಗಳು.

“ಮಕ್ಕಳಿಗೆ ಕಲಿಸಬೇಕಾದ ಆರು ಪಾಠಗಳು” (ಎಚ್ಚರ! ನಂ. 2 2019)

ವಯಸ್ಸಾಗಿರುವ ಹೆತ್ತವರನ್ನ ನೋಡಿಕೊಳ್ಳುವವರಿಗೆ ಕೆಲವು ಸಲಹೆಗಳು.

“ವಯಸ್ಸಾದ ಅಪ್ಪ-ಅಮ್ಮನನ್ನ ನೋಡ್ಕೊಳ್ಳೋದ್ರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?” (jw.org ಲೇಖನ)

ಒಬ್ಬ ತಂದೆಗೆ ಮಕ್ಕಳನ್ನ ಹೇಗೆ ಸಾಕೋದು ಅಂತ ಗೊತ್ತಿರಲಿಲ್ಲ. ಆದರೆ ಅವನು ಹೇಗೆ ಒಬ್ಬ ಒಳ್ಳೇ ತಂದೆಯಾದನು ಅಂತ ನೋಡಿ.

ಮಕ್ಕಳನ್ನು ಬೆಳೆಸಲು ಯೆಹೋವನಿಂದ ಕಲಿತ್ವಿ (5:58)

ಅಪ್ಪ ಹೇಗೆ ತನ್ನ ಮಗನ ಜೊತೆ ಆಪ್ತ ಸ್ನೇಹ ಬೆಳೆಸಿಕೊಳ್ಳಬಹುದು ಅಂತ ನೋಡಿ.

“ಅಪ್ಪ-ಮಗ ಗೆಳೆಯರಾಗಿರಲು ಸಾಧ್ಯವೇ?” (ಕಾವಲಿನಬುರುಜು, ಏಪ್ರಿಲ್‌ 1, 2012)

a ಬೈಬಲಿನಲ್ಲಿ “ಶಿಸ್ತು” ಅನ್ನೋ ಪದದ ಅರ್ಥ ನಿರ್ದೇಶನ ಕೊಡು, ಮಾರ್ಗದರ್ಶಿಸು, ತಿದ್ದಿ ಬುದ್ಧಿ ಹೇಳು ಅಂತಾಗಿದೆ. ಆದ್ರೆ ಇದರ ಅರ್ಥ ಕ್ರೂರವಾಗಿ ವರ್ತಿಸಬೇಕು ಅಂತ ಅಲ್ಲ.—ಜ್ಞಾನೋಕ್ತಿ 4:1.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ