ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 2/1 ಪು. 32
  • “ಹುಡುಗನಿಗೆ ತರಬೇತಿ ನೀಡು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಹುಡುಗನಿಗೆ ತರಬೇತಿ ನೀಡು”
  • ಕಾವಲಿನಬುರುಜು—1999
ಕಾವಲಿನಬುರುಜು—1999
w99 2/1 ಪು. 32

“ಹುಡುಗನಿಗೆ ತರಬೇತಿ ನೀಡು”

ಯಶಸ್ವಿಕರವಾದ ರೀತಿಯಲ್ಲಿ ತೋಟಗಾರಿಕೆಯನ್ನು ಮಾಡುವುದು, ಕೆಲವು ಬೀಜಗಳನ್ನು ನೆಲದಲ್ಲಿ ಚೆಲ್ಲಿ, ಕೆಲವು ತಿಂಗಳುಗಳು ಕಳೆದ ಬಳಿಕ ಕೊಯ್ಲಿಗಾಗಿ ಹಿಂದಿರುಗಿ ಬರುವುದಕ್ಕಿಂತಲೂ ಹೆಚ್ಚಿನದನ್ನು ಅಗತ್ಯಪಡಿಸುತ್ತದೆ. ಇದಕ್ಕಾಗಿ ಕಷ್ಟಪಟ್ಟು ಕೆಲಸಮಾಡಬೇಕಾಗಿದೆ. ಮಣ್ಣನ್ನು ಹದಮಾಡಬೇಕು, ಬೀಜವನ್ನು ಬಿತ್ತಬೇಕು, ಮತ್ತು ಗಿಡಗಳು ಚೆನ್ನಾಗಿ ಬೆಳೆಯಲಿಕ್ಕಾಗಿ ಅವುಗಳಿಗೆ ನೀರು ಹಾಯಿಸಬೇಕು ಮತ್ತು ಅವುಗಳ ಆರೈಕೆಮಾಡಬೇಕು.

ಈ ಕಾರ್ಯವಿಧಾನವು, ಜ್ಞಾನೋಕ್ತಿ 22:6ರಲ್ಲಿರುವ ಮಾತುಗಳ ಸತ್ಯತೆಯನ್ನು ಚೆನ್ನಾಗಿ ದೃಷ್ಟಾಂತಿಸುತ್ತದೆ. ಅದು ಹೀಗನ್ನುತ್ತದೆ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು [“ಹುಡುಗನಿಗೆ ತರಬೇತಿ ನೀಡು,” NW]; ಮುಪ್ಪಿನಲ್ಲಿಯೂ ಓರೆಯಾಗನು.” ಯಶಸ್ವಿಕರವಾದ ರೀತಿಯಲ್ಲಿ ಮಕ್ಕಳನ್ನು ಬೆಳೆಸುವುದರಲ್ಲಿ ಹೆತ್ತವರ ತರಬೇತಿಯು ಪ್ರಮುಖವಾದ ಅಂಶವಾಗಿದೆ ಎಂಬುದು ನಿಜ.

ಆದರೂ, ಸ್ವೇಚ್ಛಾಚಾರ ತುಂಬಿರುವ ಇಂದಿನ ಲೋಕದಲ್ಲಿ, ಈ ಸಲಹೆಗೆ ಕಿವಿಗೊಡಲು ಅನೇಕ ಹೆತ್ತವರು ವಿಫಲರಾಗಿದ್ದಾರೆ. ಮಕ್ಕಳು ತಮ್ಮ ಸಮಸ್ಯೆಯನ್ನು ತಾವೇ ನಿಭಾಯಿಸಬೇಕು ಎಂಬ ಈ ಲೋಕದ ಸರ್ವಸಾಮಾನ್ಯ ವಿವೇಕವನ್ನು ಹೆತ್ತವರು ಅನುಸರಿಸುವಾಗ, ಅವರ ಮಕ್ಕಳು ತಮ್ಮಷ್ಟಕ್ಕೇ ಇರುತ್ತಾರೆ. ಮತ್ತು ಈ ರೀತಿ ಮಕ್ಕಳನ್ನು ಅವರಷ್ಟಕ್ಕೇ ಬಿಟ್ಟುಬಿಡುವಾಗ, ಯಾವ ನೀತಿನಿಯಮಗಳೂ ಇಲ್ಲದ, ಏನು ಮಾಡಲೂ ಹೇಸದ ಜನರ ಹಾನಿಕರವಾದ ಪ್ರಭಾವಗಳಿಗೆ ಸುಲಭವಾಗಿ ಬಲಿಬೀಳುತ್ತಾರೆ.—ಜ್ಞಾನೋಕ್ತಿ 13:20.

ಒಂದುವೇಳೆ ಹೆತ್ತವರು ತಮ್ಮ ಮಕ್ಕಳಿಗೆ ಚಿಕ್ಕಪ್ರಾಯದಿಂದಲೇ ದೈವಿಕ ತರಬೇತಿಯನ್ನು ನೀಡಿ, ಅವರ ಮನಸ್ಸಿನಲ್ಲಿ ಕ್ರೈಸ್ತ ಮೂಲತತ್ವಗಳನ್ನು ತುಂಬಿಸುವುದಾದರೆ, ಎಷ್ಟು ಒಳಿತಾಗುತ್ತದೆ! ಇದನ್ನು ಎಷ್ಟು ಬೇಗನೆ ಆರಂಭಿಸಬೇಕು? “ಚಿಕ್ಕಂದಿನಿಂದಲೇ” ಎಂದು ಅಪೊಸ್ತಲ ಪೌಲನು ಹೇಳುತ್ತಾನೆ. ತಿಮೊಥೆಯನಿಗೂ ಇದೇ ರೀತಿಯ ಶಿಕ್ಷಣವು ದೊರಕಿತ್ತು. ಅವನ ತಾಯಿಯಾದ ಯೂನೀಕೆ ಮತ್ತು ಅಜ್ಜಿಯಾದ ಲೋವಿಯರು, ತಿಮೊಥೆಯನ ಮನಸ್ಸಿನಲ್ಲಿ “ಪರಿಶುಧ್ಧಗ್ರಂಥಗಳ” ವಿಷಯವನ್ನು ಬೇರೂರಿಸಿದ್ದರು. ಇದರಿಂದಾಗಿ ಅವನು ಆ ಬೋಧನೆಗಳನ್ನು “ಕಲಿತನು” ಮತ್ತು ಅವುಗಳನ್ನು “ದೃಢವಾಗಿ ನಂಬಿದನು.” ಇದರ ಫಲಿತಾಂಶವೇನಾಯಿತು? ಇಂತಹ ತರಬೇತಿಯು “ರಕ್ಷಣೆಹೊಂದಿಸುವ ಜ್ಞಾನವನ್ನು” ಪಡೆಯುವಂತೆ ಮಾಡುವುದರಲ್ಲಿ ಅತಿ ಮಹತ್ವದ ಪಾತ್ರವನ್ನು ವಹಿಸಿತು.—2ತಿಮೊಥೆಯ 1:5; 3:14, 15.

ತದ್ರೀತಿಯಲ್ಲಿ ಇಂದು, “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ” ಇರುವ ಹೆತ್ತವರು, ಒಂದುವೇಳೆ “ಮನಗುಂದದಿದ್ದರೆ,” ತಕ್ಕಕಾಲದಲ್ಲಿ ಹೇರಳವಾದ ಆಶೀರ್ವಾದಗಳನ್ನು ಕೊಯ್ಯುವರು. (ಗಲಾತ್ಯ 6:9) ವಿವೇಕಿ ಅರಸನಾದ ಸೊಲೊಮೋನನು ಹೇಳುವುದು: “ಧರ್ಮಿಯ ತಂದೆಯು ಅತಿ ಸಂತೋಷಪಡುವನು.”—ಜ್ಞಾನೋಕ್ತಿ 23:24.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ