-
ನಿಮ್ಮ ಶಕ್ತಿಯ ಪ್ರಯೋಗದಲ್ಲಿ ‘ದೇವರನ್ನು ಅನುಸರಿಸುವವರಾಗಿರಿ’ಯೆಹೋವನ ಸಮೀಪಕ್ಕೆ ಬನ್ನಿರಿ
-
-
10. (ಎ) ಹೆತ್ತವರಿಗೆ ಯಾವ ಅಧಿಕಾರವನ್ನು ದೇವರು ದಯಪಾಲಿಸಿದ್ದಾನೆ? (ಬಿ) “ಶಿಸ್ತು” ಎಂಬ ಪದದ ಅರ್ಥವೇನು, ಮತ್ತು ಅದನ್ನು ಹೇಗೆ ನಿರ್ವಹಿಸಬೇಕು? (ಪಾದಟಿಪ್ಪಣಿಯನ್ನೂ ನೋಡಿ.)
10 ಹೆತ್ತವರಿಗೆ ಸಹ ದೇವರಿಂದ ಅನುಗ್ರಹಿಸಲ್ಪಟ್ಟ ಅಧಿಕಾರವು ಇದೆ. ಬೈಬಲ್ ಉಪದೇಶಿಸುವುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಅವರನ್ನು ಬೆಳೆಸುತ್ತಾ ಹೋಗಿರಿ.” (ಎಫೆಸ 6:4, NW) ಬೈಬಲಿನಲ್ಲಿ “ಶಿಸ್ತು” ಎಂಬ ಪದದ ಅರ್ಥವು “ಪಾಲನೆಪೋಷಣೆ, ತರಬೇತಿ, ಉಪದೇಶ” ಎಂದಾಗಿರಬಲ್ಲದು. ಮಕ್ಕಳಿಗೆ ಶಿಸ್ತು ಅಗತ್ಯ; ಸ್ಪಷ್ಟವಾದ ನಿರ್ದೇಶನಗಳು, ಸರಹದ್ದುಗಳು ಮತ್ತು ಇತಿಮಿತಿಗಳ ಕೆಳಗೆ ಅವರು ಸಂತೋಷಿತರೂ ಸಫಲರೂ ಆಗಿ ಬೆಳೆಯುತ್ತಾರೆ. ಬೈಬಲು ಅಂಥ ಶಿಸ್ತು ಅಥವಾ ಉಪದೇಶವನ್ನು ಪ್ರೀತಿಯೊಂದಿಗೆ ಜೊತೆಗೂಡಿಸುತ್ತದೆ. (ಜ್ಞಾನೋಕ್ತಿ 13:24) ಆದುದರಿಂದ “ಶಿಸ್ತಿನ ಬೆತ್ತ” ಎಂದಿಗೂ, ಭಾವನಾತ್ಮಕವಾಗಿರಲಿ ಶಾರೀರಿಕವಾಗಿರಲಿ ದೌರ್ಜನ್ಯಕರವಾದದ್ದು ಆಗಿರಲೇಬಾರದು.a (ಜ್ಞಾನೋಕ್ತಿ 22:15, NW; 29:15) ಪ್ರೀತಿಯಿಲ್ಲದ ಗಡುಸಾದ ಅಥವಾ ಕಠೋರ ಶಿಸ್ತು ಹೆತ್ತವರ ಅಧಿಕಾರದ ದುರುಪಯೋಗವೇ ಸರಿ ಮತ್ತು ಅದು ಮಗುವಿನ ಮನೋಬಲವನ್ನು ಕುಗ್ಗಿಸುವುದು. (ಕೊಲೊಸ್ಸೆ 3:21) ಇನ್ನೊಂದು ಕಡೆಯಲ್ಲಿ, ಸರಿಯಾದ ರೀತಿಯಲ್ಲಿ ಕೊಡಲ್ಪಡುವ ಸಮತೋಲನದ ಶಿಸ್ತು, ತಮ್ಮ ಹೆತ್ತವರು ತಮ್ಮನ್ನು ಪ್ರೀತಿಸುತ್ತಾರೆ ಹಾಗೂ ತಾವು ಉತ್ತಮ ವ್ಯಕ್ತಿಗಳಾಗುವುದನ್ನು ಬಯಸುತ್ತಾರೆಂಬ ಸಂದೇಶವನ್ನು ಮಕ್ಕಳಿಗೆ ತಲಪಿಸುವುದು.
-
-
ನಿಮ್ಮ ಶಕ್ತಿಯ ಪ್ರಯೋಗದಲ್ಲಿ ‘ದೇವರನ್ನು ಅನುಸರಿಸುವವರಾಗಿರಿ’ಯೆಹೋವನ ಸಮೀಪಕ್ಕೆ ಬನ್ನಿರಿ
-
-
a ಬೈಬಲ್ ಕಾಲಗಳಲ್ಲಿ, “ಬೆತ್ತ” ಎಂಬುದಕ್ಕಿರುವ ಹೀಬ್ರು ಪದದ ಅರ್ಥ ಒಂದು ಕೋಲು ಅಥವಾ ದೊಣ್ಣೆಯಾಗಿದ್ದು, ಕುರುಬನು ತನ್ನ ಕುರಿಗಳನ್ನು ನಡಿಸಲು ಬಳಸುವಂಥದ್ದಾಗಿತ್ತು. (ಕೀರ್ತನೆ 23:4) ತದ್ರೀತಿಯಲ್ಲಿ, ಹೆತ್ತವರ ಅಧಿಕಾರದ “ಬೆತ್ತ” ಪ್ರೀತಿಯ ಮಾರ್ಗದರ್ಶನವನ್ನು ಸೂಚಿಸುತ್ತದೆಯೆ ಹೊರತು ಕಠೋರ ಯಾ ಪಾಶವೀಯ ಶಿಕ್ಷೆಯನ್ನಲ್ಲ.
-