ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದೇವರ ಕಡೆಗೆ ನಿಮಗಿರುವ ಪೂರ್ಣ ಕರ್ತವ್ಯವನ್ನು ನೀವು ನೆರವೇರಿಸುತ್ತಿದ್ದೀರೊ?
    ಕಾವಲಿನಬುರುಜು—1999 | ನವೆಂಬರ್‌ 15
    • 12. ಪ್ರಸಂಗಿ 12:11, 12ರಲ್ಲಿ ದಾಖಲಿಸಲ್ಪಟ್ಟಂತೆ, ಸೊಲೊಮೋನನು ಹೇಳಿದ ವಿಷಯವನ್ನು ನೀವು ನಿಮ್ಮ ಸ್ವಂತ ಮಾತುಗಳಲ್ಲಿ ಹೇಗೆ ವ್ಯಕ್ತಪಡಿಸುವಿರಿ?

      12 ಸೊಲೊಮೋನನ ದಿನದಲ್ಲಿ ಆಧುನಿಕ ಮುದ್ರಣ ಸೌಲಭ್ಯಗಳು ಇರದಿದ್ದರೂ, ಅನೇಕಾನೇಕ ಪುಸ್ತಕಗಳು ಲಭ್ಯವಾಗಿದ್ದವು. ಅಂತಹ ಸಾಹಿತ್ಯವನ್ನು ಹೇಗೆ ವೀಕ್ಷಿಸಬೇಕಿತ್ತು? ಅವನು ಹೇಳಿದ್ದು: “ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳು; ಸಂಗ್ರಹವಾಕ್ಯಗಳು ಬಿಗಿಯಾಗಿ ಬಡಿದ ಮೊಳೆಗಳು; ಒಬ್ಬನೇ ಕರ್ತನಿಂದ ಬಂದಿವೆ. ಕಂದಾ, ಇವಲ್ಲದೆ ಉಳಿದವುಗಳಲ್ಲಿಯೂ ಎಚ್ಚರದಿಂದಿರು; ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ; ಅತಿವ್ಯಾಸಂಗವು ದೇಹಕ್ಕೆ ಆಯಾಸ.”—ಪ್ರಸಂಗಿ 12:11, 12.

  • ದೇವರ ಕಡೆಗೆ ನಿಮಗಿರುವ ಪೂರ್ಣ ಕರ್ತವ್ಯವನ್ನು ನೀವು ನೆರವೇರಿಸುತ್ತಿದ್ದೀರೊ?
    ಕಾವಲಿನಬುರುಜು—1999 | ನವೆಂಬರ್‌ 15
    • 14. (ಎ) ಯಾವ ರೀತಿಯ ಪುಸ್ತಕಗಳ “ಅತಿವ್ಯಾಸಂಗವು” ಪ್ರಯೋಜನಕರವಾಗಿರುವುದಿಲ್ಲ? (ಬಿ) ಯಾವ ರೀತಿಯ ಸಾಹಿತ್ಯಕ್ಕೆ ನಾವು ಪ್ರಧಾನ ಪರಿಗಣನೆಯನ್ನು ನೀಡಬೇಕು, ಮತ್ತು ಏಕೆ?

      14 ಆದರೆ ಪುಸ್ತಕಗಳ ವಿಷಯದಲ್ಲಿ ಸೊಲೊಮೋನನು ಎಚ್ಚರಿಕೆ ಕೊಟ್ಟದ್ದೇಕೆ? ಯೆಹೋವನ ವಾಕ್ಯಕ್ಕೆ ಹೋಲಿಸುವಾಗ, ಈ ಲೋಕದ ಅಸಂಖ್ಯಾತ ಸಂಪುಟಗಳಲ್ಲಿ ಕೇವಲ ಮಾನವ ವಿಚಾರಗಳೇ ತುಂಬಿಕೊಂಡಿವೆ. ಈ ವಿಚಾರಗಳಲ್ಲಿ ಹೆಚ್ಚಿನವು, ಪಿಶಾಚನಾದ ಸೈತಾನನ ಮನಸ್ಸನ್ನೇ ಪ್ರತಿಬಿಂಬಿಸುತ್ತವೆ. (2 ಕೊರಿಂಥ 4:4) ಆದುದರಿಂದ, ಐಹಿಕ ವಿಷಯಗಳ “ಅತಿವ್ಯಾಸಂಗವು” ಶಾಶ್ವತ ಪ್ರಯೋಜನಗಳನ್ನು ತರಲಾರದು. ವಾಸ್ತವದಲ್ಲಿ, ಅವುಗಳಲ್ಲಿ ಹೆಚ್ಚಿನವು ಆತ್ಮಿಕವಾಗಿ ಹಾನಿಕಾರಕವಾಗಿರಬಲ್ಲವು. ನಾವು ಸೊಲೊಮೋನನಂತೆ, ಜೀವಿತದ ಕುರಿತು ದೇವರ ವಾಕ್ಯವು ಹೇಳುವುದನ್ನೇ ಧ್ಯಾನಿಸೋಣ. ಇದು ನಮ್ಮ ನಂಬಿಕೆಯನ್ನು ಬಲಪಡಿಸಿ, ನಾವು ಯೆಹೋವನಿಗೆ ನಿಕಟರಾಗುವಂತೆ ಸಹಾಯಮಾಡುವುದು. ಇತರ ಪುಸ್ತಕಗಳಿಗೆ ಇಲ್ಲವೆ ಮಾಹಿತಿಯ ಮೂಲಗಳಿಗೆ ಅತಿಯಾದ ಗಮನವನ್ನು ನೀಡುವುದು ಆಯಾಸಕರವಾಗಿರಬಲ್ಲದು. ವಿಶೇಷವಾಗಿ ಇಂತಹ ಬರಹಗಳು, ದೈವಿಕ ವಿವೇಕವನ್ನು ವಿರೋಧಿಸುವ ಲೌಕಿಕ ವಾದವಿವಾದಗಳಾಗಿದ್ದರೆ, ಅವು ಭ್ರಷ್ಟಗೊಳಿಸುವಂತಹದ್ದಾಗಿದ್ದು ದೇವರಲ್ಲಿ ಮತ್ತು ಆತನ ಉದ್ದೇಶಗಳಲ್ಲಿ ನಮಗಿರುವ ನಂಬಿಕೆಯನ್ನು ನಾಶಗೊಳಿಸುವಂತಹದ್ದಾಗಿವೆ. ಹಾಗಾದರೆ, ಸೊಲೊಮೋನನ ಮತ್ತು ನಮ್ಮ ದಿನದ ಅತ್ಯಂತ ಪ್ರಯೋಜನಕರವಾದ ಬರಹಗಳು, ‘ಒಬ್ಬನೇ ಕರ್ತನ’ ಅಂದರೆ ಯೆಹೋವ ದೇವರ ವಿವೇಕವನ್ನು ಪ್ರತಿಬಿಂಬಿಸುವ ಬರಹಗಳಾಗಿವೆ ಎಂಬುದನ್ನು ನಾವು ಜ್ಞಾಪಿಸಿಕೊಳ್ಳೋಣ. ಆತನು ಪವಿತ್ರ ಶಾಸ್ತ್ರಗಳ 66 ಪುಸ್ತಕಗಳನ್ನು ನಮಗೆ ನೀಡಿದ್ದಾನೆ, ಮತ್ತು ಇವುಗಳಿಗೆ ನಾವು ಅತ್ಯಧಿಕ ಗಮನವನ್ನು ಕೊಡಬೇಕು. ಬೈಬಲು ಮತ್ತು ‘ನಂಬಿಗಸ್ತ ಆಳಿನ’ ಸಹಾಯಕರ ಪ್ರಕಾಶನಗಳು, “ದೈವಜ್ಞಾನವನ್ನು” ಪಡೆದುಕೊಳ್ಳಲು ನಮಗೆ ಸಹಾಯಮಾಡುತ್ತವೆ.—ಜ್ಞಾನೋಕ್ತಿ 2:1-6.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ