ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ನನ್ನ ಜನರನ್ನು ಸಂತೈಸಿರಿ”
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
    • 12, 13. (ಎ) ಪುನಸ್ಸ್ಥಾಪನೆಯ ವಾಗ್ದಾನದ ಮೇಲೆ ಏಕೆ ಭರವಸೆಯಿಡಸಾಧ್ಯವಿದೆ? (ಬಿ) ಯೆಹೂದಿ ಪರದೇಶವಾಸಿಗಳಿಗೆ ಯಾವ ಸುವಾರ್ತೆಯು ಕಾದಿದೆ, ಮತ್ತು ಅವರು ಭರವಸೆಯಿಂದ ಏಕೆ ಇರಬಲ್ಲರು?

      12 ಪುನಸ್ಸ್ಥಾಪನೆಯ ವಾಗ್ದಾನದಲ್ಲಿ ನಂಬಿಕೆಯುಳ್ಳವರಾಗಿರಲು ಯೆಶಾಯನು ಎರಡನೆಯ ಕಾರಣವನ್ನು ನೀಡುತ್ತಾನೆ. ಅದೇನೆಂದರೆ, ಈ ವಾಗ್ದಾನವನ್ನು ಮಾಡುವಾತನು ತನ್ನ ಜನರನ್ನು ಕೋಮಲವಾಗಿ ಪರಾಮರಿಸುವ ಬಲಿಷ್ಠ ದೇವರಾಗಿದ್ದಾನೆ. ಯೆಶಾಯನು ಮುಂದುವರಿಸಿ ಹೇಳುವುದು: “ಶುಭಸಮಾಚಾರವನ್ನು ತಿಳಿಸಬಲ್ಲ ಚೀಯೋನೇ, ಉನ್ನತಪರ್ವತವನ್ನು ಹತ್ತಿಕೋ; ಸುವರ್ತಮಾನವನ್ನು ಪ್ರಕಟಿಸಬಲ್ಲ ಯೆರೂಸಲೇಮೇ, ನಿನ್ನ ಧ್ವನಿಯನ್ನು ಗಟ್ಟಿಯಾಗಿ ಎತ್ತು, ನಿರ್ಭಯವಾಗಿ ಎತ್ತಿ, ಯೆಹೂದದ ಪಟ್ಟಣಗಳಿಗೆ​—⁠ಇಗೋ, ನಿಮ್ಮ ದೇವರು! ಆಹಾ, ಕರ್ತನಾದ ಯೆಹೋವನು ಶೂರನಾಗಿ ಬರುವನು [“ಬಲದೊಂದಿಗೆ,” NW ಪಾದಟಿಪ್ಪಣಿ], ತನ್ನ ಭುಜಬಲದಿಂದಲೇ ಆಳುವನು; ಇಗೋ, ಆತನ ಕ್ರಿಯಾಲಾಭವು ಆತನೊಂದಿಗಿದೆ, ಆತನ ಶ್ರಮದ ಫಲವು ಆತನ ಮುಂದಿದೆ. ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು. ಹಾಲು ಕುಡಿಸುವ ಕುರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.”​—⁠ಯೆಶಾಯ 40:9-11.

  • “ನನ್ನ ಜನರನ್ನು ಸಂತೈಸಿರಿ”
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
    • [ಪುಟ 404, 405ರಲ್ಲಿರುವ ಚೌಕ/ಚಿತ್ರ]

      ಯೆಹೋವ, ಒಬ್ಬ ಪ್ರೀತಿಪರ ಕುರುಬ

      ಕುರಿಮರಿಗಳನ್ನು ತನ್ನ ಎದೆಗೆತ್ತಿಕೊಳ್ಳುವ ಒಬ್ಬ ಪ್ರೀತಿಪರ ಕುರುಬನಿಗೆ ಯೆಶಾಯನು ಯೆಹೋವನನ್ನು ಹೋಲಿಸುತ್ತಾನೆ. (ಯೆಶಾಯ 40:​10, 11) ಈ ಹೃದಯೋಲ್ಲಾಸಕರ ದೃಷ್ಟಾಂತವನ್ನು, ಕುರುಬರ ನಿಜ ಜೀವನ ಆಚಾರಗಳ ಮೇಲೆ ಯೆಶಾಯನು ಆಧಾರಿಸುತ್ತಾನೆ. ಮಧ್ಯಪೂರ್ವದ ಹರ್ಮೋನ್‌ ಪರ್ವತದ ಇಳಿಜಾರುಗಳ ಮೇಲೆ ತಾನು ಕಂಡ ಕುರುಬರ ಬಗ್ಗೆ ಒಬ್ಬ ಆಧುನಿಕ ವೀಕ್ಷಕನು ವರದಿಸುವುದು: “ಪ್ರತಿಯೊಬ್ಬ ಕುರುಬನು ತನ್ನ ಮಂದೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವುಗಳ ಯೋಗಕ್ಷೇಮವನ್ನು ನೋಡಿಕೊಂಡನು. ಮಂದೆಯಲ್ಲಿ ನವಜನಿತ ಮರಿಯೊಂದನ್ನು ಅವನು ಕಂಡಾಗ, ಅದು ತನ್ನ ತಾಯಿಯನ್ನು ಹಿಂಬಾಲಿಸಶಕ್ತವಲ್ಲವೆಂಬುದನ್ನು ಅರಿತು ತನ್ನ ನೀಳ ಅಂಗಿಯ . . . ಮಡಿಕೆಯಲ್ಲಿ ಅದನ್ನು ಇಟ್ಟುಕೊಂಡನು. ಅವನ ಮಡಿಲು ತುಂಬಿಹೋದಾಗ, ಕುರಿಮರಿಗಳನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಅವುಗಳ ಕಾಲುಗಳನ್ನು ಹಿಡಿದುಕೊಂಡನು. ಇಲ್ಲವೆ ಕತ್ತೆಯು ಹೊರುವಂತೆ ಅವುಗಳನ್ನು ಒಂದು ಚೀಲ ಇಲ್ಲವೆ ಬುಟ್ಟಿಯಲ್ಲಿ ಇಟ್ಟನು. ಮರಿಯು ತನ್ನ ತಾಯಿಯನ್ನು ಹಿಂಬಾಲಿಸಶಕ್ತವಾಗುವ ತನಕ ಹೀಗೆ ಮಾಡಿದನು.” ನಾವು ಸೇವೆಸಲ್ಲಿಸುತ್ತಿರುವ ದೇವರು, ತನ್ನ ಜನರ ಕುರಿತು ಇಷ್ಟೊಂದು ಕೋಮಲವಾಗಿ ಚಿಂತಿಸುವವನಾಗಿದ್ದಾನೆಂಬ ವಿಚಾರವು ತಾನೇ ಸಾಂತ್ವನದಾಯಕವಾಗಿಲ್ಲವೊ?

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ