-
ಸುಳ್ಳು ಧರ್ಮ—ಅದರ ಹಠಾತ್ತಾದ ಅಂತ್ಯದ ಮುನ್ನೋಟಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
ಬಾಬೆಲ್ ಮಣ್ಣು ಮುಕ್ಕುತ್ತದೆ
3. ಬಾಬೆಲ್ ಲೋಕ ಶಕ್ತಿಯು ಎಷ್ಟು ದೊಡ್ಡದಾಗಿತ್ತೆಂಬುದನ್ನು ವರ್ಣಿಸಿರಿ.
3 ಹುರಿದುಂಬಿಸುವ ಈ ದೈವಿಕ ಪ್ರಕಟನೆಗೆ ಕಿವಿಗೊಡಿರಿ: “ಯುವತಿಯೇ, ಬಾಬೆಲ್‌ಪುರಿಯೇ, [“ಬಾಬೆಲಿನ ಕನ್ಯಾಪುತ್ರಿಯೇ,” NW] ಕಳಕ್ಕಿಳಿದು ದೂಳಲ್ಲಿ ಕೂತುಕೋ, ಕಸ್ದೀಯರ ನಗರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಕ್ಕರಿಸು! ನೀನು ಇನ್ನು ಕೋಮಲೆ, ಸುಕುಮಾರಿ, ಎಂದು ಎನಿಸಿಕೊಳ್ಳೆ.” (ಯೆಶಾಯ 47:1) ಬಾಬೆಲು ಬಹಳ ವರ್ಷಗಳಿಂದ ಪ್ರಮುಖ ಲೋಕ ಶಕ್ತಿಯಾಗಿ ಪಟ್ಟದಲ್ಲಿದೆ. ಅದು “ರಾಜ್ಯಗಳಿಗೆ ಶಿರೋರತ್ನ”ವಾಗಿರುತ್ತದೆ, ಅಂದರೆ ವೃದ್ಧಿಯಾಗುತ್ತಿದ್ದ ಧಾರ್ಮಿಕ, ವಾಣಿಜ್ಯ ಮತ್ತು ಮಿಲಿಟರಿ ಕೇಂದ್ರವಾಗಿದೆ. (ಯೆಶಾಯ 13:19) ಬಾಬೆಲು ಅಧಿಕಾರದ ಶಿಖರದಲ್ಲಿದ್ದಾಗ ಅದರ ಸಾಮ್ರಾಜ್ಯವು ಐಗುಪ್ತದ ಮೇರೆಯನ್ನು ತಲಪುವಷ್ಟು ದಕ್ಷಿಣದ ವರೆಗೆ ಹರಡಿತ್ತು. ಮತ್ತು ಸಾ.ಶ.ಪೂ. 607ರಲ್ಲಿ ಅದು ಯೆರೂಸಲೇಮನ್ನು ಸೋಲಿಸುವಾಗ, ಅದರ ವಿಜಯಯಾತ್ರೆಗಳನ್ನು ದೇವರು ಸಹ ತಡೆಯಶಕ್ತನಲ್ಲವೊ ಎಂಬಂತೆ ತೋರುತ್ತದೆ! ಹೀಗೆ ಅದು ತನ್ನನ್ನೇ “ಕನ್ಯಾಪುತ್ರಿ”ಯಂತೆ, ಅಂದರೆ ವಿದೇಶೀ ಆಕ್ರಮಣಕ್ಕೆ ಎಂದಿಗೂ ಬಲಿಬೀಳದವಳಂತೆ ಪರಿಗಣಿಸಿಕೊಳ್ಳುತ್ತದೆ.b
4. ಬಾಬೆಲು ಏನನ್ನು ಅನುಭವಿಸಲಿದೆ?
4 ಆದರೆ ಈ ಅಹಂಕಾರದ ‘ಕನ್ಯೆ’ಯನ್ನು ನಿರ್ವಿವಾದದ ಲೋಕ ಶಕ್ತಿಯ ಪಟ್ಟದಿಂದ ತಳ್ಳಿಹಾಕಿ, ಅದು ಅವಮಾನದಿಂದ ‘ದೂಳಿನಲ್ಲಿ’ ಕುಳಿತುಕೊಳ್ಳುವಂತೆ ಮಾಡಲಾಗುವುದು. (ಯೆಶಾಯ 26:5) ಮುದ್ದಿಸಿ ಲಾಲನೆ ಮಾಡಿದ ರಾಣಿಯಂತೆ ಅದು ಇನ್ನು ಮುಂದೆ “ಕೋಮಲೆ, ಸುಕುಮಾರಿ” ಆಗಿರುವುದಿಲ್ಲ. ಆದಕಾರಣ ಯೆಹೋವನು ಆಜ್ಞಾಪಿಸುವುದು: “ಬೀಸುವ ಕಲ್ಲನ್ನು ಹಿಡಿದು ಹಿಟ್ಟು ಬೀಸು, ಮುಸುಕನ್ನು ತೆಗೆದುಹಾಕಿ ಈಜಾಡುವ ನೆರಿಗೆಯನ್ನು ಹರಿದುಬಿಟ್ಟು ಬೆತ್ತಲೆಕಾಲಾಗಿ ಹೊಳೆಗಳನ್ನು ಹಾದುಹೋಗು.” (ಯೆಶಾಯ 47:2) ಇಡೀ ಯೆಹೂದ ಜನಾಂಗವನ್ನೇ ಗುಲಾಮರನ್ನಾಗಿ ಮಾಡಿಕೊಂಡ ಬಳಿಕ ಈಗ ಬಾಬೆಲು ತಾನೇ ಗುಲಾಮಸ್ಥಿತಿಗೆ ಬರಲಿಕ್ಕಿದೆ! ಅದನ್ನು ಅಧಿಕಾರದ ಸ್ಥಾನದಿಂದ ತಳ್ಳಿಬಿಡುವ ಮೇದ್ಯಯ ಪಾರಸಿಯರು, ಅದು ತಮ್ಮ ಪರವಾಗಿ ಅವಮಾನಕರವಾದ ಕೆಲಸವನ್ನು ಮಾಡುವಂತೆ ಬಾಬೆಲನ್ನು ಬಲಾತ್ಕರಿಸುವರು.
-
-
ಸುಳ್ಳು ಧರ್ಮ—ಅದರ ಹಠಾತ್ತಾದ ಅಂತ್ಯದ ಮುನ್ನೋಟಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
b ಹೀಬ್ರು ಭಾಷೆಯಲ್ಲಿ, “ಬಾಬೆಲಿನ ಕನ್ಯಾಪುತ್ರಿ” ಎಂಬುದು, ಬಾಬೆಲನ್ನು ಇಲ್ಲವೆ ಬಾಬೆಲಿನ ನಿವಾಸಿಗಳನ್ನು ಸೂಚಿಸುವ ಒಂದು ನುಡಿಗಟ್ಟು. ಅದು ಲೋಕ ಶಕ್ತಿಯಾದಂದಿನಿಂದ ಅದನ್ನು ಯಾರೂ ಜಯಿಸಿ ಸೂರೆಮಾಡದೆ ಇರುವುದರಿಂದಲೇ ಅದು ‘ಕನ್ಯೆ’ ಆಗಿದೆ.
-