-
“ಪ್ರಸನ್ನತೆಯ ಕಾಲ”ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
8. ಮೆಸ್ಸೀಯನ ಸ್ವಂತ ಜನರು ಅವನ ವಿಷಯದಲ್ಲಿ ಯಾವ ಪ್ರತಿವರ್ತನೆ ತೋರಿಸುತ್ತಾರೆ, ಆದರೆ ತನ್ನ ಯಶಸ್ಸನ್ನು ನಿರ್ಣಯಿಸಲು ಮೆಸ್ಸೀಯನು ಯಾರ ಕಡೆಗೆ ನೋಡುತ್ತಾನೆ?
8 ಆದರೆ ಯೇಸುವನ್ನು ಅವನ ಸ್ವಂತ ಜನರಲ್ಲಿ ಹೆಚ್ಚಿನವರು ಉಪೇಕ್ಷಿಸಿ ತಿರಸ್ಕರಿಸಿದರೆಂಬುದು ನಿಜವಲ್ಲವೋ? ಹೌದು. ಒಟ್ಟಿನಲ್ಲಿ ಇಸ್ರಾಯೇಲ್ ಜನಾಂಗವು ಯೇಸುವನ್ನು ದೇವರ ಅಭಿಷಿಕ್ತ ಸೇವಕನಾಗಿ ಅಂಗೀಕರಿಸುವುದಿಲ್ಲ. (ಯೋಹಾನ 1:11) ಯೇಸು ಭೂಮಿಯಲ್ಲಿದ್ದಾಗ ಮಾಡಿದ ವಿಷಯಗಳೆಲ್ಲ ಅವನ ಸಮಕಾಲೀನರಿಗೆ ಕೊಂಚ ಬೆಲೆಯದ್ದೂ ಕ್ಷುಲ್ಲಕವೂ ಆಗಿ ಕಂಡಿರಬಹುದು. ಮೆಸ್ಸೀಯನು ತನ್ನ ಶುಶ್ರೂಷಾ ವೈಫಲ್ಯವನ್ನು ಮುಂದಿನ ಮಾತುಗಳಲ್ಲಿ ಸೂಚಿಸುತ್ತಾನೆ: “ನನ್ನ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ವ್ರಯಮಾಡಿದ್ದು ಹಾಳೇ, ಬರಿ ಗಾಳಿಯೇ.” (ಯೆಶಾಯ 49:4ಎ) ಮೆಸ್ಸೀಯನು ನಿರುತ್ತೇಜಿತನಾಗಿ ಹೀಗೆ ಮಾತಾಡಲಿಲ್ಲ. ಅವನು ಮುಂದೆ ಏನು ಹೇಳುತ್ತಾನೊ ಅದನ್ನು ಪರಿಗಣಿಸಿರಿ: “ಆದರೂ ನನ್ನ ನ್ಯಾಯವು ಯೆಹೋವನಲ್ಲಿದೆ, ನನಗೆ ಲಾಭವು ನನ್ನ ದೇವರಿಂದಲೇ ಆಗುವದು.” (ಯೆಶಾಯ 49:4ಬಿ) ಮೆಸ್ಸೀಯನ ಯಶಸ್ಸನ್ನು ನಿರ್ಣಯಿಸುವವನು ಮನುಷ್ಯನಲ್ಲ, ಬದಲಾಗಿ ದೇವರೇ.
-
-
“ಪ್ರಸನ್ನತೆಯ ಕಾಲ”ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
10 ಇಂದು, ಯೇಸುವಿನ ಹಿಂಬಾಲಕರಿಗೆ ತಾವು ಪ್ರಯಾಸಪಡುತ್ತಿರುವುದು ವ್ಯರ್ಥ ಎಂದು ಅನೇಕಬಾರಿ ಅನಿಸುತ್ತಿರಬಹುದು. ಕೆಲವು ಸ್ಥಳಗಳಲ್ಲಿ, ಅವರು ಮಾಡಿರುವ ಕೆಲಸ ಮತ್ತು ಪ್ರಯತ್ನದ ಮೊತ್ತಕ್ಕೆ ಹೋಲಿಸುವಾಗ ಅವರ ಶುಶ್ರೂಷೆಗೆ ಸಿಕ್ಕಿರುವ ಪ್ರತಿಫಲವು ಅಲ್ಪವಾಗಿ ಕಂಡುಬರಬಹುದು. ಹೀಗಿದ್ದರೂ, ಯೇಸುವಿನ ಮಾದರಿಯಿಂದ ಪ್ರೋತ್ಸಾಹಿಸಲ್ಪಟ್ಟವರಾಗಿ ಅವರು ತಾಳಿಕೊಳ್ಳುತ್ತಾರೆ. ಅಪೊಸ್ತಲ ಪೌಲನ ಮಾತುಗಳಿಂದಲೂ ಅವರಿಗೆ ಬಲ ದೊರೆಯುತ್ತದೆ. ಅವನು ಬರೆದುದು: “ಆದದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.”—1 ಕೊರಿಂಥ 15:58.
-