ಪಾಠ 57
ನೀವು ಗಂಭೀರ ತಪ್ಪು ಮಾಡಿದರೆ ಏನು ಮಾಡಬೇಕು?
ನಾವು ಯೆಹೋವ ದೇವರನ್ನ ತುಂಬ ಪ್ರೀತಿಸುತ್ತೇವೆ. ಅದಕ್ಕೇ ಆತನ ಮನಸ್ಸಿಗೆ ನೋವಾಗದ ಹಾಗೆ ನಡೆದುಕೊಳ್ಳೋಕೆ ಬಯಸುತ್ತೇವೆ. ಹಾಗಿದ್ರೂ ನಾವು ಆಗಾಗ ತಪ್ಪುಗಳನ್ನ ಮಾಡುತ್ತೇವೆ. ಕೆಲವೊಮ್ಮೆ ನಾವು ಗಂಭೀರ ತಪ್ಪುಗಳನ್ನೂ ಮಾಡಿಬಿಡಬಹುದು. (1 ಕೊರಿಂಥ 6:9, 10) ಒಂದುವೇಳೆ ನೀವು ಗಂಭೀರ ತಪ್ಪನ್ನ ಮಾಡಿದ್ರೆ ಯೆಹೋವನು ನಿಮ್ಮನ್ನ ಯಾವತ್ತೂ ಪ್ರೀತಿಸಲ್ಲ ಅಂತ ನೆನಸಬೇಡಿ. ಯಾಕಂದ್ರೆ ಆತನು ನಿಮ್ಮನ್ನ ಕ್ಷಮಿಸಲಿಕ್ಕೆ ಮತ್ತು ಸಹಾಯ ಮಾಡಲಿಕ್ಕೆ ಯಾವಾಗಲೂ ರೆಡಿ ಇರುತ್ತಾನೆ.
1. ಯೆಹೋವ ದೇವರು ನಮ್ಮನ್ನ ಕ್ಷಮಿಸಬೇಕಾದ್ರೆ ಏನು ಮಾಡಬೇಕು?
ನಮಗೆ ಯೆಹೋವನ ಮೇಲೆ ಪ್ರೀತಿ ಇರುವುದರಿಂದಾನೇ ಒಂದು ಗಂಭೀರ ತಪ್ಪನ್ನ ಮಾಡಿದ ಮೇಲೆ ‘ನಾನು ಹೀಗೆ ಮಾಡಿಬಿಟ್ಟೆನಲ್ಲಾ’ ಅಂತ ನೊಂದುಕೊಳ್ಳುತ್ತೇವೆ. ಆದರೆ ಯೆಹೋವ ದೇವರು ನಮಗೆ ಈ ಸಾಂತ್ವನವನ್ನ ಕೊಟ್ಟಿದ್ದಾನೆ: “ನಿಮ್ಮ ಪಾಪಗಳು ಕಡುಗೆಂಪಾಗಿದ್ರೂ ಅವನ್ನ ಹಿಮದ ತರ ಬೆಳ್ಳಗೆ ಮಾಡ್ತೀನಿ.” (ಯೆಶಾಯ 1:18) ನಾವು ಮನಸಾರೆ ಪಶ್ಚಾತ್ತಾಪಪಟ್ಟರೆ ಯೆಹೋವ ದೇವರು ಅದನ್ನ ಪೂರ್ತಿಯಾಗಿ ಕ್ಷಮಿಸುತ್ತಾನೆ. ಆದರೆ ಪಶ್ಚಾತ್ತಾಪಪಡೋದು ಹೇಗೆ? ನಾವು ಮಾಡಿದ ತಪ್ಪಿಗೆ ನಿಜವಾಗಲೂ ದುಃಖಿಸಬೇಕು. ಇಲ್ಲಿವರೆಗೆ ಮಾಡುತ್ತಿದ್ದ ತಪ್ಪನ್ನ ಬಿಟ್ಟುಬಿಡಬೇಕು ಮತ್ತು ಕ್ಷಮೆಗಾಗಿ ಯೆಹೋವನ ಹತ್ತಿರ ಅಂಗಲಾಚಿ ಬೇಡಿಕೊಳ್ಳಬೇಕು. ಅಷ್ಟೇ ಅಲ್ಲ ನಮ್ಮ ತಪ್ಪಿಗೆ ಕಾರಣವಾಗಿರುವ ಕೆಟ್ಟ ಯೋಚನೆಗಳನ್ನ, ಅಭ್ಯಾಸಗಳನ್ನ ಬಿಟ್ಟುಬಿಡಬೇಕು. ಯೆಹೋವ ದೇವರ ನೀತಿನಿಯಮಗಳಿಗೆ ಅನುಸಾರವಾಗಿ ಜೀವನ ಮಾಡಬೇಕು.—ಯೆಶಾಯ 55:6, 7 ಓದಿ.
2. ನಾವು ತಪ್ಪು ಮಾಡಿದಾಗ ನಮಗೆ ಸಹಾಯ ಮಾಡಲಿಕ್ಕಾಗಿ ಯೆಹೋವನು ಹಿರಿಯರನ್ನ ಹೇಗೆ ಬಳಸುತ್ತಾನೆ?
ಒಂದುವೇಳೆ ಗಂಭೀರ ತಪ್ಪನ್ನ ಮಾಡಿದ್ರೆ “ಸಭೆ ಹಿರಿಯರಿಗೆ ನಿಮ್ಮ ಹತ್ರ ಬರಕ್ಕೆ ಹೇಳಿ” ಅಂತ ಯೆಹೋವನು ಹೇಳುತ್ತಾನೆ. (ಯಾಕೋಬ 5:14, 15 ಓದಿ.) ಈ ಹಿರಿಯರು ಯೆಹೋವನನ್ನು ಮತ್ತು ಆತನ ಸೇವಕರನ್ನ ಪ್ರೀತಿಸುತ್ತಾರೆ. ನಾವು ಯೆಹೋವನ ಜೊತೆ ಮತ್ತೆ ಆಪ್ತ ಸ್ನೇಹವನ್ನ ಬೆಳೆಸಿಕೊಳ್ಳಲು ಅವರು ಸಹಾಯ ಮಾಡುತ್ತಾರೆ. ಅದಕ್ಕಂತಾನೇ ಅವರಿಗೆ ತರಬೇತಿ ಸಿಕ್ಕಿರುತ್ತೆ.—ಗಲಾತ್ಯ 6:1.
ಒಂದುವೇಳೆ ನಾವು ಗಂಭೀರ ತಪ್ಪನ್ನ ಮಾಡಿದ್ರೆ ಹಿರಿಯರು ನಮಗೆ ಹೇಗೆ ಸಹಾಯ ಮಾಡುತ್ತಾರೆ? ಇಬ್ಬರು ಅಥವಾ ಮೂರು ಹಿರಿಯರು ನಮಗೆ ಬೈಬಲಿನ ಮೂಲಕ ತಿದ್ದಿ ಬುದ್ಧಿಹೇಳುತ್ತಾರೆ, ಮತ್ತೆ ಅಂಥ ತಪ್ಪುಗಳನ್ನ ಮಾಡದೇ ಇರೋಕೆ ಸಲಹೆಗಳನ್ನ ಮತ್ತು ಪ್ರೋತ್ಸಾಹವನ್ನ ಕೊಡುತ್ತಾರೆ. ಗಂಭೀರ ತಪ್ಪು ಮಾಡಿದವರು ಪಶ್ಚಾತ್ತಾಪಪಡದಿದ್ದರೆ ಅವ್ರನ್ನ ನೋಡಿ ಬೇರೆಯವರೂ ಹಾಳಾಗಬಾರದು ಅಂತ ಅಂಥವ್ರನ್ನ ಸಭೆಯಿಂದ ಹೊರಗೆ ಹಾಕ್ತಾರೆ.
ಹೆಚ್ಚನ್ನ ತಿಳಿಯೋಣ
ಗಂಭೀರ ತಪ್ಪು ಮಾಡಿದವರಿಗೆ ಸಹಾಯ ಮಾಡಲಿಕ್ಕಾಗಿ ಯೆಹೋವನು ಯಾವೆಲ್ಲಾ ಏರ್ಪಾಡುಗಳನ್ನ ಮಾಡಿದ್ದಾನೆ ಮತ್ತು ಅಂಥ ಏರ್ಪಾಡುಗಳಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು ಅಂತ ಕಲಿಯಿರಿ.
3. ತಪ್ಪನ್ನ ಒಪ್ಪಿಕೊಂಡರೆ ನಮಗೇ ಪ್ರಯೋಜನ
ನಾವು ತಪ್ಪು ಮಾಡಿದಾಗ ಯೆಹೋವ ದೇವರಿಗೆ ತುಂಬ ಬೇಜಾರಾಗುತ್ತೆ. ಹಾಗಾಗಿ ನಾವು ಮಾಡಿರುವ ತಪ್ಪನ್ನ ದೇವರ ಹತ್ತಿರ ಒಪ್ಪಿಕೊಳ್ಳಬೇಕು. ಕೀರ್ತನೆ 32:1-5 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಮ್ಮ ತಪ್ಪುಗಳನ್ನ ಮುಚ್ಚಿಡುವುದಕ್ಕಿಂತ ಅದನ್ನ ಯೆಹೋವನ ಹತ್ತಿರ ಹೇಳಿಕೊಳ್ಳೋದು ಯಾಕೆ ಒಳ್ಳೇದು?
ನಾವು ಯೆಹೋವ ದೇವರ ಹತ್ತಿರ ನಮ್ಮ ತಪ್ಪುಗಳನ್ನ ಒಪ್ಪಿಕೊಳ್ಳೋಕೆ ಹಿರಿಯರ ಸಹಾಯ ಪಡೆದುಕೊಂಡ್ರೆ ನಮ್ಮ ಮನಸ್ಸಿನ ಭಾರ ಹಗುರವಾಗುತ್ತೆ. ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ವಿಡಿಯೋದಲ್ಲಿ ನೋಡಿದ ಹಾಗೆ, ಯೆಹೋವ ದೇವರ ಹತ್ತಿರ ವಾಪಸ್ ಬರಕ್ಕೆ ಕ್ಯಾನನ್ಗೆ ಹಿರಿಯರು ಹೇಗೆ ಸಹಾಯ ಮಾಡಿದರು?
ನಮಗೆ ಸಹಾಯ ಮಾಡಕ್ಕೆ ಹಿರಿಯರು ಯಾವಾಗಲೂ ರೆಡಿಯಾಗಿರುತ್ತಾರೆ. ಹಾಗಾಗಿ ನಾವು ಮಾಡಿದ ತಪ್ಪಿನ ಬಗ್ಗೆ ಹಿರಿಯರ ಹತ್ತಿರ ಮುಚ್ಚುಮರೆಯಿಲ್ಲದೆ ಪ್ರಾಮಾಣಿಕವಾಗಿ ಹೇಳಿಕೊಳ್ಳಬೇಕು. ಯಾಕೋಬ 5:16 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಮ್ಮ ತಪ್ಪಿನ ಬಗ್ಗೆ ಮುಚ್ಚುಮರೆಯಿಲ್ಲದೆ ಹಿರಿಯರ ಹತ್ತಿರ ಹೇಳಿಕೊಳ್ಳುವಾಗ ನಮಗೆ ಸಹಾಯ ಮಾಡಲಿಕ್ಕೆ ಅವರಿಗೆ ಹೇಗೆ ಸುಲಭವಾಗುತ್ತೆ?
ನೀವು ಮಾಡಿರುವ ತಪ್ಪನ್ನ ಒಪ್ಪಿಕೊಳ್ಳಿ, ಹಿರಿಯರ ಹತ್ತಿರ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳಿ ಮತ್ತು ಯೆಹೋವ ದೇವರ ಸಹಾಯ ಪಡೆದುಕೊಳ್ಳಿ
4. ಪಾಪ ಮಾಡಿದವ್ರಿಗೆ ಯೆಹೋವ ಕರುಣೆ ತೋರಿಸ್ತಾನೆ
ಗಂಭೀರ ತಪ್ಪುಗಳನ್ನ ಮಾಡಿರುವ ವ್ಯಕ್ತಿ ಯೆಹೋವನ ನೀತಿನಿಯಮಗಳನ್ನ ಪಾಲಿಸೋಕೆ ಇಷ್ಟಪಡದಿದ್ದರೆ ಅವನನ್ನ ಸಭೆಯಿಂದ ಹೊರಗೆ ಹಾಕಲಾಗುತ್ತೆ. ನಾವು ಅಂಥವರ ಜೊತೆ ಸೇರಲ್ಲ, ಅನಾವಶ್ಯಕವಾಗಿ ಅವ್ರ ಜೊತೆ ಸಮಯ ಕಳೆಯಲ್ಲ. 1 ಕೊರಿಂಥ 5:6, 11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಸ್ವಲ್ಪ ಹುಳಿ ನಾದಿದ ಹಿಟ್ಟನ್ನೆಲ್ಲ ಹುಳಿಮಾಡುತ್ತೆ. ಅದೇ ತರ ಪಶ್ಚಾತ್ತಾಪಪಡದ ಒಬ್ಬ ವ್ಯಕ್ತಿ ಜೊತೆ ನಾವು ಸೇರಿದ್ರೆ ಸಭೆಯಲ್ಲಿರೋ ಎಲ್ಲರ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ಯೆಹೋವ ದೇವರು ಪಾಪ ಮಾಡಿದವ್ರಿಗೆ ಕರುಣೆ ತೋರಿಸೋ ತರ ಹಿರಿಯರು ಕೂಡ ಸಭೆಯಿಂದ ಹೊರಗೆ ಹಾಕಿರೋರನ್ನ ಭೇಟಿಮಾಡಿ ಸಹಾಯ ಮಾಡ್ತಾರೆ. ಇದ್ರಿಂದ ಎಷ್ಟೋ ಜನ ಸಭೆಗೆ ವಾಪಸ್ ಬಂದಿದ್ದಾರೆ. ಸಭೆಯಿಂದ ಹೊರಗೆ ಹಾಕಿದಾಗ ಅದ್ರಿಂದ ಅವ್ರಿಗೆ ನೋವಾಗಿದ್ರೂ ಅವರ ತಪ್ಪನ್ನ ಅರ್ಥ ಮಾಡಿಕೊಳ್ಳೋಕೆ ಆ ಶಿಸ್ತು ಅವ್ರಿಗೆ ಸಹಾಯ ಮಾಡಿದೆ.—ಕೀರ್ತನೆ 141:5.
• ತಪ್ಪು ಮಾಡಿರೋರ ಜೊತೆ ಯೆಹೋವ ನಡ್ಕೊಳ್ಳೋ ರೀತಿಯಿಂದ ಆತನು ನ್ಯಾಯವಂತ, ಕರುಣಾಮಯಿ ಮತ್ತು ಪ್ರೀತಿಯಿರೋ ದೇವರು ಅಂತ ಹೇಗೆ ಗೊತ್ತಾಗುತ್ತೆ?
5. ನಾವು ಪಶ್ಚಾತ್ತಾಪಪಟ್ಟರೆ ಯೆಹೋವನು ಕ್ಷಮಿಸುತ್ತಾನೆ
ಒಬ್ಬ ವ್ಯಕ್ತಿ ಪಶ್ಚಾತ್ತಾಪಪಟ್ಟರೆ ಯೆಹೋವ ದೇವರಿಗೆ ಹೇಗನಿಸುತ್ತೆ ಅಂತ ಅರ್ಥಮಾಡಿಸಲಿಕ್ಕೆ ಯೇಸು ಒಂದು ಉದಾಹರಣೆಯನ್ನ ಕೊಟ್ಟನು. ಲೂಕ 15:1-7 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಈ ವಚನಗಳಿಂದ ಯೆಹೋವ ದೇವರ ಬಗ್ಗೆ ನೀವೇನು ಕಲಿತ್ರಿ?
ಯೆಹೆಜ್ಕೇಲ 33:11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಪಶ್ಚಾತ್ತಾಪಪಟ್ಟಿದ್ದರೆ ಏನು ಮಾಡಿರಲೇ ಬೇಕು?
ಒಬ್ಬ ಕುರುಬನ ತರ ಯೆಹೋವ ದೇವರು ತನ್ನ ಸೇವಕರಿಗೆ ಪ್ರೀತಿ ಮತ್ತು ಕಾಳಜಿಯನ್ನ ತೋರಿಸುತ್ತಾನೆ
ಕೆಲವರು ಹೀಗಂತಾರೆ: “ನಾನು ಮಾಡಿದ ತಪ್ಪನ್ನೆಲ್ಲಾ ಹಿರಿಯರ ಹತ್ರ ಹೇಳಿಕೊಂಡ್ರೆ ಅವರೆಲ್ಲಿ ನನ್ನನ್ನ ಸಭೆಯಿಂದ ಹೊರಗೆ ಹಾಕ್ತಾರೋ ಅಂತ ಭಯ ಆಗುತ್ತೆ.”
ಈ ತರ ಅಂದುಕೊಳ್ಳುವವರಿಗೆ ನೀವೇನು ಹೇಳ್ತೀರಾ?
ನಾವೇನು ಕಲಿತ್ವಿ
ನಾವು ಒಂದು ಗಂಭೀರ ತಪ್ಪನ್ನ ಮಾಡಿದ ಮೇಲೆ ನಿಜವಾಗಿ ಪಶ್ಚಾತ್ತಾಪಪಟ್ಟು, ಇನ್ನುಮುಂದೆ ಅಂತ ತಪ್ಪನ್ನ ಮಾಡೋದಿಲ್ಲ ಅಂತ ದೃಢ ನಿರ್ಧಾರ ಮಾಡಿದ್ರೆ ಯೆಹೋವ ದೇವರು ನಮ್ಮನ್ನ ಕ್ಷಮಿಸುತ್ತಾನೆ.
ನೆನಪಿದೆಯಾ
ನಾವು ಯಾಕೆ ನಮ್ಮ ತಪ್ಪುಗಳನ್ನ ಯೆಹೋವ ದೇವರ ಹತ್ತಿರ ಒಪ್ಪಿಕೊಳ್ಳಬೇಕು?
ನಮ್ಮ ತಪ್ಪುಗಳನ್ನ ಯೆಹೋವ ದೇವರು ಕ್ಷಮಿಸಬೇಕಾದ್ರೆ ನಾವು ಏನೆಲ್ಲಾ ಮಾಡಬೇಕು?
ಗಂಭೀರ ತಪ್ಪು ಮಾಡಿರೋದಾದ್ರೆ ನಾವು ಯಾಕೆ ಹಿರಿಯರ ಸಹಾಯ ಪಡೆದುಕೊಳ್ಳಬೇಕು?
ಇದನ್ನೂ ನೋಡಿ
ಯೆಶಾಯ 1:18ರಲ್ಲಿ ಹೇಳಿರುವ ಹಾಗೆ ಕ್ಷಮಿಸುವ ವಿಷಯದಲ್ಲಿ ಯೆಹೋವ ದೇವರಿಗೆ ಎಷ್ಟು ದೊಡ್ಡ ಮನಸ್ಸಿದೆ ಅಂತ ಅರ್ಥಮಾಡಿಕೊಂಡ ಒಬ್ಬ ವ್ಯಕ್ತಿಯ ಅನುಭವ ನೋಡಿ.
ಗಂಭೀರ ತಪ್ಪು ಮಾಡಿದವ್ರಿಗೆ ಹಿರಿಯರು ಹೇಗೆ ಸಹಾಯ ಮಾಡ್ತಾರೆ?
“ಪಾಪ ಮಾಡಿದವ್ರಿಗೆ ಹಿರಿಯರು ತೋರಿಸೋ ಪ್ರೀತಿ, ಕರುಣೆ” (ಕಾವಲಿನಬುರುಜು, ಆಗಸ್ಟ್ 2024)
ಪಶ್ಚಾತ್ತಾಪಪಡದ ವ್ಯಕ್ತಿಗಳಿಗೆ ಹೇಗೆ ಪ್ರೀತಿ ಮತ್ತು ಕರುಣೆ ತೋರಿಸಲಾಗುತ್ತೆ ಅಂತ ನೋಡಿ.
“ಯಾರನ್ನ ಸಭೆಯಿಂದ ಹೊರಗೆ ಹಾಕಿದ್ದಾರೋ ಅವ್ರಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು?” (ಕಾವಲಿನಬುರುಜು, ಆಗಸ್ಟ್ 2024)
ಸತ್ಯಬಿಟ್ಟು ಹೋದ ಒಬ್ಬ ವ್ಯಕ್ತಿಗೆ ಯೆಹೋವ ದೇವರೇ ತನ್ನನ್ನ ವಾಪಸ್ ಕರೆದ ಅಂತ ಅನಿಸಿತು. ಇದರ ಬಗ್ಗೆ ತಿಳಿಯಲು “ಯೆಹೋವನ ಬಳಿ ಹಿಂದಿರುಗಿ ಹೋಗಬೇಕು” ಅನ್ನೋ ಜೀವನ ಕಥೆ ನೋಡಿ.