-
ಯೆಹೋವನು ದೀನರ ಆತ್ಮವನ್ನು ಉಜ್ಜೀವಿಸುತ್ತಾನೆಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
18. ಯೆಹೋವನ ಉನ್ನತ ಸ್ಥಾನವನ್ನು ಹೇಗೆ ವರ್ಣಿಸಲಾಗಿದೆ, ಆದರೂ ಆತನು ಯಾವ ಪ್ರೀತಿಯ ಚಿಂತೆಯನ್ನು ತೋರಿಸುತ್ತಾನೆ?
18 ಈ ಅಧ್ಯಾಯದ ಆರಂಭದಲ್ಲಿ ಉಲ್ಲೇಖಿಸಲ್ಪಟ್ಟಿರುವ ಮಾತುಗಳನ್ನು ಪ್ರವಾದಿ ಯೆಶಾಯನು ಈಗ ಹೇಳುತ್ತಾನೆ: “ಸದಮಲನೆನಿಸಿಕೊಂಡು ಶಾಶ್ವತಲೋಕದಲ್ಲಿ ನಿತ್ಯನಿವಾಸಿಯಾದ ಮಹೋನ್ನತನು ಹೀಗನ್ನುತ್ತಾನೆ—ಉನ್ನತಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು ಜಜ್ಜಿಹೋದ ದೀನಮನದೊಂದಿಗೆ ಇದ್ದುಕೊಂಡು ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದೇನೆ.” (ಯೆಶಾಯ 57:15) ಯೆಹೋವನ ಸಿಂಹಾಸನವು ಪರಮೋನ್ನತ ಸ್ವರ್ಗದಲ್ಲಿದೆ. ಅದಕ್ಕಿಂತಲೂ ಉನ್ನತವಾದ ಇಲ್ಲವೆ ಉಚ್ಚ ಸ್ಥಾನವೇ ಇಲ್ಲ. ಅಲ್ಲಿಂದ ಆತನು ಸಕಲವನ್ನೂ, ಅಂದರೆ ದುಷ್ಟರ ಪಾಪಗಳನ್ನಷ್ಟೇಯಲ್ಲ, ಬದಲಾಗಿ ತನ್ನನ್ನು ಸೇವಿಸಲು ಪ್ರಯತ್ನಿಸುವವರ ನೀತಿಯ ಕಾರ್ಯಗಳನ್ನೂ ನೋಡುತ್ತಾನೆಂದು ತಿಳಿಯುವುದು ಎಷ್ಟೊಂದು ಸಾಂತ್ವನದಾಯಕ! (ಕೀರ್ತನೆ 102:19; 103:6) ಇದಲ್ಲದೆ, ಆತನು ಶೋಷಿತರ ನರಳಾಟಗಳನ್ನು ಆಲಿಸುತ್ತಾನೆ ಮತ್ತು ಜಜ್ಜಲ್ಪಟ್ಟವರ ಹೃದಯಗಳನ್ನು ಉಜ್ಜೀವಿಸುತ್ತಾನೆ. ಈ ಮಾತುಗಳು ಪುರಾತನ ಕಾಲಗಳಲ್ಲಿ ಪಶ್ಚಾತ್ತಾಪಪಟ್ಟಿದ್ದಂಥ ಯೆಹೂದ್ಯರ ಹೃದಯಗಳನ್ನು ಸ್ಪರ್ಶಿಸಿದ್ದಿರಬೇಕು. ಇಂದು ಅವು ನಮ್ಮ ಹೃದಯಗಳನ್ನೂ ನಿಶ್ಚಯವಾಗಿ ಸ್ಪರ್ಶಿಸುತ್ತವೆ.
-
-
ಯೆಹೋವನು ದೀನರ ಆತ್ಮವನ್ನು ಉಜ್ಜೀವಿಸುತ್ತಾನೆಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
21. (ಎ) ಯೆಹೋವನು 1919ರಲ್ಲಿ ಅಭಿಷಿಕ್ತ ಕ್ರೈಸ್ತರ ಮನೋಭಾವವನ್ನು ಪುನರುಜ್ಜೀವಿಸಿದ್ದು ಹೇಗೆ? (ಬಿ) ನಾವು ವ್ಯಕ್ತಿಪರವಾಗಿ ಯಾವ ಗುಣವನ್ನು ಬೆಳೆಸಿಕೊಳ್ಳುವುದು ಹಿತಕರ?
21 “ಮಹೋನ್ನತ”ನಾದ ಯೆಹೋವನು, 1919ರಲ್ಲಿ ಅಭಿಷಿಕ್ತ ಉಳಿಕೆಯವರ ಹಿತಕ್ಷೇಮದ ವಿಷಯದಲ್ಲಿಯೂ ಚಿಂತೆಯನ್ನು ತೋರಿಸಿದನು. ಅವರ ಪಶ್ಚಾತ್ತಾಪ ಹಾಗೂ ದೀನ ಮನೋಭಾವದ ಕಾರಣ ಮಹಾ ದೇವರಾದ ಯೆಹೋವನು ಅವರ ಸಂಕಟವನ್ನು ನೋಡಿ, ಬಾಬೆಲಿನ ಬಂಧಿವಾಸದಿಂದ ಅವರನ್ನು ವಿಮೋಚಿಸಿದನು. ಆತನು ಅವರಿಗಿದ್ದ ಸಕಲ ಅಡ್ಡಿತಡೆಗಳನ್ನು ನಿವಾರಿಸಿ, ಅವರು ಆತನಿಗೆ ಶುದ್ಧಾರಾಧನೆಯನ್ನು ಸಲ್ಲಿಸುವಂತೆ ಸ್ವಾತಂತ್ರ್ಯಕ್ಕೆ ನಡಿಸಿದನು. ಹೀಗೆ ಯೆಹೋವನು ಯೆಶಾಯನ ಮೂಲಕ ತಿಳಿಸಿದ ಮಾತುಗಳ ಒಂದು ನೆರವೇರಿಕೆಯು ಆಗ ಸಂಭವಿಸಿತು. ಮತ್ತು ಆ ಮಾತುಗಳ ಮರೆಯಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೆ ಅನ್ವಯಿಸುವ ನಿತ್ಯ ಮೂಲತತ್ತ್ವಗಳಿವೆ. ಯಾರು ದೀನಮನಸ್ಕರಾಗಿದ್ದಾರೊ ಅವರಿಂದ ಮಾತ್ರ ಯೆಹೋವನು ಆರಾಧನೆಯನ್ನು ಅಂಗೀಕರಿಸುತ್ತಾನೆ. ಮತ್ತು ದೇವರ ಸೇವಕರಲ್ಲಿ ಒಬ್ಬನು ಪಾಪಮಾಡುವಲ್ಲಿ, ಅವನು ತನ್ನ ಪಾಪವನ್ನು ಒಡನೆ ಒಪ್ಪಿಕೊಂಡು, ತಿದ್ದುಪಾಟನ್ನು ಸ್ವೀಕರಿಸಿ ತನ್ನ ಮಾರ್ಗಗಳನ್ನು ತಿದ್ದಿಕೊಳ್ಳಬೇಕು. ಯೆಹೋವನು ದೀನರನ್ನು ಗುಣಪಡಿಸಿ ಸಂತೈಸುತ್ತಾನೆ, ಆದರೆ “ಅಹಂಕಾರಿಗಳನ್ನು ಎದುರಿಸುತ್ತಾನೆ” ಎಂಬುದನ್ನು ನಾವೆಂದಿಗೂ ಮರೆಯದಿರೋಣ.—ಯಾಕೋಬ 4:6.
-