-
ಸಂತೋಷದಿಂದ ಸಹಿಸಿಕೊಳ್ಳೋಕೆ ಯೆಹೋವ ಸಹಾಯ ಮಾಡ್ತಾನೆಕಾವಲಿನಬುರುಜು (ಅಧ್ಯಯನ)—2022 | ನವೆಂಬರ್
-
-
ಒಳ್ಳೇ ನಿರ್ಧಾರ ಮಾಡೋಕೆ ಯೆಹೋವ ಹೇಳಿಕೊಡ್ತಾನೆ
8. ಯೆಶಾಯ 30:20,21ರಲ್ಲಿ ಹೇಳಿದ ಮಾತು ಹೇಗೆ ನಿಜ ಆಯ್ತು?
8 ಯೆಶಾಯ 30:20, 21 ಓದಿ. ಬಾಬೆಲ್‌ನವರು ಯೆರೂಸಲೇಮನ್ನ ಒಂದುವರೆ ವರ್ಷ ಮುತ್ತಿಗೆ ಹಾಕಿದಾಗ ಅಲ್ಲಿದ್ದ ಯೆಹೂದ್ಯರು ಪ್ರತಿ ದಿನ ಕಷ್ಟ ಅನುಭವಿಸ್ತಿದ್ರು. ಮೂರು ಹೊತ್ತು ಕಣ್ಣೀರಲ್ಲೇ ಕೈ ತೊಳಿತಿದ್ರು. ಆದ್ರೆ ಅವರು ತಮ್ಮ ತಪ್ಪನ್ನ ತಿದ್ದಿಕೊಂಡು ಸರಿ ದಾರಿಗೆ ಬಂದ್ರೆ ಅವರನ್ನ ಕಾಪಾಡ್ತೀನಿ ಅಂತ ವಚನ 20 ಮತ್ತು 21ರಲ್ಲಿ ಯೆಹೋವ ಮಾತು ಕೊಟ್ಟನು. ಅದರ ಜೊತೆಗೆ ಆತನು ಅವರಿಗೆ ‘ಮಹಾ ಬೋಧಕನಾಗಿ’ ತನ್ನನ್ನ ಆರಾಧಿಸೋದು ಹೇಗೆ ಅನ್ನೋದನ್ನೂ ಹೇಳಿಕೊಡ್ತಾನೆ ಅಂತ ಯೆಶಾಯ ಹೇಳಿದನು. ಇದು ಇಸ್ರಾಯೇಲ್ಯರು ಬಾಬೆಲ್‌ನಿಂದ ಬಿಡುಗಡೆಯಾಗಿ ಬಂದ ಮೇಲೆ ನಡಿತು. ತನಗೆ ಇಷ್ಟ ಆಗೋ ತರ ಆರಾಧನೆ ಮಾಡೋದು ಹೇಗೆ ಅಂತ ಯೆಹೋವ ಅವರಿಗೆ ಕಲಿಸಿಕೊಟ್ಟನು. ಆತನು ಇವತ್ತು ಮಹಾ ಬೋಧಕನಾಗಿ ನಮಗೂ ಕಲಿಸ್ತಿದ್ದಾನೆ, ಇದು ನಮಗೆ ಸಿಕ್ಕಿರೋ ಒಂದು ದೊಡ್ಡ ಆಶೀರ್ವಾದ ಅಂತನೇ ಹೇಳಬಹುದು.
-
-
ಸಂತೋಷದಿಂದ ಸಹಿಸಿಕೊಳ್ಳೋಕೆ ಯೆಹೋವ ಸಹಾಯ ಮಾಡ್ತಾನೆಕಾವಲಿನಬುರುಜು (ಅಧ್ಯಯನ)—2022 | ನವೆಂಬರ್
-
-
10. ಇವತ್ತು ನಮಗೆ ದೇವರ ಮಾತು ಹೇಗೆ “ಹಿಂದಿಂದ” ಕೇಳಿಸುತ್ತೆ?
10 ಯೆಹೋವ ನಮಗೆ ಕಲಿಸೋ ಇನ್ನೊಂದು ವಿಧ ಯಾವುದು? ಯೆಹೋವನ ಮಾತು “ನಿನ್ನ ಹಿಂದಿಂದ ನಿನ್ನ ಕಿವಿಗೆ ಬೀಳುತ್ತೆ” ಅಂತ ಯೆಶಾಯ ಹೇಳಿದ. ಮಕ್ಕಳು ನಡ್ಕೊಂಡು ಹೋಗ್ತಿರುವಾಗ ಟೀಚರ್ ಹಿಂದೆಯಿಂದ ‘ಈ ಕಡೆ ಹೋಗು, ಆ ಕಡೆ ಹೋಗಬೇಡ’ ಅಂತ ಹೇಳೋ ತರ ಯೆಹೋವ ನಮಗೆ ಕಲಿಸಿಕೊಡ್ತಿದ್ದಾನೆ ಅಂತ ಯೆಶಾಯ ಇಲ್ಲಿ ಹೇಳ್ತಿದ್ದಾನೆ. ಇವತ್ತು ನಮಗೆ ಯೆಹೋವನ ಮಾತು ಹೇಗೆ ಹಿಂದಿನಿಂದ ಕೇಳಿಸ್ತಿದೆ? ಬೈಬಲನ್ನ ಎಷ್ಟೋ ವರ್ಷಗಳ ಹಿಂದೆ ಬರೆದಿರೋದ್ರಿಂದ ಇವತ್ತು ನಾವು ಅದನ್ನ ಓದುವಾಗ ಒಂದರ್ಥದಲ್ಲಿ ಯೆಹೋವ ನಮ್ಮ ಹಿಂದೆ ನಿಂತು ಕಲಿಸ್ತಾ ಇರೋ ಹಾಗಿದೆ.—ಯೆಶಾ. 51:4.
11. ಕಷ್ಟಗಳನ್ನ ಖುಷಿಯಿಂದ ತಾಳಿಕೊಳ್ಳೋಕೆ ನಾವು ಯಾವ ಎರಡು ವಿಷಯಗಳನ್ನ ಮಾಡಬೇಕು ಮತ್ತು ಯಾಕೆ?
11 ಯೆಹೋವ ತನ್ನ ವಾಕ್ಯದಿಂದ ಮತ್ತು ತನ್ನ ಸಂಘಟನೆಯಿಂದ ಕಲಿಸಿಕೊಡ್ತಿರೋ ವಿಷಯಗಳಿಂದ ಪ್ರಯೋಜನ ಪಡಕೊಳ್ಳಬೇಕಾದ್ರೆ ನಾವು ಏನು ಮಾಡಬೇಕು? ಅದಕ್ಕೆ ಉತ್ತರ ಯೆಶಾಯನ ಮಾತುಗಳಲ್ಲಿದೆ. ಅವನು ಮೊದಲು “ಇದೇ ದಾರಿ” ಅಂತ ಹೇಳಿದ. ಆಮೇಲೆ “ಇದ್ರಲ್ಲೇ ನಡಿ” ಅಂತ ಹೇಳಿದ. (ಯೆಶಾ. 30:21) ಅಂದ್ರೆ ಇವತ್ತು ಯೆಹೋವ ದೇವರು ತನ್ನ ವಾಕ್ಯದಿಂದ ಮತ್ತು ಸಂಘಟನೆಯಿಂದ ಯಾವುದು ಸರಿ “ದಾರಿ” ಅನ್ನೋದನ್ನ ನಮಗೆ ಕಲಿಸಿಕೊಡ್ತಿದ್ದಾನೆ. ಅದನ್ನ ನಾವು ಮೊದಲು ತಿಳಿದುಕೊಳ್ಳಬೇಕು. ಆಮೇಲೆ ಅದರಲ್ಲಿ ‘ನಡಿಬೇಕು.’ ಅಂದ್ರೆ ನಾವು ಕಲ್ತಿದ್ದನ್ನ ಜೀವನದಲ್ಲಿ ಪಾಲಿಸಬೇಕು. ಆಗ ಮಾತ್ರ ಯೆಹೋವ ನಮ್ಮನ್ನ ಆಶೀರ್ವದಿಸ್ತಾನೆ. ಹೀಗೆ ಮಾಡಿದ್ರೆ ಏನೇ ಕಷ್ಟ ಬಂದ್ರು ನಾವು ತಾಳಿಕೊಳ್ತೀವಿ ಮತ್ತು ಖುಷಿಖುಷಿಯಿಂದ ಯೆಹೋವನ ಸೇವೆ ಮಾಡ್ತೀವಿ.
-