ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪುನಸ್ಸ್ಥಾಪಿಸಲ್ಪಟ್ಟ ಪರದೈಸ್‌!
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
    • 20. ಸಾ.ಶ. ಪ್ರಥಮ ಶತಮಾನದಲ್ಲಿ ಯಾವ ಹೊಸ ಇಸ್ರಾಯೇಲು ಅಸ್ತಿತ್ವಕ್ಕೆ ಬಂದಿತು?

      20 ಯೆಹೋವನ ನೇಮಿತ ಸಮಯದಲ್ಲಿ, ಮತ್ತೊಂದು ಇಸ್ರಾಯೇಲ್‌ ಅಂದರೆ ಆತ್ಮಿಕ ಇಸ್ರಾಯೇಲ್‌ ಹುಟ್ಟಿಕೊಂಡಿತು. (ಗಲಾತ್ಯ 6:16) ಈ ಹೊಸ ಇಸ್ರಾಯೇಲಿನ ಜನನಕ್ಕೆ, ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಅಸ್ತಿವಾರವನ್ನು ಹಾಕಿದನು. ಅವನು ಶುದ್ಧಾರಾಧನೆಯನ್ನು ಪುನಃ ಸ್ಥಾಪಿಸಿದನು ಮಾತ್ರವಲ್ಲ, ತನ್ನ ಬೋಧನೆಯ ಮೂಲಕ ಸತ್ಯದ ನೀರು ಪುನಃ ಹರಿಯುವಂತೆಯೂ ಮಾಡಿದನು. ಅವನು ಶಾರೀರಿಕ ಹಾಗೂ ಆತ್ಮಿಕ ಅನಾರೋಗ್ಯಕ್ಕೆ ತುತ್ತಾದವರನ್ನು ಗುಣಪಡಿಸಿದನು. ದೇವರ ರಾಜ್ಯದ ಸುವಾರ್ತೆಯು ಎಲ್ಲೆಡೆಯೂ ಘೋಷಿಸಲ್ಪಟ್ಟಂತೆ, ಹರ್ಷಧ್ವನಿಯು ಮೊಳಗಿತು. ತನ್ನ ಮರಣ ಹಾಗೂ ಪುನರುತ್ಥಾನವಾಗಿ ಏಳು ವಾರಗಳು ಗತಿಸಿದ ಬಳಿಕ, ಮಹಿಮಾನ್ವಿತ ಯೇಸು, ಕ್ರೈಸ್ತ ಸಭೆಯನ್ನು ಸ್ಥಾಪಿಸಿದನು. ಆತ್ಮಿಕ ಇಸ್ರಾಯೇಲ್ಯರನ್ನು ಒಳಗೊಂಡ ಈ ಸಭೆಯಲ್ಲಿ, ಯೇಸುವಿನ ರಕ್ತದಿಂದ ವಿಮೋಚನೆ ಪಡೆದ ಯೆಹೂದ್ಯರು ಮತ್ತು ಇತರರು ಇದ್ದಾರೆ. ಇವರು ದೇವರ ಆತ್ಮಿಕ ಪುತ್ರರಾಗಿ ಮತ್ತು ಯೇಸುವಿನ ಸಹೋದರರಾಗಿ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದಾರೆ.​—⁠ಅ. ಕೃತ್ಯಗಳು 2:​1-4; ರೋಮಾಪುರ 8:​16, 17; 1 ಪೇತ್ರ 1:​18, 19.

      21. ಪ್ರಥಮ ಶತಮಾನದ ಕ್ರೈಸ್ತ ಸಭೆಯ ಸಂಬಂಧದಲ್ಲಿ, ಯಾವ ಘಟನೆಗಳನ್ನು ಯೆಶಾಯನ ಪ್ರವಾದನೆಯ ನೆರವೇರಿಕೆಯೆಂದು ವೀಕ್ಷಿಸಬಹುದು?

      21 ಆತ್ಮಿಕ ಇಸ್ರಾಯೇಲಿನ ಸದಸ್ಯರಿಗೆ ಬರೆಯುವಾಗ, ಅಪೊಸ್ತಲ ಪೌಲನು ಯೆಶಾಯ 35:3ರ ಮಾತುಗಳನ್ನು ಸೂಚಿಸುತ್ತಾ ಹೇಳಿದ್ದು: “ಆದದರಿಂದ ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಸುದಾರಿಸಿಕೊಳ್ಳಿರಿ.” (ಇಬ್ರಿಯ 12:12) ಹಾಗಾದರೆ, ಸಾ.ಶ. ಪ್ರಥಮ ಶತಮಾನದಲ್ಲಿ, ಯೆಶಾಯ 35ನೆಯ ಅಧ್ಯಾಯದ ಮಾತುಗಳು ಸ್ಪಷ್ಟವಾಗಿ ನೆರವೇರಿದವು. ಅಕ್ಷರಾರ್ಥವಾಗಿ, ಯೇಸು ಮತ್ತು ಅವನ ಶಿಷ್ಯರು, ಕುರುಡರಿಗೆ ದೃಷ್ಟಿಯನ್ನು ಮತ್ತು ಕಿವುಡರಿಗೆ ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ಅದ್ಭುತಕರವಾಗಿ ನೀಡಿದರು. ಅಲ್ಲದೆ ‘ಕುಂಟರು’ ನಡೆಯುವಂತೆ ಮತ್ತು ಮೂಕರು ಮಾತಾಡುವಂತೆಯೂ ಅವರು ಮಾಡಶಕ್ತರಾಗಿದ್ದರು. (ಮತ್ತಾಯ 9:32; 11:5; ಲೂಕ 10:⁠9) ಎಲ್ಲಕ್ಕಿಂತಲೂ ಮಿಗಿಲಾಗಿ, ಸಹೃದಯಿಗಳು ಸುಳ್ಳು ಧರ್ಮದ ಪಾಶದಿಂದ ತಪ್ಪಿಸಿಕೊಂಡು, ಕ್ರೈಸ್ತ ಸಭೆಯ ಮಧ್ಯದಲ್ಲಿ ಆತ್ಮಿಕ ಪರದೈಸಿನ ಪರಿಸ್ಥಿತಿಗಳನ್ನು ಅನುಭವಿಸತೊಡಗಿದರು. (ಯೆಶಾಯ 52:11; 2 ಕೊರಿಂಥ 6:17) ಅದರೊಂದಿಗೆ ಒಂದು ಸಕಾರಾತ್ಮಕ ಹಾಗೂ ಧೀರ ಮನೋಭಾವವು ಸಹ ಬಹಳ ಅಗತ್ಯವೆಂಬುದನ್ನು ಬಾಬೆಲಿನಿಂದ ಹಿಂದಿರುಗುತ್ತಿದ್ದ ಯೆಹೂದ್ಯರು ಕಂಡುಕೊಂಡಂತೆ ಇವರೂ ಕಂಡುಕೊಂಡರು.​—⁠ರೋಮಾಪುರ 12:⁠11.

  • ಪುನಸ್ಸ್ಥಾಪಿಸಲ್ಪಟ್ಟ ಪರದೈಸ್‌!
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
    • 23, 24. ಯಾವ ವಿಧಗಳಲ್ಲಿ ಯೆಶಾಯನ ಮಾತುಗಳು 1919ರಿಂದ ದೇವಜನರ ಮಧ್ಯೆ ನೆರವೇರಿವೆ?

      23 ಆದರೆ, 1919ರಲ್ಲಿ ಪರಿಸ್ಥಿತಿಯು ಬದಲಾಯಿತು. ಯೆಹೋವನು ತನ್ನ ಜನರನ್ನು ದಾಸತ್ವದಿಂದ ಬಿಡಿಸಿದನು. ಇವರು, ತಮ್ಮ ಆರಾಧನೆಯನ್ನು ಈ ಮೊದಲು ಭ್ರಷ್ಟಗೊಳಿಸಿದ್ದ ಸುಳ್ಳು ಬೋಧನೆಗಳನ್ನು ತಿರಸ್ಕರಿಸಲಾರಂಭಿಸಿದರು. ಫಲಸ್ವರೂಪವಾಗಿ, ಅವರು ಗುಣಮುಖರಾದರು. ಮತ್ತು ಆತ್ಮಿಕ ಪರದೈಸಿನ ಭಾಗವಾದರು. ಈ ಪರದೈಸ್‌ ಇಂದು ಕೂಡ ಭೂಮಿಯಾದ್ಯಂತ ಹಬ್ಬುತ್ತಿದೆ. ಆತ್ಮಿಕ ಅರ್ಥದಲ್ಲಿ, ಕುರುಡರು ನೋಡಲು ಮತ್ತು ಕಿವುಡರು ಕೇಳಿಸಿಕೊಳ್ಳಲು ಕಲಿಯುತ್ತಿದ್ದಾರೆ. ಅವರು ದೇವರ ಪವಿತ್ರಾತ್ಮದ ಕಾರ್ಯಾಚರಣೆಯನ್ನು ಪೂರ್ಣವಾಗಿ ಗ್ರಹಿಸುತ್ತಾ, ಯೆಹೋವನಿಗೆ ಆಪ್ತರಾಗಿ ಉಳಿಯುವ ಅಗತ್ಯವನ್ನು ಮನಗಾಣುತ್ತಾ ಇದ್ದಾರೆ. (1 ಥೆಸಲೊನೀಕ 5:6; 2 ತಿಮೊಥೆಯ 4:⁠5) ಇನ್ನೆಂದಿಗೂ ಮೂಕರಾಗಿರದ ಈ ಸತ್ಯ ಕ್ರೈಸ್ತರು, ಇತರರಿಗೆ ಬೈಬಲ್‌ ಸತ್ಯಗಳನ್ನು ಪ್ರಕಟಿಸುತ್ತಾ “ಹರ್ಷಧ್ವನಿ”ಗೈಯಲು ಉತ್ಸುಕರಾಗಿದ್ದಾರೆ. (ರೋಮಾಪುರ 1:15) ಆತ್ಮಿಕ ಅರ್ಥದಲ್ಲಿ ಬಲಹೀನರು ಇಲ್ಲವೆ ‘ಕುಂಟರು’ ಆಗಿದ್ದ ಜನರು ಈಗ ಹುರುಪು ಆನಂದಗಳನ್ನು ಪ್ರಕಟಿಸುತ್ತಾರೆ. ಸಾಂಕೇತಿಕವಾಗಿ, ಅವರು ‘ಜಿಂಕೆಯಂತೆ ಹಾರುತ್ತಾರೆ.’

  • ಪುನಸ್ಸ್ಥಾಪಿಸಲ್ಪಟ್ಟ ಪರದೈಸ್‌!
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
    • 25. ಯೆಶಾಯ 35ನೆಯ ಅಧ್ಯಾಯದ ಶಾರೀರಿಕ ನೆರವೇರಿಕೆ ಇರುವುದೊ? ವಿವರಿಸಿರಿ.

      25 ಭವಿಷ್ಯತ್ತಿನ ಕುರಿತೇನು? ಯೆಶಾಯನ ಪ್ರವಾದನೆಯು ಶಾರೀರಿಕ ಅರ್ಥದಲ್ಲಿ ಎಂದಾದರೂ ನೆರವೇರುವುದೊ? ಖಂಡಿತವಾಗಿಯೂ ನೆರವೇರುವುದು. ಪ್ರಥಮ ಶತಮಾನದಲ್ಲಿ ಯೇಸು ಮತ್ತು ಅವನ ಅಪೊಸ್ತಲರು ಜನರನ್ನು ಅದ್ಭುತಕರವಾಗಿ ಗುಣಪಡಿಸಿದಾಗ, ಮುಂದೆ ಒಂದು ದೊಡ್ಡ ಪ್ರಮಾಣದಲ್ಲಿ ಯೆಹೋವನು ಇಂತಹ ಗುಣಪಡಿಸುವಿಕೆಗಳನ್ನು ಕೈಗೊಳ್ಳಲು ಬಯಸುತ್ತಾನೆ ಮತ್ತು ಅದನ್ನೇ ಮಾಡಲು ಸಮರ್ಥನಾಗಿದ್ದಾನೆ ಎಂಬುದು ಸ್ಪಷ್ಟವಾಯಿತು. ಭೂಮಿಯ ಮೇಲೆ ಶಾಂತಿದಾಯಕ ಪರಿಸ್ಥಿತಿಗಳಲ್ಲಿ ಎಂದೆಂದಿಗೂ ಜೀವಿಸುವುದರ ಬಗ್ಗೆ ಪ್ರೇರಿತ ಕೀರ್ತನೆಗಳು ತಿಳಿಯಪಡಿಸುತ್ತವೆ. (ಕೀರ್ತನೆ 37:​9, 11, 29) ಅಲ್ಲದೆ, ಪರದೈಸಿನಲ್ಲಿ ಜೀವಿಸುವ ವಾಗ್ದಾನವನ್ನು ಯೇಸು ಸಹ ಮಾಡಿದನು. (ಲೂಕ 23:43) ಬೈಬಲು ತನ್ನ ಪ್ರಥಮ ಪುಸ್ತಕದಿಂದ ಹಿಡಿದು ಕೊನೆಯ ಪುಸ್ತಕದ ವರೆಗೂ, ಒಂದು ಅಕ್ಷರಾರ್ಥ ಪರದೈಸಿನ ನಿರೀಕ್ಷೆಯನ್ನು ನೀಡುತ್ತದೆ. ಆಗ, ಕುರುಡರು, ಕಿವುಡರು, ಕುಂಟರು ಮತ್ತು ಮೂಕರು ಶಾರೀರಿಕವಾಗಿ ಗುಣಮುಖರಾಗುವರು ಮತ್ತು ಈ ಗುಣಪಡಿಸುವಿಕೆ ಶಾಶ್ವತವಾಗಿರುವುದು. ಗೋಳಾಟ ಮತ್ತು ನಿಟ್ಟುಸಿರು ಇಲ್ಲದೆ ಹೋಗುವವು ಹರ್ಷೋಲ್ಲಾಸವು ಯುಗಯುಗಾಂತರಕ್ಕೂ ಸದಾಕಾಲಕ್ಕೂ ಇರುವುದು.​—⁠ಪ್ರಕಟನೆ 7:​9, 16, 17; 21:​3, 4.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ