ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಹರ್ಷಧ್ವನಿಗೈಯಲು ನಮಗೆ ಕಾರಣವಿದೆ
    ಕಾವಲಿನಬುರುಜು—1996 | ಫೆಬ್ರವರಿ 15
    • “ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.”—ಯೆಶಾಯ 35:10.

  • ಹರ್ಷಧ್ವನಿಗೈಯಲು ನಮಗೆ ಕಾರಣವಿದೆ
    ಕಾವಲಿನಬುರುಜು—1996 | ಫೆಬ್ರವರಿ 15
    • 3. ಯಾವ ಅರ್ಥಭರಿತ ಮಾತುಗಳು ನಮ್ಮ ಗಮನಕ್ಕೆ ಯೋಗ್ಯವಾಗಿವೆ, ಮತ್ತು ಏಕೆ?

      3 ಯೇಸುವಿನ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ: “ನನ್ನಲ್ಲಿರುವ ಹರ್ಷವು ನಿಮ್ಮಲ್ಲಿಯೂ ಇರಬೇಕೆಂತಲೂ ನಿಮ್ಮ ಹರ್ಷವು ಸಂಪೂರ್ಣವಾಗಲಿ ಎಂತಲೂ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ.” (ಯೋಹಾನ 15:11, NW) “ನಿಮ್ಮ ಹರ್ಷವು ಸಂಪೂರ್ಣವಾಗಲಿ.” ಎಂತಹ ಒಂದು ವರ್ಣನೆ! ಕ್ರೈಸ್ತ ಜೀವನ ರೀತಿಯ ಆಳವಾದ ಅಧ್ಯಯನವು, ನಮ್ಮ ಹರ್ಷವು ಸಂಪೂರ್ಣವಾಗಿ ಮಾಡಲ್ಪಡಲಿಕ್ಕಾಗಿರುವ ಅನೇಕ ಕಾರಣಗಳನ್ನು ಪ್ರಕಟಿಸುವುದು. ಆದರೆ ಈಗ, ಯೆಶಾಯ 35:10ರಲ್ಲಿರುವ ಅರ್ಥಪೂರ್ಣ ಮಾತುಗಳನ್ನು ಗಮನಿಸಿರಿ. ಇವು ಅರ್ಥಪೂರ್ಣವಾಗಿವೆ ಏಕೆಂದರೆ ಅವು ಇಂದು ನಮಗೆ ತುಂಬ ಸಂಬಂಧಪಟ್ಟವುಗಳಾಗಿವೆ. ನಾವು ಓದುವುದು: “ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.”

      4. ಯೆಶಾಯ 35:10ರಲ್ಲಿ ಯಾವ ಬಗೆಯ ಹರ್ಷವು ಉಲ್ಲೇಖಿಸಲ್ಪಟ್ಟಿದೆ, ಮತ್ತು ನಾವು ಇದಕ್ಕೆ ಗಮನಕೊಡಬೇಕು ಏಕೆ?

      4 “ಶಾಶ್ವತಸಂತೋಷ.” “ಶಾಶ್ವತ” ಎಂಬ ವಾಕ್ಸರಣಿಯು, ಯೆಶಾಯನು ಹೀಬ್ರುವಿನಲ್ಲಿ ಬರೆದುದರ ನಿಷ್ಕೃಷ್ಟ ತರ್ಜುಮೆಯಾಗಿದೆ. ಆದರೆ, ಇತರ ಶಾಸ್ತ್ರವಚನಗಳ ಮೂಲಕ ತೋರಿಸಲ್ಪಟ್ಟಿರುವಂತೆ, ಈ ವಚನದಲ್ಲಿರುವ ಅರ್ಥವು “ಯುಗಯುಗಾಂತರ”ವಾಗಿದೆ. (ಕೀರ್ತನೆ 45:6; 90:2; ಯೆಶಾಯ 40:28) ಆದುದರಿಂದ ಸಂತೋಷಪಡುವಿಕೆಯು, ಅದಕ್ಕೆ ಅನುಮತಿ ನೀಡುವ—ಹೌದು, ಅನಂತಕಾಲದ ಸಂತೋಷಪಡುವಿಕೆಯನ್ನು ಸಮರ್ಥಿಸುವ ಪರಿಸ್ಥಿತಿಗಳಲ್ಲಿ ಅಂತ್ಯರಹಿತವಾಗಿರುವುದು. ಅದು ಆನಂದಕರವಾಗಿ ಧ್ವನಿಸುವುದಿಲ್ಲವೊ? ಆದರೂ, ಬಹುಶಃ ಆ ವಚನವು ಒಂದು ಸೈದ್ಧಾಂತಿಕ ಸನ್ನಿವೇಶದ ಮೇಲಿನ ಒಂದು ಹೇಳಿಕೆಯೋಪಾದಿ ನಿಮ್ಮನ್ನು ಪ್ರಭಾವಿಸುತ್ತದೆ: ‘ನನ್ನ ಅನುದಿನದ ಸಮಸ್ಯೆಗಳು ಮತ್ತು ಚಿಂತೆಗಳು ನನ್ನನ್ನು ಒಳಗೊಳ್ಳುವಷ್ಟರ ಮಟ್ಟಿಗೆ ಅದು ನನ್ನನ್ನು ವಾಸ್ತವವಾಗಿ ಒಳಗೊಳ್ಳುವುದಿಲ್ಲ,’ ಎಂಬ ಅನಿಸಿಕೆ ನಿಮಗಾಗುವಂತೆ ಮಾಡಬಹುದು. ಆದರೆ ನಿಜತ್ವಗಳು ವಿರುದ್ಧವಾದದ್ದನ್ನು ರುಜುಪಡಿಸುತ್ತವೆ. ಯೆಶಾಯ 35:10ರಲ್ಲಿರುವ ಪ್ರವಾದನಾತ್ಮಕ ವಾಗ್ದಾನವು ಇಂದು ನಿಮಗಾಗಿ ಅರ್ಥವನ್ನು ಪಡೆದಿದೆ. ಹೇಗೆಂದು ಕಂಡುಹಿಡಿಯಲು, ಪೂರ್ವಾಪರದಲ್ಲಿನ ಪ್ರತಿಯೊಂದು ಭಾಗವನ್ನು ಗಮನಿಸುತ್ತಾ, ಈ ಸೊಗಸಾದ ಅಧ್ಯಾಯ, ಯೆಶಾಯ 35ನ್ನು ನಾವು ಪರೀಕ್ಷಿಸೋಣ. ನಾವು ಏನನ್ನು ಕಂಡುಕೊಳ್ಳುತ್ತೇವೊ ಅದನ್ನು ನೀವು ಆನಂದಿಸುವಿರಿ ಎಂಬ ಆಶ್ವಾಸನೆ ನಿಮಗಿರಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ