ನಮ್ಮ ಕ್ರೈಸ್ತ ಜೀವನ
ಕ್ಷಾಮ ವರ್ಷ ಬಂದಾಗ ನೀವೇನು ಮಾಡುವಿರಿ?
ನಂಬಿಕೆ ಮತ್ತು ಭರವಸೆ, ಒಂದರ ಮೇಲೊಂದು ಹೊಂದಿಕೊಂಡಿವೆ. ಹೇಗೆ? ಉದಾಹರಣೆಗೆ, ಯೆಹೋವನಲ್ಲಿ ನಮಗೆ ಬಲವಾದ ನಂಬಿಕೆ ಇದ್ದರೆ ಮಾತ್ರ, ಅವನು ನಮ್ಮನ್ನು ಕಾಪಾಡುತ್ತಾನೆ ಮತ್ತು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ ಎಂಬ ಭರವಸೆ ಸಹ ಇರುತ್ತೆ. (ಕೀರ್ತ 23:1, 4; 78:22) ಈ ಲೋಕದ ಅಂತ್ಯ ಹತ್ತಿರವಾಗುತ್ತಾ ಇರುವುದರಿಂದ, ಸೈತಾನನ ಆಕ್ರಮಣ ಇನ್ನೂ ಹೆಚ್ಚಾಗಲಿದೆ. (ಪ್ರಕ 12:12) ಅಂಥ ಪರಿಸ್ಥಿತಿಗಳಲ್ಲಿ ಯಾವುದು ನಮಗೆ ಸಹಾಯ ಮಾಡುತ್ತೆ?
ಕ್ಷಾಮ ವರ್ಷ ಬಂದಾಗ ನೀವೇನು ಮಾಡುವಿರಿ? ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ನಾವು ಯಾವ ರೀತಿಯಲ್ಲಿ ಯೆರೆಮೀಯ 17:8ರಲ್ಲಿ ತಿಳಿಸಿರುವ ‘ಮರದಂತೆ’ ಇದ್ದೇವೆ?
‘ದಗೆಯ’ ಇನ್ನೊಂದು ರೂಪ ಯಾವುದು?
‘ಮರಕ್ಕೆ’ ಏನಾದರೂ ತೊಂದರೆ ಆಗುತ್ತಾ? ಮತ್ತು ಯಾಕೆ?
ಸೈತಾನ ಏನನ್ನು ಹಾಳುಮಾಡಲು ಬಯಸುತ್ತಾನೆ?
ನಾವು ಯಾವ ರೀತಿಯಲ್ಲಿ ಅನುಭವಸ್ಥ ಪ್ರಯಾಣಿಕರಂತೆ ಇದ್ದೇವೆ?
ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿನಲ್ಲಿ ಭರವಸೆ ಇಡುವುದನ್ನು ನಾವು ಯಾಕೆ ಮುಂದುವರಿಸಬೇಕು? ಮತ್ತು ನಮಗೆ ಯಾವ ರೀತಿಯ ಪರೀಕ್ಷೆಗಳು ಬರಬಹುದು?
ಲೋಕ ನಮ್ಮನ್ನು ಗೇಲಿಮಾಡಿದರೂ, ನಾವು ಬೈಬಲ್ ತತ್ವಗಳನ್ನು ಅನ್ವಯಿಸುವುದು ಯಾಕೆ ಉತ್ತಮ?