-
ಸಿಂಹಗಳ ಬಾಯಿಂದ ರಕ್ಷಿಸಲ್ಪಟ್ಟದ್ದು!ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
-
-
12. (ಎ) ಹೊಸ ನಿಬಂಧನೆಯ ಕುರಿತು ದಾನಿಯೇಲನಿಗೆ ತಿಳಿದುಬಂದ ಕೂಡಲೆ ಅವನು ಏನು ಮಾಡಿದನು? (ಬಿ) ಯಾರು ದಾನಿಯೇಲನನ್ನು ನೋಡುತ್ತಿದ್ದರು, ಮತ್ತು ಏಕೆ?
12 ಸ್ವಲ್ಪದರಲ್ಲೇ ಪ್ರಾರ್ಥನೆಯ ನಿರ್ಬಂಧದ ಕುರಿತಾದ ನಿಯಮವು ದಾನಿಯೇಲನಿಗೆ ಗೊತ್ತಾಯಿತು. ಆ ಕೂಡಲೆ ಅವನು ತನ್ನ ಮನೆಯನ್ನು ಪ್ರವೇಶಿಸಿ, ಯೆರೂಸಲೇಮಿನ ಕಡೆಗೆ ತೆರೆದಿರುವ ಕಿಟಕಿಗಳಿದ್ದ ಮಹಡಿಯ ಕೋಣೆಯೊಳಕ್ಕೆ ಹೋಗುತ್ತಾನೆ.b ಅಲ್ಲಿ ದಾನಿಯೇಲನು, “ಯಥಾಪ್ರಕಾರ” ದೇವರಿಗೆ ಪ್ರಾರ್ಥಿಸಲು ಆರಂಭಿಸಿದನು. ಇಲ್ಲಿ ತಾನೊಬ್ಬನೇ ಇದ್ದೇನೆಂದು ದಾನಿಯೇಲನು ನೆನಸಿದ್ದಿರಬಹುದು, ಆದರೆ ಒಳಸಂಚುಗಾರರು ಅವನು ಪ್ರಾರ್ಥಿಸುತ್ತಿರುವುದನ್ನು ನೋಡುತ್ತಾ ಇದ್ದರು. ಇದ್ದಕ್ಕಿದ್ದಂತೆ, ಈ ಮುಂಚೆ ಅವರು ದಾರ್ಯಾವೆಷನನ್ನು ಸಮೀಪಿಸಲು ಬಂದಾಗ ಎಷ್ಟು ಉದ್ರೇಕಿತರಾಗಿದ್ದರೋ ಅಷ್ಟೇ ಉದ್ರೇಕಿತ ಸ್ಥಿತಿಯಲ್ಲಿ “ಗುಂಪಾಗಿ ಕೂಡಿ” ಒಳಬಂದರು ಎಂಬುದರಲ್ಲಿ ಸಂಶಯವೇ ಇಲ್ಲ. ದಾನಿಯೇಲನು “ದೇವರ ಸಮ್ಮುಖದಲ್ಲಿ ಪ್ರಾರ್ಥಿಸಿ ವಿಜ್ಞಾಪಿಸುವದನ್ನು” ಈಗ ಅವರು ಕಣ್ಣಾರೆ ಕಂಡರು. (ದಾನಿಯೇಲ 6:10, 11) ಅರಸನ ಮುಂದೆ ದಾನಿಯೇಲನ ಮೇಲೆ ದೋಷಾರೋಪವನ್ನು ಹೊರಿಸಲಿಕ್ಕಾಗಿ ಬೇಕಾಗಿದ್ದಂತಹ ಎಲ್ಲ ಪುರಾವೆ ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳಿಗೆ ಸಿಕ್ಕಿತ್ತು.
-
-
ಸಿಂಹಗಳ ಬಾಯಿಂದ ರಕ್ಷಿಸಲ್ಪಟ್ಟದ್ದು!ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
-
-
b ಮಹಡಿಯ ಕೋಣೆಯು ಒಂದು ಖಾಸಗಿ ಕೊಠಡಿಯಾಗಿದ್ದು, ಒಬ್ಬ ವ್ಯಕ್ತಿಗೆ ನೆಮ್ಮದಿ ಬೇಕೆನಿಸಿದಾಗ ಅಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಳ್ಳಸಾಧ್ಯವಿತ್ತು.
-