-
ಕರುಣೆಯ ಪಾಠ ಕಲಿತವನುಅವರ ನಂಬಿಕೆಯನ್ನು ಅನುಕರಿಸಿ
-
-
8 ಯೋನನ ಘೋಷಣೆಗೆ ಪ್ರತಿಕ್ರಿಯೆಯಲ್ಲಿ ಅರಸನು ಸಹ ದೇವರಿಗೆ ಭಯಪಟ್ಟು ಪಶ್ಚಾತ್ತಾಪಪಡಲು ಮುಂದಾದನು. ಅವನು ತನ್ನ ಸಿಂಹಾಸನದಿಂದೆದ್ದು, ರಾಜವಸ್ತ್ರಗಳನ್ನು ಕಳಚಿ ತನ್ನ ಪ್ರಜೆಗಳಂತೆ ಗೋಣಿತಟ್ಟನ್ನು ಹೊದ್ದುಕೊಂಡು “ಬೂದಿಯಲ್ಲಿ ಕೂತನು.” ತನ್ನ “ರಾಜ್ಯಾಧಿಕಾರಿಗಳ” ಜೊತೆಸೇರಿ ರಾಜನು ಒಂದು ಆಜ್ಞೆ ಹೊರಡಿಸಿ ಜನರು ಈಗಾಗಲೇ ಮಾಡುತ್ತಿದ್ದ ಉಪವಾಸವನ್ನು ರಾಜ್ಯದಲ್ಲೆಲ್ಲಾ ಅಧಿಕೃತಗೊಳಿಸಿದನು. ಎಲ್ಲ ಜನರು, ಸಾಕುಪ್ರಾಣಿಗಳು ಸಹ ಗೋಣಿತಟ್ಟು ಹೊದ್ದುಕೊಳ್ಳಬೇಕೆಂದು ಆಜ್ಞಾಪಿಸಿದನು.b ತನ್ನ ಪ್ರಜೆಗಳು ಕೆಟ್ಟತನ ಮತ್ತು ಹಿಂಸಾಚಾರ ಮಾಡಿ ನಿಜವಾಗಿ ದೋಷಿಗಳಾಗಿದ್ದಾರೆಂದು ದೀನತೆಯಿಂದ ಒಪ್ಪಿಕೊಂಡನು. ತಮ್ಮ ಪಶ್ಚಾತ್ತಾಪವನ್ನು ಕಂಡು ಸತ್ಯದೇವರು ಮನಮರುಗಬಹುದೆಂಬ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಾ “ದೇವರು . . . ತನ್ನ ಉಗ್ರಕೋಪವನ್ನು ತೊಲಗಿಸಾನು, ನಾವು ನಾಶವಾಗದೆ ಉಳಿದೇವು” ಎಂದು ಹೇಳಿದನು.—ಯೋನ 3:6-9.
-
-
ಕರುಣೆಯ ಪಾಠ ಕಲಿತವನುಅವರ ನಂಬಿಕೆಯನ್ನು ಅನುಕರಿಸಿ
-
-
b ಇದು ವಿಚಿತ್ರವಾಗಿ ಕಾಣಬಹುದಾದರೂ ಪುರಾತನ ಕಾಲದಲ್ಲಿ ಇಂಥ ಸಂಗತಿ ನಡೆದಿತ್ತು. ಪ್ರಾಚೀನ ಪರ್ಷಿಯನ್ನರು ಜನಪ್ರಿಯ ಸೇನಾನಿಯೊಬ್ಬನು ಮರಣಹೊಂದಿದ ಬಳಿಕ ಶೋಕಪದ್ಧತಿಗಳಲ್ಲಿ ತಮ್ಮ ಪ್ರಾಣಿಗಳನ್ನೂ ಒಳಗೂಡಿಸಿದ್ದರೆಂದು ಗ್ರೀಕ್ ಇತಿಹಾಸಕಾರ ಹೆರಡಟಸ್ ತಿಳಿಸಿದ್ದಾನೆ.
-