ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ನಿಮಗೆ ತೆರಿಗೆಗಳನ್ನು ಸಲ್ಲಿಸಲಿಕ್ಕಿರುವದಾದರೆ, ತೆರಿಗೆಗಳನ್ನು ಸಲ್ಲಿಸಿರಿ”
    ಕಾವಲಿನಬುರುಜು—1994 | ನವೆಂಬರ್‌ 15
    • ದೋಷಾರೋಪಣೆಯಿಲ್ಲದವರಾಗಿರಿ. ಕ್ರೈಸ್ತ ಮೇಲ್ವಿಚಾರಕರು ತಮ್ಮ ಸ್ಥಾನಕ್ಕೆ ಯೋಗ್ಯರಾಗಲು “ದೋಷಾರೋಪಣೆಯಿಲ್ಲದವರಾಗಿರಬೇಕು”. ತದ್ರೀತಿಯಲ್ಲಿ, ದೇವರ ದೃಷ್ಟಿಯಲ್ಲಿ ಇಡೀ ಸಭೆಯು ದೋಷಾರೋಪಣೆಯಿಲ್ಲದ್ದಾಗಿರಬೇಕು. (1 ತಿಮೊಥೆಯ 3:2; ಹೋಲಿಸಿರಿ ಎಫೆಸ 5:27.) ಆದದರಿಂದ ಅವರು, ತೆರಿಗೆಗಳನ್ನು ಸಲ್ಲಿಸುವ ವಿಷಯದಲ್ಲೂ, ಸಮಾಜದಲ್ಲಿ ಒಂದು ಒಳ್ಳೆಯ ಹೆಸರನ್ನು ಕಾಪಾಡಿಕೊಳ್ಳಲು ಪ್ರಯತ್ನಪಡುತ್ತಾರೆ. ಯೇಸು ಕ್ರಿಸ್ತನು ತಾನೇ ಈ ಸಂಬಂಧದಲ್ಲಿ ಮಾದರಿಯನ್ನಿಟ್ಟನು. ಎರಡು ಡ್ರಾಕ್ಮಾಗಳನ್ನು ಒಳಗೂಡುವ ಒಂದು ಚಿಕ್ಕ ವಿಷಯವಾದ, ದೇವಾಲಯದ ತೆರಿಗೆಯನ್ನು ಯೇಸು ಸಲ್ಲಿಸುತ್ತಾನೋ ಎಂದು ಆತನ ಶಿಷ್ಯನಾದ ಪೇತ್ರನನ್ನು ಕೇಳಲಾಯಿತು. ನಿಜವಾಗಿ, ಯೇಸು ಈ ತೆರಿಗೆಯಿಂದ ವಿಮುಕ್ತನಾಗಿದ್ದನು, ಏಕೆಂದರೆ ದೇವಾಲಯವು ಆತನ ತಂದೆಯ ಮನೆಯಾಗಿತ್ತು ಮತ್ತು ಯಾವ ಅರಸನೂ ತನ್ನ ಸ್ವಂತ ಮಗನ ಮೇಲೆ ತೆರಿಗೆಯನ್ನು ವಿಧಿಸುವದಿಲ್ಲ. ಯೇಸು ಹಾಗೆಂದು ಹೇಳಿದರೂ, ಅವನು ಆ ತೆರಿಗೆಯನ್ನು ಸಲ್ಲಿಸಿದನು. ವಾಸ್ತವದಲ್ಲಿ, ಅಗತ್ಯವಿದ್ದ ಹಣವನ್ನು ಉಂಟುಮಾಡಲು ಅವನು ಒಂದು ಅದ್ಭುತವನ್ನೂ ಉಪಯೋಗಿಸಿದನು! ಯಾವುದರಿಂದ ತಾನು ಯೋಗ್ಯವಾಗಿಯೇ ವಿಮುಕ್ತನಾಗಿದ್ದನೋ ಅಂತಹ ತೆರಿಗೆಯನ್ನು ಏಕೆ ಸಲ್ಲಿಸಬೇಕು? ಯೇಸು ತಾನೇ ಹೇಳಿದಂತೆ, “ನಮ್ಮ ವಿಷಯದಲ್ಲಿ ಅವರು ಬೇಸರಗೊಳ್ಳಬಾರದು (ಎಡವಿ ಬೀಳಬಾರದು, NW)” ಎಂಬ ಕಾರಣಕ್ಕಾಗಿಯೇ.—ಮತ್ತಾಯ 17:24-27.b

  • “ನಿಮಗೆ ತೆರಿಗೆಗಳನ್ನು ಸಲ್ಲಿಸಲಿಕ್ಕಿರುವದಾದರೆ, ತೆರಿಗೆಗಳನ್ನು ಸಲ್ಲಿಸಿರಿ”
    ಕಾವಲಿನಬುರುಜು—1994 | ನವೆಂಬರ್‌ 15
    • b  ಆಸಕ್ತಿಕರವಾಗಿ, ಯೇಸುವಿನ ಭೂಜೀವಿತದಲ್ಲಿ ಈ ಘಟನೆಯನ್ನು ದಾಖಲಿಸುವ ಒಂದೇ ಸುವಾರ್ತೆಯು ಮತ್ತಾಯನದ್ದಾಗಿದೆ. ಸ್ವತಃ ಒಬ್ಬ ಮಾಜಿ ತೆರಿಗೆ ವಸೂಲಿಮಾಡುವವನೋಪಾದಿ, ಈ ವಿಷಯದಲ್ಲಿ ಯೇಸುವಿನ ಮನೋಭಾವನೆಯು ನಿಸ್ಸಂದೇಹವಾಗಿ ಮತ್ತಾಯನ ಮನಸ್ಸಿನ ಮೇಲೆ ಪ್ರಭಾವ ಬೀರಿತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ