ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದೇವರ ಸರ್ಕಾರ ಈಗ ಆಳ್ವಿಕೆ ಮಾಡ್ತಿದೆ!
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
    • 2. ಇಸವಿ 1914ರಿಂದ ಭೂಮಿಯಲ್ಲಿ ಮತ್ತು ಜನರ ಸ್ವಭಾವದಲ್ಲಿ ಯಾವೆಲ್ಲಾ ಬದಲಾವಣೆ ಆಗಿದೆ?

      ಯೇಸುವಿನ ಶಿಷ್ಯರು ಆತನಿಗೆ, “ನೀನು ಮತ್ತೆ ಬರೋ ಕಾಲಕ್ಕೆ ಮತ್ತು ಈ ಲೋಕದ ಅಂತ್ಯಕ್ಕೆ ಸೂಚನೆ ಏನು?” ಅಂತ ಕೇಳಿದ್ರು. (ಮತ್ತಾಯ 24:3) ಅದಕ್ಕೆ ಯೇಸು, ದೇವರ ಸರ್ಕಾರ ಸ್ವರ್ಗದಲ್ಲಿ ಆಳೋಕೆ ಶುರುವಾದಾಗ ಭೂಮಿಯಲ್ಲಿ ಒಂದರ ನಂತರ ಇನ್ನೊಂದು ಸಮಸ್ಯೆ ಬರುತ್ತೆ ಅಂತ ತಿಳಿಸಿದ್ದನು. ಅದರಲ್ಲಿ ಯುದ್ಧ, ಭೂಕಂಪ, ಆಹಾರದ ಕೊರತೆ ಸೇರಿದೆ. (ಮತ್ತಾಯ 24:7 ಓದಿ.) “ಕೊನೇ ದಿನಗಳಲ್ಲಿ” ಜನರು ನಡೆದುಕೊಳ್ಳುವ ರೀತಿಯಿಂದ ಜೀವನದಲ್ಲಿ “ತುಂಬ ಕಷ್ಟ ಪಡಬೇಕಾಗುತ್ತೆ” ಅಂತಾನೂ ಬೈಬಲ್‌ ಮುಂಚೆನೇ ತಿಳಿಸಿದೆ. (2 ತಿಮೊತಿ 3:1-5) 1914ರಿಂದ ಈ ಎಲ್ಲಾ ವಿಷಯಗಳು ನಮ್ಮ ಕಣ್ಣಮುಂದೆ ನಡೆಯುತ್ತಾ ಇರೋದನ್ನ ನಾವು ನೋಡುತ್ತಿದ್ದೇವೆ.

      3. ದೇವರ ಸರ್ಕಾರದ ಆಳ್ವಿಕೆ ಶುರು ಆದಾಗಿಂದ ಲೋಕದ ಪರಿಸ್ಥಿತಿ ಯಾಕೆ ಇಷ್ಟು ಕೆಟ್ಟುಹೋಗಿದೆ?

      ದೇವರ ಸರ್ಕಾರದ ರಾಜನಾದ ಕೂಡಲೇ ಯೇಸು, ಸ್ವರ್ಗದಲ್ಲಿದ್ದ ಸೈತಾನ ಮತ್ತು ಅವನ ಕೆಟ್ಟದೂತರ ಜೊತೆ ಯುದ್ಧ ಮಾಡಿ ಅವರನ್ನ ಸೋಲಿಸಿದನು. ಯೇಸು, ‘ಸೈತಾನ ಮತ್ತು ಅವನ ದೂತರನ್ನ ಭೂಮಿಗೆ ಎಸೆದನು’ ಅಂತ ಬೈಬಲ್‌ ಹೇಳುತ್ತೆ. (ಪ್ರಕಟನೆ 12:9, 10, 12) ತನಗೆ ಇರೋದು ಸ್ವಲ್ಪ ಸಮಯ ಅಂತ ಗೊತ್ತಿರೋದ್ರಿಂದ ಸೈತಾನ ತುಂಬ ಕೋಪದಿಂದ ಇದ್ದಾನೆ. ಅದಕ್ಕೆ ಅವನು ಭೂಮಿಯಲ್ಲಿರುವ ಎಲ್ಲರಿಗೂ ತುಂಬ ಕಷ್ಟ, ನೋವನ್ನ ಕೊಡ್ತಿದ್ದಾನೆ. ಲೋಕದಲ್ಲಿರುವ ಪರಿಸ್ಥಿತಿ ಇಷ್ಟು ಕೆಟ್ಟು ಹೋಗಲು ಇದೇ ಕಾರಣ. ಆದರೆ ದೇವರ ಸರ್ಕಾರ ಈ ಸಮಸ್ಯೆಗಳನ್ನೆಲ್ಲಾ ಬೇಗ ತೆಗೆದುಹಾಕುತ್ತೆ.

  • ದೇವರ ಸರ್ಕಾರ ಈಗ ಆಳ್ವಿಕೆ ಮಾಡ್ತಿದೆ!
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
    • 5. ಲೋಕದಲ್ಲಿ 1914ರಿಂದ ತುಂಬ ಬದಲಾವಣೆಯಾಗಿದೆ

      ವಿಡಿಯೋ ನೋಡಿ.

      ವಿಡಿಯೋ: 1914ರಿಂದ ಲೋಕದಲ್ಲಾದ ಬದಲಾವಣೆ (1:10)

      ಯೇಸು ರಾಜನಾದಾಗ ಭೂಮಿಯ ಪರಿಸ್ಥಿತಿ ಹೇಗಿರುತ್ತೆ ಅಂತ ಆತನು ಮೊದಲೇ ತಿಳಿಸಿದ್ದನು. ಲೂಕ 21:9-11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

      • ಇಲ್ಲಿ ತಿಳಿಸಲಾಗಿರುವ ಯಾವೆಲ್ಲಾ ವಿಷಯಗಳನ್ನ ನೀವು ಕೇಳಿದ್ದೀರಾ ಅಥವಾ ನೋಡಿದ್ದೀರಾ?

      ಮಾನವ ಆಳ್ವಿಕೆಯ ಕೊನೇ ದಿನಗಳಲ್ಲಿ ಜನರು ಹೇಗಿರುತ್ತಾರೆ ಅಂತ ಅಪೊಸ್ತಲ ಪೌಲ ತಿಳಿಸಿದ್ದಾನೆ. 2 ತಿಮೊತಿ 3:1-5 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

      • ಇದರಲ್ಲಿ ತಿಳಿಸಲಾಗಿರುವ ಯಾವ ರೀತಿಯ ಗುಣಗಳಿರೋ ಜನರನ್ನ ನೀವು ನೋಡಿದ್ದೀರಾ?

      ಕೊಲಾಜ್‌: ಕೊನೇ ದಿನಗಳಲ್ಲಿರುವ ಲೋಕದ ಪರಿಸ್ಥಿತಿ ಮತ್ತು ಜನರ ಸ್ವಭಾವವನ್ನ ಸೂಚಿಸುತ್ತಿರುವ ದೃಶ್ಯಗಳು. 1. ಮಿಲಿಟರಿ ಅಧಿಕಾರಿ ತನ್ನ ಕೈಯನ್ನ ಎತ್ತಿ ಕಿರಿಚುತ್ತಿದ್ದಾನೆ. 2. ಭೂಕಂಪದ ನಂತರ ಹಾಳಾಗಿ ಬಿದ್ದಿರುವ ಕಟ್ಟಡಗಳು. 3. ಮಿಲಿಟರಿ ವಿಮಾನಗಳು. 4. ಮಾಸ್ಕ್‌ ಹಾಕಿಕೊಂಡು ಓಡಾಡುತ್ತಿರುವ ಜನರ ಗುಂಪು. 5. ನ್ಯೂಯಾರ್ಕಿನ ಅವಳಿ ಕಟ್ಟಡಗಳು ತೀವ್ರವಾದಿಗಳ ಆಕ್ರಮಣದ ನಂತರ ಹೊತ್ತಿ ಉರಿಯುತ್ತಿದೆ. 6. ಒಬ್ಬ ಅಮಲೌಷಧವನ್ನ ತೆಗೆದುಕೊಳ್ಳುತ್ತಿದ್ದಾನೆ. 7. ಗಂಡ ಹೆಂಡತಿ ಮೇಲೆ ಕಿರಿಚಾಡಿ, ಹೊಡೆಯಲಿಕ್ಕೆ ಹೋಗ್ತಿದ್ದಾನೆ. 8. ಬೇರೆಬೇರೆ ತರದ ಮದ್ಯ ಮತ್ತು ಅಮಲೌಷಧಗಳು. 9. ಇಬ್ಬರು ಯುವತಿಯರು ಫ್ಯಾಶನ್‌ ಬಟ್ಟೆಯನ್ನ ಮತ್ತು ಆಭರಣಗಳನ್ನ ಹಾಕಿಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. 10. ಒಬ್ಬ ಹಾಡುಗಾರನ ಹಾಡಿಗೆ ಜನರು ಕುಣಿದು ಕುಪ್ಪಳಿಸುತ್ತಿದ್ದಾರೆ. 11. ಒಬ್ಬ ಪ್ರತಿಭಟನಕಾರ ಇಂಧನವಿರುವ ಒಂದು ಬಾಟಲಿಗೆ ಬೆಂಕಿ ಹಚ್ಚಿ ಎಸೆಯುತ್ತಿದ್ದಾನೆ.

      6. ದೇವರ ಸರ್ಕಾರ ಈಗ ಆಳ್ವಿಕೆ ಮಾಡ್ತಿದೆ ಅಂತ ನೀವು ನಂಬುತ್ತೀರ ಅನ್ನೋದನ್ನ ತೋರಿಸಿಕೊಡಿ

      ಮತ್ತಾಯ 24:3, 14 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

      • ದೇವರ ಸರ್ಕಾರ ಈಗ ಆಳ್ವಿಕೆ ನಡೆಸ್ತಿದೆ ಅಂತ ಯಾವ ಕೆಲಸ ತೋರಿಸ್ತಿದೆ?

      • ನೀವು ಆ ಕೆಲಸದಲ್ಲಿ ಹೇಗೆ ಕೈಜೋಡಿಸಬಹುದು?

      ದೇವರ ಸರ್ಕಾರ ಈಗ ಆಳ್ವಿಕೆ ನಡೆಸ್ತಿದೆ. ಅದು ಬೇಗನೇ ಇಡೀ ಭೂಮಿಯ ಮೇಲೆ ಆಳ್ವಿಕೆ ನಡೆಸಲಿದೆ. ಇಬ್ರಿಯ 10:24, 25 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

      • ‘ದೇವರ ದಿನ ಹತ್ತಿರ ಬರುತ್ತಾ ಇರೋದನ್ನ’ ನೋಡುವಾಗ ನಾವೆಲ್ಲರೂ ಏನು ಮಾಡಬೇಕು?

      ಕೊಲಾಜ್‌: 1. ಒಬ್ಬ ಬೈಬಲ್‌ ವಿದ್ಯಾರ್ಥಿ ಕೂಟಕ್ಕೆ ಹಾಜರಾಗಿದ್ದಾಳೆ. 2. ಅವಳು ತನಗೆ ಪರಿಚಯ ಇರೋ ಒಬ್ಬಳಿಗೆ ಸಾರುತ್ತಿದ್ದಾಳೆ.

      ಬೇರೆಯವರಿಗೆ ಪ್ರಯೋಜನ ಆಗುವ, ಅವರ ಜೀವ ಉಳಿಸುವ ಒಂದು ವಿಷಯ ನಿಮಗೆ ಗೊತ್ತಿದ್ರೆ ನೀವೇನು ಮಾಡ್ತೀರಾ?

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ