ವಾಚಕರಿಂದ ಪ್ರಶ್ನೆಗಳು
ಟೋಟೆ (ದೆನ್) ಎಂಬ ಗ್ರೀಕ್ ಶಬ್ದವು, ತದನಂತರ ಹಿಂಬಾಲಿಸಿ ಬರುವ ವಿಷಯವನ್ನು ಪ್ರಸ್ತಾಪಿಸಲು ಉಪಯೋಗಿಸಲ್ಪಡುತ್ತದೆ ಎಂದು ನಾನು ಅರ್ಥಮಾಡಿಕೊಳ್ಳುತ್ತೇನೆ. ಆದುದರಿಂದ, ಲೂಕ 21:12 (NW)ರಲ್ಲಿರುವ ಸಮಾಂತರ ವೃತ್ತಾಂತವು “ಆದರೆ ಈ ಎಲ್ಲಾ ವಿಷಯಗಳಿಗೆ ಮೊದಲು ಜನರು ನಿಮ್ಮ ಮೇಲೆ ಕೈಮಾಡಿ, ನಿಮ್ಮನ್ನು ಹಿಂಸಿಸುವರು” ಎಂದು ಹೇಳುವಾಗ, ಮತ್ತಾಯ 24:9 (NW)ರಲ್ಲಿ “ತದನಂತರ [ಟೋಟೆ] ಜನರು ನಿಮ್ಮನ್ನು ಸಂಕಟಕ್ಕೆ ಒಪ್ಪಿಸುವರು” ಎಂದು ಏಕೆ ಓದಲಾಗುತ್ತದೆ?
ಒಟ್ಟಿನಲ್ಲಿ ಹೇಳುವುದಾದರೆ, ಹಿಂಬಾಲಿಸಿ ಬರುವ, ಅನುಕ್ರಮವಾಗಿ ಬರುವ ಯಾವುದೋ ವಿಷಯವನ್ನು ಪ್ರಸ್ತಾಪಿಸಲು ಟೋಟೆಯನ್ನು ಉಪಯೋಗಿಸಸಾಧ್ಯವಿದೆಯೆಂಬುದು ಸರಿಯಾಗಿದೆ. ಆದರೆ ಇದು ಈ ಶಬ್ದದ ಕುರಿತಾದ ಏಕಮಾತ್ರ ಬೈಬಲ್ ಸಂಬಂಧಿತ ಉಪಯೋಗವಾಗಿದೆಯೆಂದು ನಾವು ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ.
ಶಾಸ್ತ್ರಗಳಲ್ಲಿ ಟೋಟೆ ಎಂಬ ಶಬ್ದವು ಎರಡು ಮೂಲಭೂತ ಅರ್ಥಗಳಲ್ಲಿ ಉಪಯೋಗಿಸಲ್ಪಡುತ್ತದೆ ಎಂಬುದನ್ನು, ಬಾವರ್ ಆರ್ನ್ಟ್ ಮತ್ತು ಗಿಂಗ್ರಿಚ್‌ರವರ, ಎ ಗ್ರೀಕ್-ಇಂಗ್ಲಿಷ್ ಲೆಕ್ಸಿಕನ್ ಆಫ್ ದ ನ್ಯೂ ಟೆಸ್ಟಮೆಂಟ್ ಆ್ಯಂಡ್ ಅದರ್ ಅರ್ಲಿ ಕ್ರಿಸ್ಟಿಯನ್ ಲಿಟರೇಚರ್ ತೋರಿಸುತ್ತದೆ.
“ಆ ಸಮಯದಲ್ಲಿ” ಎಂಬುದು ಒಂದು ಅರ್ಥವಾಗಿದೆ. ಇದು “ಗತಸಮಯದ (ಆಗ)” ಆಗಿರಸಾಧ್ಯವಿದೆ. ಕೊಡಲ್ಪಟ್ಟಿರುವ ಒಂದು ಉದಾಹರಣೆಯು ಮತ್ತಾಯ 2:17 ಆಗಿದೆ: “ಯೆರೆಮೀಯನೆಂಬ ಪ್ರವಾದಿಯು ಹೇಳಿದ ಮಾತು ಆ ಕಾಲದಲ್ಲಿ [ಆಗ] ನೆರವೇರಿತು.” ಇದು ಒಂದು ಸರಣಿಯಲ್ಲಿ ಬರುವ ಯಾವುದೋ ವಿಷಯಕ್ಕೆ ನಿರ್ದೇಶಿಸುತ್ತಿಲ್ಲ, ಬದಲಾಗಿ ಆ ಸಮಯದಲ್ಲಿ, ಗತಸಮಯದಲ್ಲಿನ ಒಂದು ನಿರ್ದಿಷ್ಟ ಅಂಶವನ್ನು ಸೂಚಿಸುತ್ತದೆ. ತದ್ರೀತಿಯಲ್ಲಿ, ಟೋಟೆಯನ್ನು “ಭಾವೀ (ತದನಂತರ)ದ ಕುರಿತಾಗಿ” ಉಪಯೋಗಿಸಸಾಧ್ಯವಿದೆ. ಒಂದು ಉದಾಹರಣೆಯು 1 ಕೊರಿಂಥ 13:12, (NW)ರಲ್ಲಿ ಕಂಡುಬರುತ್ತದೆ: “ಪ್ರಸ್ತುತದಲ್ಲಿ ನಾವು ಲೋಹದ ದರ್ಪಣದ ಮೂಲಕ, ಮುಸುಕಾದ ರೂಪರೇಖೆಯನ್ನು ನೋಡುತ್ತೇವೆ, ಆದರೆ ತದನಂತರ ಮುಖಾಮುಖಿಯಾಗಿ ನೋಡುವೆವು. ಪ್ರಸ್ತುತದಲ್ಲಿ ಸ್ವಲ್ಪಮಾತ್ರ ನನಗೆ ತಿಳಿದದೆ, ಆದರೆ ಆಗ ನನ್ನನ್ನು ನಿಷ್ಕೃಷ್ಟವಾಗಿ ತಿಳಿದುಕೊಂಡಂತೆಯೇ ನಾನು ನಿಷ್ಕೃಷ್ಟವಾಗಿ ತಿಳಿದುಕೊಳ್ಳುವೆನು.” ಪೌಲನು ಇಲ್ಲಿ ಟೋಟೆಯನ್ನು ‘ಭವಿಷ್ಯತ್ತಿನ ಆ ಬಿಂದುವಿನಲ್ಲಿ’ ಎಂಬರ್ಥದಲ್ಲಿ ಉಪಯೋಗಿಸಿದನು.
ಈ ಶಬ್ದಕೋಶಕ್ಕನುಸಾರವಾಗಿ, ಟೋಟೆಯ ಇನ್ನೊಂದು ಉಪಯೋಗವು, “ಸಕಾಲದಲ್ಲಿ ಹಿಂಬಾಲಿಸಿ ಬರುವ ವಿಷಯವನ್ನು ಪ್ರಸ್ತಾಪಿಸಲಿಕ್ಕೆ” ಆಗಿದೆ. ಯೇಸುವಿನ ಸಾನ್ನಿಧ್ಯದ ಸೂಚನೆಯ ಕುರಿತಾದ ಅಪೊಸ್ತಲರ ಪ್ರಶ್ನೆಗಳಿಗೆ ಅವನಿಂದ ಕೊಡಲ್ಪಟ್ಟ ಉತ್ತರದ, ಮೂರು ವೃತ್ತಾಂತಗಳಲ್ಲಿ ಕಂಡುಬರುವ ಅನೇಕ ಉದಾಹರಣೆಗಳನ್ನು, ಈ ಶಬ್ದಕೋಶವು ಕೊಡುತ್ತದೆ.a “ಸಕಾಲದಲ್ಲಿ ಅದನ್ನು ಹಿಂಬಾಲಿಸಿ ಬರುವ ವಿಷಯವನ್ನು ಪ್ರಸ್ತಾಪಿಸ”ಲಿಕ್ಕಾಗಿರುವ ಟೋಟೆಯ ಉಪಯೋಗದ ಉದಾಹರಣೆಗಳೋಪಾದಿ, ಈ ಶಬ್ದಕೋಶವು ಮತ್ತಾಯ 24:10, 14, 16, 30; ಮಾರ್ಕ 13:14, 21; ಮತ್ತು ಲೂಕ 21:20, 27ನ್ನು ಉಲ್ಲೇಖಿಸುತ್ತದೆ. ಪೂರ್ವಾಪರ ವಚನಗಳನ್ನು ಪರಿಗಣಿಸುವುದು, ಸಕಾಲದಲ್ಲಿ ತರುವಾಯದ ಯಾವುದೋ ವಿಷಯವು ಸರಿಯಾದ ಅರ್ಥವಾಗಿದೆ ಏಕೆ ಎಂಬುದನ್ನು ತೋರಿಸುತ್ತದೆ. ಮತ್ತು ಭವಿಷ್ಯತ್ತಿನ ಘಟನೆಗಳ ಕುರಿತಾದ ವಿಕಸನವನ್ನೊಳಗೊಂಡ ಯೇಸುವಿನ ಪ್ರವಾದನೆಯ ಅರ್ಥವನ್ನು ಗ್ರಹಿಸಿಕೊಳ್ಳುವುದರಲ್ಲಿ ಇದು ಸಹಾಯಕರವಾಗಿದೆ.
ಹಾಗಿದ್ದರೂ, ಈ ವೃತ್ತಾಂತಗಳಲ್ಲಿ ಬರುವ ಟೋಟೆಯ ಪ್ರತಿಯೊಂದು ನಿದರ್ಶನವೂ ಸಕಾಲದಲ್ಲಿ ಹಿಂಬಾಲಿಸಿ ಬರುವ ವಿಷಯವನ್ನು ಬಲವತ್ತಾಗಿ ಪ್ರಸ್ತಾಪಿಸಲೇಬೇಕೆಂದು ನಾವು ನಿರ್ಣಯಿಸುವ ಅಗತ್ಯವಿಲ್ಲ. ಉದಾಹರಣೆಗಾಗಿ, ಜನಾಂಗಕ್ಕೆ ವಿರೋಧವಾಗಿ ಜನಾಂಗವು ಏಳುವುದು ಮತ್ತು ಅಲ್ಲಿ ಆಹಾರದ ಅಭಾವಗಳು ಹಾಗೂ ಭೂಕಂಪಗಳಿರುವವೆಂದು ಯೇಸು ಮುಂತಿಳಿಸಿದನೆಂದು, ಮತ್ತಾಯ 24:7, 8ರಲ್ಲಿ ನಾವು ಓದುತ್ತೇವೆ. 9 (NW)ನೆಯ ವಚನವು ಮುಂದುವರಿಸುವುದು: “ತದನಂತರ ಜನರು ನಿಮ್ಮನ್ನು ಸಂಕಟಕ್ಕೆ ಒಪ್ಪಿಸುವರು ಮತ್ತು ನಿಮ್ಮನ್ನು ಕೊಲ್ಲುವರು, ಹಾಗೂ ನನ್ನ ಹೆಸರಿನ ನಿಮಿತ್ತವಾಗಿ ನೀವು ಎಲ್ಲಾ ಜನಾಂಗಗಳಿಂದ ದ್ವೇಷಕ್ಕೆ ತುತ್ತಾಗುವಿರಿ.” ಮುಂತಿಳಿಸಲ್ಪಟ್ಟ ಯುದ್ಧಗಳು, ಆಹಾರದ ಅಭಾವಗಳು, ಮತ್ತು ಭೂಕಂಪಗಳೆಲ್ಲವೂ ಸಂಭವಿಸಲೇಬೇಕು, ಮತ್ತು ಹಿಂಸೆಯು ಆರಂಭವಾಗುವುದಕ್ಕೆ ಮೊದಲೇ ಬಹುಶಃ ನಿಂತುಹೋಗಬೇಕು ಎಂದು ಅರ್ಥೈಸುವುದು ಸಮಂಜಸವಾದದ್ದಾಗಿರುವುದೊ?
ಅದು ತರ್ಕಬದ್ಧವಾಗಿರುವುದಿಲ್ಲ, ಅಥವಾ ಪ್ರಥಮ ಶತಮಾನದ ನೆರವೇರಿಕೆಯ ಕುರಿತಾಗಿ ನಾವು ತಿಳಿದಿರುವಂತಹ ವಿಷಯದಿಂದ ಅದು ದೃಢೀಕರಿಸಲ್ಪಟ್ಟಿಲ್ಲ. ಹೊಸ ಕ್ರೈಸ್ತ ಸಭೆಯ ಸದಸ್ಯರು ಸಾರಲು ಆರಂಭಿಸಿದ ಕೂಡಲೆ, ಅವರು ಗಂಭೀರವಾದ ವಿರೋಧವನ್ನು ಅನುಭವಿಸಿದರು ಎಂಬುದನ್ನು ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿರುವ ವೃತ್ತಾಂತವು ಪ್ರಕಟಿಸುತ್ತದೆ. (ಅ. ಕೃತ್ಯಗಳು 4:5-21; 5:17-40) ಯೇಸು ಪ್ರಸ್ತಾಪಿಸಿದ್ದ ಎಲ್ಲಾ ಯುದ್ಧಗಳು, ಬರಗಾಲಗಳು, ಮತ್ತು ಭೂಕಂಪಗಳು, ಆ ಆರಂಭದ ಹಿಂಸೆಗೆ ಮುಂಚೆ ಸಂಭವಿಸಿದವು ಎಂದು ನಾವು ಹೇಳಸಾಧ್ಯವಿಲ್ಲ ನಿಶ್ಚಯ. ಇದಕ್ಕೆ ವ್ಯತಿರಿಕ್ತವಾಗಿ, ಲೂಕನು ವಿಷಯಗಳನ್ನು ಜೋಡಿಸಿದ ರೀತಿಗೆ ಹೊಂದಿಕೆಯಲ್ಲಿ, ಮುಂತಿಳಿಸಲ್ಪಟ್ಟ ಇತರ ವಿಷಯಗಳಲ್ಲಿ ಅನೇಕ ವಿಷಯಗಳಿಗೆ “ಮುಂಚೆಯೇ” ಆ ವಿರೋಧವು ಬಂತು: “ಆದರೆ ಈ ಎಲ್ಲಾ ವಿಷಯಗಳಿಗೆ ಮೊದಲು ಜನರು ನಿಮ್ಮ ಮೇಲೆ ಕೈಮಾಡಿ, ನಿಮ್ಮನ್ನು ಹಿಂಸಿಸುವರು.” (ಲೂಕ 21:12, NW) ಮತ್ತಾಯ 24:9ರಲ್ಲಿ, ಟೋಟೆಯು “ಆ ಸಮಯದಲ್ಲಿ” ಎಂಬ ಅರ್ಥದಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಟ್ಟಿದೆ ಎಂಬುದನ್ನು ಅದು ಸೂಚಿಸಸಾಧ್ಯವಿದೆ. ಯುದ್ಧಗಳು, ಬರಗಾಲಗಳು, ಮತ್ತು ಭೂಕಂಪಗಳ ಅವಧಿಯಲ್ಲಿ, ಅಥವಾ ಆ ಸಮಯದಲ್ಲಿ, ಯೇಸುವಿನ ಹಿಂಬಾಲಕರು ಹಿಂಸಿಸಲ್ಪಡುವರು.
[ಪಾದಟಿಪ್ಪಣಿ]
a ಫೆಬ್ರವರಿ 15, 1994ರ ಕಾವಲಿನಬುರುಜು ಪತ್ರಿಕೆಯ, 14 ಮತ್ತು 15ನೆಯ ಪುಟಗಳಲ್ಲಿರುವ ಅಂಕಣಗಳಲ್ಲಿ, ಮತ್ತಾಯ, ಮಾರ್ಕ ಮತ್ತು ಲೂಕ ಪುಸ್ತಕಗಳಲ್ಲಿರುವ ಈ ಸಮಾಂತರ ವೃತ್ತಾಂತಗಳು ನಮೂದಿಸಲ್ಪಟ್ಟಿವೆ. ಟೋಟೆಯ “ತದನಂತರ” ಎಂಬರ್ಥ ಕೊಡುವ ನಿದರ್ಶನಗಳು, ದಪ್ಪಕ್ಷರಗಳಲ್ಲಿದ್ದವು.