ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ನಿನ್ನ ಸಾನ್ನಿಧ್ಯದ ಸೂಚನೆ ಏನಾಗಿರುವುದು?”
    ಕಾವಲಿನಬುರುಜು—1994 | ಫೆಬ್ರವರಿ 15
    • “ತದನಂತರ” ಅಂತ್ಯವು

      10. ಗ್ರೀಕ್‌ ಪದವಾದ ಟೊ’ಟೆ ಯನ್ನು ನಾವು ಯಾಕೆ ಗಮನಕ್ಕೆ ತಕ್ಕೊಳ್ಳಬೇಕು, ಮತ್ತು ಅದರ ತಾತ್ಪರ್ಯವೇನು?

      10 ಆತನ ಪ್ರವಾದನೆಯ ಕೆಲವು ಭಾಗಗಳಲ್ಲಿ, ಯೇಸುವು ಘಟನೆಗಳನ್ನು ಕ್ರಮಾನುಗತಿಯಲ್ಲಿ ಸಂಭವಿಸುತ್ತಿರುವಂತೆ ಸಾದರಪಡಿಸಿದನು. ಅವನಂದದ್ದು: “ರಾಜ್ಯದ ಈ ಸುವಾರ್ತೆಯು . . . ಸಾರಲ್ಪಡುವುದು . . . ಆಗ (ತದನಂತರ, NW) ಅಂತ್ಯವು ಬರುವುದು.” ಇಂಗ್ಲಿಷ್‌ನಲ್ಲಿ ಬೈಬಲುಗಳು “then” (ತದನಂತರ) ಎಂಬದನ್ನು “ಆದಕಾರಣ” (“therefore”) ಯಾ “ಆದರೆ” (“but”) ಎಂಬ ಸರಳ ಅರ್ಥದೊಂದಿಗೆ ಆಗಿಂದಾಗ್ಗೆ ಬಳಸುತ್ತವೆ. (ಮಾರ್ಕ 4:15, 17; 13:23) ಆದರೂ, ಮತ್ತಾಯ 24:14 ರಲ್ಲಿ “ತದನಂತರ” (then) ಎಂಬುದು ಗ್ರೀಕ್‌ ಕ್ರಿಯಾ ವಿಶೇಷಣ ಟೊ’ಟೆಯ ಮೇಲೆ ಆಧಾರಿತವಾಗಿದೆ.c ಗ್ರೀಕ್‌ ತಜ್ಞರು ವಿವರಿಸುವುದೇನಂದರೆ ಟೊ’ಟೆ “ಸಮಯದ ಒಂದು ನಿರ್ದೇಶಕ ಕ್ರಿಯಾ ವಿಶೇಷಣ” ಆಗಿದ್ದು, “ಸಮಯದಲ್ಲಿ ಅದನ್ನು ಹಿಂಬಾಲಿಸಿ ಬರುವುದನ್ನು ಪ್ರಸ್ತಾಪಿಸಲು” ಯಾ “ತರುವಾಯದ ಒಂದು ಘಟನೆಯನ್ನು ಪ್ರಸ್ತಾಪಿಸಲು” ಬಳಸಲಾಗಿದೆ. ಯೇಸುವು ಹೀಗೆ ರಾಜ್ಯದ ಸಾರುವಿಕೆ ಇರುವುದನ್ನು ಮುಂತಿಳಿಸಿದನು ಮತ್ತು ತದನಂತರ (ಯಾ, ‘ಅದಾದ ಮೇಲೆ’ ಯಾ ‘ತರುವಾಯ’) “ಅಂತ್ಯವು” ಬರುವುದು. ಯಾವ ಅಂತ್ಯ?

  • “ನಿನ್ನ ಸಾನ್ನಿಧ್ಯದ ಸೂಚನೆ ಏನಾಗಿರುವುದು?”
    ಕಾವಲಿನಬುರುಜು—1994 | ಫೆಬ್ರವರಿ 15
    • c ಟೊ’ಟೆ ಮತ್ತಾಯ (ಅಧ್ಯಾಯ 24 ರಲ್ಲಿ 9 ಸಲ) ದಲ್ಲಿ 80 ಕ್ಕಿಂತಲೂ ಹೆಚ್ಚು ಸಾರಿ ಮತ್ತು ಲೂಕ ಪುಸ್ತಕದಲ್ಲಿ 15 ಸಲ ಗೋಚರಿಸುತ್ತದೆ. ಮಾರ್ಕನು ಟೊ’ಟೆ ಯನ್ನು ಆರು ಸಲ ಮಾತ್ರ ಬಳಸಿದನು, ಆದರೆ ಅವುಗಳಲ್ಲಿ ನಾಲ್ಕು “ಆ ಸೂಚನೆ” ಯನ್ನು ಒಳಗೊಂಡಿರುತ್ತವೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ