ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 3/15 ಪು. 30
  • ನಿಮಗೆ ನೆನಪಿದೆಯೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೇ?
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • “ದಶಮಾಂಶ ಯಾವತ್ತನ್ನೂ ಭಂಡಾರಕ್ಕೆ ತೆಗೆದುಕೊಂಡು ಬನ್ನಿರಿ”
    ಕಾವಲಿನಬುರುಜು—1993
  • ದಶಮಾಂಶದ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • “ಮೆಸ್ಸೀಯನು ನಮಗೆ ಸಿಕ್ಕಿದನು”!
    ಕಾವಲಿನಬುರುಜು—1993
  • ಯೆಹೋವನ ಆಶೀರ್ವಾದವು ಐಶ್ವರ್ಯದಾಯಕವು
    ಕಾವಲಿನಬುರುಜು—1993
ಇನ್ನಷ್ಟು
ಕಾವಲಿನಬುರುಜು—1993
w93 3/15 ಪು. 30

ನಿಮಗೆ ನೆನಪಿದೆಯೇ?

ಇತ್ತೀಚಿಗಿನ ಕಾವಲಿನಬುರುಜು ಸಂಚಿಕೆಗಳನ್ನು ಓದುವುದನ್ನು ನೀವು ಆನಂದಿಸಿದ್ದೀರೋ? ಹಾಗಿದ್ದರೆ ಕೆಳಗಿನವುಗಳನ್ನು ನೆನಪಿಗೆ ತರುವುದನ್ನು ನೀವು ಅಭಿರುಚಿಯುಳ್ಳದ್ದಾಗಿ ಕಾಣುವಿರೆಂಬದಕ್ಕೆ ಸಂದೇಹವಿಲ್ಲ:

▫ ಒಂದನೆಯ ಶತಮಾನದಲ್ಲಿ ಪವಿತ್ರಾತ್ಮದ ಹಲವಾರು ಕಾರ್ಯಗತಿಗಳಿಂದ ಯಾವ ಖಾತ್ರಿದಾಯಕ ರುಜುವಾತು ಕೊಡಲ್ಪಟ್ಟಿತ್ತು?

ಈ ಕಾರ್ಯಗತಿಗಳು ದೃಶ್ಯ ರುಜುವಾತನ್ನು ಒದಗಿಸಿದವು ಏನಂದರೆ ದೇವರು ಇನ್ನು ಮುಂದೆ ತನ್ನ ವಿಶೇಷ ಜನರಾಗಿ 1,500 ವರ್ಷ ಪ್ರಾಯದ ಇಸ್ರಾಯೇಲ್‌ ಸಭೆಯನ್ನು ಉಪಯೋಗಿಸುತ್ತಿಲ್ಲ, ಬದಲಾಗಿ ಆತನ ಮೆಚ್ಚಿಕೆಯು ಈಗ ಆತನ ಏಕ-ಜಾತ ಪುತ್ರನಿಂದ ಸ್ಥಾಪಿಸಲ್ಪಟ್ಟ ಹೊಸ ಕ್ರೈಸ್ತ ಸಭೆಯ ಮೇಲಿದೆ. (ಹೋಲಿಸಿರಿ ಇಬ್ರಿಯ 2:2-4.)—ಕಾ2 11⁄15, ಪುಟ 5.

▫ ಯೆಹೋವನ ಸಾಕ್ಷಿಗಳಿಂದ ಅನುಭವಿಸಲ್ಪಟ್ಟ ಅತಿಶಯ ಬೆಳವಣಿಗೆಗೆ ಯಾವುದು ಕಾರಣವಾಗಿದೆ?

ಮುಖ್ಯವಾಗಿ ಇದು ದೇವರ ಆಶೀರ್ವಾದದಿಂದಾಗಿದೆ. ಅದು ದೇವರ ಕೆಲಸವಾಗಿದೆ. ತಮ್ಮ ಸೌವಾರ್ತಿಕ ಕೆಲಸದಲ್ಲಿ ಯೆಹೋವನ ಸಾಕ್ಷಿಗಳು ಏನನ್ನು ಕಲಿಸುತ್ತಾರೋ ಅದು ಬೈಬಲಿನಲ್ಲಿ ಆಧರಿತವಾಗಿದೆ. ಅವರ ಸಾಫಲ್ಯಕ್ಕೆ ಇನ್ನೊಂದು ಕೀಲಿಕೈಯು, ಕ್ರಿಸ್ತ ಯೇಸುವನ್ನು ಕ್ರೈಸ್ತ ಸಭೆಯ ನೇಮಿತ ಶಿರಸ್ಸಾಗಿ ಅವರ ಪೂರ್ಣ ಅಂಗೀಕಾರವೇ.—ಕಾ92 12⁄1, ಪುಟ 19.

▫ ಬತ್ಷೆಬೆಯೊಂದಿಗೆ ಅವನ ಮಹಾ ಪಾಪದ ಸಂಬಂಧದಲ್ಲಿ ದಾವೀದನಿಗೆ ಯೆಹೋವನು ಕರುಣೆ ತೋರಿಸಿದ್ದೇಕೆ?

ಇದು ಮುಖ್ಯವಾಗಿ ದಾವೀದನೊಂದಿಗೆ ದೇವರು ಮಾಡಿದ ರಾಜ್ಯದ ಒಡಂಬಡಿಕೆಯ ಕಾರಣದಿಂದಾಗಿತ್ತು, ಆದರೆ ಅದು ದಾವೀದನ ಸ್ವಂತ ಕರುಣಾಪೂರ್ಣತೆ ಮತ್ತು ನಿಜ ಪಶ್ಚಾತ್ತಾಪದ ಕಾರಣದಿಂದಲೂ ಆಗಿತ್ತು. (1 ಸಮುವೇಲ 24:4-7; 2 ಸಮುವೇಲ 7:12; 12:13; ಕೀರ್ತನೆ 51:1, 2, 17)—ಕಾ93 3⁄15, ಪುಟಗಳು 10, 11.

▫ ಯೇಸುವಿನ ಮೇಸ್ಸೀಯತ್ವದ ಆಧಾರವಾಗಿ ಯಾವ ಮೂರು ವಿಧಗಳ ರುಜುವಾತನ್ನು ಕ್ರೈಸ್ತ ಗ್ರೀಕ್‌ ಶಾಸ್ತ್ರವಚನಗಳು ಕೊಡುತ್ತವೆ?

ಯೇಸುವಿನ ವಂಶಾವಳಿಯು ಆ ರುಜುವಾತಿನ ಮೊದಲನೆಯ ರೇಖೆಯಾಗಿದೆ. (ಮತ್ತಾಯ 1:1-16; ಲೂಕ 3:23-38) ಇನ್ನೊಂದು ರುಜುವಾತು, ನೆರವೇರಿದ ಪ್ರವಾದನೆಯಾಗಿದೆ. ಯೇಸುವನ್ನು ಮೆಸ್ಸೀಯನಾಗಿ ಗುರುತಿಸುವ, ದಾನಿಯೇಲ 9:25 ರಲ್ಲಿ ಕಂಡುಬರುವಂತಹ, ಅಕ್ಷರಶಃ ನೂರಾರು ಪ್ರವಾದನೆಗಳಿವೆ. ರುಜುವಾತಿನ ಮೂರನೆಯ ರೇಖೆಯು ದೇವರ ಸ್ವಂತ ಸಾಕ್ಷ್ಯವು; ಆತನು ಇದನ್ನು ಮೂರು ಸಂದರ್ಭಗಳಲ್ಲಿ, ತನ್ನ ಸ್ವಂತ ವಾಣಿಯಿಂದ ಒದಗಿಸಿದನು. (ಮತ್ತಾಯ 17:5; ಲೂಕ 3:21, 22; ಯೋಹಾನ 12:28)—wE92 10/1, ಪುಟಗಳು 10, 12.

▫ ಮತ್ತಾಯ 24:37 ರಲ್ಲಿ ದಾಖಲೆಯಾಗಿರುವ ಪ್ರಕಾರ, “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ [ಸಾನ್ನಿಧ್ಯ, NW] ಇರುವದು,” ಎಂದು ಯೇಸು ಹೇಳಿದ್ದು ಯಾವ ಅರ್ಥದಲ್ಲಿ?

ನೋಹನು ನಾವೆಯನ್ನು ಕಟ್ಟುತ್ತಿದ್ದನು ಮತ್ತು ಜಲಪ್ರಲಯವು ಬಂದು ಆ ಭ್ರಷ್ಟ ಲೋಕ ವ್ಯವಸ್ಥೆಯನ್ನು ನಾಶಮಾಡುವ ಮುಂಚೆ ದಶಾಬ್ದಿಗಳ ಒಂದು ಕಾಲಾವಧಿಯ ತನಕ ದುಷ್ಟರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದನು. ತದ್ರೀತಿ, ಕ್ರಿಸ್ತನ ಅದೃಶ್ಯ ಸಾನಿಧ್ಯವು ಕೆಲವು ದಶಾಬ್ದಿಗಳ ಒಂದು ಕಾಲಾವಧಿಯ ತನಕ ಇರುತ್ತದೆ, ಅನಂತರ ಅದು ಸಹ ಒಂದು ಮಹಾ ನಾಶನದಲ್ಲಿ ಕೊನೆಗೊಳ್ಳುವ ಮುಂಚೆ, ಆ ಅವಧಿಯಲ್ಲಿ ಒಂದು ಲೋಕವ್ಯಾಪಕ ಸಾಕ್ಷಿಯು ಕೊಡಲ್ಪಡುತ್ತದೆ.—wE92 10/1, ಪುಟ 16.

▫ ಒಂದು ಉತ್ತಮ ಕುಟುಂಬ ಬೈಬಲ್‌ ಅಧ್ಯಯನಕ್ಕೆ ಕೆಲವು ಆವಶ್ಯಕತೆಗಳು ಯಾವುವು?

ಅಧ್ಯಯನಕ್ಕಾಗಿ ಸಮಯವನ್ನು ಖರೀದಿಸಿಕೊಳ್ಳಬೇಕು. ಟೀವೀ ಅಥವಾ ಇತರ ದಿಕ್ಚ್ಯುತಿಗಳಿಂದ ಅದು ಸ್ಥಾನಪಲ್ಲಟವಾಗುವಂತೆ ಬಿಡಬಾರದು. ಕುಟುಂಬದ ವಿಶಿಷ್ಟ ಅಗತ್ಯತೆಗಳು ಚರ್ಚಿಸಲ್ಪಡಲೇಬೇಕು. ಮಕ್ಕಳು ತಾವೇನನ್ನು ಕಲಿಯುತ್ತಾರೋ ಅದನ್ನು ತಿಳಿಯುತ್ತಾರೆಂದು ಖಾತ್ರಿಮಾಡಲು ದೃಷ್ಟಿಕೋನ ಪ್ರಶ್ನೆಗಳನ್ನು ಉಪಯೋಗಿಸಿರಿ. (ಮತ್ತಾಯ 17:25) ಪರಿಸರವನ್ನು ಆರಾಮವಾಗಿಡಿರಿ. ಉತ್ಸಾಹವುಳ್ಳವರಾಗಿರ್ರಿ, ಮತ್ತು ಪ್ರತಿಯೊಬ್ಬನನ್ನು ಅಭ್ಯಾಸದಲ್ಲಿ ಒಳಗೂಡಿಸಿರಿ,—ಕಾ93 1⁄15, ಪುಟ 17.

▫ ಆಹಾರ ಉತ್ಪನ್ನಗಳಿಗೆ ರಕ್ತದ ಅಂಶಗಳು ಸೇರಿಸಲ್ಪಟ್ಟಿರಬಹುದಾದಲ್ಲಿ ಕ್ರೈಸ್ತರು ಎಷ್ಟು ಚಿಂತಿತರಾಗಿರಬೇಕು?

ಕೇವಲ ಸಂಭವನೀಯತೆ ಅಥವಾ ಗಾಳೀಸುದ್ದಿಯಿಂದ ಕಳವಳಗೊಳ್ಳುವುದರ ವಿರುದ್ಧ ಕ್ರೈಸ್ತರು ಎಚ್ಚರದಿಂದಿರಬೇಕು, ಮತ್ತು ಲೇಬಲ್‌ಗಳನ್ನು ಪರಿಶೀಲಿಸುವ ಅಥವಾ ಕಟುಕರನ್ನು ವಿಚಾರಿಸುವ ವಿಷಯದಲ್ಲಿ ಸಹ ಸಮಂಜಸತೆಯು ಬೇಕಾಗಿದೆ. ಆದರೂ, ಸ್ಥಳೀಕವಾಗಿ ರಕ್ತವು—ಆಹಾರದಲ್ಲೋ ಅಥವಾ ವೈದ್ಯಕೀಯ ಉಪಚಾರದಲ್ಲೋ—ವಿಸ್ತಾರವಾಗಿ ಬಳಸಲ್ಪಡುತ್ತದೆಂದು ತಿಳಿದಿದ್ದರೆ, ರಕ್ತವನ್ನು ವರ್ಜಿಸಲು ದೇವರು ಕೊಟ್ಟಿರುವ ಆಜೆಗ್ಞೆ ವಿಧೇಯರಾಗಲು ಕ್ರೈಸ್ತರು ಜಾಗ್ರತೆವಹಿಸಬೇಕು. (ಅ. ಕೃತ್ಯಗಳು 15:28, 29)—ಕಾ93 1⁄15, ಪುಟಗಳು 30-1.

▫ ಜ್ಞಾನೋಕ್ತಿಯ ಪುಸ್ತಕವು ಇಸ್ರಾಯೇಲಿನಲ್ಲಿ ಬಳಸಲ್ಪಟ್ಟ ಕಲಿಸುವ ವಿಧಾನಗಳ ಆತ್ಮಿಕ ಆಳವನ್ನು ಹೇಗೆ ಎತ್ತಿಹೇಳುತ್ತದೆ?

“ಮೂಢರಿಗೆ [ಅನನುಭವಿಗಳಿಗೆ, NW]” ವಿವೇಕ, ಶಿಸ್ತು, ತಿಳುವಳಿಕೆ, ಒಳನೋಟ, ಯುಕ್ತಾಯುಕ್ತ ಪರಿಜ್ಞಾನ, ಜಾಣತನ, ಜ್ಞಾನ, ಮತ್ತು ಆಲೋಚನಾ ಸಾಮರ್ಥ್ಯವನ್ನು—ಎಲ್ಲವನ್ನೂ “ಯೆಹೋವನ ಭಯದಲ್ಲಿ” ಕಲಿಸುವುದೇ ಅದರ ಉದ್ದೇಶವೆಂದು ಜ್ಞಾನೋಕ್ತಿ ಪುಸ್ತಕವು ತೋರಿಸುತ್ತದೆ. (ಜ್ಞಾನೋಕ್ತಿ 1:1-7; 2:1-14)—ಕಾ93 2⁄1, ಪುಟ 12.

▫ ವಿದ್ಯೆಯ ಯಾವ ಸಮತೋಲ ದೃಷ್ಟಿಯನ್ನು ಇಂದು ಯುವ ಜನರು ತಕ್ಕೊಳ್ಳಬೇಕು?

ಕ್ರೈಸ್ತರು ವಿದ್ಯೆಯನ್ನು ಒಂದು ಅಪೇಕ್ಷಿತ ಫಲಿತಾಂಶವನ್ನು ಗಳಿಸುವ ಸಾಧನವಾಗಿ ಪರಿಗಣಿಸಬೇಕು. ಈ ಕಡೇ ದಿನಗಳಲ್ಲಿ ಅವರ ಉದ್ದೇಶವು, ಯೆಹೋವನ ಸೇವೆಯನ್ನು ಅವರಿಗೆ ಸಾಧ್ಯವಿದ್ದರೆ, ಪೂರ್ಣ ಸಮಯದ ಶುಶ್ರೂಷೆಯಲ್ಲಿ, ಆದಷ್ಟು ಹೆಚ್ಚಾಗಿ ಮತ್ತು ಆದಷ್ಟು ಪರಿಣಾಮಕಾರಿಯಾಗಿ ಮಾಡುವುದೇ ಆಗಿದೆ.—ಕಾ93 2⁄1, ಪುಟ 18.

▫ ದಶಮಾಂಶಗಳನ್ನು ಕೊಡುವಂತೆ ಯೆಹೋವನು ಇಸ್ರಾಯೇಲ್‌ ಜನಾಂಗವನ್ನು ಆವಶ್ಯಪಡಿಸಿದ್ದೇಕೆ?

ಮೊದಲನೆಯದಾಗಿ, ಯೆಹೋವನ ಒಳ್ಳೇತನಕ್ಕಾಗಿ ಸ್ಪರ್ಶ್ಯ ರೀತಿಯಲ್ಲಿ ತಮ್ಮ ಗಣ್ಯತೆಯನ್ನು ತೋರಿಸಶಕ್ತರಾಗುವಂತೆಯೇ. ಎರಡನೆಯದಾಗಿ, ಲೇವಿಯರ ಬೆಂಬಲಕ್ಕಾಗಿ ಅವರು ಕಾಣಿಕೆಯನ್ನು ಕೊಡಶಕ್ತರಾಗುವಂತೆ, ಆಗ ಅವರು ನಿಯಮದ ಕಲಿಸುವಿಕೆಯೂ ಸೇರಿದ್ದ ತಮ್ಮ ಹಂಗುಗಳೆಡೆಗೆ ಏಕಾಗ್ರತೆಯನ್ನಿಡಲು ಸಾಧ್ಯವಾಗುತ್ತಿತ್ತು. (ನೋಡಿರಿ 2 ಪೂರ್ವಕಾಲ 17:7-9.)—ಕಾ93 3⁄1, ಪುಟ 9.

▫ ಕ್ರೈಸ್ತರು ತರುವಂತೆ ಆಮಂತ್ರಿಸಲ್ಪಟ್ಟಿರುವ ದಶಮಾಂಶವು ಯಾವುದು? (ಮಲಾಕಿಯ 3:10)

ದಶಮಾಂಶವು ನಾವು ಯೆಹೋವನಿಗೆ ತರುವ ಅಥವಾ ಆತನ ಸೇವೆಯಲ್ಲಿ ಉಪಯೋಗಿಸುವ ನಮ್ಮದಾದ ಒಂದು ಪಾಲನ್ನು ಪ್ರತಿನಿಧಿಸುತ್ತದೆ. ಇದು ಆತನಿಗಾಗಿ ನಮ್ಮ ಪ್ರೀತಿಯ ಮತ್ತು ನಾವಾತನಿಗೆ ಸೇರಿದವರೆಂಬ ನಮ್ಮ ಗ್ರಹಿಕೆಯ ಒಂದು ಗುರುತಾಗಿದೆ.—ಕಾ93 3⁄1, ಪುಟ 15.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ