ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ‘ನಂಬಿಗಸ್ತನಾದ ಆಳು’ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ!
    ಕಾವಲಿನಬುರುಜು—2004 | ಮಾರ್ಚ್‌ 1
    • 2 ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಬಗ್ಗೆ ಚರ್ಚಿಸಿದ ಬಳಿಕ ಕೂಡಲೆ ಯೇಸು ಕೆಟ್ಟ ಆಳಿನ ಬಗ್ಗೆ ಮಾತಾಡಿದನು. ಅವನು ಹೇಳಿದ್ದು: “ಆದರೆ ಆ ಕೆಟ್ಟ ಆಳು​—ನನ್ನ ಯಜಮಾನನು ತಡಮಾಡುತ್ತಾನೆ ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ತನ್ನ ಜೊತೆ ಆಳುಗಳನ್ನು ಹೊಡೆಯುವದಕ್ಕೆ ತೊಡಗಿ ಕುಡಿಕರ ಸಂಗಡ ತಿನ್ನುತ್ತಾ ಕುಡಿಯುತ್ತಾ ಇರುವದಾದರೆ, ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾಗಿ ಹೊಡಿಸಿ ಕಪಟಿಗಳಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.” (ಮತ್ತಾಯ 24:48-51) “ಆ ಕೆಟ್ಟ ಆಳು” ಎಂಬ ಅಭಿವ್ಯಕ್ತಿಯು ನಂಬಿಗಸ್ತನೂ ವಿವೇಕಿಯೂ ಆದ ಆಳಿನ ಕುರಿತು ಯೇಸು ಹೇಳಿದ ಹಿಂದಿನ ಮಾತುಗಳಿಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಹೌದು, ಆ “ಕೆಟ್ಟ ಆಳು” ನಂಬಿಗಸ್ತ ಆಳು ವರ್ಗದ ಸದಸ್ಯರೊಳಗಿಂದ ಬಂದಿದ್ದನು.a ಅದು ಹೇಗೆ?

  • ‘ನಂಬಿಗಸ್ತನಾದ ಆಳು’ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ!
    ಕಾವಲಿನಬುರುಜು—2004 | ಮಾರ್ಚ್‌ 1
    • 4 ಈ ಮಾಜಿ ಕ್ರೈಸ್ತರು “ಕೆಟ್ಟ ಆಳು” ಎಂದು ಕಟ್ಟಕಡೆಗೆ ಗುರುತಿಸಲ್ಪಟ್ಟರು ಮತ್ತು ಯೇಸು “ಅವರನ್ನು ಕಠಿಣವಾಗಿ” ಶಿಕ್ಷಿಸಿದನು. ಅದು ಹೇಗೆ? ಅವನು ಅವರನ್ನು ತಿರಸ್ಕರಿಸಿದನು ಮತ್ತು ಅವರು ತಮ್ಮ ಸ್ವರ್ಗೀಯ ನಿರೀಕ್ಷೆಯನ್ನು ಕಳೆದುಕೊಂಡರು. ಆದರೆ ಅವರು ಒಡನೆ ನಾಶಮಾಡಲ್ಪಡಲಿಲ್ಲ. ಅವರು ಪ್ರಥಮವಾಗಿ ಕ್ರೈಸ್ತ ಸಭೆಯ “ಹೊರಗೆ ಕತ್ತಲೆ”ಯಲ್ಲಿ ಗೋಳಾಟ ಮತ್ತು ಹಲ್ಲು ಕಡಿಯೋಣದ ಒಂದು ಅವಧಿಯನ್ನು ಸಹಿಸಿಕೊಳ್ಳಬೇಕಾಯಿತು. (ಮತ್ತಾಯ 8:12) ಆ ಆರಂಭದ ದಿನಗಳಿಂದೀಚೆಗೆ ಅಭಿಷಿಕ್ತರಲ್ಲಿ ಕೆಲವರು ತದ್ರೀತಿಯ ಮನೋಭಾವವನ್ನು ಪ್ರದರ್ಶಿಸುತ್ತಾ ಆ ‘ಕೆಟ್ಟ ಆಳಿನ’ ಜೊತೆಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. “ಬೇರೆ ಕುರಿ”ಗಳಲ್ಲಿ ಕೆಲವು ಮಂದಿ ಸಹ ಅವರ ಅಪನಂಬಿಗಸ್ತಿಕೆಯನ್ನು ಅನುಕರಿಸಿದ್ದಾರೆ. (ಯೋಹಾನ 10:16) ಕ್ರಿಸ್ತನ ಇಂತಹ ವೈರಿಗಳೆಲ್ಲರೂ ಅದೇ ರೀತಿಯ ಆಧ್ಯಾತ್ಮಿಕ ‘ಕತ್ತಲೆಯನ್ನು’ ಅನುಭವಿಸುತ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ