ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ‘ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡಿರಿ’
    ಕಾವಲಿನಬುರುಜು—2013 | ಡಿಸೆಂಬರ್‌ 15
    • 9. ಯೇಸು ಬಳಸಿದ ರೊಟ್ಟಿಯ ಬಗ್ಗೆ ಕೆಲವರಿಗೆ ಯಾವ ತಪ್ಪು ನೋಟವಿದೆ?

      9 ಈ ಸಂದರ್ಭದಲ್ಲಿ ಯೇಸು ‘ಇದು ನನ್ನ ದೇಹ’ ಎಂದು ಅಕ್ಷರಾರ್ಥವಾಗಿ ಹೇಳಿದನೆಂದು ಚರ್ಚ್‌ಗೆ ಹೋಗುವವರಲ್ಲಿ ಕೆಲವರು ಅನ್ನುತ್ತಾರೆ. ಆದ್ದರಿಂದ ರೊಟ್ಟಿಯು ಅದ್ಭುತಕರವಾಗಿ ಯೇಸುವಿನ ದೇಹವಾಗಿ ಮಾರ್ಪಟ್ಟಿತೆಂಬುದು ಅವರ ನಂಬಿಕೆ. ಆದರೆ ಇದು ನಿಜಾಂಶವಲ್ಲ.a ಯೇಸುವಿನ ದೇಹ ಆತನ ನಂಬಿಗಸ್ತ ಅಪೊಸ್ತಲರ ಕಣ್ಮುಂದೆಯೇ ಇತ್ತು. ಜೊತೆಗೆ ಅವರು ಸೇವಿಸಲಿದ್ದ ಹುಳಿಯಿಲ್ಲದ ರೊಟ್ಟಿಯೂ ಅಲ್ಲೇ ಇತ್ತು. ಯೇಸು ಎಷ್ಟೋ ಸಂದರ್ಭಗಳಲ್ಲಿ ಸಾಂಕೇತಿಕ ಅರ್ಥದಲ್ಲಿ ಮಾತಾಡಿದಂತೇ ಈ ಸಂದರ್ಭದಲ್ಲೂ ಮಾತಾಡುತ್ತಿದ್ದನು.​—ಯೋಹಾ. 2:19-21; 4:13, 14; 10:7; 15:1.

      10. ಕರ್ತನ ಸಂಧ್ಯಾ ಭೋಜನದಲ್ಲಿ ಬಳಸಲಾಗುವ ರೊಟ್ಟಿ ಏನನ್ನು ಪ್ರತಿನಿಧಿಸುತ್ತದೆ?

      10 ಅಪೊಸ್ತಲರ ಕಣ್ಮುಂದೆ ಇದ್ದ ಮತ್ತು ಸ್ವಲ್ಪ ಸಮಯದಲ್ಲೇ ಸೇವಿಸಲಿದ್ದ ರೊಟ್ಟಿಯು ಯೇಸುವಿನ ದೇಹವನ್ನು ಸೂಚಿಸಿತು. ಯಾವ ದೇಹ? ಒಂದೊಮ್ಮೆ ದೇವರ ಸೇವಕರು “ಕ್ರಿಸ್ತನ ದೇಹ” ಅಂದರೆ ಅಭಿಷಿಕ್ತ ಕ್ರೈಸ್ತರ ಸಭೆ ಎಂದು ಅರ್ಥಮಾಡಿಕೊಂಡಿದ್ದರು. ಯೇಸು ಸಂಧ್ಯಾ ಭೋಜನದಲ್ಲಿ ರೊಟ್ಟಿ ಮುರಿದಿದ್ದನು ಆದರೆ ಅವನ ಮರಣದ ಸಮಯದಲ್ಲಿ ಎಲುಬುಗಳು ಮುರಿಯಲ್ಪಟ್ಟಿರದಿದ್ದ ಕಾರಣ ಅವರು ಹಾಗೆ ಎಣಿಸಿದ್ದರು. (ಎಫೆ. 4:12; ರೋಮ. 12:4, 5; 1 ಕೊರಿಂ. 10:16, 17; 12:27) ಆದರೆ ಸಮಯಾನಂತರ ತರ್ಕಬದ್ಧವಾಗಿ ಯೋಚಿಸಿ, ಬೈಬಲ್‌ನಿಂದ ಅವರು ಕಂಡುಕೊಂಡದ್ದೇನೆಂದರೆ ರೊಟ್ಟಿಯು ಯೇಸುವಿನ ಮಾನವ ದೇಹವನ್ನು ಸೂಚಿಸುತ್ತದೆ. ಅವನು “ಶರೀರದಲ್ಲಿ ಬಾಧೆಪಟ್ಟನು.” ಅವನನ್ನು ಯಾತನಾ ಕಂಬಕ್ಕೂ ಜಡಿಯಲಾಯಿತು. ಆದ್ದರಿಂದ ಕರ್ತನ ಸಂಧ್ಯಾ ಭೋಜನದಲ್ಲಿ ಬಳಸಲಾಗುವ ರೊಟ್ಟಿ ನಮ್ಮ ‘ಪಾಪಗಳನ್ನು ಹೊತ್ತುಕೊಂಡ’ ಯೇಸುವಿನ ಭೌತಿಕ ದೇಹವನ್ನು ಸೂಚಿಸುತ್ತದೆ.​—1 ಪೇತ್ರ 2:21-24; 4:1; ಯೋಹಾ. 19:33-36; ಇಬ್ರಿ. 10:5-7.

  • ‘ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡಿರಿ’
    ಕಾವಲಿನಬುರುಜು—2013 | ಡಿಸೆಂಬರ್‌ 15
    • 15, 16. ಕರ್ತನ ಸಂಧ್ಯಾ ಭೋಜನದ ಸಮಯದಲ್ಲಿ ರೊಟ್ಟಿಯನ್ನು ಹೇಗೆ ಬಳಸಲಾಗುತ್ತದೆ?

      15 ಭಾಷಣಕಾರನು ಆ ಭಾಷಣದ ಕೊನೆಯ ಭಾಗದಲ್ಲಿ ಯೇಸು ತನ್ನ ಶಿಷ್ಯರಿಗೆ ಏನನ್ನು ಮಾಡಲು ಹೇಳಿದ್ದನೋ ಅದನ್ನು ಮಾಡುವ ಸಮಯ ಬಂದಿದೆ ಎಂದು ಹೇಳುವನು. ಈಗಾಗಲೇ ತಿಳಿಸಲಾದ ಎರಡು ಕುರುಹುಗಳನ್ನು ಅಂದರೆ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯವನ್ನು ಬಳಸಲಾಗುವುದು. ಈ ಕುರುಹುಗಳು ಭಾಷಣಕಾರನ ಹತ್ತಿರ ಮೇಜಿನ ಮೇಲೆ ಇರುವವು. ಯೇಸು ಈ ಆಚರಣೆಯನ್ನು ಆರಂಭಿಸಿದಾಗ ಏನು ಹೇಳಿದನು ಮತ್ತು ಮಾಡಿದನು ಎಂಬುದನ್ನು ತಿಳಿಸುವ ಬೈಬಲ್‌ ದಾಖಲೆಯ ಕಡೆಗೆ ಭಾಷಣಕಾರನು ಸಭಿಕರ ಗಮನ ಸೆಳೆಯುವನು. ಉದಾಹರಣೆಗೆ ಅವನು ಮತ್ತಾಯನ ವೃತ್ತಾಂತದಿಂದ ಈ ಭಾಗ ಓದಬಹುದು: “ಯೇಸು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅದನ್ನು ಮುರಿದು ಅವರಿಗೆ ಕೊಡುತ್ತಾ, ‘ತೆಗೆದುಕೊಳ್ಳಿರಿ, ತಿನ್ನಿರಿ. ಇದು ನನ್ನ ದೇಹವನ್ನು ಸೂಚಿಸುತ್ತದೆ’ ಎಂದು ಹೇಳಿದನು.” (ಮತ್ತಾ. 26:26) ಯೇಸು ತನ್ನ ಎರಡೂ ಬದಿಗಳಲ್ಲಿ ಕೂತುಕೊಂಡಿದ್ದ ಅಪೊಸ್ತಲರಿಗೆ ಹುಳಿಯಿಲ್ಲದ ರೊಟ್ಟಿಯನ್ನು ದಾಟಿಸಲಾಗುವಂತೆ ಅದನ್ನು ಮುರಿದನು. ಏಪ್ರಿಲ್‌ 14ರಂದು ನಡೆಯುವ ಕೂಟದಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ಕೆಲವು ಚೂರು ಮಾಡಿ ತಟ್ಟೆಗಳಲ್ಲಿ ಇಟ್ಟಿರುವುದನ್ನು ನೀವು ನೋಡುವಿರಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ