ಶಿಷ್ಯರನ್ನಾಗಿ ಮಾಡುವುದರಲ್ಲಿ ಆನಂದವನ್ನು ಕಂಡುಕೊಳ್ಳುವ ವಿಧ
ಒಬ್ಬ ವ್ಯಕ್ತಿಯು ಅನುಭವಿಸಸಾಧ್ಯವಿರುವ ಪರಮ ಆನಂದಗಳಲ್ಲಿ ಒಂದು, ದೇವರೊಂದಿಗೆ ಜೊತೆಕೆಲಸಗಾರನಾಗಿರುವ ಆನಂದವಾಗಿದೆ. ಇಂದು, ನೀತಿಯ ಪ್ರವೃತ್ತಿಯುಳ್ಳ ಜನರನ್ನು ದೇವರ ಸಭೆಯೊಳಕ್ಕೆ ಒಟ್ಟುಗೂಡಿಸುವುದು ಮತ್ತು ಈಗ ಕ್ರೈಸ್ತರೋಪಾದಿ ಜೀವಿತವನ್ನು ಜೀವಿಸಲಿಕ್ಕಾಗಿಯೂ ಒಂದು ಹೊಸ ಲೋಕದೊಳಗೆ ಪಾರಾಗಲಿಕ್ಕಾಗಿಯೂ ಅವರಿಗೆ ತರಬೇತಿ ನೀಡುವುದನ್ನು ದೇವರ ಕೆಲಸವು ಒಳಗೊಳ್ಳುತ್ತದೆ.—ಮೀಕ 4:1-4; ಮತ್ತಾಯ 28:19, 20; 2 ಪೇತ್ರ 3:13.
1980ರಿಂದ, ಲ್ಯಾಟಿನ್ ಅಮೆರಿಕದಲ್ಲಿ ಹತ್ತು ಲಕ್ಷ ಜನರು ಯೇಸು ಕ್ರಿಸ್ತನ ಶಿಷ್ಯರಾಗಿ ಪರಿಣಮಿಸಿರುವುದನ್ನು ಕಾಣುವುದು, ಯೆಹೋವನ ಸಾಕ್ಷಿಗಳಿಗೆ ಮಹಾ ಆನಂದದ ಒಂದು ಮೂಲವಾಗಿದೆ. ಅನೇಕರು ಬೈಬಲನ್ನು ಗೌರವಿಸಿ, ಅದನ್ನು ನಂಬುವ, ಫಲಭರಿತವಾದ ಈ ಕ್ಷೇತ್ರದಲ್ಲಿ, ಕೆಲವು ಪೂರ್ಣ ಸಮಯದ ಶುಶ್ರೂಷಕರು, ಡಸನ್ಗಟ್ಟಲೆ ಜನರು ತಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ ಸಹಾಯ ಮಾಡಲು ಶಕ್ತರಾಗಿದ್ದಾರೆ. ಅಷ್ಟೊಂದು ಅನುಭವದೊಂದಿಗೆ, ಶಿಷ್ಯರನ್ನಾಗಿ ಮಾಡುವ ಆನಂದದ ಕುರಿತಾಗಿ ಅವರು ಬಹುಶಃ ಏನನ್ನಾದರೂ ನಮಗೆ ಹೇಳಬಲ್ಲರು. ನೀವು ಜೀವಿಸುವಂತಹ ಸ್ಥಳದಲ್ಲಿ ಶಿಷ್ಯರನ್ನಾಗಿ ಮಾಡುವುದರಲ್ಲಿ ಆನಂದವನ್ನು ಕಂಡುಕೊಳ್ಳಲಿಕ್ಕಾಗಿ, ಅವರ ಸಲಹೆಗಳಲ್ಲಿ ಕೆಲವು ನಿಮಗೆ ಸಹಾಯ ಮಾಡಬಹುದು.
ಸಂಭಾವ್ಯ “ಕುರಿಗಳ”ನ್ನು ಗುರುತಿಸುವುದು
ಯೇಸುವು ತನ್ನ ಅಪೊಸ್ತಲರನ್ನು ಸಾರಲಿಕ್ಕಾಗಿ ಕಳುಹಿಸಿದಾಗ, “ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ” ಎಂದು ಹೇಳಿದನು. (ಮತ್ತಾಯ 10:11) ನೀವು ಜನರನ್ನು ಭೇಟಿ ಮಾಡುತ್ತಾ ಹೋಗುವಾಗ, ಯಾರಿಗೆ ಆತ್ಮಿಕವಾಗಿ ಸಹಾಯ ಮಾಡಸಾಧ್ಯವಿದೆ ಎಂಬುದನ್ನು ನೀವು ಹೇಗೆ ಗುರುತಿಸಬಲ್ಲಿರಿ? 50ಕ್ಕಿಂತಲೂ ಹೆಚ್ಚಿನ ವರ್ಷಗಳಿಂದ ಒಬ್ಬ ಪೂರ್ಣ ಸಮಯದ ಶುಶ್ರೂಷಕರಾಗಿರುವ ಎಡ್ವರ್ಡ್ ಹೇಳುವುದು: “ಅವರು ಇದನ್ನು ತಮ್ಮ ಶ್ರದ್ಧಾಪೂರ್ವಕ ಪ್ರಶ್ನೆಗಳ ಮೂಲಕ ಮತ್ತು ಶಾಸ್ತ್ರವಚನಗಳಿಂದ ಉತ್ತರಗಳು ಕೊಡಲ್ಪಡುವಾಗ ತಮ್ಮ ಸಂತೃಪ್ತಿಯ ಮೂಲಕ ಪ್ರದರ್ಶಿಸುತ್ತಾರೆ.” ಕ್ಯಾರಲ್ ಕೂಡಿಸುವುದು: “ವ್ಯಕ್ತಿಯೊಬ್ಬನು ಒಂದು ವೈಯಕ್ತಿಕ ಸಮಸ್ಯೆಯ ಅಥವಾ ಚಿಂತೆಯ ಕುರಿತು ನನ್ನ ಬಳಿ ಹೇಳಿಕೊಳ್ಳುವುದಾದರೆ, ಅದು ನಿಜವಾಗಿಯೂ ಸಹಾಯಕ್ಕಾಗಿರುವ ಒಂದು ಬೇಡಿಕೆಯಾಗಿದೆ. ವಾಚ್ ಟವರ್ ಸೊಸೈಟಿಯ ಪ್ರಕಾಶನಗಳಲ್ಲಿರುವ ಸಹಾಯಕರ ಮಾಹಿತಿಯನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಅಂತಹ ವೈಯಕ್ತಿಕ ಆಸಕ್ತಿಯು ಅನೇಕವೇಳೆ ಒಂದು ಬೈಬಲ್ ಅಭ್ಯಾಸಕ್ಕೆ ನಡಿಸುತ್ತದೆ.” ಆದರೂ, ಪ್ರಾಮಾಣಿಕ ಜನರು ಯಾವಾಗಲೂ ಸುಲಭವಾಗಿ ಗುರುತಿಸಲ್ಪಡುವುದಿಲ್ಲ. ಲೂಈಸ್ ಹೇಳುವುದು: “ಬಹಳ ಆಸಕ್ತರಾಗಿ ಕಂಡುಬಂದಂತಹ ಕೆಲವರು ಆಸಕ್ತಿಯೇ ಇಲ್ಲದವರಂತೆ ಕಂಡುಬರುತ್ತಾರೆ, ಆದರೆ ಆರಂಭದಲ್ಲಿ ವಿರೋಧಿಸುವವರಂತೆ ಕಂಡುಬಂದಂತಹ ಕೆಲವರು, ಬೈಬಲು ವಾಸ್ತವವಾಗಿ ಹೇಳುವಂತಹ ವಿಷಯಗಳನ್ನು ಕೇಳಿದಾಗ ಬದಲಾಗಿದ್ದಾರೆ.” ಲ್ಯಾಟಿನ್ ಅಮೆರಿಕದ ಅನೇಕ ಜನರು ಬೈಬಲನ್ನು ಗೌರವಿಸುವುದರಿಂದ, ಅವನು ಕೂಡಿಸುವುದು, “ನಾನು ಅವರಿಗೆ ಬೈಬಲು ಏನನ್ನು ಕಲಿಸುತ್ತದೆ ಎಂಬುದನ್ನು ತೋರಿಸಿದ ಬಳಿಕ ಅವರು ಸಿದ್ಧಮನಸ್ಕರಾಗಿ ಅದನ್ನು ಅಂಗೀಕರಿಸುವಾಗ, ಯಾರಿಗೆ ಆತ್ಮಿಕವಾಗಿ ಸಹಾಯ ಮಾಡಸಾಧ್ಯವಿದೆ ಎಂಬುದನ್ನು ನಾನು ಗುರುತಿಸುತ್ತೇನೆ.” ಆತ್ಮಿಕವಾಗಿ ಪ್ರಗತಿ ಮಾಡುವಂತೆ ಅಂತಹ “ಯೋಗ್ಯ”ರಿಗೆ ಸಹಾಯ ಮಾಡುವುದು, ನಿಜವಾದ ಆನಂದ ಮತ್ತು ಸಂತೃಪ್ತಿಯನ್ನು ತರುತ್ತದೆ. ನೀವು ಇದನ್ನು ಹೇಗೆ ಮಾಡಬಲ್ಲಿರಿ?
ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದು
‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನಿಂದ ಉತ್ಪಾದಿಸಲ್ಪಡುವ ಬೈಬಲ್ ಅಭ್ಯಾಸ ಸಹಾಯಕಗಳನ್ನು ಉಪಯೋಗಿಸುವುದು, ಸಾಮಾನ್ಯವಾಗಿ ಜನರು ಬೈಬಲ್ ಸತ್ಯತೆಯನ್ನು ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡುವ ಅತ್ಯುತ್ತಮ ವಿಧವಾಗಿದೆ. (ಮತ್ತಾಯ 24:45) ಅಂತಹ ಬೈಬಲ್ ಅಭ್ಯಾಸ ಸಹಾಯಕಗಳ ಮೌಲ್ಯಕ್ಕಾಗಿ ನೀವು ಹೇಗೆ ಪರಿಗಣನೆಯನ್ನು ವರ್ಧಿಸಬಲ್ಲಿರಿ? ಎಡ್ವರ್ಡ್ ಹೇಳುವುದು: “ಜನರ ಪರಿಸ್ಥಿತಿಗಳು, ವ್ಯಕ್ತಿತ್ವಗಳು, ಮತ್ತು ದೃಷ್ಟಿಕೋನಗಳು ತೀರ ಹೆಚ್ಚು ಭಿನ್ನವಾಗಿರುವುದರಿಂದ, ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ನಾನು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇನೆ.” ಒಂದೇ ರೀತಿಯ ವಿಧಾನವನ್ನು ನೀವು ಪ್ರತಿಯೊಬ್ಬರೊಂದಿಗೆ ಉಪಯೋಗಿಸಲು ಸಾಧ್ಯವಿಲ್ಲ.
ಕೆಲವರೊಂದಿಗೆ, ಬೈಬಲ್ ಅಭ್ಯಾಸದ ಪಠ್ಯಪುಸ್ತಕವನ್ನು ಪರಿಚಯಿಸುವುದಕ್ಕೆ ಮೊದಲು, ಶಾಸ್ತ್ರವಚನಗಳ ಅನೇಕ ಅನೌಪಚಾರಿಕ ಚರ್ಚೆಗಳನ್ನು ಮಾಡುವುದು ಅಗತ್ಯವಾಗಿರಬಹುದು. ಆದರೂ, ಒಬ್ಬ ಮಿಷನೆರಿ ದಂಪತಿಗಳು ವರದಿಸುವುದು: “ನಾವು ಸಾಮಾನ್ಯವಾಗಿ ಪ್ರಥಮ ಭೇಟಿಯಲ್ಲೇ ಒಂದು ಅಭ್ಯಾಸಕ್ಕಾಗಿ ಕೇಳಿಕೊಳ್ಳುತ್ತೇವೆ.” ತದ್ರೀತಿಯಲ್ಲಿ, ಸಮರ್ಪಣೆಯ ಹಂತವನ್ನು ತಲಪುವಂತೆ 55 ಜನರಿಗೆ ಸಹಾಯ ಮಾಡಿರುವ ಸಾಕ್ಷಿಯೊಬ್ಬಳು ಹೇಳುವುದು: “ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದಲ್ಲಿರುವ ಮಾಹಿತಿಯನ್ನು ನೇರವಾಗಿ ಪರಿಗಣಿಸಲಾರಂಭಿಸುವುದು, ಬೈಬಲ್ ಅಭ್ಯಾಸಗಳನ್ನು ಆರಂಭಿಸುವ ನನ್ನ ಪ್ರಮುಖ ವಿಧಾನವಾಗಿದೆ.” ಯಾವುದೇ ವಿಷಯವನ್ನು ಅಭ್ಯಾಸಿಸುವ ವಿಚಾರವನ್ನು ಕೆಲವರು ಇಷ್ಟಪಡುವುದಿಲ್ಲವಾದರೂ, ಜೀವಿತದಲ್ಲಿ ತಮಗೆ ಸಹಾಯ ಮಾಡುವುದೆಂದು ಅವರು ನಂಬುವ ಯಾವುದೇ ವಿಷಯವನ್ನು ಅಭ್ಯಾಸಿಸಲು ಇತರರು ಆತುರರಾಗಿದ್ದಾರೆ. ಮನೆಯಲ್ಲಿ ಉಚಿತ ಬೈಬಲ್ ತರಗತಿಗಳಿಗಾಗಿ ಕೇಳಿಕೊಳ್ಳುವುದು, ಅನೇಕವೇಳೆ ಇವರಿಗೆ ಆಕರ್ಷಕವಾಗಿ ಧ್ವನಿಸುತ್ತದೆ. ಕೆಲವು ಮಿಷನೆರಿಗಳು ಬೈಬಲ್ ಅಭ್ಯಾಸವನ್ನು ವಿವರಿಸಿ, ತದನಂತರ ಹೀಗೆ ಹೇಳುತ್ತಾರೆ: “ನಾವು ಇದನ್ನು ಹೇಗೆ ಮಾಡುತ್ತೇವೆಂಬುದನ್ನು ತೋರಿಸಲು ನಾನು ಬಯಸುತ್ತೇನೆ. ನೀವು ಅದನ್ನು ಇಷ್ಟಪಡುವುದಾದರೆ ಮುಂದುವರಿಸಸಾಧ್ಯವಿದೆ. ನಿಮಗೆ ಅದು ಇಷ್ಟವಾಗುವುದಿಲ್ಲವಾದರೆ, ಅದು ನಿಮ್ಮ ಆಯ್ಕೆ.” ಅದು ಈ ರೀತಿಯಲ್ಲಿ ನೀಡಲ್ಪಡುವಾಗ, ಜನರು ಅಂಗೀಕರಿಸಲು ಭಯಪಡುವುದಿಲ್ಲ.
ಅನೇಕ ಬಡವರಿಗೂ ಕಡಿಮೆ ಶಿಕ್ಷಣವಿರುವವರಿಗೂ ಸಹಾಯ ಮಾಡಿರುವ ಇನ್ನೊಬ್ಬ ಸಾಕ್ಷಿಯು ಹೇಳುವುದು: “ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಕಿರುಹೊತ್ತಗೆಗಳು ವಿಶೇಷವಾಗಿ ಪ್ರಯೋಜನಕರವಾದವುಗಳಾಗಿ ನಾನು ಕಂಡುಕೊಂಡಿದ್ದೇನೆ.” ಪೂರ್ಣ ಸಮಯದ ಬೋಧಕರು ಯಾವುದೇ ಪ್ರಕಾಶನವನ್ನು ಉಪಯೋಗಿಸಲಿ, ಅವರು ಬೈಬಲಿಗೆ ಪ್ರಮುಖ ಒತ್ತನ್ನು ಕೊಡಲು ಪ್ರಯತ್ನಿಸುತ್ತಾರೆ. ಕಾರೋಲ ಹೇಳುವುದು: “ಪ್ರಥಮ ಅಭ್ಯಾಸದಲ್ಲಿ, ನಾನು ಚಿತ್ರಗಳನ್ನು ಹಾಗೂ ಸುಮಾರು ಐದು ಶಾಸ್ತ್ರವಚನಗಳನ್ನು ಮಾತ್ರವೇ ಉಪಯೋಗಿಸುತ್ತೇನೆ; ಇದರಿಂದ ಪ್ರಮುಖ ಅಂಶಗಳು ಸ್ಪಷ್ಟವಾಗುತ್ತವೆ ಮತ್ತು ಬೈಬಲು ಕಷ್ಟಕರವಾಗಿ ಕಂಡುಬರುವುದಿಲ್ಲ.”
ಆಸಕ್ತಿಯನ್ನು ಸಜೀವವಾಗಿಡುವುದು
ಜನರು ಪ್ರಗತಿಯ ಅನಿಸಿಕೆಯನ್ನು ಆನಂದಿಸುತ್ತಾರೆ, ಆದುದರಿಂದ ಜೆನಿಫರ್ ಶಿಫಾರಸ್ಸು ಮಾಡುವುದು: “ಅಭ್ಯಾಸವನ್ನು ಸ್ವಾರಸ್ಯಕರವಾದದ್ದಾಗಿ ಮಾಡಿರಿ. ಅಭ್ಯಾಸವನ್ನು ಪ್ರಗತಿಪರವಾಗುವಂತೆ ಮಾಡಿರಿ.” ಅಭ್ಯಾಸವನ್ನು ಕ್ರಮವಾಗಿ—ವಾರಗಳನ್ನು ತಪ್ಪಿಸದೇ—ನಡೆಸುವುದು ಸಹ, ಅವರು ಪ್ರಗತಿಯನ್ನು ಮಾಡುತ್ತಿದ್ದಾರೆ ಎಂಬ ಅನಿಸಿಕೆ ಅವರಿಗಾಗುವಂತೆ ಸಹಾಯ ಮಾಡುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಬೆಳೆಸಲ್ಪಟ್ಟ ಒಬ್ಬ ವಿಶೇಷ ಪಯನೀಯರನು, ಕಡಿಮೆ ಶಿಕ್ಷಣವಿರುವವರು ಸಹ ಪ್ರಗತಿಮಾಡಸಾಧ್ಯವಾಗುವಂತೆ, ವಿವರಣೆಗಳನ್ನು ಸರಳೀಕರಿಸುವುದರ ಹಾಗೂ ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸುವುದರ ಪ್ರಮುಖತೆಯನ್ನು ವಿವರಿಸುತ್ತಾನೆ. ಅವನು ಹೇಳುವುದು: “ನನ್ನ ಹಳ್ಳಿಯಲ್ಲಿ, ಬೀಜಗಳನ್ನು ನೆಟ್ಟ ನಂತರ ನಾವು ನೆಲಕ್ಕೆ ನೀರನ್ನು ಚಿಮುಕಿಸಬೇಕಿತ್ತು. ನಾವು ಹೊಲಗಳನ್ನು ನೀರಿನಿಂದ ತುಂಬಿಸಿದ್ದಲ್ಲಿ, ಆ ಮಣ್ಣು ಒಂದು ಗಟ್ಟಿಯಾದ ಹೊರಪದರವನ್ನು ರೂಪಿಸುತ್ತಿತ್ತು, ಇದರಿಂದಾಗಿ ಮೊಳೆಯುತ್ತಿರುವ ಬೀಜಗಳು ಅದನ್ನು ಭೇದಿಸಲಸಾಧ್ಯವಾಗಿ ನಶಿಸಿಹೋದವು. ತದ್ರೀತಿಯಲ್ಲಿ ನೀವು ಹೊಸದಾಗಿ ಆಸಕ್ತರಾಗಿರುವವರ ಮೇಲೆ ಅನೇಕ ಅಂಶಗಳ ಸುರಿಮಳೆಯನ್ನು ಹರಿಸುವಲ್ಲಿ, ಅದು ತೀರ ಕಷ್ಟಕರವಾದದ್ದಾಗಿ ಕಂಡುಬರಬಹುದು ಹಾಗೂ ಅವರು ಬಿಟ್ಟುಬಿಡಬಹುದು.” ವಿಚಾರಶೀಲ ಮನಸ್ಸಿನವರಾದ ಅನೇಕ ಜನರು ಸಹ, ಅವರು ಜ್ಞಾನದಲ್ಲಿ ಪ್ರಗತಿಯನ್ನು ಮಾಡಬೇಕಾದಲ್ಲಿ, ಒಮ್ಮೆಗೆ ಒಂದು ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸಲು ಕಲಿಯಬೇಕು. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ.”—ಯೋಹಾನ 16:12.
ಆಸಕ್ತಿಯನ್ನು ಸಜೀವವಾಗಿಡಲಿಕ್ಕಾಗಿರುವ ಇನ್ನೊಂದು ಮಾರ್ಗವು, ನೀವು ಯಾರನ್ನು ಭೇಟಿ ಮಾಡುತ್ತೀರೊ ಅವರನ್ನು ನೀವು ಹೋದ ಬಳಿಕ ದೇವರ ವಾಕ್ಯದ ಕುರಿತಾಗಿ ಯೋಚಿಸುವುದನ್ನು ಮುಂದುವರಿಸುವಂತೆ ಪ್ರೋತ್ಸಾಹಿಸುವುದಾಗಿದೆ. ಯೊಲಾಂಡ ಶಿಫಾರಸ್ಸು ಮಾಡುವುದು: “ಒಂದು ಪ್ರಶ್ನೆಯನ್ನು ಉತ್ತರಿಸದೆ ಬಿಡಿರಿ. ಬೈಬಲಿನ ಒಂದು ಭಾಗವನ್ನು ಓದುವುದು ಅಥವಾ ಅವರಿಗೆ ಸಂಬಂಧಪಟ್ಟ ವಿಷಯವನ್ನು ಪರಿಶೋಧಿಸುವುದರಂತಹ, ಸ್ವಲ್ಪ ಮನೆಕೆಲಸವನ್ನು ಅವರಿಗೆ ಮಾಡಲು ಕೊಡಿರಿ.”
ಯೆಹೋವನಿಗಾಗಿ ಪ್ರೀತಿಯನ್ನು ವಿಕಸಿಸಿಕೊಳ್ಳುವುದು
ನೀವು ನಿಮ್ಮ ವಿದ್ಯಾರ್ಥಿಗಳಿಗೆ ‘ವಾಕ್ಯವನ್ನು ಕೇಳುವವರು ಮಾತ್ರವೇ ಆಗಿರದೆ, ವಾಕ್ಯದ ಪ್ರಕಾರ ನಡೆಯುವವರಾಗಿ’ ಪರಿಣಮಿಸಲು ಸಹಾಯ ಮಾಡುವಾಗ, ನಿಮ್ಮ ಆನಂದವು ಅಧಿಕಗೊಳ್ಳುವುದು. (ಯಾಕೋಬ 1:22) ನೀವು ಅದನ್ನು ಹೇಗೆ ಮಾಡಬಲ್ಲಿರಿ? ನಿಜ ಕ್ರೈಸ್ತರು ಯೆಹೋವನಿಗಾಗಿರುವ ಪ್ರೀತಿಯಿಂದ ಪ್ರಚೋದಿಸಲ್ಪಡುತ್ತಾರೆ. ಮೆಕ್ಸಿಕೊದಿಂದ ಬಂದ ಪೇತ್ರೋ ವಿವರಿಸುವುದು: “ಜನರು ತಾವು ತಿಳಿದಿಲ್ಲದ ವ್ಯಕ್ತಿಯೊಬ್ಬನನ್ನು ಪ್ರೀತಿಸಲಾರರು, ಆದುದರಿಂದ ಅಭ್ಯಾಸದ ಅತ್ಯಾರಂಭದಿಂದಲೇ ನಾನು ಅವರಿಗೆ ಬೈಬಲಿನಿಂದ ದೇವರ ಹೆಸರನ್ನು ಕಲಿಸುತ್ತೇನೆ, ಮತ್ತು ಯೆಹೋವನ ಗುಣಗಳನ್ನು ಒತ್ತಿಹೇಳಲಿಕ್ಕಾಗಿರುವ ಸಂದರ್ಭಗಳಿಗಾಗಿ ನಾನು ಹುಡುಕುತ್ತೇನೆ.” ಸಂಭಾಷಣೆಯಲ್ಲಿ, ಆತನ ಕಡೆಗಿರುವ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ನೀವು ಯೆಹೋವನಿಗಾಗಿ ಗಣ್ಯತೆಯನ್ನು ಬೆಳೆಸಸಾಧ್ಯವಿದೆ. ಎಲಿಸಬೆತ್ ಹೇಳುವುದು: “ನಾನು ಯಾವಾಗಲೂ ಯೆಹೋವನ ಒಳ್ಳೆಯತನವನ್ನು ಉಲ್ಲೇಖಿಸಲು ಪ್ರಯತ್ನಿಸುತ್ತೇನೆ. ನನ್ನ ಅಭ್ಯಾಸಗಳ ಸಮಯದಲ್ಲಿ, ನಾನು ಒಂದು ಸುಂದರವಾದ ಹೂವು, ಆಕರ್ಷಕವಾದ ಒಂದು ಪಕ್ಷಿ, ಅಥವಾ ಆಟವಾಡುವ ಬೆಕ್ಕಿನ ಮರಿಯೊಂದನ್ನು ನೋಡುವುದಾದರೆ, ನಾನು ಯಾವಾಗಲೂ ಅದು ಯೆಹೋವನ ಕೆಲಸವಾಗಿದೆ ಎಂದು ಉಲ್ಲೇಖಿಸುತ್ತೇನೆ.” “ಅದರ ವಾಸ್ತವಿಕತೆಯ ಕುರಿತು ನಿಮಗೆ ತಿಳಿದಿರುವಂತಹ ವಿಷಯದೋಪಾದಿ ದೇವರ ವಾಗ್ದಾನಿತ ಹೊಸ ಲೋಕದ ಕುರಿತು ಮಾತಾಡಿರಿ” ಎಂದು ಜೆನಿಫರ್ ಸಲಹೆ ನೀಡುತ್ತಾಳೆ. “ಹೊಸ ಲೋಕದಲ್ಲಿ ಏನನ್ನು ಮಾಡಲು ಅಪೇಕ್ಷಿಸುತ್ತಾರೆಂದು ಅವರನ್ನು ಕೇಳಿರಿ.”
ವ್ಯಕ್ತಿಯೊಬ್ಬನು ಯೆಹೋವನ ಕುರಿತಾಗಿ ತಾನು ಕಲಿಯುವಂತಹ ವಿಷಯದ ಮೇಲೆ ಪರಿಗಣನಾತ್ಮಕವಾಗಿ ಧ್ಯಾನಿಸುವಾಗ, ಅದು ಅವನ ಹೃದಯದೊಳಗೆ ಇಳಿಯುತ್ತದೆ ಮತ್ತು ಕ್ರಿಯೆಗೈಯುವಂತೆ ಅವನನ್ನು ಪ್ರಚೋದಿಸುತ್ತದೆ. ಆದರೆ ಅವನು ವಿಷಯವನ್ನು ಜ್ಞಾಪಿಸಿಕೊಳ್ಳುವ ಹೊರತು ಅದನ್ನು ಧ್ಯಾನಿಸಲಾರನು. ಪ್ರತಿಯೊಂದು ಅಭ್ಯಾಸದ ಬಳಿಕ, ಮೂರು ಅಥವಾ ನಾಲ್ಕು ಪ್ರಮುಖ ಅಂಶಗಳ ಸಂಕ್ಷಿಪ್ತ ಪುನರ್ವಿಮರ್ಶೆಯು, ಜ್ಞಾಪಿಸಿಕೊಳ್ಳುವುದಕ್ಕೆ ಸಹಾಯಕವಾಗಿದೆ. ಅನೇಕ ಬೈಬಲ್ ಬೋಧಕರು, ಹೊಸಬರು ತಮ್ಮ ಬೈಬಲುಗಳ ಹಿಂದೆ ಒಂದು ಟಿಪ್ಪಣಿಯ ಜೊತೆಗೆ ಮುಖ್ಯ ಶಾಸ್ತ್ರವಚನಗಳನ್ನು ಬರೆದುಕೊಳ್ಳುವಂತೆ ಮಾಡುತ್ತಾರೆ. ಪುನರ್ವಿಮರ್ಶೆಯ ಇನ್ನೊಂದು ಪ್ರಯೋಜನವನ್ನು ಇಂಗ್ಲೆಂಡ್ನ ಒಬ್ಬ ಮಿಷನೆರಿಯು ವಿವರಿಸುತ್ತಾಳೆ: “ಆ ಮಾಹಿತಿಯು ಅವರಿಗೆ ಹೇಗೆ ಪ್ರಯೋಜನ ನೀಡಿದೆ ಎಂದು ನಾನು ಅವರಿಗೆ ಕೇಳುತ್ತೇನೆ. ಇದು ಅವರನ್ನು ಯೆಹೋವನ ಮಾರ್ಗಗಳು ಹಾಗೂ ನಿಯಮಗಳ ಕುರಿತಾಗಿ ಗಣ್ಯತಾಪೂರ್ವಕವಾಗಿ ಧ್ಯಾನಿಸುವಂತೆ ಮಾಡುತ್ತದೆ.”
ಗಿಲ್ಯಡ್ನ ಮೂರನೆಯ ತರಗತಿಯಿಂದ ಪದವಿ ಪ್ರಾಪ್ತಿಹೊಂದಿದ ಒಬ್ಬ ನಂಬಿಗಸ್ತ ಸಾಕ್ಷಿಯು ಹೇಳುವುದು: “ನಾವು ಉತ್ಸಾಹಿಗಳಾಗಿರಬೇಕು. ನಾವು ಏನನ್ನು ಬೋಧಿಸುತ್ತೇವೊ ಅದನ್ನು ನಾವು ನಂಬುತ್ತೇವೆಂದು ನಮ್ಮ ವಿದ್ಯಾರ್ಥಿಗಳು ಗ್ರಹಿಸಬೇಕು.” ನೀವು ಅದನ್ನು ವ್ಯಕ್ತಪಡಿಸುವುದಾದರೆ, ನಿಮ್ಮನ್ನು “ಕಾರ್ಯದ ಪ್ರಕಾರ ನಡೆಯುವ” ಸಂತೋಷಿಗಳನ್ನಾಗಿ ಮಾಡಿರುವ ಆ ನಂಬಿಕೆಯು ವ್ಯಾಪಕವಾಗಿ ಹರಡಸಾಧ್ಯವಿದೆ.—ಯಾಕೋಬ 1:25, NW.
“ಅವರ ಪ್ರಾರ್ಥನೆಗಳಿಗೆ ಉತ್ತರಗಳನ್ನು ಗ್ರಹಿಸುವಂತೆ ನಾನು ಅವರಿಗೆ ಸಹಾಯ ಮಾಡುವುದಾದರೆ, ಜನರು ದೇವರಿಗೆ ಹೆಚ್ಚು ನಿಕಟವಾಗುತ್ತಾರೆಂದು ನನಗೆ ಗೊತ್ತಾಗಿದೆ” ಎಂದು, ಯೆಹೋವನನ್ನು ಆರಾಧಿಸುವಂತೆ ಅನೇಕರಿಗೆ ಸಹಾಯ ಮಾಡಿರುವ ಸಾಕ್ಷಿಯೊಬ್ಬಳು ಹೇಳುತ್ತಾಳೆ. “ನಾನು ಅವರಿಗೆ ನನ್ನ ಸ್ವಂತ ಅನುಭವದಿಂದ ಉದಾಹರಣೆಗಳನ್ನು ಕೊಡುತ್ತೇನೆ, ಅವುಗಳಲ್ಲಿ ಒಂದು ಹೀಗಿದೆ: ನನ್ನ ಸಹಭಾಗಿಯೂ ನಾನೂ, ಪಯನೀಯರರೋಪಾದಿ ಒಂದು ಹೊಸ ನೇಮಕಕ್ಕೆ ಆಗಮಿಸಿದಾಗ, ನಮ್ಮಲ್ಲಿ ಕೆಲವು ತರಕಾರಿಗಳು, ಒಂದು ಪೊಟ್ಟಣ ಮಾರ್ಜರಿನ್ ಇತ್ತು, ಮತ್ತು ಹಣವಿರಲಿಲ್ಲ. ನಾವು ಆಹಾರವನ್ನು ರಾತ್ರಿಯೂಟಕ್ಕೇ ಮುಗಿಸಿ ಹೇಳಿದ್ದು, ‘ಈಗ ನಾಳೆಗಾಗಿ ನಮ್ಮಲ್ಲಿ ಏನೂ ಇಲ್ಲ.’ ನಾವು ಅದರ ಕುರಿತಾಗಿ ಪ್ರಾರ್ಥಿಸಿ, ನಿದ್ರಿಸಿದೆವು. ಮರುದಿನ ಮುಂಜಾವಿನಲ್ಲಿ ಒಬ್ಬ ಸ್ಥಳಿಕ ಸಾಕ್ಷಿಯು ಭೇಟಿ ಮಾಡಿದಳು ಮತ್ತು ಹೀಗೆ ಹೇಳುವ ಮೂಲಕ ಸ್ವತಃ ಪರಿಚಯಿಸಿಕೊಂಡಳು, ‘ಪಯನೀಯರರನ್ನು ಕಳುಹಿಸುವಂತೆ ನಾನು ಯೆಹೋವನ ಬಳಿ ಪ್ರಾರ್ಥಿಸಿದೆ. ಈಗ ನಾನು ದಿನದ ಬಹುತೇಕ ಸಮಯ ನಿಮ್ಮೊಂದಿಗೆ ಜೊತೆಗೂಡಬಲ್ಲೆ, ಆದರೆ ನಾನು ದೂರದಲ್ಲಿ ವಾಸಿಸುವುದರಿಂದ, ನಾನು ನಿಮ್ಮೊಂದಿಗೆ ಮಧ್ಯಾಹ್ನದ ಊಟವನ್ನು ಮಾಡಬೇಕಾಗಿದೆ, ಆದುದರಿಂದ ನಮ್ಮೆಲ್ಲರಿಗಾಗಿ ನಾನು ಈ ಆಹಾರವನ್ನು ತಂದಿದ್ದೇನೆ.’ ಅದು ದೊಡ್ಡ ಪ್ರಮಾಣದ ದನದ ಮಾಂಸ ಹಾಗೂ ತರಕಾರಿಗಳಾಗಿತ್ತು. ನಾವು ಯೆಹೋವನ ರಾಜ್ಯವನ್ನು ಪ್ರಥಮವಾಗಿ ಹುಡುಕುವಲ್ಲಿ, ಆತನು ನಮ್ಮನ್ನು ಎಂದಿಗೂ ತೊರೆಯುವುದಿಲ್ಲ ಎಂದು ನಾನು ಯಾವಾಗಲೂ ನನ್ನ ವಿದ್ಯಾರ್ಥಿಗಳಿಗೆ ಹೇಳುತ್ತೇನೆ.”—ಮತ್ತಾಯ 6:33.
ಪ್ರಾಯೋಗಿಕ ಸಹಾಯವನ್ನು ನೀಡಿರಿ
ಕ್ರಿಸ್ತನ ಶಿಷ್ಯರನ್ನು ಮಾಡುವುದರಲ್ಲಿ, ಒಂದು ಬೈಬಲ್ ಅಭ್ಯಾಸವನ್ನು ನಡೆಸುವುದಕ್ಕಿಂತಲೂ ಹೆಚ್ಚಿನದ್ದು ಸೇರಿದೆ. ಅನೇಕ ವರ್ಷಗಳ ವರೆಗೆ ಸಂಚಾರ ಮೇಲ್ವಿಚಾರಕನಾಗಿ ಸೇವೆಸಲ್ಲಿಸಿದ ಒಬ್ಬ ಮಿಷನೆರಿಯು ಹೇಳುವುದು: “ಅವರಿಗೆ ಸಮಯವನ್ನು ಕೊಡಿರಿ. ಅಭ್ಯಾಸವು ಮುಗಿದ ಬಳಿಕ ಆತುರದಿಂದ ಹೊರಟುಹೋಗಬೇಡಿ. ಸೂಕ್ತವಾಗಿರುವಲ್ಲಿ, ಉಳಿದು ಸ್ವಲ್ಪ ಸಮಯದ ವರೆಗೆ ಮಾತಾಡಿರಿ.” ಎಲಿಸಬೆತ್ ಹೇಳುವುದು: “ಜೀವವು ಒಳಗೂಡಿರುವುದರಿಂದ, ನಾನು ಅವರಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳುತ್ತೇನೆ. ಅನೇಕಬಾರಿ ನಾನು, ಅವರು ನನ್ನ ಮಕ್ಕಳೋ ಎಂಬಂತೆ ಅವರ ಕುರಿತಾಗಿ ಚಿಂತಿಸುತ್ತೇನೆ.” ಬೇರೆ ಸಾಕ್ಷಿಗಳು ಈ ಸಲಹೆಗಳನ್ನು ನೀಡಿದರು: “ಅವರು ಅಸ್ವಸ್ಥರಾಗಿರುವಾಗ ಅವರನ್ನು ಸಂದರ್ಶಿಸಿರಿ.” “ಉದಾಹರಣೆಗಾಗಿ, ಕ್ಷೇತ್ರ ಶುಶ್ರೂಷೆಯಲ್ಲಿ ನೀವು ಅವರ ಮನೆಯ ಸಮೀಪ ಇರುವಾಗ, ಇತರ ಸಾಕ್ಷಿಗಳನ್ನು ಅವರಿಗೆ ಪರಿಚಯಿಸಲಿಕ್ಕಾಗಿ ಅವರನ್ನು ಸಂಕ್ಷಿಪ್ತವಾಗಿ ಭೇಟಿ ಮಾಡಿರಿ.” ಈವ ಹೇಳುವುದು: “ವ್ಯಕ್ತಿಯ ಹಿನ್ನೆಲೆ ಮತ್ತು ಜೀವಿತದಲ್ಲಿನ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಲು ಜಾಗರೂಕತೆಯಿಂದ ಕಿವಿಗೊಡಿರಿ. ಇವು ಜನರು ಸತ್ಯಕ್ಕೆ ಪ್ರತಿಕ್ರಿಯಿಸುವ ರೀತಿಯನ್ನು ಬಾಧಿಸಿ, ಅವರ ಪ್ರಗತಿಗೆ ಅಡ್ಡಿಯನ್ನುಂಟುಮಾಡಬಲ್ಲವು. ತಮ್ಮ ಸಮಸ್ಯೆಗಳ ಕುರಿತು ಮಾತಾಡಲು ಅವರು ಭರವಸೆಯನ್ನು ಪಡೆಯುವಂತೆ ಮಾಡಲಿಕ್ಕಾಗಿ ಅವರ ಸ್ನೇಹಿತರಾಗಿರ್ರಿ.” ಕ್ಯಾರಲ್ ಕೂಡಿಸುವುದು: “ಅವನ ಜೀವಿತದಲ್ಲಿ ಸತ್ಯವು ತರುವ ಬದಲಾವಣೆಗಳು, ಕೆಲವೊಮ್ಮೆ ಕುಟುಂಬ ಮತ್ತು ಸ್ನೇಹಿತರ ಕಳೆದುಕೊಳ್ಳುವಿಕೆಯನ್ನು ಅರ್ಥೈಸುವುದರಿಂದ, ಆ ವ್ಯಕ್ತಿಯಲ್ಲಿ ಯಥಾರ್ಥವಾದ ಆಸಕ್ತಿಯನ್ನು ತೋರಿಸುವುದು ಪ್ರಾಮುಖ್ಯವಾಗಿದೆ. ಸಾಮಾನ್ಯವಾಗಿ, ನಾವು ಎಲ್ಲಿ ವಾಸಿಸುತ್ತೇವೆ ಮತ್ತು ಯಾವುದೇ ಸಮಯದಲ್ಲಿ ನಮ್ಮ ಬಳಿಗೆ ಬರಲು ಅವನಿಗೆ ದೃಢವಿಶ್ವಾಸವಿದೆ ಎಂಬುದು ವಿದ್ಯಾರ್ಥಿಗೆ ತಿಳಿದಿರುವುದು ಒಳ್ಳೆಯದು.” ಸಭೆಯನ್ನು ತನ್ನ ಹೊಸ ಕುಟುಂಬದೋಪಾದಿ ದೃಷ್ಟಿಸಲು ಅವನಿಗೆ ಸಹಾಯ ಮಾಡಿರಿ.—ಮತ್ತಾಯ 10:35; ಮಾರ್ಕ 10:29, 30.
“ಪ್ರಾಯೋಗಿಕ ಸಹಾಯವನ್ನು ನೀಡಲು ಜಾಗರೂಕರಾಗಿರ್ರಿ. ಕೂಟಗಳಲ್ಲಿ ಅವರೊಂದಿಗೆ ಕುಳಿತುಕೊಂಡು, ಅವರ ಮಕ್ಕಳ ವಿಷಯದಲ್ಲಿ ಅವರಿಗೆ ಸಹಾಯ ಮಾಡಿರಿ” ಎಂದು ಯೊಲಾಂಡ ಹೇಳುತ್ತಾಳೆ. ತಮ್ಮ ಮಕ್ಕಳನ್ನು ತರಬೇತುಗೊಳಿಸುವ, ತಮ್ಮ ಶುದ್ಧತೆಯ ಮಟ್ಟಗಳನ್ನು ಉತ್ತಮಗೊಳಿಸುವ, ಕೂಟಗಳಿಗಾಗಿ ಹೇಳಿಕೆಗಳನ್ನು ತಯಾರಿಸುವ, ಹಾಗೂ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಭಾಷಣಗಳನ್ನು ಕೊಡುವ ವಿಧಾನವನ್ನು ಹೊಸಬರಿಗೆ ತೋರಿಸುವುದು, ಶಿಷ್ಯರನ್ನಾಗಿ ಮಾಡುವ ಸಕಲ ಕಾರ್ಯದ ಭಾಗವಾಗಿದೆ. ಮತ್ತೊಬ್ಬ ಸಹೋದರಿಯು ಕೂಡಿಸುವುದು: “ಶುಶ್ರೂಷೆಗಾಗಿ ಹೊಸಬರನ್ನು ತರಬೇತುಗೊಳಿಸುವುದು ಪ್ರಾಮುಖ್ಯವಾಗಿದೆ. ತರಬೇತಿಯ ಈ ಅಂಶವು ಅಲಕ್ಷ್ಯ ಮಾಡಲ್ಪಡುವಾಗ, ಕೆಲವರು ಸಾರುವ ಕೆಲಸದ ಕುರಿತಾಗಿ ಭಯಭರಿತರಾಗಿ ಉಳಿಯುತ್ತಾರೆ, ಯೆಹೋವನನ್ನು ಸೇವಿಸುವುದರಲ್ಲಿನ ತಮ್ಮ ಆನಂದವನ್ನು ಕಳೆದುಕೊಳ್ಳುತ್ತಾರೆ, ಮತ್ತು ತಾಳಿಕೊಳ್ಳುವುದರಲ್ಲಿ ವಿಫಲಗೊಳ್ಳುತ್ತಾರೆ.” ಆದುದರಿಂದ ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ, ಪುನರ್ಭೇಟಿಗಳನ್ನು ಮಾಡುವುದರಲ್ಲಿ, ಹಾಗೂ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರಲ್ಲಿ ಜಾಗರೂಕವಾದ ತರಬೇತನ್ನು ಒದಗಿಸಿರಿ. ನಿಮ್ಮ ಸಹಾಯದಿಂದ ಹಾಗೂ ಮಾರ್ಗದರ್ಶನದಿಂದ ನಿಮ್ಮ ವಿದ್ಯಾರ್ಥಿಯು ಪ್ರಗತಿಮಾಡುವುದನ್ನು ನೀವು ನೋಡುವಾಗ, ನಿಮ್ಮ ಆನಂದವು ಮಹತ್ತರವಾಗಿರುವುದು.
ತಾಳಿಕೊಳ್ಳಲು ಅವರನ್ನು ಬಲಪಡಿಸಿರಿ
“ವಿದ್ಯಾರ್ಥಿಗೆ ದೀಕ್ಷಾಸ್ನಾನವಾದ ಬಳಿಕ, ಅಭ್ಯಾಸವನ್ನು ಕಡೆಗಣಿಸುವ ಒಂದು ಪ್ರವೃತ್ತಿಯಿದೆ” ಎಂದು ಶಿಷ್ಯರನ್ನಾಗಿ ಮಾಡುವ ಅನುಭವಸ್ಥೆಯೊಬ್ಬಳು ಎಚ್ಚರಿಕೆ ನೀಡುತ್ತಾಳೆ. ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡ ಕ್ರೈಸ್ತನೊಬ್ಬನು ಆತ್ಮಿಕವಾಗಿ ಪ್ರೌಢನಾಗಿರುವುದಿಲ್ಲವೆಂಬುದನ್ನು ಬೋಧಕನೂ ವಿದ್ಯಾರ್ಥಿಯೂ—ಇಬ್ಬರೂ—ಜ್ಞಾಪಕದಲ್ಲಿಡಬೇಕು. ಅವನ ನಂಬಿಕೆಯಲ್ಲಿ, ದೇವರ ನಿಯಮಕ್ಕಾಗಿರುವ ಅವನ ಗಣ್ಯತೆಯಲ್ಲಿ, ಮತ್ತು ಯೆಹೋವನಿಗಾಗಿರುವ ಅವನ ಪ್ರೀತಿಯಲ್ಲಿ ಅವನಿಗೆ ಹೆಚ್ಚು ಬೆಳವಣಿಗೆಯನ್ನು ಮಾಡಲಿಕ್ಕಿದೆ. ಅವನು ಅಭಿವೃದ್ಧಿಯನ್ನು ಮಾಡುವುದನ್ನು ಮುಂದುವರಿಸುವಂತೆ, ಒಳ್ಳೆಯ ವೈಯಕ್ತಿಕ ಅಭ್ಯಾಸದ ಹವ್ಯಾಸಗಳನ್ನು ವಿಕಸಿಸಿಕೊಳ್ಳಲು ಅವನನ್ನು ಉತ್ತೇಜಿಸುವುದು ಅತ್ಯಾವಶ್ಯಕವಾಗಿದೆ.—1 ತಿಮೊಥೆಯ 4:15.
ಪ್ರಗತಿಯನ್ನು ಮಾಡಲು ಹಾಗೂ ಸಹೋದರರ ಸಹವಾಸದ ಆದರಣೀಯ ಸದಸ್ಯನಾಗಲು ಹೊಸಬನಿಗೆ ಸಹಾಯದ ಅಗತ್ಯವಿರಬಹುದು. ಅವನು ಸಹೋದರರಿಗೆ ಹೆಚ್ಚು ನಿಕಟವಾದಂತೆ, ಅವರ ಅಪರಿಪೂರ್ಣತೆಗಳೊಂದಿಗೆ ವ್ಯವಹರಿಸುವುದರಲ್ಲಿ ಅವನಿಗೆ ಮಾರ್ಗದರ್ಶನದ ಅಗತ್ಯವಿರಬಹುದು. (ಮತ್ತಾಯ 18:15-35) ಒಬ್ಬ ಕುಶಲ ಬೋಧಕನಾಗಿ ಪರಿಣಮಿಸಲು, ತನ್ನ ಸ್ವಂತ ಸಂಶೋಧನೆಯನ್ನು ಮಾಡಲು ಶಕ್ತನಾಗಲಿಕ್ಕಾಗಿ, ಅವನಿಗೆ ಸಹಾಯದ ಅಗತ್ಯವಿರಬಹುದು. ಒಬ್ಬ ಮಿಷನೆರಿಯು ಹೇಳುವುದು: “ದೀಕ್ಷಾಸ್ನಾನದ ನಂತರ ವಿದ್ಯಾರ್ಥಿನಿಯೊಬ್ಬಳು ಬೋಧಕಿಯೋಪಾದಿ ತನ್ನ ಸಾಮರ್ಥ್ಯವನ್ನು ಉತ್ತಮಗೊಳಿಸಲು ಬಯಸಿದಳು, ಆದುದರಿಂದ ಅವಳು ನನಗೆ ಹೇಳಿದ್ದು, ‘ಮುಂದಿನ ವಾರ ನನಗೆ ಒಂದು ಹೊಸ ಅಭ್ಯಾಸವನ್ನು ನಡೆಸಬೇಕಾಗಿದೆ, ಆದರೆ ನಾನು ಅಭ್ಯಾಸಿಸಿದ ಆರಂಭದ ಅಧ್ಯಾಯದ ಕುರಿತಾದ ನನ್ನ ಜ್ಞಾಪಕಶಕ್ತಿಯನ್ನು ನಾನು ಪುನರ್ಚೈತನ್ಯಗೊಳಿಸುವ ಅಗತ್ಯವಿದೆ. ಶಾಸ್ತ್ರವಚನಗಳು ಮತ್ತು ದೃಷ್ಟಾಂತಗಳ ಕುರಿತಾದ ವಿವರಣೆಗಳ ಟಿಪ್ಪಣಿಯನ್ನು ನಾನು ಮಾಡಿಕೊಳ್ಳಸಾಧ್ಯವಾಗುವಂತೆ, ಮತ್ತು ಬಳಿಕ ನನ್ನ ಅಭ್ಯಾಸವನ್ನು ನಡೆಸಲು ಹೋಗುವಾಗ ಅವುಗಳನ್ನು ಉಪಯೋಗಿಸಸಾಧ್ಯವಾಗುವಂತೆ, ಪುನಃ ಒಂದೊಂದಾಗಿ ಈ ಅಧ್ಯಾಯಗಳನ್ನು ದಯಮಾಡಿ ನನ್ನೊಂದಿಗೆ ಅಭ್ಯಾಸಿಸುವಿರೊ?’ ಒಂದು ಸಮ್ಮೇಳನದಲ್ಲಿ ತನ್ನ ವಿದ್ಯಾರ್ಥಿಗಳಲ್ಲಿ ನಾಲ್ಕು ಮಂದಿ ದೀಕ್ಷಾಸ್ನಾನಹೊಂದುವಂತೆ ಮಾಡಿರುವ ಅವಳು, ಒಬ್ಬ ಅತ್ಯುತ್ತಮ ಬೋಧಕಿಯಾಗಿ ಪರಿಣಮಿಸಿದ್ದಾಳೆ.”
ಶಿಷ್ಯರನ್ನಾಗಿ ಮಾಡುವುದು ಪ್ರಯತ್ನಕ್ಕೆ ಅರ್ಹವಾದದ್ದಾಗಿರುವುದರ ಕಾರಣ
“ಶಿಷ್ಯರನ್ನಾಗಿ ಮಾಡುವುದೆಂದರೆ ಯೆಹೋವನ ಹೆಚ್ಚು ಸ್ತುತಿಗಾರರು ಎಂದರ್ಥ. ಸತ್ಯವನ್ನು ಅಂಗೀಕರಿಸುವವರಿಗೆ ಇದು ಜೀವದ ಅರ್ಥದಲ್ಲಿದೆ” ಎಂದು ಪ್ಯಾಮಲ ಹೇಳುತ್ತಾಳೆ. “ಇತರರಿಗೆ ಸತ್ಯವನ್ನು ಕಲಿಸುವುದನ್ನು ನಾನು ತುಂಬ ಇಷ್ಟಪಡುತ್ತೇನೆ, ಇದು ಎಷ್ಟು ಸುಂದರವಾಗಿದೆ! ವಿದ್ಯಾರ್ಥಿಗಳು ಕ್ರಮೇಣ ಬೆಳೆಯುವುದನ್ನು, ತಮ್ಮ ಜೀವಿತಗಳಲ್ಲಿ ಪರಿವರ್ತನೆ ಮಾಡುವುದನ್ನು, ಮತ್ತು ಯೆಹೋವನ ಆತ್ಮದ ಹೊರತೂ ಯಾವುದು ದುಸ್ತರವೆಂದು ತೋರಿಬರುತ್ತದೊ ಅಂತಹ ತಡೆಗಳನ್ನು ಜಯಿಸುವುದನ್ನು ಒಬ್ಬನು ಕಾಣುತ್ತಾನೆ. ಯೆಹೋವನನ್ನು ಪ್ರೀತಿಸತೊಡಗಿರುವವರಲ್ಲಿ ಅನೇಕರು, ನನ್ನ ಅತ್ಯಂತ ಆಪ್ತ ಸ್ನೇಹಿತರಾಗಿ ಪರಿಣಮಿಸಿದ್ದಾರೆ.”
“ಶಿಷ್ಯರಾಗುವಂತೆ ನಾನು ಸಹಾಯ ಮಾಡಿರುವವರನ್ನು ನಾನು ಅವಲೋಕಿಸುವಾಗ, ತೀರ ಅಂಜುಬುರುಕರಾಗಿದ್ದ ಕೆಲವು ಜನರು ದೇವರ ಶುಶ್ರೂಷಕರೋಪಾದಿ ಹೆಚ್ಚು ಪ್ರಗತಿಯನ್ನು ಮಾಡಿದ್ದಾರೆಂಬುದನ್ನು ನನಗೆ ನಂಬಲಿಕ್ಕೂ ಕಷ್ಟವಾಗುತ್ತದೆ. ಸ್ಪಷ್ಟವಾಗಿಯೇ ಜನರು ಕಷ್ಟಸಾಧ್ಯವಾದ ವಿಘ್ನಗಳನ್ನು ಯೆಹೋವನ ಸಹಾಯದಿಂದ ಜಯಿಸುವುದನ್ನು ನಾನು ನೋಡುತ್ತೇನೆ. ಒಮ್ಮೆ ಬೇರ್ಪಟ್ಟಿದ್ದ, ಆದರೆ ಈಗ ಜವಾಬ್ದಾರಿಯುತ ಹೆತ್ತವರೊಂದಿಗಿರುವ ಸಂತೋಷಭರಿತ ಮಕ್ಕಳಿಂದ ಐಕ್ಯಗೊಂಡಿರುವ ಕುಟುಂಬಗಳನ್ನು ನಾನು ನೋಡುತ್ತೇನೆ. ಜನರು ಯೆಹೋವನನ್ನು ಸ್ತುತಿಸುತ್ತಾ, ಅರ್ಥಭರಿತ ಜೀವಿತಗಳನ್ನು ಆನಂದಿಸುತ್ತಿರುವುದನ್ನು ನಾನು ಕಾಣುತ್ತೇನೆ. ಇದು ಶಿಷ್ಯರನ್ನಾಗಿ ಮಾಡುವುದರ ಆನಂದವಾಗಿದೆ” ಎಂದು ಜರ್ಮನಿಯ ಒಬ್ಬ ಮಿಷನೆರಿಯು ಹೇಳುತ್ತಾಳೆ.
ಹೌದು, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಯೆಹೋವನೊಂದಿಗೆ ಜೊತೆಕೆಲಸಗಾರನಾಗಿರುವುದು, ಅನುಪಮ ಆನಂದದ ಒಂದು ಮೂಲವಾಗಿದೆ. ಮಿಷನೆರಿಗಳು ಹಾಗೂ ಪಯನೀಯರರ ಅನುಭವಗಳು ಇದನ್ನು ರುಜುಪಡಿಸಿವೆ. ನೀವು ಸಲಹೆಗಳನ್ನು ಅನ್ವಯಿಸಿ, ಪೂರ್ಣ ಪ್ರಾಣದಿಂದ ಅದರ ಕುರಿತು ಕ್ರಿಯೆಗೈಯುವುದಾದರೆ, ನೀವು ತದ್ರೀತಿಯ ಆನಂದ ಹಾಗೂ ಸಂತೃಪ್ತಿಯನ್ನು ಕಂಡುಕೊಳ್ಳಬಲ್ಲಿರಿ. ಯೆಹೋವನ ಆಶೀರ್ವಾದದೊಂದಿಗೆ, ನಿಮ್ಮ ಆನಂದವು ಪೂರ್ಣಗೊಳ್ಳುವುದು.—ಜ್ಞಾನೋಕ್ತಿ 10:22; 1 ಕೊರಿಂಥ 15:58.