ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಇತರರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು?
    ಕಾವಲಿನಬುರುಜು—2008 | ಮೇ 15
    • 12. (ಎ) ಆಧ್ಯಾತ್ಮಿಕ ಬೆಳಕಿನ ಕುರಿತು ಯೇಸು ಏನು ಹೇಳಿದನು? (ಬಿ) ನಮ್ಮ ಬೆಳಕನ್ನು ಹೇಗೆ ಪ್ರಕಾಶಿಸಬಲ್ಲೆವು?

      12 ದೇವರ ಆಧ್ಯಾತ್ಮಿಕ ‘ಬೆಳಕನ್ನು’ ಪಡೆದುಕೊಳ್ಳಲು ಜನರಿಗೆ ಸಹಾಯ ನೀಡುವ ಮೂಲಕ ನಾವು ಅವರೊಂದಿಗೆ ಅತ್ಯುತ್ತಮ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ. (ಕೀರ್ತ. 43:3, NIBV) ಯೇಸು ತನ್ನ ಶಿಷ್ಯರಿಗೆ “ನೀವು ಲೋಕಕ್ಕೆ ಬೆಳಕಾಗಿದ್ದೀರಿ” ಎಂದು ಹೇಳಿ, ಅವರು ತಮ್ಮ ಬೆಳಕನ್ನು ಪ್ರಕಾಶಿಸುವಂತೆ ಉತ್ತೇಜಿಸಿದನು. ಹೀಗೆ ಜನರು ಅವರ “ಒಳ್ಳೇ ಕ್ರಿಯೆಗಳನ್ನು” ನೋಡಲು ಸಾಧ್ಯವಾಗುತ್ತಿತ್ತು. ಈ ಆಧ್ಯಾತ್ಮಿಕ ಬೆಳಕಿನ ಮೂಲಕ ‘ಜನರಿಗೆ’ ಅಂದರೆ ಮಾನವಕುಲಕ್ಕೆ ಪ್ರಯೋಜನಗಳು ಸಿಗಲಿದ್ದವು. (ಮತ್ತಾಯ 5:14-16 ಓದಿ.) ನಾವಿಂದು ನಮ್ಮ ನೆರೆಯವರಿಗೆ ಒಳ್ಳೇದನ್ನು ಮಾಡುವ ಮೂಲಕ ಮತ್ತು “ಸರ್ವಲೋಕದಲ್ಲಿ” ಅಂದರೆ “ಎಲ್ಲ ಜನಾಂಗಗಳಿಗೆ” ಸುವಾರ್ತೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಬೆಳಕನ್ನು ಪ್ರಕಾಶಿಸುತ್ತೇವೆ. (ಮತ್ತಾ. 26:13; ಮಾರ್ಕ 13:10) ನಮಗಿದು ಎಂಥ ಸದವಕಾಶ!

  • ಇತರರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು?
    ಕಾವಲಿನಬುರುಜು—2008 | ಮೇ 15
    • 14. (ಎ) ಪ್ರಥಮ ಶತಮಾನದ ದೀಪಗಳು ಹೇಗಿದ್ದವು? (ಬಿ) ನಾವು ಆಧ್ಯಾತ್ಮಿಕ ಬೆಳಕನ್ನು “ಕೊಳಗದೊಳಗೆ” ಇಡಬಾರದೆಂಬುದರ ಅರ್ಥವೇನು?

      14 ದೀಪ ಹಚ್ಚಿ ಅದನ್ನು ಕೊಳಗದ ಒಳಗಲ್ಲ, ಮನೆಯಲ್ಲಿದ್ದವರಿಗೆಲ್ಲ ಬೆಳಕುಕೊಡುವಂತೆ ದೀಪಸ್ತಂಭದ ಮೇಲಿರಿಸಲಾಗುತ್ತದೆಂದು ಯೇಸು ಹೇಳಿದನು. ಪ್ರಥಮ ಶತಮಾನದ ದೀಪಗಳು ಸಾಮಾನ್ಯವಾಗಿ ಮಣ್ಣಿನದ್ದಾಗಿದ್ದು, ಅದರಲ್ಲಿರುತ್ತಿದ್ದ ಬತ್ತಿಯು ಎಣ್ಣೆ (ಸಾಮಾನ್ಯವಾಗಿ ಆಲಿವ್‌ ಎಣ್ಣೆ)ಯನ್ನು ಹೀರಿಕೊಳ್ಳುತ್ತಿತ್ತು. ಇಂಥ ದೀಪವನ್ನು ಹೆಚ್ಚಾಗಿ ಮರದ ಇಲ್ಲವೇ ಲೋಹಸ್ತಂಭದ ಮೇಲಿಡಲಾಗುತ್ತಿತ್ತು. ಹೀಗೆ ಅದು “ಮನೆಯಲ್ಲಿರುವವರೆಲ್ಲರಿಗೆ” ಬೆಳಕು ಕೊಡುತ್ತಿತ್ತು. ಜನರು ದೀಪ ಹಚ್ಚಿ ಅದನ್ನೊಂದು “ಕೊಳಗದೊಳಗೆ” ಇಡುತ್ತಿರಲಿಲ್ಲ. ಕೊಳಗ ಅಂದರೆ ಸುಮಾರು 9 ಲೀಟರಿನ ಅಳತೆ ಪಾತ್ರೆಯಾಗಿತ್ತು. ಯೇಸು, ಶಿಷ್ಯರು ತಮ್ಮ ಆಧ್ಯಾತ್ಮಿಕ ಬೆಳಕನ್ನು ಒಂದು ಸಾಂಕೇತಿಕ ಕೊಳಗದೊಳಗೆ ಇಡಬೇಕೆಂದು ಬಯಸಲಿಲ್ಲ. ಆದುದರಿಂದಲೇ ನಾವು ನಮ್ಮ ಬೆಳಕು ಪ್ರಕಾಶಿಸುವಂತೆ ಬಿಡಬೇಕು. ವಿರೋಧವಾಗಲಿ, ಹಿಂಸೆಯಾಗಲಿ ನಾವು ಶಾಸ್ತ್ರಾಧಾರಿತ ಸತ್ಯವನ್ನು ಮುಚ್ಚಿಡುವಂತೆ ಅಥವಾ ನಮ್ಮ ಬಳಿಯೇ ಇಟ್ಟುಕೊಳ್ಳುವಂತೆ ಎಂದಿಗೂ ಬಿಡಬಾರದು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ