ಮನುಷ್ಯನು ದೇವರ ಸ್ವರೂಪದಲ್ಲಿ ಮಾಡಲ್ಪಡುವುದು ಹೇಗೆ ಸಾಧ್ಯ?
“ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.” ಎಂದು ಪ್ರೇರಿತ ದಾಖಲೆಯು ಹೇಳುತ್ತದೆ, ಆದರೆ ಅದರ ಅರ್ಥವು ಏನಾಗಿದೆ? ಮೊದಲ ಪುರುಷ ಮತ್ತು ಸ್ತ್ರೀಯು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟದ್ದು ಹೇಗೆ?—ಆದಿಕಾಂಡ 1:27.
ಅವರು ದೈಹಿಕವಾಗಿ ದೇವರಂತಿದ್ದರೋ? ಇಲ್ಲ, ಅದು ಅಸಾಧ್ಯ. ಮಾನವನು ಭೂಮಿಯ ಮೇಲೆ ವಾಸಿಸುವಂತೆ ರಚಿಸಲ್ಪಟ್ಟವನಾಗಿ ಮಾಂಸಿಕವಾಗಿದ್ದಾನೆ. ದೇವರು ಆತ್ಮವಾಗಿದ್ದಾನೆ, ಯಾವುದೇ ಮಾನವನು ಗೋಚರಿಸಲೂ ಅಸಾಧ್ಯವಾದ ಊಹಿಸಲಸಾಧ್ಯವಾದ ಸ್ವರ್ಗೀಯ ಮಹಿಮೆಯಲ್ಲಿ ಜೀವಿಸುತ್ತಾನೆ. (ವಿಮೋಚನಕಾಂಡ 33:18-20; 1 ಕೊರಿಂಥ 15:50) ಹಾಗಾದರೆ, ಮಾನವನು ದೇವರ ಸ್ವರೂಪದಲ್ಲಿ ನಿರ್ಮಿಸಲ್ಪಟ್ಟದ್ದು ಹೇಗೆ? ದೇವರ ಪ್ರಮುಖವಾದ ಗುಣಗಳನ್ನು—ಪ್ರೀತಿ, ನ್ಯಾಯ, ವಿವೇಕ, ಮತ್ತು ಶಕ್ತಿ—ಮತ್ತು ಇನ್ನೂ ಇತರ ಗುಣಗಳನ್ನು ಪ್ರಯೋಗಿಸಲು ಸಾಮರ್ಥ್ಯವು ಕೊಡಲ್ಪಟ್ಟದ್ದರಲ್ಲಿಯೇ.
ಯೆಹೋವನ ಗುಣಗಳು
ಯೆಹೋವ ದೇವರ ಗುಣಗಳು ಆತನ ಎಲ್ಲಾ ಸೃಷ್ಟಿಯಲ್ಲಿ ಪ್ರತಿಬಿಂಬಿಸಿವೆ, ಆದರೂ ಅವು ಮೊದಲ ಮಾನವ ಜೊತೆ, ಆದಾಮ ಮತ್ತು ಹವ್ವರೊಂದಿಗಿನ ಆತನ ವ್ಯವಹಾರಗಳಲ್ಲಿಯೂ ನಾಟಕೀಯವಾಗಿ ಪ್ರದರ್ಶಿತಗೊಂಡಿದ್ದವು. (ರೋಮಾಪುರ 1:20) ಮಾನವನು ಜೀವಿಸಲು ತಕ್ಕದ್ದಾಗಿ ಭೂಮಿಯನ್ನು ಆತನು ನಿರ್ಮಿಸಿದರಲ್ಲಿ ಆತನ ಪ್ರೀತಿಯು ತೋರಿಬಂದಿತ್ತು. ಯೆಹೋವನು ಪುರುಷನಿಗಾಗಿ ಅವನ ಸಂಗಾತಿ ಮತ್ತು ಅವನ ಮಕ್ಕಳಿಗೆ ತಾಯಿಯಾಗುವಂತೆ ಒಬ್ಬ ಪರಿಪೂರ್ಣ ಹೆಂಡತಿಯನ್ನು ನಿರ್ಮಿಸಿದನು. ಆತನು ಆ ಇಬ್ಬರನ್ನು ಒಂದು ಸುಂದರ ತೋಟದಲ್ಲಿ ಇಟ್ಟನು ಮತ್ತು ಅವರು ಜೀವಿಸುವುದನ್ನು ಮುಂದುವರಿಸಲು ಮತ್ತು ಸಂತೋಷದಿಂದಿರಲು ಅಗತ್ಯವಿರುವ ಎಲ್ಲಾ ವಿಷಯಗಳನ್ನು ಅವರಿಗೆ ಹೇರಳವಾಗಿ ಕೊಟ್ಟನು. ಎಲ್ಲಾದಕ್ಕಿಂತ ಆಶ್ಚರ್ಯಕರವಾಗಿ, ದೇವರು ಅವರಿಗೆ ಸದಾ ಜೀವಿಸಲು ಸಂದರ್ಭವನ್ನು ಕೊಟ್ಟನು.—ಆದಿಕಾಂಡ 2:7-9, 15-24.
ಆತನು ಮೊದಲ ಮಾನವ ಜೋಡಿಯನ್ನು ಪರೀಕೆಗ್ಷೊಳಪಡಿಸಿದರ್ದಲ್ಲಿ ದೇವರ ವಿವೇಕವು ತೋರಿಬಂತು. ಅವರು ಯೆಹೋವನ ವಿಶ್ವ ಕುಟುಂಬದ ಸದಸ್ಯರಾಗಿ ಉಳಿಯಬೇಕಾಗಿದ್ದರೆ ಮತ್ತು ಮಾನವ ಕುಲದ ಹೆತ್ತವರಾಗಿ ಸದಾ ಜೀವಿಸಬೇಕಾಗಿದ್ದರೆ, ಅವರು ನಂಬಿಗಸ್ತಿಕೆ ಮತ್ತು ಸತ್ಯ ಆರಾಧನೆಯಲ್ಲಿ ಮಾದರಿಗಳಾಗಿ ಇರುವ ಅವಶ್ಯವಿತ್ತು. ಆದುದರಿಂದ, ಒಂದು ಸೂಕ್ತ ಪರೀಕ್ಷೆಯ ಕೆಳಗೆ—ಒಳ್ಳೇದು ಮತ್ತು ಕೆಟ್ಟದರ ಜ್ಞಾನದ ಮರದಿಂದ ಅವರು ತಿನ್ನಬಾರದಾಗಿತ್ತು—ಅವರ ಹೃದಯ ಸ್ಥಿತಿಯನ್ನು ಪ್ರದರ್ಶಿಸುವ ಸಂದರ್ಭವನ್ನು ಯೆಹೋವನು ಅವರಿಗೆ ಕೊಟ್ಟನು. ಮಾನವರಿಗಾಗಿ ತನ್ನ ಮನಸ್ಸಿನಲ್ಲಿದ್ದ ಆ ಆಶ್ಚರ್ಯಕರ ಸುಯೋಗವನ್ನು ಅವರಿಗೆ ಕೊಡುವ ಮೊದಲು ತನಗಾಗಿ ಅವರು ತಮ್ಮ ವಿಧೇಯತೆಯನ್ನು ಮತ್ತು ಪ್ರೀತಿಯನ್ನು ರುಜುಪಡಿಸುವಂತೆ ಮಾನವರನ್ನು ಬಿಡುವುದು ಯೆಹೋವನ ಸಂಬಂಧದಲ್ಲಿ ಎಷ್ಟೊಂದು ವಿವೇಕದ್ದಾಗಿತ್ತು!
ತನ್ನ ಸೃಷ್ಟಿಜೀವಿಗಳಲ್ಲಿ ಉಚ್ಚ ಮಟ್ಟಗಳನ್ನು ಆತನು ಅವಶ್ಯಪಟ್ಟದ್ದರಲ್ಲಿ ಮತ್ತು ಆ ಮಟ್ಟಗಳ ಮೇಲೆ ಸಂಧಾನ ಮಾಡದೆ ಇದ್ದುದರಲ್ಲಿ ದೇವರ ನ್ಯಾಯವು ತೋರಿಬಂತು. ಯಾವುದು ಸರಿಯಾಗಿತ್ತೋ ಅದನ್ನು ಮಾಡುವಂತೆ ಆದಾಮ ಹವ್ವರಿಗೆ ಪ್ರತಿಯೊಂದು ಸಂದರ್ಭವನ್ನು ಆತನು ಕೊಟ್ಟದ್ದರಲ್ಲಿ ಅದು ತೋರಿಬಂತು. ಮತ್ತು ಅವರು ಹಾಗೆ ಮಾಡಲು ತಪ್ಪಿದಾಗ, ದಂಗೆಗಾಗಿ ತಿಳಿಸಲಾದ ದಂಡನೆಯನ್ನು ಅನುಭವಿಸುವಂತೆ ಅವರಿಗೆ ತೀರ್ಪನ್ನಿತ್ತಾಗ ಆತನ ನ್ಯಾಯವು ತೋರಿಬಂತು.
ತನ್ನ ತೀರ್ಮಾನದಂತೆ ವರ್ತಿಸುವುದರಲ್ಲಿ ಯೆಹೋವನ ಶಕ್ತಿಯು ತೋರಿಬಂತು. ಮಹಾ ದಂಗೆಖೋರ, ಸೈತಾನನು, ಯೆಹೋವನು ಸುಳ್ಳುಗಾರನಾಗಿದ್ದಾನೆ ಎಂದು ಸೂಚಿಸಿದನು, ಮತ್ತು ಹವ್ವಳು ದೇವರಿಗೆ ಅವಿಧೇಯಳಾಗುವಲ್ಲಿ ಸೈತಾನನು ಅವಳಿಗೆ ಮಹಾನ್ ವಿಷಯಗಳ ನೀಡಿಕೆಯನ್ನಿತ್ತನು. (ಆದಿಕಾಂಡ 3:1-7) ಆದರೆ ಸೈತಾನನಿಂದ ಅವನ ವಾಗ್ದಾನಗಳನ್ನು ನೆರವೇರಿಸಲಾಗಲಿಲ್ಲ. ಆದಾಮ ಹವ್ವರನ್ನು ಏದೆನ್ ತೋಟದಿಂದ ಹೊರಹಾಕುವುದರಿಂದ ಯೆಹೋವನನ್ನು ತಡೆಯಲು ಅವನಿಂದಾಗಲಿಲ್ಲ, ಮತ್ತು ಆದಾಮನಿಗೆ “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ” ಎಂಬ ದೇವರ ಮಾತುಗಳ ನೆರವೇರಿಕೆಯನ್ನು ತಡೆಯಲು ಅವನು ಅಶಕ್ತನಾಗಿದ್ದನು. (ಆದಿಕಾಂಡ 3:19) ಅದಾಗ್ಯೂ, ಯೆಹೋವನು ಮರಣದ ತೀರ್ಪನ್ನು ಆ ಕೂಡಲೇ ಕಾರ್ಯರೂಪಕ್ಕೆ ಹಾಕಲಿಲ್ಲ, ಮತ್ತು ಇದರಲ್ಲಿ ಆತನು ಇನ್ನೂ ತನ್ನ ಪ್ರೀತಿಯನ್ನು ತೋರಿಸಿದನು. ಮಾನವಕುಲಕ್ಕಾಗಿ ತನ್ನ ಮೂಲ ಉದ್ದೇಶವನ್ನು ಕಟ್ಟಕಡೆಗೆ ನೆರವೇರಿಸಬಲ್ಲ ಮಕ್ಕಳನ್ನು ಉತ್ಪಾದಿಸಲು ಆದಾಮ ಹವ್ವರಿಗೆ ಆತನು ಸಮಯವನ್ನು ಅನುಮತಿಸಿದನು.—ಆದಿಕಾಂಡ 1:28.
ಅಂತಿಮವಾಗಿ, ಸೈತಾನನ ಕೆಲಸಗಳನ್ನು ನಾಶಮಾಡುವ ಮತ್ತು ದೈವಿಕ ಸಾರ್ವಭೌಮತೆಯ ವಿರುದ್ಧ ಮೊದಲ ದಂಗೆಯ ದುಃಖಕರ ಫಲಿತಾಂಶಗಳನ್ನು ಇಲ್ಲದಂತೆ ಮಾಡಬಲ್ಲ ಸಂತಾನವನ್ನು ಒದಗಿಸುವ ಆತನ ವಾಗ್ದಾನದಲ್ಲಿ ಯೆಹೋವ ದೇವರ ನ್ಯಾಯ, ಪ್ರೀತಿ, ಶಕ್ತಿ, ಮತ್ತು ವಿವೇಕಗಳು ವ್ಯಕ್ತವಾದವು. (ಆದಿಕಾಂಡ 3:15) ಎಂಥ ಒಂದು ಅದ್ಭುತಕರ ಸೃಷ್ಟಿಕರ್ತನು ನಮಗಿದ್ದಾನೆ!
ದೇವರನ್ನು ಅನುಸರಿಸಲು ಪ್ರಯತ್ನಗಳು
ಇನ್ನು ಮುಂದೆ ಪರಿಪೂರ್ಣರಲ್ಲದ್ದಿದರೂ, ಮಾನವರು ಇನ್ನು ಕೂಡ ದೇವರ ಗುಣಗಳನ್ನು ಪ್ರದರ್ಶಿಸಬಲ್ಲರು. ಆದುದರಿಂದ, ಪೌಲನು ತನ್ನ ದಿನಗಳ ಕ್ರೈಸ್ತರನ್ನು ಉತ್ತೇಜಿಸಿದ್ದು: “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.” (ಎಫೆಸ 5:1) ಆದರೂ, ಇತಿಹಾಸದಲ್ಲೆಲ್ಲಾ, ದೇವರ ಗುಣಗಳಿಗೆ ಅನೇಕರು ಮಿತಿ ಮೀರಿದ ಅಸಡ್ಡೆಯನ್ನು ಪ್ರದರ್ಶಿಸಿರುತ್ತಾರೆ. ನೋಹನ ದಿನಗಳಷ್ಟರಲ್ಲಿ, ಜನರು ಎಷ್ಟೊಂದು ಭ್ರಷ್ಟರಾದರೆಂದರೆ ಯೆಹೋವನು ನೋಹ ಮತ್ತು ಅವನ ಕುಟುಂಬವನ್ನು ಬಿಟ್ಟು ಇಡೀ ಮಾನವಕುಲವನ್ನು ನಾಶಮಾಡಲು ನಿರ್ಧರಿಸಿದನು. ನೋಹನು “ನೀತಿ[ನ್ಯಾಯ]ವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ” ಆಗಿದ್ದನು, ಮತ್ತು ದೇವರ ಅಪ್ಪಣೆಗಳನ್ನು ನೆರವೇರಿಸುವುದರ ಮೂಲಕ ದೇವರಿಗಾಗಿ ತನ್ನ ಪ್ರೀತಿಯನ್ನು ಅವನು ಪ್ರದರ್ಶಿಸಿದನು.a “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.” (ಆದಿಕಾಂಡ 6:9, 22) ನೋಹನು ತನ್ನ ಜೊತೆ ಮಾನವರಿಗಾಗಿ ಪ್ರೀತಿಯನ್ನು ಮತ್ತು ನ್ಯಾಯಕ್ಕಾಗಿ ಆತನ ನಿಕಟ ಸಂಬಂಧವನ್ನು “ಸುನೀತಿಯನ್ನು ಸಾರುವವನಾಗಿ” ಇರುವುದರ ಮೂಲಕ ತೋರಿಸಿದನು. (2 ಪೇತ್ರ 2:5) ದೊಡ್ಡ ತೇಲು ಪೆಟ್ಟಿಗೆಯನ್ನು ಕಟ್ಟಲು, ಅದರೊಳಗೆ ಆಹಾರವನ್ನು ಶೇಖರಿಸಿಡಲು, ಪ್ರಾಣಿಗಳನ್ನು ಒಟ್ಟುಗೂಡಿಸಲು, ಮತ್ತು ಯೆಹೋವನು ಅಪ್ಪಣೆಯಿತ್ತಂತೆ ತೇಲು ಪೆಟ್ಟಿಗೆಯೊಳಗೆ ಹೋಗಲು ದೇವರ ಮಾರ್ಗದರ್ಶನೆಯನ್ನು ಅನುಸರಿಸುವುದರ ಮೂಲಕ ಅವನು ವಿವೇಕವನ್ನು ತೋರಿಸಿದನು ಮತ್ತು ಅವನ ದೈಹಿಕ ಶಕ್ತಿಯನ್ನು ಯೋಗ್ಯವಾಗಿ ಉಪಯೋಗಿಸಿದನು. ಅವನ ದುಷ್ಟ ನೆರೆಯವರು ಅವನನ್ನು ಭ್ರಷ್ಟಗೊಳಿಸಲು ಬಿಡದಿರುವುದರಲ್ಲಿ ಅವನು ನೀತಿಯ ಪ್ರೀತಿಯನ್ನು ಕೂಡ ತೋರಿಸಿದನು.
ದಿವ್ಯ ಗುಣಗಳನ್ನು ಅದೇ ವಿಧಾನದಲ್ಲಿ ಪ್ರದರ್ಶಿಸಿದ ಇನ್ನು ಅನೇಕರನ್ನು ಬೈಬಲ್ ವರ್ಣಿಸುತ್ತದೆ. ದೇವರ ಸ್ವರೂಪದಲ್ಲಿ ಪರಿಪೂರ್ಣನಾಗಿದ್ದ ಯೇಸು ಕ್ರಿಸ್ತನು ಇವರಲ್ಲಿ ಅಗ್ರಗಣ್ಯನು, ಹೀಗಿರುವುದರಿಂದ ಅವನು ಹೀಗನ್ನಶಕ್ತನಾದನು: “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.” (ಯೋಹಾನ 14:9) ಯೇಸುವು ಪ್ರದರ್ಶಿಸಿದ ಗುಣಗಳಲ್ಲಿ ಪ್ರಮುಖವಾದದ್ದು ಅವನ ಪ್ರೀತಿಯಾಗಿತ್ತು. ತಂದೆಗಾಗಿ ಮತ್ತು ಮಾನವಕುಲಕ್ಕಾಗಿ ಅವನ ಪ್ರೀತಿಯು ಅವನನ್ನು ಅವನ ಸ್ವರ್ಗೀಯ ಮನೆಯನ್ನು ಬಿಡಲು ಮತ್ತು ಭೂಮಿಯ ಮೇಲೆ ಮಾನವನಂತೆ ಜೀವಿಸಲು ನಡೆಸಿತು. ಅದು ಅವನನ್ನು ಅವನ ನೀತಿಯ ನಡತೆಯ ಮೂಲಕ ಅವನ ತಂದೆಯನ್ನು ಮಹಿಮೆಪಡಿಸಲು ಮತ್ತು ಮಾನವಕುಲಕ್ಕೆ ರಕ್ಷಣೆಯ ಸುವಾರ್ತೆಯನ್ನು ಸಾರುವಂತೆ ನಡೆಸಿತು. (ಮತ್ತಾಯ 4:23; ಯೋಹಾನ 13:31) ಅನಂತರ, ಪ್ರೀತಿಯು ಅವನನ್ನು ತನ್ನ ಪರಿಪೂರ್ಣ ಜೀವವನ್ನು ಮಾನವಕುಲದ ರಕ್ಷಣೆಗಾಗಿ ಒಪ್ಪಿಸಿಕೊಡುವಂತೆ, ಮತ್ತು ಅತಿ ಪ್ರಾಮುಖ್ಯವಾಗಿ, ದೇವರ ಹೆಸರನ್ನು ಪವಿತ್ರೀಕರಿಸುವಂತೆ ನಡೆಸಿತು. (ಯೋಹಾನ 13:1) ದೇವರನ್ನು ಅನುಸರಿಸಲು ಶ್ರಮಿಸುವುದರಲ್ಲಿ, ಯೇಸು ಕ್ರಿಸ್ತನಿಗಿಂತ ಇನ್ನಾವುದಾದರೂ ಉತ್ತಮ ಮಾದರಿಯು ಇದೆಯೋ?—1 ಪೇತ್ರ 2:21.
ಇಂದು ನಾವು ಹೆಚ್ಚಾಗಿ ದೇವರಂತೆ ಆಗಬಲ್ಲೆವು ಹೇಗೆ?
ಇಂದು ನಾವು, ದೇವರ ಗುಣಗಳನ್ನು ಹೇಗೆ ಪ್ರದರ್ಶಿಸಬಹುದು ಮತ್ತು ದೇವರ ಸ್ವರೂಪದಲ್ಲಿ ಕ್ರಿಯೆಗೈಯಬಹುದು? ಮೊದಲು ಪ್ರೀತಿಯ ಗುಣವನ್ನು ಪರಿಗಣಿಸಿರಿ. ಯೇಸು ಅಂದದ್ದು: “ನಿನ್ನ ದೇವರಾಗಿರುವ ಕರ್ತನನ್ನು [ಯೆಹೋವನನ್ನು, NW] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.” ದೇವರಿಗಾಗಿ ಪ್ರೀತಿಯನ್ನು ನಾವು ಹೇಗೆ ತೋರಿಸುತ್ತೇವೆ? ಅಪೊಸ್ತಲ ಯೋಹಾನನು ಉತ್ತರಿಸಿದ್ದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.”—ಮತ್ತಾಯ 22:37; 1 ಯೋಹಾನ 5:3.
ನಿಶ್ಚಯವಾಗಿಯೂ, ಯೆಹೋವನ ಆಜ್ಞೆಗಳನ್ನು ಪಾಲಿಸಲು, ನಾವು ಅವುಗಳನ್ನು ತಿಳಿದಿರಬೇಕು. ಅದರಲ್ಲಿ ದೇವರ ವಾಕ್ಯವಾದ ಬೈಬಲನ್ನು, ಮತ್ತು ಬೈಬಲ್ ಸಾಹಿತ್ಯಗಳನ್ನು ಓದುವುದು, ಅಧ್ಯಯನ ನಡೆಸುವುದು, ಮತ್ತು ಮನನಮಾಡುವುದು ಒಳಗೂಡಿರುತ್ತದೆ. ಕೀರ್ತನೆಗಾರನಂತೆ, ನಾವು ಹೇಳಶಕ್ತರಾಗಬೇಕು ಏನಂದರೆ: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.” (ಕೀರ್ತನೆ 119:97) ದೇವರ ವಾಕ್ಯದ ಆಳವಾಗುತ್ತಾ ಹೋಗುವ ತಿಳಿವಳಿಕೆಯನ್ನು ನಾವು ಪಡೆದಂತೆ, ದೇವರ ಆಲೋಚನಾ ಮಾರ್ಗದಿಂದ ತುಂಬಿಕೊಳ್ಳುವವರಾಗುತ್ತೇವೆ. ನಾವು ನೀತಿಯನ್ನು ಪ್ರೀತಿಸುವವರೂ ನಿಯಮರಾಹಿತ್ಯವನ್ನು ದ್ವೇಷಿಸುವವರೂ ಆಗುತ್ತೇವೆ. (ಕೀರ್ತನೆ 45:7) ಆದಾಮನು ತಪ್ಪನ್ನು ಅಲ್ಲಿಯೇ ಮಾಡಿದ್ದು. ಅವನು ದೇವರ ನಿಯಮವನ್ನು ತಿಳಿದಿದ್ದನು, ಆದರೆ ಅದಕ್ಕೆ ಅಂಟಿಕೊಂಡಿರಲು ಬೇಕಾಗುವಷ್ಟು ಪ್ರೀತಿಯನ್ನು ಅವನು ತೋರಿಸಲಿಲ್ಲ. ದೇವರ ವಾಕ್ಯವನ್ನು ಓದುವಾಗ, ನಾವು ಸತತವಾಗಿ ನಮ್ಮನ್ನೇ ಕೇಳಿಕೊಳ್ಳಬೇಕಾದದ್ದು, ‘ಇದು ನನಗೆ ಹೇಗೆ ಅನ್ವಯಿಸುತ್ತದೆ? ನನ್ನ ನಡತೆಯನ್ನು ದೇವರ ಗುಣಗಳೊಂದಿಗೆ ಹೆಚ್ಚಿನ ಹೊಂದಿಕೆಯಲ್ಲಿ ತರಲು ನಾನೇನು ಮಾಡಬಲ್ಲೆ?’
ಯೇಸು ಮತ್ತೂ ಹೇಳಿದ್ದು: “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾಯ 22:39) ಪ್ರತಿಯೊಬ್ಬ ಆರೋಗ್ಯಕರ ವ್ಯಕ್ತಿಯು ತನ್ನನ್ನು ಪ್ರೀತಿಸುತ್ತಾನೆ ಮತ್ತು ತನಗಾಗಿ ಉತ್ತಮವಾದದ್ದನ್ನೇ ಬಯಸುತ್ತಾನೆ. ಅದು ತಪ್ಪಲ್ಲ. ಆದರೆ ನಾವು ನಮ್ಮ ನೆರೆಯವರಿಗಾಗಿ ಸದೃಶವಾದ ಪ್ರೀತಿಯನ್ನು ತೋರಿಸುತ್ತೇವೋ? “ಉಪಕಾರ ಮಾಡಲು ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ,” ಎಂಬ ಬೈಬಲಿನ ಕಟ್ಟಳೆಯನ್ನು ನಾವು ಅನುಸರಿಸುತ್ತೇವೋ?—ಜ್ಞಾನೋಕ್ತಿ 3:27; ಗಲಾತ್ಯ 6:10.
ವಿವೇಕವೆಂಬ ಗುಣದ ಕುರಿತು ಏನು? ನಾವು ಈ ಗುಣವನ್ನು ಪ್ರದರ್ಶಿಸಲು ಹುಡುಕುವುದು ಬೈಬಲ್ ಅಧ್ಯಯನಕ್ಕೆ ನಮ್ಮನ್ನು ನಡೆಸುತ್ತದೆ ಯಾಕಂದರೆ ಅದು ದೈವಿಕ ವಿವೇಕದ ಭಂಡಾರವಾಗಿದೆ. ಕೀರ್ತನೆ 119:98-100 ಓದುವುದು: “ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ; ಸದಾಕಾಲವು ಅವೇ ನನಗಿವೆ. ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವದರಿಂದ ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ. ನಿನ್ನ ನೇಮಗಳನ್ನು ಕೈಕೊಂಡಿರುವದರಿಂದ ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.” ಜ್ಞಾನೋಕ್ತಿ 3:18 ರಲ್ಲಿ, ವಿವೇಕವನ್ನು “ಜೀವದ ಮರ” ಎಂಬುದಾಗಿ ಸೂಚಿಸಿದೆ. ನಾವು ವಿವೇಕವನ್ನು ಹೊಂದಿ, ಅದನ್ನು ಪ್ರಯೋಗಿಸುವಲ್ಲಿ, ದೇವರ ನೆಚ್ಚಿಕೆಯನ್ನು ಮತ್ತು ನಿತ್ಯ ಜೀವದ ಬಹುಮಾನವನ್ನು ಪಡೆಯುವೆವು.—ಪ್ರಸಂಗಿ 7:12.
ನ್ಯಾಯದ ಕುರಿತೇನು? ಈ ದುಷ್ಟ ಲೋಕದಲ್ಲಿ, ನ್ಯಾಯವು ದೇವರನ್ನು ಮೆಚ್ಚಿಸುವವರಿಗೆ ಅತ್ಯಾವಶ್ಯಕವಾದ ಗುಣವಾಗಿದೆ. ಯೇಸುವು ನೀತಿ(ನ್ಯಾಯ)ಯನ್ನು ಪ್ರೀತಿಸಿದನು ಮತ್ತು ನಿಯಮರಾಹಿತ್ಯವನ್ನು ದ್ವೇಷಿಸಿದನು. (ಇಬ್ರಿಯ 1:9) ಕ್ರೈಸ್ತರು ಇಂದು ಅದನ್ನೇ ಮಾಡುತ್ತಾರೆ. ನ್ಯಾಯವು ಅವರನ್ನು ಯೋಗ್ಯ ಗುಣಗಳನ್ನು ಗಣ್ಯಮಾಡುವಂತೆ ನಡೆಸುತ್ತದೆ. ಅವರು ಈ ಲೋಕದ ಅನೀತಿಯ ಮಾರ್ಗಗಳನ್ನು ತೊರೆಯುತ್ತಾರೆ ಮತ್ತು ಅವರು ತಮ್ಮ ಜೀವಿತದಲ್ಲಿ ದೇವರ ಚಿತ್ತ ನೆರವೇರಿಸುವುದನ್ನು ಪ್ರಾಮುಖ್ಯ ಸಂಗತಿಯನ್ನಾಗಿ ಮಾಡುತ್ತಾರೆ.—1 ಯೋಹಾನ 2:15-17.
ಶಕ್ತಿಯ ಸಂಬಂಧಲ್ಲಿಯಾದರೋ, ನಮ್ಮೆಲ್ಲರಲ್ಲಿ ಇದು ತಕ್ಕಷ್ಟು ಇದೆ. ದೈಹಿಕ ಮತ್ತು ಬೌದ್ಧಿಕ ಶಕ್ತಿಯು ನಮ್ಮಲ್ಲಿ ಸ್ವಾಭಾವಿಕವಾಗಿ ಉಂಟು, ಮತ್ತು ನಾವು ಕ್ರೈಸ್ತರಾಗಿ ಬೆಳೆಯುವಾಗ ಆತ್ಮಿಕ ರೀತಿಯಲ್ಲಿ ವಿಕಸಿಸುತ್ತೇವೆ. ನಾವು ಬಲಹೀನರೆಂದು ಕಂಡುಬರುವುದಾದರೂ ಯೆಹೋವನು ತನ್ನ ಪವಿತ್ರ ಆತ್ಮದಿಂದ, ನಮ್ಮ ಶಕ್ತಿಯನ್ನು ಯೆಹೋವನ ಚಿತ್ತವನ್ನು ಪೂರೈಸುವಷ್ಟರಮಟ್ಟಿಗೆ ವರ್ಧಿಸುತ್ತಾನೆ. ಪೌಲನಂದದ್ದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:13) ನಾವು ಯೆಹೋವನ ಆತ್ಮಕ್ಕಾಗಿ ಪ್ರಾರ್ಥಿಸುವಲ್ಲಿ ಅದೇ ಬಲವು ಲಭಿಸುತ್ತದೆ.
ಸುವಾರ್ತೆಯನ್ನು ಸಾರುವುದು
“ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವುದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ,” ಎಂಬ ಆಜೆಗ್ಞೆ ನಮ್ಮ ವಿಧೇಯತೆಯಲ್ಲಿ ದೇವರ ಆ ನಾಲ್ಕು ಪ್ರಮುಖ ಗುಣಗಳನ್ನು ನಾವು ವ್ಯಕ್ತಪಡಿಸುವುದು ಉತ್ತಮವಾಗಿ ತೋರಿಬರುತ್ತದೆ. (ಮತ್ತಾಯ 28:19, 20) ಅಂಥ ಶಿಕ್ಷಣ ಕಾರ್ಯವು ಪ್ರತಿಕ್ರಿಯಿಸುವವರಿಗೆ ಜೀವವನ್ನು ತರುತ್ತದೆ. ಹೆಚ್ಚಿನ ಸಮಯ, ನಮಗೆ ಪೂರ್ಣ ಅಪರಿಚಿತರಾಗಿದ್ದು ಆರಂಭಿಸುವವರಿಗಾಗಿ ಇದು ಪ್ರೀತಿಯ ಎಂತಹ ಶ್ರೇಷ್ಠ ಪ್ರದರ್ಶನವಾಗಿದೆ!
ಇನ್ನೂ, ಅಂಥ ಶಿಕ್ಷಣವು ವಿವೇಕದ ಮಾರ್ಗವಾಗಿ ಇದೆ. ಅದು ಬಾಳುವ ಫಲಗಳನ್ನು ತರುತ್ತದೆ. “ಹೀಗಿರುವುದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ,” ಎಂದು ಇತರ ಯಾವ ಕಾರ್ಯದ ಬಗ್ಗೆ ಹೇಳಬಹುದು? (1 ತಿಮೊಥೆಯ 4:16) ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ಯಾರೂ ನಷ್ಟ ಹೊಂದುವವರಿಲ್ಲ. ಕೇಳುವವರು ಮತ್ತು ಕಲಿಸುವವರು ಇಬ್ಬರೂ ನಿತ್ಯ ಜೀವದ ಆಶೀರ್ವಾದಗಳನ್ನು ಪಡೆಯುವರು.
ನ್ಯಾಯದ ವಿಷಯದಲ್ಲಿಯಾದರೋ, ಕ್ರೈಸ್ತರು ನ್ಯಾಯ ಮತ್ತು ನೀತಿಯ ಸೂತ್ರಗಳನ್ನು ಅವರ ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ನಾವು ಅವರನ್ನು, ‘ನ್ಯಾಯದ ದೇವರಾದ’ ಯೆಹೋವನನ್ನು ಸೇವಿಸಲು ಸಹಾಯಿಸುತ್ತೇವೆ. (ಮಲಾಕಿಯ 2:17) ಇಂದು ಯಾರು ತಮ್ಮ ಜೀವಿತಗಳನ್ನು ಯೆಹೋವನನ್ನು ಸೇವಿಸಲು ಸಮರ್ಪಿಸುತ್ತಾರೋ ಮತ್ತು ಅದನ್ನು ನಂಬಿಗಸ್ತಿಕೆಯಿಂದ ಮಾಡಿ ಮುಗಿಸುತ್ತಾರೋ ಅವರು ನೀತಿವಂತರೆಂದು ಘೊಷಿಸಲ್ಪಟ್ಟು, ನ್ಯಾಯೀಕರಿಸಲ್ಪಟ್ಟು, ಅರ್ಮಗೆದೋನಿನ ಅವರ ಪಾರಾಗುವಿಕೆಗೆ ನಡೆಸಲ್ಪಡುವರು.—ರೋಮಾಪುರ 3:24; ಯಾಕೋಬ 2:24-26.
ಲೋಕವ್ಯಾಪಕವಾಗಿ ಸುವಾರ್ತೆಯ ಸಾರುವಿಕೆ ಮತ್ತು ಕಲಿಸುವಿಕೆಯು ಶಕ್ತಿಯ ಎಂಥ ಒಂದು ಪ್ರದರ್ಶನವಾಗಿದೆ! (ಮತ್ತಾಯ 24:14) ಎಲ್ಲಿ ಹೆಚ್ಚಿನವರು ಕೇಳಲು ಇಚ್ಛಿಸುವುದಿಲ್ಲವೊ ಅಂತಹ ಟೆರಿಟೊರಿಗಳಲ್ಲಿ ಸತತವಾಗಿ ಸಾರಲು ತಾಳ್ಮೆಯು ಬೇಕಾಗುತ್ತದೆ. ಆದರೆ ಯೆಹೋವನು, ಆತನ ಆತ್ಮದ ಮೂಲಕ, ಕೊನೇ ವರೆಗೆ ತಾಳಿಕೊಳ್ಳಲು ಅಗತ್ಯವಿರುವ ಬಲವನ್ನು ಕೊಡುತ್ತಾನೆ.—ಯೆಶಾಯ 40:30, 31; ಮತ್ತಾಯ 24:13; ಲೂಕ 11:13.
ಆದಾಮನ ಅಪರಿಪೂರ್ಣ ಸಂತಾನದೋಪಾದಿ, ನಾವು ಈ ಉತ್ತಮ ಗುಣಗಳನ್ನು ಪರಿಪೂರ್ಣವಾಗಿ ಪ್ರಯೋಗಿಸಲಾರೆವು ನಿಜ. ಆದರೂ, ಮಾನವನು ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟನು ಎಂಬುದನ್ನು ನೆನಪಿನಲ್ಲಿಡಿರಿ, ಮತ್ತು ನಾವು ದೇವರಂತಾಗಲು ಹೆಚ್ಚೆಚ್ಚಾಗಿ ಪ್ರಯತ್ನಿಸುವುದಾದರೆ, ಆಗ ನಾವು ನಮ್ಮ ಅಸ್ತಿತ್ವಕ್ಕಾಗಿ ಇರುವ ಕಾರಣವನ್ನು ಭಾಗಶಃ ನೆರವೇರಿಸುತ್ತೇವೆ. (ಪ್ರಸಂಗಿ 12:13) ನಮ್ಮಿಂದಾದಷ್ಟು ಉತ್ತಮವಾದುದನ್ನು ಮಾಡಲು ನಾವು ನಮ್ಮನ್ನು ಶ್ರಮಿಸಿಕೊಳ್ಳುವಲ್ಲಿ ಮತ್ತು ನಾವು ತಪ್ಪಿದಾಗ ಕ್ಷಮಾಪಣೆಗಾಗಿ ಕೇಳಿಕೊಳ್ಳುವಲ್ಲಿ, ಆಗ ಎಲ್ಲಿ ನಾವು ಕ್ರಮೇಣ ಪರಿಪೂರ್ಣತೆಯನ್ನು ತಲಪುವೆವೊ ಆ ದೇವರ ನೀತಿಯ ಹೊಸ ಲೋಕದೊಳಗೆ ಪಾರಾಗಲು ನಾವು ನಿರೀಕ್ಷಿಸಬಹುದು. ಅನಂತರ, ಎಲ್ಲರು ಯೆಹೋವ ದೇವರ ಗುಣಗಳನ್ನು ಪೂರ್ಣವಾಗಿ ಪ್ರದರ್ಶಿಸುವ ಪರಿಪೂರ್ಣ ಮಾನವರಿಂದ ತುಂಬಿದ ಪ್ರಮೋದವನ ಭೂಮಿಯಲ್ಲಿ ನಾವು ಇರುವೆವು. ಎಂಥ ಒಂದು ಆನಂದ! ಅಂತಿಮವಾಗಿ, ಹೇಳಿಕೆಯ ಪೂರ್ಣ ಅರ್ಥದಲ್ಲಿ, ಮಾನವರು ದೇವರ ಸ್ವರೂಪದಲ್ಲಿರುವರು.
[ಅಧ್ಯಯನ ಪ್ರಶ್ನೆಗಳು]
a “ನೀತಿ” ಮತ್ತು “ನ್ಯಾಯ” ಅತಿ ನಿಕಟ ಸಂಬಂಧವುಳ್ಳವುಗಳಾಗಿವೆ. ಗ್ರೀಕ್ ಶಾಸ್ತ್ರವಚನಗಳಲ್ಲಿ, ಅವುಗಳು ಡೈಕೈಆಸ್ ಎಂಬ ಒಂದು ಶಬ್ದದಿಂದ ಪ್ರತಿನಿಧೀಕರಿಸಲ್ಪಟ್ಟಿವೆ.
[ಪುಟ 25 ರಲ್ಲಿರುವ ಚಿತ್ರ]
ಯೆಹೋವನ ದಿವ್ಯ ಗುಣಗಳನ್ನು ಬೆಳೆಸುವುದು ಹೇಗೆ ಎಂದು ಯೇಸುವು ನಮಗೆ ತೋರಿಸಿದನು
[ಪುಟ 26 ರಲ್ಲಿರುವ ಚಿತ್ರ]
ಅಂತಿಮವಾಗಿ, ಮಾನವರು ಪೂರ್ಣ ಅರ್ಥದಲ್ಲಿ ದೇವರ ಸ್ವರೂಪದಲ್ಲಿರುವರು