ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೀತಿ—ಬಾಯಿ ಮಾತಿನ ಸಂಪ್ರದಾಯಗಳಿಂದಲ್ಲ
    ಕಾವಲಿನಬುರುಜು—1991 | ನವೆಂಬರ್‌ 1
    • 12. (ಎ) ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಹಿಬ್ರೂ ಶಾಸ್ತ್ರವಚನಗಳ ನಿರ್ದೇಶನಕ್ಕೆ ಪ್ರಸ್ತಾಪಿಸುವ ತನ್ನ ಸಾಮಾನ್ಯ ವಿಧಾನದಲ್ಲಿ ಯಾವ ಬದಲಾವಣೆ ಮಾಡಿದನು ಮತ್ತು ಏಕೆ? (ಬಿ) “ಎಂದು ಹೇಳಿಯದೆ” ಎಂಬ ಹೇಳಿಕೆಯ ಆರನೆಯ ಉಪಯೋಗದಲ್ಲಿ ನಾವೇನನ್ನು ಕಲಿಯುತ್ತೇವೆ?

      12 ಯೇಸು ಹಿಂದೆ ಹಿಬ್ರೂ ಶಾಸ್ತ್ರದಿಂದ ಉಲ್ಲೇಕಿಸಿದಾಗ, “ಎಂದು ಬರೆದದೆ” ಎಂದು ಹೇಳಿದ್ದನು. (ಮತ್ತಾಯ 4:4, 7, 10) ಆದರೆ ಪರ್ವತ ಪ್ರಸಂಗದಲ್ಲಿ ಆರು ಸಾರಿ ಯೇಸುವು, ಹಿಬ್ರೂ ಶಾಸ್ತ್ರಗಳ ಉದ್ದರಣೆಗಳೆಂದು ಕಂಡುಬಂದ ಹೇಳಿಕೆಗಳನ್ನು ನಿರ್ದೇಶಿಸಿದಾಗ, “ಎಂದು ಹೇಳಿಯದೆ” ಎಂದು ಪ್ರಸ್ತಾಪಿಸಿದ್ದಾನೆ. (ಮತ್ತಾಯ 5:21, 27, 31, 33, 38, 43) ಯಾಕೆ? ಯಾಕೆಂದರೆ ಅವನು ದೇವರ ಆಜ್ಞೆಗಳನ್ನು ಪ್ರತಿರೋಧಿಸಿದ ಫರಿಸಾಯ ಸಂಪ್ರದಾಯಗಳ ಬೆಳಕಿನಲ್ಲಿ ಶಾಸ್ತ್ರ ವಚನಗಳ ಅರ್ಥವಿವರಣೆ ಮಾಡುತ್ತಿದ್ದನು. (ಧರ್ಮೋಪದೇಶಕಾಂಡ 4:2; ಮತ್ತಾಯ 15:3) ಇದು ಯೇಸುವಿನ ಆರನೆಯ ಮತ್ತು ಕೊನೆಯ ನಿರ್ದೇಶನೆಯಲ್ಲಿ ವ್ಯಕ್ತವಾಗುತ್ತದೆ: “ನಿಮ್ಮ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕೆಂದು ಹೇಳಿದೆ ಎಂಬದಾಗಿ ಕೇಳಿದೀರ್ದಷ್ಟೆ.” ಆದರೆ ಮೋಶೆಯ ಯಾವ ನಿಯಮವಾದರೂ “ನಿಮ್ಮ ವೈರಿಗಳನ್ನು ಹಗೆ ಮಾಡಿರಿ” ಎಂದು ಹೇಳಿರುವುದಿಲ್ಲ. ಅದನ್ನು ಹೇಳಿದವರು ಫರಿಸಾಯರು ಮತ್ತು ಶಾಸ್ತ್ರಿಗಳು. ನಿಮ್ಮ ನೆರೆಯವರನ್ನು ಪ್ರೀತಿಸುವ ನಿಯಮದ ಅವರ ಅರ್ಥ ವಿವರಣೆ ಅದಾಗಿತ್ತು—ನಿಮ್ಮ ಯೆಹೂದ್ಯ ನೆರೆಯವರನ್ನು ಪ್ರೀತಿಸು, ಬೇರೆಯವರನ್ನಲ್ಲ.

  • ನೀತಿ—ಬಾಯಿ ಮಾತಿನ ಸಂಪ್ರದಾಯಗಳಿಂದಲ್ಲ
    ಕಾವಲಿನಬುರುಜು—1991 | ನವೆಂಬರ್‌ 1
    • 17. “ಕಣ್ಣಿನ ಪ್ರತಿಯಾಗಿ ಕಣ್ಣು ಮತ್ತು ಹಲ್ಲಿಗೆ ಪ್ರತಿಯಾಗಿ ಹಲ್ಲು” ಇದಕ್ಕಿಂತ ಯಾವ ಉತ್ತಮ ವಿಧಾನವನ್ನು ಯೇಸು ಕಲಿಸಿದನು?

      17 ಅನಂತರ ಯೇಸು ಹೇಳಿದ್ದು: “ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗಿಸು ಅಂತ ಹೇಳಿದೆಯೆಂದು ನೀವು ಕೇಳಿದೀರ್ದಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ಕೆಡುಕನನ್ನು ಎದುರಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು.” (ಮತ್ತಾಯ 5:38-42) ಇಲ್ಲಿ ಯೇಸು ಪೆಟ್ಟು ತಗಲುವ ಹಾಗೆ ಹೊಡೆಯುವುದನ್ನು ಸೂಚಿಸದೆ ಅಪಮಾನ ಮಾಡುವ ಹಿಂಗೈಯೇಟಿಗೆ ಸೂಚಿಸಿದ್ದಾನೆ. ಪ್ರತಿಯಾಗಿ ಬೈಯುವ ಮೂಲಕ ನಿಮ್ಮನ್ನು ಅಲ್ಪೀಕರಿಸಬೇಡಿ. ಕೆಡುಕಿಗೆ ಬದಲಾಗಿ ಕೆಡುಕನ್ನು ಮಾಡಬೇಡ. ಬದಲಾಗಿ, ಒಳ್ಳೇದನ್ನು ಮಾಡು ಮತ್ತು ಹೀಗೆ, “ಕೆಟ್ಟದನ್ನು ಒಳ್ಳೇದರಿಂದ ಜಯಿಸು.”—ರೋಮಾಪುರ 12:17-21.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ