ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೀತಿ—ಬಾಯಿ ಮಾತಿನ ಸಂಪ್ರದಾಯಗಳಿಂದಲ್ಲ
    ಕಾವಲಿನಬುರುಜು—1991 | ನವೆಂಬರ್‌ 1
    • 17. “ಕಣ್ಣಿನ ಪ್ರತಿಯಾಗಿ ಕಣ್ಣು ಮತ್ತು ಹಲ್ಲಿಗೆ ಪ್ರತಿಯಾಗಿ ಹಲ್ಲು” ಇದಕ್ಕಿಂತ ಯಾವ ಉತ್ತಮ ವಿಧಾನವನ್ನು ಯೇಸು ಕಲಿಸಿದನು?

      17 ಅನಂತರ ಯೇಸು ಹೇಳಿದ್ದು: “ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗಿಸು ಅಂತ ಹೇಳಿದೆಯೆಂದು ನೀವು ಕೇಳಿದೀರ್ದಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ಕೆಡುಕನನ್ನು ಎದುರಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು.” (ಮತ್ತಾಯ 5:38-42) ಇಲ್ಲಿ ಯೇಸು ಪೆಟ್ಟು ತಗಲುವ ಹಾಗೆ ಹೊಡೆಯುವುದನ್ನು ಸೂಚಿಸದೆ ಅಪಮಾನ ಮಾಡುವ ಹಿಂಗೈಯೇಟಿಗೆ ಸೂಚಿಸಿದ್ದಾನೆ. ಪ್ರತಿಯಾಗಿ ಬೈಯುವ ಮೂಲಕ ನಿಮ್ಮನ್ನು ಅಲ್ಪೀಕರಿಸಬೇಡಿ. ಕೆಡುಕಿಗೆ ಬದಲಾಗಿ ಕೆಡುಕನ್ನು ಮಾಡಬೇಡ. ಬದಲಾಗಿ, ಒಳ್ಳೇದನ್ನು ಮಾಡು ಮತ್ತು ಹೀಗೆ, “ಕೆಟ್ಟದನ್ನು ಒಳ್ಳೇದರಿಂದ ಜಯಿಸು.”—ರೋಮಾಪುರ 12:17-21.

  • ನೀತಿ—ಬಾಯಿ ಮಾತಿನ ಸಂಪ್ರದಾಯಗಳಿಂದಲ್ಲ
    ಕಾವಲಿನಬುರುಜು—1991 | ನವೆಂಬರ್‌ 1
    • 20. ಮೋಶೆಯ ಧರ್ಮಶಾಸ್ತ್ರವನ್ನು ಬದಿಗೊತ್ತುವ ಬದಲಾಗಿ ಯೇಸು ಹೇಗೆ ಅದರ ಆಳವನ್ನು ಮತ್ತು ವಿಸ್ತಾರ್ಯವನ್ನು ಅಧಿಕಗೊಳಿಸಿ ಅದನ್ನು ಇನ್ನೂ ಹೆಚ್ಚು ಉಚ್ಛತ್ತಮ ಮಟ್ಟದಲಿಟ್ಲನ್ಟು?

      20 ಹೀಗೆ ಯೇಸು ನಿಯಮಶಾಸ್ತ್ರದ ಭಾಗಗಳಿಗೆ ಸೂಚಿಸುತ್ತಾ, “ಆದರೆ ನಾನು ನಿಮಗೆ ಹೇಳುವದೇನಂದರೆ” ಎಂದು ಕೂಡಿಸಿದಾಗ, ಆತನು ಮೋಶೆಯ ನಿಯಮವನ್ನು ಬದಿಗೆ ಹಾಕಿರಲಿಲ್ಲ ಅಥವಾ ಅದರ ಸ್ಥಳದಲ್ಲಿ ಬೇರೇನನ್ನೋ ಇಟ್ಟಿರಲಿಲ್ಲ. ಇಲ್ಲ, ಬದಲಾಗಿ ಆತನು ಅದರ ಹಿನ್ನೆಲೆಯ ಭಾವವನ್ನು ತೋರಿಸುವ ಮೂಲಕ ಅದರ ಬಲವನ್ನು ಆಳಗೊಳಿಸಿದ್ದನು ಮತ್ತು ವಿಸ್ತಾರಗೊಳಿಸಿದ್ದನು. ಸಹೋದರತ್ವದ ಬಗ್ಗೆ ಒಂದು ಉಚ್ಛತಮ ನಿಯಮವು ಯಾವಾಗಲೂ ಇಟ್ಟುಕೊಳ್ಳುವ ಮನಸ್ತಾಪವನ್ನು ಕೊಲೆಪಾತವೆಂದು ತೀರ್ಪಿಸುತ್ತದೆ. ಶುದ್ಧತೆಯ ಒಂದು ಉಚ್ಛತ್ತಮ ನಿಯಮವು, ಕಾಮಿಸುವ ಯೋಚನೆ ಮಾಡುತ್ತಾ ಇರುವದನ್ನು ವ್ಯಭಿಚಾರವೆಂದು ಖಂಡಿಸುತ್ತದೆ. ಮದುವೆಯ ಕುರಿತಾದ ಒಂದು ಉಚ್ಛತಮ ನಿಯಮವು ವಿವಾಹವಿಚ್ಚೇಧದ ಕ್ಷುಲ್ಲಕ ಕಾರಣಗಳನ್ನು ವ್ಯಭಿಚಾರಿ ಪುನರ್ವಿವಾಹಗಳಿಗೆ ನಡಿಸುವ ಮಾರ್ಗವೆಂದು ನಿರಾಕರಿಸುತ್ತದೆ. ಸತ್ಯನುಡಿಯುವ ವಿಷಯವಾದ ಒಂದು ಉಚ್ಛತಮ ನಿಯಮವು ಪದೆಪದೇ ಆಣೆ ಇಡುವುದನ್ನು ಅನಾವಶ್ಯಕವೆಂದು ತೋರಿಸುತ್ತದೆ. ದೀನತೆಯ ಕುರಿತಾದ ಒಂದು ಉಚ್ಛತ್ತಮ ನಿಯಮವು ಪ್ರತೀಕಾರ ಮಾಡುವದನ್ನು ಬದಿಗೆ ತಳ್ಳುತ್ತದೆ. ಪ್ರೀತಿಯ ಕುರಿತಾದ ಒಂದು ಉಚ್ಛತಮ ಸೂತ್ರವು ಸೀಮಿತಗಳಿಲ್ಲದ ದೈವಿಕ ಪ್ರೀತಿಗಾಗಿ ಕೇಳಿಕೊಳ್ಳುತ್ತದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ