ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಇಕ್ಕಟ್ಟಿನ ಸಮಯಗಳಲ್ಲಿ ಯೆಹೋವನಲ್ಲಿ ಪೂರ್ಣ ಭರವಸೆಯನ್ನು ಇಡಿರಿ
    ಕಾವಲಿನಬುರುಜು—2003 | ಸೆಪ್ಟೆಂಬರ್‌ 1
    • 7, 8. (ಎ) ಅಪರಿಪೂರ್ಣ ಮಾನವರು ಪ್ರಾಪಂಚಿಕ ವಿಷಯಗಳ ಕುರಿತು ಅತಿಯಾಗಿ ಚಿಂತಿಸುವ ಪ್ರವೃತ್ತಿಯುಳ್ಳವರಾಗಿದ್ದಾರೆ ಎಂಬ ಅರಿವು ತನಗಿದೆಯೆಂಬುದನ್ನು ಯೇಸು ಹೇಗೆ ತೋರಿಸಿಕೊಟ್ಟನು? (ಪಾದಟಿಪ್ಪಣಿಯನ್ನೂ ನೋಡಿರಿ.) (ಬಿ) ಅನಾವಶ್ಯಕವಾದ ಚಿಂತೆಯನ್ನು ತಡೆಗಟ್ಟುವುದರ ಬಗ್ಗೆ ಯೇಸು ಯಾವ ವಿವೇಕಯುತ ಬುದ್ಧಿವಾದವನ್ನು ನೀಡಿದನು?

      7 ಪರ್ವತ ಪ್ರಸಂಗದಲ್ಲಿ ಯೇಸು ಉಪದೇಶಿಸಿದ್ದು: “ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ [“ಚಿಂತೆಮಾಡುವುದನ್ನು ನಿಲ್ಲಿಸಿರಿ,” NW].”b (ಮತ್ತಾಯ 6:25) ಅಪರಿಪೂರ್ಣ ಮಾನವರು ಮೂಲಭೂತ ಆವಶ್ಯಕತೆಗಳನ್ನು ಪಡೆದುಕೊಳ್ಳುವುದರ ಕುರಿತು ಸ್ವಾಭಾವಿಕವಾಗಿಯೇ ಚಿಂತೆಮಾಡುತ್ತಾರೆ ಎಂಬುದು ಯೇಸುವಿಗೆ ತಿಳಿದಿತ್ತು. ಹೀಗಿರುವಾಗ ಈ ವಿಷಯಗಳ ಕುರಿತು ನಾವು ‘ಚಿಂತೆಮಾಡುವುದನ್ನು ನಿಲ್ಲಿಸುವುದು’ ಹೇಗೆ? ‘ಮೊದಲು ದೇವರ ರಾಜ್ಯಕ್ಕಾಗಿ ತವಕಪಡಿರಿ’ ಎಂದು ಯೇಸು ಹೇಳಿದನು. ನಾವು ಯಾವುದೇ ಸಮಸ್ಯೆಗಳನ್ನು ಎದುರಿಸಲಿ, ನಮ್ಮ ಜೀವನದಲ್ಲಿ ನಾವು ಯಾವಾಗಲೂ ಯೆಹೋವನ ಆರಾಧನೆಗೆ ಆದ್ಯತೆಯನ್ನು ನೀಡಬೇಕು. ನಾವು ಹೀಗೆ ಮಾಡುವುದಾದರೆ, ನಮ್ಮ ದೈನಂದಿನ ಆವಶ್ಯಕತೆಗಳು ನಮ್ಮ ಸ್ವರ್ಗೀಯ ತಂದೆಯಿಂದ “ದೊರಕುವವು.” ನಮಗೆ ಆವಶ್ಯಕವಾಗಿರುವುದನ್ನು ಆತನು ಹೇಗಾದರೂ ಒದಗಿಸುವನು.​—ಮತ್ತಾಯ 6:33.

  • ಇಕ್ಕಟ್ಟಿನ ಸಮಯಗಳಲ್ಲಿ ಯೆಹೋವನಲ್ಲಿ ಪೂರ್ಣ ಭರವಸೆಯನ್ನು ಇಡಿರಿ
    ಕಾವಲಿನಬುರುಜು—2003 | ಸೆಪ್ಟೆಂಬರ್‌ 1
    • b ಇಲ್ಲಿ ತಿಳಿಸಲ್ಪಟ್ಟಿರುವ ಚಿಂತೆಯು, “ಜೀವನದ ಎಲ್ಲಾ ಆನಂದವನ್ನು ತೆಗೆದುಬಿಡುವ ಕ್ಲೇಶಭರಿತ ಭಯವಾಗಿದೆ” ಎಂದು ಹೇಳಲಾಗುತ್ತದೆ. ಆದರೆ “ಚಿಂತೆಮಾಡಬೇಡಿರಿ” ಅಥವಾ “ಆತಂಕಗೊಳ್ಳಬೇಡಿರಿ” ಎಂದು ಭಾಷಾಂತರಿಸಲ್ಪಟ್ಟಿರುವ ಅಭಿವ್ಯಕ್ತಿಗಳು, ನಾವು ಚಿಂತೆಮಾಡಲು ಅಥವಾ ಆತಂಕಗೊಳ್ಳಲು ಆರಂಭಿಸಬಾರದು ಎಂಬುದನ್ನು ಅರ್ಥೈಸುತ್ತವೆ. ಆದರೆ ಒಂದು ಕೃತಿಯು ಹೇಳುವುದು: “ಗ್ರೀಕ್‌ ಕ್ರಿಯಾಪದದ ಧಾತುರೂಪವು ವರ್ತಮಾನಕಾಲದ ಆಜ್ಞಾರ್ಥಕ ಪದವಾಗಿದ್ದು, ಈಗಾಗಲೇ ಮಾಡಲ್ಪಡುತ್ತಿರುವ ಯಾವುದೋ ಒಂದು ಕ್ರಿಯೆಯನ್ನು ನಿಲ್ಲಿಸಲು ಅಪ್ಪಣೆ ನೀಡುವುದನ್ನು ಅರ್ಥೈಸುತ್ತದೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ