ಹಕ್ಕಿಗಳು ಮತ್ತು ಹೂವುಗಳಿಂದ ಒಂದು ಪಾಠ
ಬೇರೆ ಯಾವುದಕ್ಕಿಂತಲೂ ಹೆಚ್ಚಾಗಿ ಇಂದು ಜನರನ್ನು ಅನೇಕವೇಳೆ ಯಾವುದು ಚಿಂತಿತರನ್ನಾಗಿ ಮಾಡುತ್ತದೆ? ಅಧಿಕಾಂಶ ಜನರಿಗೆ ಅದು, ಅವರ ಕುಟುಂಬದ ಜೀವನೋಪಾಯಕ್ಕಾಗಿ ಒದಗಿಸಲು ಸಾಕಷ್ಟು ಹಣವಿರುವುದು ಅಥವಾ ತಮ್ಮ ಜೀವಿತದ ಮಟ್ಟವನ್ನು ಉತ್ತಮಗೊಳಿಸಲು ಶಕ್ತರಾಗಿರುವುದಾಗಿದೆ.
ವರಮಾನವನ್ನೂ ವೆಚ್ಚವನ್ನೂ ಸರಿಹೊಂದಿಸುವುದು, ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗಲೂ ಒಂದು ದೊಡ್ಡ ಚಿಂತೆಯಾಗಿತ್ತು. ಆದರೆ ಈ ನ್ಯಾಯಸಮ್ಮತವಾದ ಚಿಂತೆಯು ಆತ್ಮಿಕ ವಿಷಯಗಳನ್ನು ತಡೆಗಟ್ಟುವ ಒಂದು ಪ್ರಧಾನ ಚಿಂತೆಯಾಗಿ ಪರಿಣಮಿಸಸಾಧ್ಯವಿದೆ ಎಂದಾತನು ಎಚ್ಚರಿಸಿದನು. ತನ್ನ ಅಭಿಪ್ರಾಯವನ್ನು ದೃಷ್ಟಾಂತಿಸಲಿಕ್ಕಾಗಿ, ಹಕ್ಕಿಗಳನ್ನೂ ಹೂವುಗಳನ್ನೂ ನಿಕಟವಾಗಿ ಗಮನಿಸುವಂತೆ ಯೇಸು ತನ್ನ ಶಿಷ್ಯರಿಗೆ ಹೇಳಿದನು.
ಪಕ್ಷಿಗಳಿಗೆ ಪ್ರತಿದಿನವೂ ತಿನ್ನುವ ಅಗತ್ಯವಿದೆ—ಅವುಗಳ ಅಧಿಕ ಜೀವದ್ರವ್ಯ ಪರಿಣಾಮಗತಿಯಿಂದಾಗಿ, ಪ್ರಮಾಣಾನುಗುಣವಾಗಿ ನಮಗಿಂತಲೂ ತುಂಬ ಹೆಚ್ಚು. ಅದಲ್ಲದೆ, ಅವು ಬೀಜ ಬಿತ್ತಲಾರವು, ಕೊಯ್ಯಲಾರವು, ಇಲ್ಲವೇ ಭವಿಷ್ಯತ್ತಿಗಾಗಿ ಆಹಾರವನ್ನು ಕೂಡಿಸಿಡಲಾರವು. ಆದರೂ, ಯೇಸು ಅವಲೋಕಿಸಿದಂತೆ, ನಮ್ಮ ‘ಪರಲೋಕದಲ್ಲಿರುವ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ.’ (ಮತ್ತಾಯ 6:26) ತದ್ರೀತಿಯಲ್ಲಿ ದೇವರು, ಸುಂದರವಾದ “ಅಡವಿಯ ಹೂವುಗಳಿಗೆ” ಅತ್ಯುತ್ತಮವಾದ ಅಲಂಕಾರಿಕ ವಸ್ತ್ರವನ್ನು ಹೊದಿಸುತ್ತಾನೆ.—ಮತ್ತಾಯ 6:28-30.
ನಾವು ಭೌತಿಕ ಅಗತ್ಯಗಳನ್ನು ಯೋಗ್ಯವಾದ ಯಥಾದೃಷ್ಟಿಯಲ್ಲಿಟ್ಟು, ಆತ್ಮಿಕ ವಿಷಯಗಳಿಗೆ ಆದ್ಯತೆಯನ್ನು ಕೊಟ್ಟಲ್ಲಿ, ಆವಶ್ಯಕವಾದ ಆಹಾರ ಮತ್ತು ಬಟ್ಟೆಯು ನಮಗೂ ಇರುವಂತೆ ದೇವರು ನಿಶ್ಚಯವಾಗಿ ನೋಡಿಕೊಳ್ಳುವನು. ಯೆಹೋವ ದೇವರು ಹಕ್ಕಿಗಳನ್ನೂ ಹೂವುಗಳನ್ನೂ ಪರಾಮರಿಸುವಲ್ಲಿ, ಆತನನ್ನು ಪ್ರೀತಿಸುವವರನ್ನು ಮತ್ತು ‘ರಾಜ್ಯವನ್ನೂ ಆತನ ನೀತಿಯನ್ನು ಹುಡುಕುತ್ತಾ’ ಇರುವವರನ್ನು ಆತನು ನಿಶ್ಚಯವಾಗಿಯೂ ಪರಾಮರಿಸುವನು. (ಮತ್ತಾಯ 6:33) ನೀವು ದೇವರ ರಾಜ್ಯದ ಅಭಿರುಚಿಗಳನ್ನು ನಿಮ್ಮ ಜೀವನದಲ್ಲಿ ಪ್ರಥಮವಾಗಿ ಇಡುತ್ತಿದ್ದೀರೊ?