ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 1-3
“ಸ್ವರ್ಗದ ರಾಜ್ಯವು ಸಮೀಪಿಸಿದೆ”
ಯೋಹಾನನ ಬಟ್ಟೆ ಮತ್ತು ಹೊರತೋರಿಕೆ ಅವನು ಸರಳ ಜೀವನ ನಡೆಸುತ್ತಿದ್ದನು ಹಾಗೂ ಯೆಹೋವನ ಚಿತ್ತವನ್ನು ಮಾಡಲು ಸಂಪೂರ್ಣವಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದನು ಎಂದು ತೋರಿಸಿತು
ಯೋಹಾನನು ಮಾಡಿದ ಯಾವುದೇ ತ್ಯಾಗಕ್ಕೆ ಹೋಲಿಸಿದರೆ ಅವನು ಯೇಸುವಿಗಿಂತ ಮುಂದೆ ಹೋಗಿ ಆತನಿಗಾಗಿ ದಾರಿ ಸಿದ್ಧಮಾಡಿದ ಸುಯೋಗ ದೊಡ್ಡದಾಗಿತ್ತು
ಸರಳ ಜೀವನ ನಡೆಸಿದರೆ ಹೆಚ್ಚು ಸೇವೆ ಮಾಡಲಿಕ್ಕಾಗುತ್ತದೆ ಮತ್ತು ತುಂಬ ತೃಪ್ತಿ ಸಿಗುತ್ತದೆ. ಸರಳ ಜೀವನ ನಡೆಸಲು . . .
ನಿಮ್ಮ ಅಗತ್ಯಗಳೇನೆಂದು ಗುರುತಿಸಿ
ಅನಗತ್ಯ ಖರ್ಚು ಮಾಡಬೇಡಿ
ಪ್ರಾಯೋಗಿಕವಾದ ಬಜೆಟ್ ಮಾಡಿ
ಉಪಯೋಗಿಸದೇ ಇರುವ ವಸ್ತುಗಳನ್ನು ಕೊಟ್ಟುಬಿಡಿ, ಬಿಸಾಕಿ
ಸಾಲವನ್ನು ತೀರಿಸಿಬಿಡಿ
ಐಹಿಕ ಕೆಲಸಕ್ಕೆ ತುಂಬ ಸಮಯ ಕೊಡಬೇಡಿ
ಯೋಹಾನನು ಸಾಮಾನ್ಯವಾಗಿ ಮಿಡತೆ ಮತ್ತು ಕಾಡುಜೇನು ತಿನ್ನುತ್ತಿದ್ದನು
ನಾನು ಸರಳ ಜೀವನ ನಡೆಸಿದರೆ ಯಾವ ಗುರಿ ಮುಟ್ಟಬಹುದು?