ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 10/15 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1994
  • ಅನುರೂಪ ಮಾಹಿತಿ
  • “ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ.”
    ಕಾವಲಿನಬುರುಜು—1995
  • “ನನ್ನಿಂದ ಕಲಿತುಕೊಳ್ಳಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಈಗ ಮೃತರಾಗಿರುವ ದಶಲಕ್ಷಾಂತರ ಜನರು ಪುನಃ ಜೀವಿಸುವರು
    ಕಾವಲಿನಬುರುಜು—1991
  • ಮೃತರು ಬದುಕಸಾಧ್ಯವಿದೆ!
    ಮಹಾ ಬೋಧಕನಿಂದ ಕಲಿಯೋಣ
ಕಾವಲಿನಬುರುಜು—1994
w94 10/15 ಪು. 31

ವಾಚಕರಿಂದ ಪ್ರಶ್ನೆಗಳು

ಹವ್ವಳು ಮತ್ತು ಅನಂತರ ಆದಾಮನು, ಒಳ್ಳೆಯದರ ಮತ್ತು ಕೆಟ್ಟದ್ದರ ಅರಿವಿನ ಮರದ ಹಣ್ಣನ್ನು ತಿಂದಾಗ, ಅವರು ತಿಂದದ್ದು ಒಂದು ಸೇಬು ಹಣ್ಣನ್ನೊ?

ನಮಗೆ ಗೊತ್ತಿಲ್ಲ. ಆ ‘ನಿಷಿದ್ಧ ಹಣ್ಣು’ ಒಂದು ಸೇಬು ಎಂದು ಅನೇಕರು ಭಾವಿಸಿದ್ದಾರೆ, ಮತ್ತು ಶತಮಾನಗಳಲ್ಲಿ ಕಲಾಕಾರರು ಅನೇಕ ವೇಳೆ ಅದನ್ನು ಹಾಗೆ ಚಿತ್ರಿಸಿದ್ದಾರೆ. ಆದರೆ ಬೈಬಲು ಆ ಮರವನ್ನಾಗಾಲಿ, ಅದರ ಹಣ್ಣನ್ನಾಗಲಿ ಹೆಸರಿಸುವುದಿಲ್ಲ. ಹವ್ವಳು ಅದನ್ನು, ‘ತೋಟದ ಮಧ್ಯದಲ್ಲಿರುವ ಆ ಮರದ ಫಲ’ ಎಂದು ಮಾತ್ರ ಹೇಳಿ ಸೂಚಿಸುತ್ತಾಳೆ.—ಆದಿಕಾಂಡ 3:3.

ಶಾಸ್ತ್ರಗಳ ಮೇಲಿನ ಒಳನೋಟ (ಇಂಗ್ಲಿಷ್‌) ಪುಸ್ತಕದಲ್ಲಿ ಈ ಸಂಬಂಧದಲ್ಲಿ “ಆ್ಯಪ್‌ಲ್‌” ಎಂಬ ಲೇಖನ ರಸಕರ.

“ಟ್ಯಾಪುವಾಕ್‌ ಎಂಬ ಹೀಬ್ರು ಪದದಿಂದ ಸೂಚಿತವಾದ ಮರದ ಮತ್ತು ಹಣ್ಣಿನ ಗುರುತಿನ ಸಂಬಂಧದಲ್ಲಿ ಬಹಳ ಊಹೆಗಳಿವೆ. ಅದರ ಸುವಾಸನೆ ಯಾ ಪರಿಮಳ ದಿಂದ ಪ್ರತ್ಯೇಕಿಸಲ್ಪಡುವ ವಸ್ತುವನ್ನು ಈ ಪದವು ಸೂಚಿಸುತ್ತದೆ. ಇದು, ‘ಊದು, ಏದು, ಉಸಿರಾಡಲು ಹೋರಾಡು,’ ಎಂಬ ಅರ್ಥವಿರುವ ನೇಪಾಖ್‌ ಎಂಬ ಮೂಲದಿಂದ ಬರುತ್ತದೆ. ಇದರ ಕುರಿತು ಎಮ್‌. ಸಿ. ಫಿಷರ್‌ ಬರೆದುದು: ‘ಸಂಬಂಧವು [ನೇಪಾಖ್‌ ಗೆ] ಮೊದಮೊದಲು ಶಬ್ದಾರ್ಥಕವಾಗಿ ಎಳೆಯಲ್ಪಟ್ಟಿರುವುದಾಗಿ ತೋರಿಬಂದರೂ “ಉಸಿರಾಡು,” “ವಾಸನೆಯನ್ನು ನಿಶ್ವಾಸಿಸು,” ಎಂಬ ವಿಚಾರಗಳು ಸಂಬಂಧವುಳ್ಳವುಗಳಾಗಿವೆ. ಉಪಾರ್ಥವಾದ ಪೂವ ಎಂದರೆ (ಗಾಳಿಯ) “ಊದು,” ಮತ್ತು “ಸುವಾಸನೆಯೊಂದನ್ನು ನಿಶ್ವಾಸಿಸು, ಸುಗಂಧ ಸೂಸುವವನಾಗಿರು” ಎಂದಾಗಿದೆ.—ತಿಯಲಾಜಿಕಲ್‌ ವರ್ಡ್‌ಬುಕ್‌ ಆಫ್‌ ದಿ ಓಲ್ಡ್‌ ಟೆಸ್ಟಮೆಂಟ್‌, ಆರ್‌. ಎಲ್‌. ಹ್ಯಾರಿಸ್‌ ಸಂಪಾದಕತ್ವದಲ್ಲಿ, 1980, ಸಂಪು. 2, ಪು. 586.

“ಸೇಬಿನ ಬದಲಿಗೆ ಕಿತ್ತಿಳೆ, ನಿಂಬೆ, ಕ್ವಿನ್ಸ್‌ ಕಾಯಿ, ಏಪ್ರಿಕಾಟ್‌ ಸೇರಿರುವ ಅನೇಕ ಫಲಗಳು ಸೂಚಿಸಲ್ಪಟ್ಟಿವೆ. . . . ಆದರೂ, ಸಂಬಂಧಿತ ಆ್ಯರಬಿಕ್‌ ಪದವಾದ ಟುಫಕ್‌ ಪ್ರಧಾನವಾಗಿ ‘ಸೇಬು’ ಎಂಬ ಅರ್ಥದಲ್ಲಿದೆ ಮತ್ತು ಟಾಪುವ ಮತ್ತು ಬೆತ್‌-ಟಾಪುವ (ಈ ಹಣ್ಣು ಆ ಪ್ರದೇಶದಲ್ಲಿದ್ದುದರಿಂದ ಪ್ರಾಯಶಃ ಹಾಗೆ ಹೆಸರಿಸಿದ್ದಿರಬಹುದು) ಎಂಬ ಹೀಬ್ರು ಸ್ಥಳಗಳ ಹೆಸರುಗಳು ಅವುಗಳ ಈ ಪದದ ಬಳಕೆಯ ಮೂಲಕ ಅವುಗಳ ಆ್ಯರಬಿಕ್‌ ಸಮಾನಾರ್ಥಗಳಲ್ಲಿ ಉಳಿಸಲ್ಪಟ್ಟಿವೆ. (ಯೆಹೋ. 12:17; 15:34, 53; 16:8; 17:8) ಈ ಸ್ಥಳಗಳು ತಗ್ಗು ಪ್ರದೇಶದಲ್ಲಲ್ಲ, ಹವಾಮಾನವು ತುಸು ಸಾಧಾರಣವಾಗಿದ್ದ ಗುಡ್ಡ ಪ್ರದೇಶದಲ್ಲಿದ್ದವು. ಇದಲ್ಲದೆ, ಹಿಂದೆ ಹವಾಮಾನದಲ್ಲಿ ತುಸು ಬದಲಾವಣೆಗಳಾಗಿದ್ದ ಸಾಧ್ಯತೆಯನ್ನು ಇಲ್ಲವೆಂದು ಹೇಳುವುದು ಅಸಾಧ್ಯ. ಸೇಬು ಹಣ್ಣಿನ ಮರಗಳು ಇಂದು ಇಸ್ರಾಯೇಲಿನಲ್ಲಿ ಬೆಳೆಯುವುದು ನಿಜ ಮತ್ತು ಹೀಗೆ ಅದು ಬೈಬಲಿನ ವರ್ಣನೆಗೆ ತೃಪ್ತಿಕರವಾಗಿ ಹೊಂದಿಕೊಂಡಿರುತ್ತದೆ. ಕಳೆದ ಶತಮಾನದಲ್ಲಿ ಅನೇಕ ವರ್ಷಗಳನ್ನು ಸಿರಿಯ ಮತ್ತು ಪ್ಯಾಲೆಸ್ಟೀನಿನಲ್ಲಿ ಕಳೆದ ವಿಲ್ಯಮ್‌ ಥಾಮ್ಸನ್‌, ಫಿಲಿಷ್ಟಿಯ ತಗ್ಗಿನಲ್ಲಿದ್ದ ಅಷ್ಕೆಲೋನ್‌ ಪ್ರದೇಶದಲ್ಲಿ ಸೇಬು ಹಣ್ಣಿನ ತೋಟಗಳನ್ನು ತಾನು ಕಂಡೆನೆಂದೂ ವರದಿಸಿದರು.—ದ ಲ್ಯಾಂಡ್‌ ಆ್ಯಂಡ್‌ ದ ಬುಕ್‌, ಜೆ. ಗ್ರ್ಯಾಂಡ್‌ ಅವರಿಂದ ಪರಿಷ್ಕರಿಸಲ್ಪಟ್ಟದ್ದು, 1910, ಪುಟಗಳು 545, 546.

“ಸೇಬು ಮರ (ಪೈರಸ್‌ ಮೇಲಸ್‌) ವನ್ನು ಪ್ರಧಾನವಾಗಿ, ಎಲ್ಲಿ ಶೂನೇಮ್ಯಳ ಕುರುಬ ಸಂಗಾತಿಯ ಪ್ರೇಮಾಭಿವ್ಯಕ್ತಿಗಳು ಸೇಬು ಮರದ ಸುಖಾನುಭವದ ನೆರಳಿಗೆ ಮತ್ತು ಅದರ ಹಣ್ಣಿನ ಸವಿಗೆ ಹೋಲಿಸಲ್ಪಡುತ್ತವೋ ಆ ಸೊಲೊಮೋನನ ಪರಮಗೀತದಲ್ಲಿ ಹೆಸರಿಸಲಾಗಿದೆ. (ಪರಮ 2:3, 5) ಸರದಿಯಾಗಿ, ಅವನು ಅವಳ ಉಸಿರನ್ನು ಸೇಬು ಹಣ್ಣುಗಳ ಪರಿಮಳಕ್ಕೆ ಹೋಲಿಸುತ್ತಾನೆ. (ಪರಮ 7:8; 8:5 ಸಹ ನೋಡಿ.) ಜ್ಞಾನೋಕ್ತಿಗಳಲ್ಲಿ (25:11) ಯೋಗ್ಯವಾದ ಸಮಯೋಚಿತ ಮಾತುಗಳು, ‘ಬೆಳ್ಳಿಯ ನಕಾಸಿಯಲ್ಲಿ ಇಡಲ್ಪಟ್ಟ ಚಿನ್ನದ [ಸೇಬು, NW] ಹಣ್ಣುಗಳಿಗೆ’ ಹೋಲಿಸಲ್ಪಡುತ್ತವೆ. ಸೇಬಿಗಿರುವ ಉಳಿದ ಒಂದೇ ಸೂಚನೆ ಯೋವೇಲ 1:12 ರಲ್ಲಿದೆ. ಸೇಬು ಏದೆನಿನ ನಿಷಿದ್ಧ ಫಲವಾಗಿರುವ ಸಂಬಂಧದಲ್ಲಿರುವ ಸಾಮಾನ್ಯ ಸಂಪ್ರದಾಯವು ಯಾವ ಶಾಸ್ತ್ರಾಧಾರವೂ ಇಲ್ಲದ್ದಾಗಿರುತ್ತದೆ. ತದ್ರೀತಿ, “ಕಣ್ಣಿನ ಸೇಬು,” ಎಂಬ ಅಭಿವ್ಯಕ್ತಿಯು ಕಿಂಗ್‌ ಜೇಮ್ಸ್‌ ವರ್ಷನ್‌ ನಲ್ಲಿರುವುದಾದರೂ (ಕೀರ್ತ. 17:8; ಜ್ಞಾನೋ. 7:2; ಇತ್ಯಾದಿ) ಅದು ಹೀಬ್ರು ಅಭಿವ್ಯಕ್ತಿಯಲ್ಲ. ಅದರ ಅಕ್ಷರಾರ್ಥದ ಭಾಷಾಂತರವು, ‘[ಒಬ್ಬನ] ಕಣ್ಣುಗುಡ್ಡೆಯ ಕನೀನಿಕೆ,’ ಎಂದಾಗಿದೆ.”—ಶಾಸ್ತ್ರಗಳ ಮೇಲಿನ ಒಳನೋಟ, (ಇಂಗ್ಲಿಷ್‌) ಸಂಪುಟ 1, ಪುಟಗಳು 131-2, 1988 ರಲ್ಲಿ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ನ್ಯೂ ಯಾರ್ಕ್‌, ಇನ್ಕ್‌, ಪ್ರಕಾಶಿತ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ