ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lff ಪಾಠ 15
  • ಯೇಸು ಯಾರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ಯಾರು?
  • ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೆಚ್ಚನ್ನ ತಿಳಿಯೋಣ
  • ನೀವೇನು ಉತ್ತರ ಕೊಡ್ತೀರಾ?
  • ಅಥವಾ: Your other goal
  • ಇದನ್ನೂ ನೋಡಿ
  • ಯೇಸು ಕ್ರಿಸ್ತ ಯಾರು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಯೇಸು ಕ್ರಿಸ್ತನು ಯಾರು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಯೇಸು ಕ್ರಿಸ್ತನು ದೇವರ ಜ್ಞಾನಕ್ಕೆ ಕೀಲಿ ಕೈ
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ಮೆಸ್ಸೀಯ! ದೇವರ ರಕ್ಷಣಾ ಮಾಧ್ಯಮ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
lff ಪಾಠ 15
ಪಾಠ 15. ಯೇಸು ಗದ್ದೆಯಲ್ಲಿ ನಡೆಯುತ್ತಿದ್ದಾನೆ.

ಪಾಠ 15

ಯೇಸು ಯಾರು?

ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ

ಇತಿಹಾಸದಲ್ಲಿ ಅತ್ಯಂತ ಹೆಸರುವಾಸಿಯಾದ ವ್ಯಕ್ತಿಗಳಲ್ಲಿ ಯೇಸು ಕೂಡ ಒಬ್ಬ. ಆದ್ರೆ ಎಷ್ಟೋ ಜನರಿಗೆ ಯೇಸುವಿನ ಹೆಸರು ಬಿಟ್ಟು ಹೆಚ್ಚೇನು ಗೊತ್ತಿಲ್ಲ. ಅಷ್ಟೇ ಅಲ್ಲ ತುಂಬ ಜನರಿಗೆ ಯೇಸು ನಿಜವಾಗಿಯೂ ಯಾರು ಅನ್ನೋದರ ಬಗ್ಗೆ ಬೇರೆಬೇರೆ ಅಭಿಪ್ರಾಯಗಳಿವೆ. ಹಾಗಾದ್ರೆ ಬೈಬಲ್‌ ಯೇಸುವಿನ ಬಗ್ಗೆ ಏನು ಹೇಳುತ್ತೆ?

1. ಯೇಸು ಯಾರು?

ಯೇಸು ಸ್ವರ್ಗದಲ್ಲಿರುವ ಶಕ್ತಿಶಾಲಿ ದೇವದೂತ. ಯೆಹೋವ ದೇವರು ಬೇರೆಲ್ಲವನ್ನ ಸೃಷ್ಟಿ ಮಾಡೋದಕ್ಕೆ ಮುಂಚೆ ಯೇಸುವನ್ನ ಸೃಷ್ಟಿಮಾಡಿದನು. ಅದಕ್ಕೆ ಬೈಬಲ್‌ ಯೇಸುವನ್ನ, “ಮೊಟ್ಟಮೊದ್ಲು ಸೃಷ್ಟಿಯಾದವನು” ಅಂತ ಹೇಳುತ್ತೆ. (ಕೊಲೊಸ್ಸೆ 1:15) ಅಷ್ಟೇ ಅಲ್ಲ, ಯೇಸುವನ್ನ ಬೈಬಲ್‌ ದೇವರ “ಒಬ್ಬನೇ ಮಗ” ಅಂತ ಕರೆಯುತ್ತೆ. ಯಾಕೆಂದ್ರೆ ಯೆಹೋವ ದೇವರು ನೇರವಾಗಿ ಸೃಷ್ಟಿ ಮಾಡಿರೋದು ಯೇಸುವನ್ನ ಮಾತ್ರ. (ಯೋಹಾನ 3:16) ಈ ವಿಶ್ವದಲ್ಲಿ ಉಳಿದ ಎಲ್ಲವನ್ನ ಸೃಷ್ಟಿ ಮಾಡೋಕೆ ಯೇಸು ತನ್ನ ತಂದೆಯಾದ ಯೆಹೋವ ದೇವರ ಜೊತೆ ಕೆಲಸ ಮಾಡಿದನು. (ಜ್ಞಾನೋಕ್ತಿ 8:30 ಓದಿ.) ಯೆಹೋವ ದೇವರೊಂದಿಗೆ ಯೇಸುವಿಗೆ ಆಪ್ತವಾದ ಸ್ನೇಹ ಸಂಬಂಧ ಇದೆ. ಯೆಹೋವ ದೇವರ ಸಂದೇಶಗಳನ್ನ, ನಿರ್ದೇಶನಗಳನ್ನ ಬೇರೆಯವರಿಗೆ ತಲುಪಿಸುವ ಕೆಲಸವನ್ನ ಯೇಸು ನಿಷ್ಠೆಯಿಂದ ಮಾಡುತ್ತಿದ್ದಾನೆ. ಅದಕ್ಕೇ ಆತನನ್ನ “ವಾಕ್ಯ” ಅಂತನೂ ಕರೆಯಲಾಗಿದೆ.—ಯೋಹಾನ 1:14.

2. ಯೇಸು ಭೂಮಿಗೆ ಯಾಕೆ ಬಂದನು?

ಸುಮಾರು 2000 ವರ್ಷಗಳ ಹಿಂದೆ ಸ್ವರ್ಗದಲ್ಲಿದ್ದ ಯೇಸುವಿನ ಜೀವವನ್ನ ಯೆಹೋವನು ಅದ್ಭುತವಾಗಿ ಮರಿಯ ಅನ್ನೋ ಕನ್ಯೆಯ ಗರ್ಭದಲ್ಲಿ ಇಟ್ಟನು. ಹೀಗೆ ಯೇಸು ಒಬ್ಬ ಮನುಷ್ಯನಾಗಿ ಹುಟ್ಟಿದನು. (ಲೂಕ 1:34, 35 ಓದಿ.) ಯೇಸು, ಕ್ರಿಸ್ತನಾಗಿ ಅಥವಾ ಮೆಸ್ಸೀಯನಾಗಿ ಈ ಭೂಮಿಯಲ್ಲಿರೋ ಎಲ್ಲಾ ಮಾನವರ ಜೀವವನ್ನು ರಕ್ಷಿಸೋಕೆ ಬಂದನು.a ಬೈಬಲ್‌ನಲ್ಲಿ ಮೆಸ್ಸೀಯನ ಬಗ್ಗೆ ಇರೋ ಎಲ್ಲಾ ಭವಿಷ್ಯವಾಣಿಗಳು ಯೇಸುವಿನ ಮೂಲಕ ನೆರವೇರಿದವು. ಹಾಗಾಗಿ ಜನರಿಗೆ, ಯೇಸುವೇ “ಕ್ರಿಸ್ತ, ಜೀವವುಳ್ಳ ದೇವರ ಮಗ” ಅಂತ ಗುರುತಿಸಲಿಕ್ಕಾಯ್ತು.—ಮತ್ತಾಯ 16:16.

3. ಯೇಸು ಈಗ ಎಲ್ಲಿದ್ದಾನೆ?

ಯೇಸು ಸತ್ತುಹೋದ ಮೇಲೆ ದೇವರು ಆತನನ್ನ ದೇವದೂತನಾಗಿ ಎಬ್ಬಿಸಿದನು. ನಂತರ ಯೇಸು ಸ್ವರ್ಗಕ್ಕೆ ವಾಪಸ್‌ ಹೋದನು. ಅಲ್ಲಿ “ದೇವರು ಆತನನ್ನ ಅತೀ ಉನ್ನತ ಸ್ಥಾನಕ್ಕೆ ಏರಿಸಿದನು.” (ಫಿಲಿಪ್ಪಿ 2:9) ಯೇಸುವಿಗೆ ಈಗ ತುಂಬ ಅಧಿಕಾರ ಇದೆ. ಯೆಹೋವ ದೇವರಿಗೆ ಮಾತ್ರ ಆತನಿಗಿಂತ ಹೆಚ್ಚು ಅಧಿಕಾರವಿರೋದು.

ಹೆಚ್ಚನ್ನ ತಿಳಿಯೋಣ

ಯೇಸು ನಿಜವಾಗಲು ಯಾರು, ಆತನ ಬಗ್ಗೆ ತಿಳಿಯೋದು ಯಾಕೆ ಪ್ರಾಮುಖ್ಯ ಅಂತ ತಿಳಿಯಿರಿ.

ಯೇಸುವಿನ ದೀಕ್ಷಾಸ್ನಾನದ ನಂತ್ರ, ಯೇಸು ಮತ್ತು ಯೋಹಾನ ಸ್ವರ್ಗದಿಂದ ಬಂದ ಧ್ವನಿಯನ್ನ ಕೇಳುತ್ತಿದ್ದಾರೆ.

4. ಯೇಸು ಸರ್ವಶಕ್ತ ದೇವರಲ್ಲ

ಯೇಸು ಈಗ ಸ್ವರ್ಗದಲ್ಲಿ ಶಕ್ತಿಶಾಲಿ ದೇವದೂತನಾಗಿದ್ದಾನೆ. ತನ್ನ ತಂದೆಯಾದ ಯೆಹೋವ ದೇವರ ಅಧಿಕಾರದ ಕೆಳಗಿದ್ದಾನೆ ಅಂತ ಬೈಬಲ್‌ ಹೇಳುತ್ತೆ. ಯೇಸುವಿಗಿರುವ ಅಧಿಕಾರಕ್ಕೂ ಯೆಹೋವ ದೇವರಿಗಿರುವ ಅಧಿಕಾರಕ್ಕೂ ಇರುವ ವ್ಯತ್ಯಾಸವನ್ನ ತಿಳಿಯಲು ವಿಡಿಯೋ ನೋಡಿ.

ವಿಡಿಯೋ: ಯೇಸು ಕ್ರಿಸ್ತನು ದೇವರಾ? (3:22)

ಯೇಸುವಿಗೂ ಯೆಹೋವ ದೇವರಿಗೂ ಇರುವ ವ್ಯತ್ಯಾಸ ತಿಳಿಯಲು ಇಲ್ಲಿ ಕೊಡಲಾಗಿರುವ ವಚನಗಳು ಸಹಾಯಮಾಡುತ್ತೆ. ಪ್ರತಿಯೊಂದು ವಚನವನ್ನು ಓದಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.

ಲೂಕ 1:30-32 ಓದಿ.

  • ಯೇಸುವಿಗೂ “ಸರ್ವೋನ್ನತನಾದ” ಯೆಹೋವ ದೇವರಿಗೂ ಇರುವ ವ್ಯತ್ಯಾಸದ ಬಗ್ಗೆ ದೇವದೂತ ಏನು ಹೇಳಿದನು?

ಮತ್ತಾಯ 3:16, 17 ಓದಿ.

  • ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಸ್ವರ್ಗದಿಂದ ಏನು ಕೇಳಿಸಿತು?

  • ಆ ಧ್ವನಿ ಯಾರದ್ದು?

ಯೋಹಾನ 14:28 ಓದಿ.

  • ಅಪ್ಪ ಮತ್ತು ಮಗ ಇವರಿಬ್ಬರಲ್ಲಿ ಯಾರಿಗೆ ಹೆಚ್ಚು ಅಧಿಕಾರ ಇದೆ?

  • ಯೇಸು ಯೆಹೋವ ದೇವರನ್ನ “ಅಪ್ಪಾ” ಅಂತ ಕರೆದನು. ಇದರಿಂದ ನಮಗೆ ಏನು ಗೊತ್ತಾಗುತ್ತೆ?

ಯೋಹಾನ 12:49 ಓದಿ.

  • ತಾನು ಮತ್ತು ಯೆಹೋವ ಒಂದೇ ಅಂತ ಯೇಸು ಅಂದುಕೊಂಡಿದ್ದನಾ? ನಿಮಗೆ ಏನನಿಸುತ್ತೆ?

5. ಯೇಸುವೇ ಮೆಸ್ಸೀಯ ಅನ್ನೋದಕ್ಕೆ ಆಧಾರಗಳು

ಬೈಬಲಿನಲ್ಲಿ ಮೆಸ್ಸೀಯನ ಬಗ್ಗೆ ಅಂದ್ರೆ ಮಾನವರನ್ನ ರಕ್ಷಿಸಲು ದೇವರು ಆರಿಸಿರುವ ವ್ಯಕ್ತಿಯ ಬಗ್ಗೆ ಹಲವಾರು ಭವಿಷ್ಯವಾಣಿಗಳಿವೆ. ಈ ಭವಿಷ್ಯವಾಣಿಗಳ ಸಹಾಯದಿಂದ ಜನರು ಮೆಸ್ಸೀಯ ಯಾರು ಅಂತ ಸುಲಭವಾಗಿ ಗುರುತಿಸಬಹುದಿತ್ತು. ಈ ವಿಡಿಯೋ ನೋಡಿ, ಇದ್ರಿಂದ ಯೇಸು ಭೂಮಿಗೆ ಬಂದಾಗ ನೆರವೇರಿಸಿದ ಕೆಲವು ಭವಿಷ್ಯವಾಣಿಗಳ ಬಗ್ಗೆ ತಿಳಿಯಬಹುದು.

ವಿಡಿಯೋ: ಯೇಸು ಪ್ರವಾದನೆ ನೆರವೇರಿಸಿದ (3:03)

ಈ ಭವಿಷ್ಯವಾಣಿಗಳನ್ನ ಓದಿ, ನಂತರ ಕೊಡಲಾಗಿರುವ ಪ್ರಶ್ನೆಗಳನ್ನ ಚರ್ಚಿಸಿ:

ಮೆಸ್ಸೀಯ ಎಲ್ಲಿ ಹುಟ್ಟಲಿದ್ದನುb ಅಂತ ತಿಳಿದುಕೊಳ್ಳಲು ಮೀಕ 5:2 ಓದಿ.

  • ಈ ಭವಿಷ್ಯವಾಣಿ ಯೇಸುವಿನಲ್ಲಿ ನೆರವೇರಿತಾ?—ಮತ್ತಾಯ 2:1.

ಮೆಸ್ಸೀಯನ ಮರಣದ ಬಗ್ಗೆ ಇರುವ ಭವಿಷ್ಯವಾಣಿಗಳನ್ನ ತಿಳಿಯಲು ಕೀರ್ತನೆ 34:20 ಮತ್ತು ಜೆಕರ್ಯ 12:10 ಓದಿ.

  • ಈ ಭವಿಷ್ಯವಾಣಿಗಳು ನೆರವೇರಿದ್ವಾ?—ಯೋಹಾನ 19:33-37.

  • ಈ ಭವಿಷ್ಯವಾಣಿಗಳು ನೆರವೇರುವಂತೆ ಯೇಸು ಘಟನೆಗಳನ್ನ ನಿಯಂತ್ರಿಸೋಕೆ ಸಾಧ್ಯ ಇರಲಿಲ್ಲ ಅಂತ ಹೇಗೆ ಹೇಳಬಹುದು?

  • ಈ ಪುರಾವೆಗಳಿಂದ ಯೇಸುವಿನ ಬಗ್ಗೆ ಏನು ಗೊತ್ತಾಗುತ್ತೆ?

6. ಯೇಸು ಬಗ್ಗೆ ಕಲಿಯೋದ್ರಿಂದ ನಮಗೆ ಪ್ರಯೋಜನವಿದೆ

ಯೇಸು ಬಗ್ಗೆ ಮತ್ತು ಆತನಿಗೆ ಯೆಹೋವನು ಕೊಟ್ಟ ಜವಾಬ್ದಾರಿಯ ಬಗ್ಗೆ ತಿಳಿದುಕೊಳ್ಳೋದು ತುಂಬ ಪ್ರಾಮುಖ್ಯ ಅಂತ ಬೈಬಲ್‌ ಹೇಳುತ್ತೆ. ಯೋಹಾನ 14:6; ಮತ್ತು 17:3 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೇಸು ಬಗ್ಗೆ ಕಲಿಯೋದು ಯಾಕಷ್ಟು ಪ್ರಾಮುಖ್ಯ?

ಯೇಸು, ಸ್ತ್ರೀ-ಪುರುಷ ಮತ್ತು ಮಕ್ಕಳಿರೋ ಗುಂಪಿಗೆ ಕಲಿಸುತ್ತಿದ್ದಾನೆ.

ನಾವು ದೇವರ ಸ್ನೇಹಿತರಾಗೋಕೆ ಯೇಸು ದಾರಿ ತೆರೆದನು. ಆತನು ಯೆಹೋವನ ಬಗ್ಗೆ ಸತ್ಯವನ್ನ ಕಲಿಸಿದನು. ಆತನ ಮೂಲಕ ನಾವು ಶಾಶ್ವತ ಜೀವ ಪಡೆಯಬಹುದು

ಕೆಲವರು ಹೀಗಂತಾರೆ: “ಯೆಹೋವನ ಸಾಕ್ಷಿಗಳು ಯೇಸುವನ್ನ ನಂಬಲ್ಲ.”

  • ನೀವೇನು ಉತ್ತರ ಕೊಡ್ತೀರಾ?

ನಾವೇನು ಕಲಿತ್ವಿ

ಯೇಸು ಶಕ್ತಿಶಾಲಿ ದೇವದೂತ, ದೇವರ ಮಗ ಮತ್ತು ಮೆಸ್ಸೀಯ.

ನೆನಪಿದೆಯಾ

  • ಯೇಸುವನ್ನ ಯಾಕೆ “ಮೊಟ್ಟಮೊದ್ಲು ಸೃಷ್ಟಿಯಾದವನು” ಅಂತ ಕರೆಯಲಾಗಿದೆ?

  • ಭೂಮಿಗೆ ಬರೋದಕ್ಕೂ ಮುಂಚೆ ಯೇಸು ಏನು ಮಾಡ್ತಿದ್ದನು?

  • ಯೇಸುನೇ ಮೆಸ್ಸೀಯ ಅಂತ ನಾವು ಹೇಗೆ ಹೇಳಬಹುದು?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಯೇಸುನೇ ಮೆಸ್ಸೀಯ ಅನ್ನೋದ್ರ ಬಗ್ಗೆ ಹೆಚ್ಚನ್ನ ತಿಳಿದುಕೊಳ್ಳಿ.

“ಮೆಸ್ಸೀಯನ ಪ್ರವಾದನೆಗಳು ಯೇಸುವೇ ಮೆಸ್ಸೀಯ ಅಂತ ತೋರಿಸಿಕೊಡುತ್ತಾ?” (jw.org ಲೇಖನ)

ಮಾನವರಿಗೆ ಮಕ್ಕಳು ಹುಟ್ಟುವ ತರಾನೇ ಯೆಹೋವ ದೇವರಿಗೆ ಯೇಸು ಹುಟ್ಟಿದನಾ, ಬೈಬಲ್‌ ಏನು ಹೇಳುತ್ತೆ ಅಂತ ನೋಡಿ.

“ಯೇಸುನ ದೇವರ ಮಗ ಅಂತ ಯಾಕೆ ಕರೀತಾರೆ?”(jw.org ಲೇಖನ)

ಬೈಬಲಿನಲ್ಲಿ ತ್ರಿಯೇಕದ ಬಗ್ಗೆ ಇಲ್ಲ, ಇದರ ಬಗ್ಗೆ ತಿಳಿಯಿರಿ.

“ಯೇಸು ದೇವರಾ?” (ಕಾವಲಿನಬುರುಜು ಲೇಖನ)

ಯೇಸುವಿನ ಬಗ್ಗೆ ಬೈಬಲ್‌ ಏನು ಹೇಳುತ್ತೆ ಅಂತ ಕಲಿತ ಮೇಲೆ ಒಬ್ಬ ಸ್ತ್ರೀಯ ಜೀವನ ಹೇಗೆ ಬದಲಾಯಿತು ಅಂತ ನೋಡಿ.

“ತನ್ನ ನಂಬಿಕೆಯನ್ನ ಪರೀಕ್ಷಿಸಿದ ಯೆಹೂದಿ ಸ್ತ್ರೀ” (ಎಚ್ಚರ! ಲೇಖನ)

a ಯೇಸು ಮಾನವರನ್ನ ಯಾಕೆ ರಕ್ಷಿಸಬೇಕಿತ್ತು ಮತ್ತು ಹೇಗೆ ರಕ್ಷಿಸುತ್ತಾನೆ ಅನ್ನೋದರ ಬಗ್ಗೆ ಪಾಠ 26 ಮತ್ತು 27 ರಲ್ಲಿ ಇದೆ.

b ಯೇಸು ಯಾವಾಗ ಮೆಸ್ಸೀಯನಾದನು ಅನ್ನೋ ಭವಿಷ್ಯವಾಣಿಯ ಬಗ್ಗೆ ತಿಳಿದುಕೊಳ್ಳಲು ಟಿಪ್ಪಣಿ 2 ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ