ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋವನು—ನಿಜ ನ್ಯಾಯ ಮತ್ತು ನೀತಿಯ ಮೂಲನು
    ಕಾವಲಿನಬುರುಜು—1998 | ಆಗಸ್ಟ್‌ 1
    • 11. (ಎ) ಸಬ್ಬತ್‌ದಿನದಂದು ಗುಣಪಡಿಸುವುದರ ಕುರಿತಾಗಿ ಫರಿಸಾಯರು ಯೇಸುವನ್ನು ಪ್ರಶ್ನಿಸಿದ್ದೇಕೆ? (ಬಿ) ಯೇಸುವಿನ ಉತ್ತರವು ಏನನ್ನು ಪ್ರಕಟಪಡಿಸಿತು?

      11 ಇಸವಿ ಸಾ.ಶ. 31ರ ವಸಂತಕಾಲದಲ್ಲಿ, ಗಲಿಲಾಯದಲ್ಲಿನ ತನ್ನ ಶುಶ್ರೂಷೆಯ ಸಮಯದಲ್ಲಿ, ಯೇಸು ಸಭಾಮಂದಿರದಲ್ಲಿ ಕೈಬತ್ತಿದ್ದ ಮನುಷ್ಯನೊಬ್ಬನನ್ನು ಕಂಡನು. ಅದು ಸಬ್ಬತ್‌ ಸಮಯವಾಗಿದ್ದುದರಿಂದ ಫರಿಸಾಯರು ಯೇಸುವಿಗೆ ಹೀಗೆ ಕೇಳಿದರು: “ಸಬ್ಬತ್‌ದಿನದಲ್ಲಿ ಸ್ವಸ್ಥಮಾಡುವದು ಸರಿಯೋ”? ಈ ಬಡ ಮನುಷ್ಯನ ಕಷ್ಟಾನುಭವಕ್ಕಾಗಿ ನಿಜವಾದ ಚಿಂತೆಯನ್ನು ತೋರಿಸುವ ಬದಲಿಗೆ, ಅವರ ಪ್ರಶ್ನೆಯು ಪ್ರಕಟಿಸಿದಂತೆ, ಯೇಸುವನ್ನು ಖಂಡಿಸಲಿಕ್ಕಾಗಿ ಒಂದು ನೆಪವನ್ನು ಹುಡುಕಲು ಅವರು ಬಯಸಿದರು. ಅವರ ಕಲ್ಲು ಹೃದಯಗಳಿಂದಾಗಿ ಯೇಸು ದುಃಖಪಟ್ಟದ್ದು ಆಶ್ಚರ್ಯಕರವಲ್ಲ! ಅವನು ಅನಂತರ ಫರಿಸಾಯರಿಗೆ ತದ್ರೀತಿಯ ಪ್ರಶ್ನೆಯನ್ನು ತಿರುಗಿ ಕೇಳಿದನು: “ಸಬ್ಬತ್‌ದಿನದಲ್ಲಿ ಯಾವದನ್ನು ಮಾಡುವದು ನ್ಯಾಯ? ಮೇಲನ್ನು ಮಾಡುವದೋ”? ಅವರು ಉತ್ತರಕೊಡದೆ ಸುಮ್ಮನಾದಾಗ, ಸಬ್ಬತ್‌ದಿನದಂದು ಕುಣಿಯೊಳಗೆ ಬಿದ್ದಿರುವ ಒಂದು ಕುರಿಯನ್ನು ಅವರು ಮೇಲೆತ್ತುವುದಿಲ್ಲವೊ ಎಂದು ಕೇಳುವ ಮೂಲಕ ಯೇಸು ತನ್ನ ಸ್ವಂತ ಪ್ರಶ್ನೆಯನ್ನು ಉತ್ತರಿಸಿದನು.b “ಕುರಿಗಿಂತ ಮನುಷ್ಯನು ಎಷ್ಟೋ ಹೆಚ್ಚು” ಎಂದು ಯೇಸು ನಿರಾಕರಿಸಲಾಗದ ವಾದಸರಣಿಯೊಂದಿಗೆ ತರ್ಕಿಸಿದನು. “ಆದಕಾರಣ ಸಬ್ಬತ್‌ ದಿನದಲ್ಲಿ ಒಳ್ಳೇ ಕೆಲಸ ಮಾಡುವದು ತಕ್ಕದ್ದೇ ಸರಿ” ಎಂದು ಅವನು ಹೇಳಿಮುಗಿಸಿದನು. ದೇವರ ನ್ಯಾಯವು ಮಾನವ ಸಂಪ್ರದಾಯದಿಂದ ಎಂದೂ ಕಟ್ಟಿಹಾಕಲ್ಪಡಬಾರದು. ಆ ವಿಷಯವನ್ನು ಸ್ಪಷ್ಟಪಡಿಸಿದ ಬಳಿಕ, ಯೇಸು ಮುಂದೆ ಹೋಗಿ ಆ ಮನುಷ್ಯನ ಕೈಯನ್ನು ಗುಣಪಡಿಸಿದನು.—ಮತ್ತಾಯ 12:9-13; ಮಾರ್ಕ 3:1-5.

  • ಯೆಹೋವನು—ನಿಜ ನ್ಯಾಯ ಮತ್ತು ನೀತಿಯ ಮೂಲನು
    ಕಾವಲಿನಬುರುಜು—1998 | ಆಗಸ್ಟ್‌ 1
    • b ಯೇಸು ಕೊಟ್ಟ ಉದಾಹರಣೆಯು ತಕ್ಕದ್ದಾಗಿತ್ತು, ಯಾಕಂದರೆ ಯೆಹೂದ್ಯರ ಮೌಖಿಕ ನಿಯಮವು, ಸಬ್ಬತ್‌ದಿನದಂದು ಅವರು ಸಂಕಷ್ಟದಲ್ಲಿರುವ ಒಂದು ಪ್ರಾಣಿಗೆ ನೆರವನ್ನು ಕೊಡಲು ನಿರ್ದಿಷ್ಟವಾಗಿ ಅನುಮತಿಸಿತು. ಇತರ ಅನೇಕ ಸಂದರ್ಭಗಳಲ್ಲಿ, ಇದೇ ವಿಷಯದ ಕುರಿತು ಅಂದರೆ, ಸಬ್ಬತ್‌ದಿನದಂದು ಗುಣಪಡಿಸುವುದು ನ್ಯಾಯಯುತವಾಗಿತ್ತೊ ಎಂಬುದರ ಕುರಿತು ವಿವಾದಗಳಿದ್ದವು.—ಲೂಕ 13:10-17; 14:1-6; ಯೋಹಾನ 9:13-16.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ