-
ಸಕಾರಾತ್ಮಕ ನೋಟವನ್ನು ಯಾವಾಗಲೂ ಇಟ್ಟುಕೊಳ್ಳಿಕಾವಲಿನಬುರುಜು—2014 | ಮಾರ್ಚ್ 15
-
-
8, 9. (ಎ) ಬಡ ವಿಧವೆಯ ಸನ್ನಿವೇಶ ಹೇಗಿತ್ತು? (ಬಿ) ಯಾವ ನಕಾರಾತ್ಮಕ ಯೋಚನೆಗಳು ಆ ವಿಧವೆಯ ಮನಸ್ಸಿಗೆ ಬಂದಿದ್ದಿರಬಹುದು?
8 ಯೇಸು ಯೆರೂಸಲೇಮಿನ ದೇವಾಲಯದಲ್ಲಿ ಒಬ್ಬಾಕೆ ಬಡ ವಿಧವೆಯನ್ನು ಗಮನಿಸಿದನು. ಆಕೆಯ ಉದಾಹರಣೆಯು, ನಮ್ಮ ಸನ್ನಿವೇಶದಿಂದಾಗಿ ಬಯಸಿದ್ದೆಲ್ಲವನ್ನು ಮಾಡಲು ನಮ್ಮಿಂದ ಆಗದಿದ್ದಾಗಲೂ ನಮ್ಮ ಬಗ್ಗೆ ಸಕಾರಾತ್ಮಕ ನೋಟವನ್ನು ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. (ಲೂಕ 21:1-4 ಓದಿ.) ಆ ವಿಧವೆ ಎಂಥ ಸನ್ನಿವೇಶದಲ್ಲಿ ಇದ್ದಳೆಂದು ಊಹಿಸಿಕೊಳ್ಳಿ. ಒಂದು ಕಡೆ ಆಕೆ ಗಂಡನನ್ನು ಕಳೆದುಕೊಂಡ ದುಃಖವನ್ನು ಸಹಿಸಿಕೊಳ್ಳುತ್ತಿದ್ದಳು. ಇನ್ನೊಂದು ಕಡೆ ಇಂಥ ವಿಧವೆಯರಿಗೆ ಸಹಾಯಹಸ್ತ ಚಾಚಬೇಕಾಗಿದ್ದ ಧಾರ್ಮಿಕ ಮುಖಂಡರೇ ‘ಅವರ ಮನೆಗಳನ್ನು ನುಂಗುತ್ತಿದ್ದ’ ಸನ್ನಿವೇಶದಲ್ಲಿ ಆಕೆಯಿದ್ದಳು. (ಲೂಕ 20:47) ಆಕೆ ಎಷ್ಟು ಬಡವಳಾಗಿದ್ದಳೆಂದರೆ ದೇವಾಲಯದಲ್ಲಿ ಕಾಣಿಕೆ ಕೊಡಲು ಆಕೆಯಿಂದಾದದ್ದು ಎರಡು ಚಿಕ್ಕ ನಾಣ್ಯ ಮಾತ್ರ. ಅದನ್ನು ಒಬ್ಬ ಕೆಲಸಗಾರನು ಕೆಲವೇ ನಿಮಿಷ ಕೆಲಸಮಾಡಿ ಗಳಿಸಬಹುದಿತ್ತು.
9 ಆ ವಿಧವೆ ತನ್ನ ಕೈಯಲ್ಲಿ ಆ ಎರಡು ಚಿಕ್ಕ ನಾಣ್ಯಗಳನ್ನು ಹಿಡಿದು ದೇವಾಲಯದ ಅಂಗಣಕ್ಕೆ ಕಾಲಿಡುತ್ತಿದ್ದಂತೆ ಆಕೆಗೆ ಹೇಗನಿಸಿರಬೇಕೆಂದು ಊಹಿಸಿ. ಒಂದುವೇಳೆ ತನ್ನ ಗಂಡನು ಜೀವದಿಂದಿದ್ದರೆ ತಾನು ಎಷ್ಟು ಕಾಣಿಕೆ ಕೊಡುತ್ತಿದ್ದೆನೋ ಅದರ ಮುಂದೆ ಇದು ತೀರಾ ಅಲ್ಪವೆಂದು ಆಕೆ ಯೋಚಿಸಿದ್ದಿರಬಹುದೋ? ಅಥವಾ ಸಾಲಿನಲ್ಲಿ ತನ್ನ ಮುಂದಿದ್ದವರು ಚೀಲದಿಂದ ಬೊಗಸೆ ತುಂಬ ನಾಣ್ಯಗಳನ್ನು ತೆಗೆದು ಪೆಟ್ಟಿಗೆಯಲ್ಲಿ ಸುರಿಯುತ್ತಿದ್ದಾಗ ತನ್ನ ಕೈಯಲ್ಲಿದ್ದ ಎರಡು ನಾಣ್ಯಗಳನ್ನು ನೋಡಿ ಆಕೆಗೆ ಮುಜುಗರವಾಯಿತೇ? ತನ್ನ ಕಾಣಿಕೆಗೆ ಬೆಲೆಯೇ ಇಲ್ಲವೇನೋ ಎಂದನಿಸಿತೇ? ಒಂದುವೇಳೆ ಹೀಗೆಲ್ಲ ಅನಿಸಿದ್ದರೂ ಸತ್ಯಾರಾಧನೆಗಾಗಿ ತನ್ನಿಂದ ಏನನ್ನು ಮಾಡಲು ಸಾಧ್ಯವಿತ್ತೋ ಅದನ್ನಾಕೆ ಮಾಡಿದಳು.
-
-
ಸಕಾರಾತ್ಮಕ ನೋಟವನ್ನು ಯಾವಾಗಲೂ ಇಟ್ಟುಕೊಳ್ಳಿಕಾವಲಿನಬುರುಜು—2014 | ಮಾರ್ಚ್ 15
-
-
11. ಬಡ ವಿಧವೆಯ ವೃತ್ತಾಂತದಿಂದ ನೀವೇನು ಕಲಿಯಸಾಧ್ಯವಿದೆ?
11 ನಿಮ್ಮ ಸನ್ನಿವೇಶಗಳು ನೀವು ಯೆಹೋವನಿಗಾಗಿ ಏನನ್ನು ಕೊಡಲು ಸಾಧ್ಯ ಎಂಬುದರ ಮೇಲೆ ಪ್ರಭಾವ ಬೀರುತ್ತವೆ. ಕೆಲವರಿಗೆ ವಯಸ್ಸಾಗಿರುವ ಕಾರಣ ಅಥವಾ ದೇಹದೌರ್ಬಲ್ಯದ ಕಾರಣ ಸೇವೆಯಲ್ಲಿ ಹೆಚ್ಚು ಸಮಯ ಕಳೆಯಲು ಆಗುವುದಿಲ್ಲ. ಹಾಗೆಂದು ಅವರು, ‘ನಾನು ಮಾಡಿರುವ ಸೇವೆ ತೀರಾ ಕಡಿಮೆ. ವರದಿ ಮಾಡಲು ಯೋಗ್ಯವಲ್ಲ’ ಎಂದು ನೆನಸಬಹುದಾ? ಒಂದುವೇಳೆ ನಿಮ್ಮ ಸನ್ನಿವೇಶ ಒಳ್ಳೇದಿದ್ದರೂ ನೀವು ಮಾಡುವ ಸೇವೆಯನ್ನು ದೇವಜನರೆಲ್ಲರು ಪ್ರತಿವರ್ಷ ಆರಾಧನೆಗಾಗಿ ವ್ಯಯಿಸುವ ತಾಸುಗಳಿಗೆ ಹೋಲಿಸಿ ‘ನನ್ನ ಸೇವೆ ಏನೇನೂ ಇಲ್ಲ’ ಎಂದು ನೆನಸಬಹುದು. ಆದರೆ ಬಡ ವಿಧವೆಯ ವೃತ್ತಾಂತವು, ನಾವು ಯೆಹೋವನಿಗಾಗಿ ಮಾಡುವ ಒಂದೊಂದು ಕ್ರಿಯೆಯನ್ನೂ ಆತನು ಗಮನಿಸುತ್ತಾನೆ ಹಾಗೂ ಅದನ್ನು ಅಮೂಲ್ಯವಾಗಿ ಕಾಣುತ್ತಾನೆ ಎಂದು ತೋರಿಸುತ್ತದೆ. ಸಂಕಷ್ಟಗಳ ನಡುವೆ ಮಾಡಲಾದ ಸೇವೆಯಂತೂ ಆತನಿಗೆ ಬಹುಮೂಲ್ಯ. ನೀವು ಹಿಂದಿನ ವರ್ಷ ಯೆಹೋವನಿಗೆ ಸಲ್ಲಿಸಿದ ಆರಾಧನೆಯನ್ನು ನೆನಪಿಸಿಕೊಳ್ಳಿ. ನೀವು ಆರಾಧನೆಗಾಗಿ ತುಂಬ ಸಮಯ ಕೊಟ್ಟಿರಬಹುದು. ಅದರಲ್ಲಿ ಯಾವುದೋ ಒಂದು ನಿರ್ದಿಷ್ಟ ತಾಸನ್ನು ಯೆಹೋವನಿಗಾಗಿ ಕೊಡಲು ವಿಶೇಷ ತ್ಯಾಗವನ್ನು ಮಾಡಿದ್ದುಂಟಾ? ಹಾಗಿದ್ದಲ್ಲಿ ಆ ತಾಸಿನಲ್ಲಿ ಯೆಹೋವನಿಗಾಗಿ ನೀವೇನು ಮಾಡಿದಿರೋ ಅದು ಆತನಿಗೆ ಬಹು ಅಮೂಲ್ಯವಾಗಿದೆ ಎಂಬ ಖಾತ್ರಿ ನಿಮಗಿರಲಿ. ಯೆಹೋವನ ಸೇವೆಯನ್ನು ಮಾಡಲು ಆ ಬಡ ವಿಧವೆಯಂತೆ ನಿಮ್ಮಿಂದಾದುದೆಲ್ಲವನ್ನು ಮಾಡುತ್ತಿರುವುದೇ ನೀವು “ನಂಬಿಕೆಯಲ್ಲಿ” ಇದ್ದೀರಿ ಎಂಬುದನ್ನು ತೋರಿಸಿಕೊಡುತ್ತದೆ.
-