ಆ ಸೂಚನೆ—ನೂತನ ಜಗತ್ತು ಸಮೀಪಿಸಿದೆ ಎಂಬುದಕ್ಕೆ ರುಜುವಾತೇ?
“ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವುವು. ಮತ್ತು ಕ್ಷಾಮಗಳು, ಅಂಟುರೋಗಗಳು ಮತ್ತು ಭೂಕಂಪಗಳು [ವಿವಿಧ] ಸ್ಥಳಗಳಲ್ಲಿ ಬರುವುವು.”—ಮತ್ತಾಯ 24:7, ಕಿಂಗ್ ಜೇಮ್ಸ್ ವರ್ಷನ್.
1ನೇ ಲೋಕಯುದ್ಧವು ಪ್ರಬಲವಾಗುತ್ತಿದ್ದಾಗ ಏಪ್ರಿಲ್ 15, 1917ರ ವಾಚ್ ಟವರ್ ಪತ್ರಿಕೆ ಈ ಮೇಲಿನ ಮಾತುಗಳನ್ನು ಉಲ್ಲೀಖಿಸಿ ಹೇಳಿದ್ದು: “ಕಾರ್ಯತಃ ಭೂಮಿಯ ಸರ್ವರಾಷ್ಟ್ರಗಳು ಮಾರಕವಾದ ಹೋರಾಟದಲ್ಲಿ ತೊಡಗಿರುವುದರಲ್ಲಿ ನಾವೀಗ ಈ ಪ್ರವಾದನಾ ಹೇಳಿಕೆಯ ಅಂಶಿಕ ನೆರವೇರಿಕೆಯನ್ನು ನೋಡುತ್ತೇವೆ. ದೊರೆಯುವ ಆಹಾರದ ಒದಗಣೆ ಎಲ್ಲಿಲ್ಲಿಯೂ ಕಡಿಮೆಯಾಗುತ್ತಿದ್ದು ಜೀವನದ ಖರ್ಚು ಹೆಚ್ಚಾಗುತ್ತಿದೆ.”
ಈಗ 72 ವರ್ಷಗಳ ಬಳಿಕ, ಈ ಪತ್ರಿಕೆ ಇನ್ನೂ ವಾಚಕರ ನಮನವನ್ನು ಈ ಪ್ರವಾದನೆಗೆ ಸೆಳೆಯುತ್ತದೆ. ಯೇಸುಕ್ರಿಸ್ತನು ಕೊಟ್ಟ ಸೂಚನೆಯ ಭಾಗವಾಗಿ ಪೂರ್ವಕಾಲದ ಮೂವರು ಇತಿಹಾಸಗಾರರು ಈ ಪ್ರವಾದನೆಯನ್ನು ದಾಖಲೆ ಮಾಡಿದರು.—ಮತ್ತಾಯ 24:3,7; ಮಾರ್ಕ 13:4,8; ಲೂಕ 21:7,10,11.
1914ರಿಂದ ಹಿಡಿದು ಯುದ್ಧ, ಕ್ಷಾಮ, ಅಂಟುರೋಗ ಮತ್ತು ಇತರ ವಿಪತ್ತುಗಳು ಕೋಟಿಗಟ್ಟಲೆ ಪ್ರಾಣಗಳನ್ನು ನಂದಿಸಿವೆ. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟಾನಿಕ (1987) ಕಳೆದ 1,700 ವರ್ಷಗಳಲ್ಲಿ ನಡೆದ 63 “ದೊಡ್ಡ ಐತಿಹಾಸಿಕ ಭೂಕಂಪ”ಗಳ ಪಟ್ಟಿಯನ್ನು ಕೊಡುತ್ತದೆ. ಈ ಒಟ್ಟು 43 ಸೇಕಡಾ, 1914 ರಿಂದ ನಡೆದಿದೆ. ಪ್ರೊಫೆಸರುಗಳಾದ ಜೆರಿ ಮತ್ತು ಷಾ ಎಂಬವರ ಚೆರ್ ನಾನ್ಫರ್ಮ್ ಪುಸ್ತಕವು ಇನ್ನೂ ದೀರ್ಘ ಸಮಯವನ್ನಾರಿಸುವ ಪಟ್ಟಿಯನ್ನು ಕೊಡುತ್ತದೆ. ಆ ಪಟ್ಟಿಯ “ಗಮನಾರ್ಹ” ಭೂಕಂಪಗಳ ಮೊತ್ತದಲ್ಲಿ 54 ಸೇಕಡಾ 1914ರಿಂದ ಸಂಭವಿಸಿವೆ.a ಹಿಂದಿನ ಶತಕಗಳ ದಾಖಲೆ ಅಪೂರ್ಣವೆಂದು ಹೇಳಬಹುದಾದರೂ, ನಮ್ಮ ಸಮಯಗಳಲ್ಲಿ ಮಾನವ ಕುಲವನ್ನು ಭೂಕಂಪಗಳು ಮಹತ್ತರವಾಗಿ ತಟ್ಟಿವೆ ಎಂಬ ತೀರ್ಮಾನದಿಂದ ನಾವು ತಪ್ಪಿಸಿಕೊಳ್ಳ ಸಾಧ್ಯವಿಲ್ಲ.
ಹಿರೋಶಿಮ ಮತ್ತು ನಾಗಸಾಕಿ ಎಂಬ ಜಪಾನ್ ದೇಶದ ನಗರಗಳಲ್ಲಿ ಪರಮಾಣು ಬಾಂಬುಗಳ ಸ್ಫೋಟನದಿಂದಾಗಿ ಹೆಚ್ಚು ಭೀಕರ ವಿಷಯವೊಂದು ಮಾನವ ಹೃದಯವನ್ನು ಅಪ್ಪಳಿಸಿದೆ. ಇಂದು ನ್ಯೂಕ್ಲಿಯರ್ ಶಕ್ತಿಗಳು ರಾಶಿನಾಶದ ಎಷ್ಟು ಆಯುಧಗಳನ್ನು ಇಟ್ಟುಕೊಂಡಿವೆಯೆಂದರೆ ಮಾನವಕುಲವೇ ನಿರ್ಮೂಲವಾಗುವ ಅಪಾಯವಿದೆ. ಇತಿಹಾಸಗಾರ ಲೂಕನು ಯೇಸುವಿನ ಪ್ರವಾದನೆಯನ್ನು ದಾಖಲೆ ಮಾಡಿ ಬರೆದುದ್ದು:“ಭಯಂಕರ ನೋಟಗಳೂ ಆಕಾಶದಿಂದ ಮಹಾಸೂಚನೆಗಳೂ ಕಾಣುವುವು. . . . ಭೂಮಿಯ ಮೇಲೆ ಜನಾಂಗಗಳಿಗೆ ದಿಕ್ಕುಕಾಣದೆ ಸಂಕಟವುಂಟಾಗುವಾಗ ನಿವಾಸಿತ ಭೂಮಿಯ ಮೇಲೆ ಬರುವ ಸಂಗತಿಗಳ ಭಯ ಮತ್ತು ನಿರೀಕ್ಷಣೆಯಿಂದ ಜನರು ಮೂರ್ಛೆಹೋದಂತಾಗುವರು.”—ಲೂಕ 21:11,25,26
ಅತ್ಯಂತ ಬಲಾಢ್ಯ ಲೋಕಶಕ್ತಿಗಳು ತಮ್ಮ ಆಯುಧಶಾಲೆಗೆ ಕೆಲವನ್ನು ಕಡಿಮೆ ಮಾಡುತ್ತೇವೆಂದು ಸಮ್ಮತಿಸಬಹುದಾದರೂ ಇಂಥ ಕರಾರುಗಳು ಹಿಂಸಾತ್ಮಕ ಪಾತಕ, ಆರ್ಥಿಕ ಕುಸಿತ ಮತ್ತು ಭಯವಾದ ಕುರಿತು ಮನುಷ್ಯನ ಭಯವನ್ನು ಕಡಿಮೆ ಮಾಡವು. ಒಂದು ಆಫ್ರಿಕದ ವಾರ್ತಾಪತ್ರಿಕೆ ಹೇಳುವುದು:“ಇಂದು ಜನರನ್ನು ಅತಿ ಚಿಂತೆ ಹುಟ್ಟಿಸುವ ವಿಷಯವು ವೈಯಕ್ತಿಕ ಭದ್ರತೆಯೇ. . . . ಪಾತಕಕ್ಕೆ ಹುಚ್ಚು ತಗಲಿದೆ. . . . ಸರ್ವವನ್ನೂ ವ್ಯಾಪಿಸುವ ಭಯ ಅಸ್ತಿತ್ವದಲ್ಲಿದೆ.” ಹೌದು, “ನಿಯಮಾರಾಹಿತ್ವದ ವರ್ಧನವು” ಆ ಸೂಚನೆಯ ಇನ್ನೊಂದು ನಿಷ್ಕ್ರಷ್ಟ ವಿವರಣೆಯೆಂದು ಯೇಸು ಮುಂತಿಳಿಸಿದನು.—ಮತ್ತಾಯ 24:12.
“ಸುವಾರ್ತೆ”
ಆದರೆ ಈ ಮೇಲೆ ಹೇಳಿರುವ ಚಿಂತಾಜನಕವಾದ ವಿಷಯಗಳೊಂದಿಗೆ “ನಿವಾಸಿತ ಭೂಮಿಯಲ್ಲಿಲ್ಲಾ ಸುವಾರ್ತೆಯು ಸಾರಲ್ಪಡುವುದೆಂದೂ” ಮುಂತಿಳಿಸಲಾಗಿತ್ತೆಂದು ಕೇಳುವಾಗ ನಿಮಗೆ ನೆಮ್ಮದಿಯಾದೀತು. (ಮತ್ತಾಯ 24:24) ಈ ಸುವಾರ್ತೆ ದೇವರ ರಾಜ್ಯದ ಕುರಿತಾಗಿದೆ. ಈ ಅತಿಮಾನುಷ ಸರಕಾರವು ಆಗಲೇ ಲಕ್ಷಗಟ್ಟಲೆ ಕರ್ತವ್ಯನಿಷ್ಟ ಪ್ರಜೆಗಳನ್ನು ಕೂಡಿಸಿದೆ. ಬೇಗನೇ ಅದು ಮಾನವ ವಿಚಾರಗಳಲ್ಲಿ ಅಡ್ಡಬಂದು ನೀತಿಯ ನೂತನ ಲೋಕದ ವಿಷಯದಲ್ಲಿ ಮಾನವನಿಗಿರುವ ಅವಶ್ಯಕತೆಯನ್ನು ತೃಪ್ತಿಗೊಳಿಸುವುದು,—ಲೂಕ 21:28-32; 2 ಪೇತ್ರ 3:13.
ಈ “ಸುವಾರ್ತೆ”ಯನ್ನು ಅನೇಕರು ಅಪನಂಬಿಕೆಯ ಕಾರಣದಿಂದ ಬದಿಗಿಡುತ್ತಾರೆ, ಇತರರು ತಾವು ನಂಬುತ್ತೇವೆಂದು ಹೇಳಿದರೂ ಆ ಸಮಯದಲ್ಲಿ ಕೊಂಚವನ್ನು ಮಾತ್ರ ಮಾಡುತ್ತಾರೆ. ಕೆಲವರು ಸ್ವಲ್ಪ ಸಮಯ ಅದರಂತೆ ನಡೆದರೂ ಅದನ್ನು ಸಂಶಯಿಸಲಾರಂಭಿಸುತ್ತಾರೆ. ಇಂಥ ನಕಾರಾತ್ಮಕ ಪ್ರತಿಕ್ರಿಯೆಗಳು ಸಹ ಆ ಸೂಚನೆಯ ಭಾಗವಾಗುವುದೆಂದು ಮುಂತಿಳಿಸಲಾಗಿದೆಯೇ? ಅದಕ್ಕಿಂತಲೂ ಹೆಚ್ಚು ಪ್ರಮುಖ್ಯವಾಗಿ, ಈ ಸೂಚನೆಯಿಂದ ನಾವು ವೈಯಕ್ತಿಕವಾಗಿ ಹೇಗೆ ಪ್ರಯೋಜನ ಪಡೆಯಬಲ್ಲಿರಿ?
[ಅಧ್ಯಯನ ಪ್ರಶ್ನೆಗಳು]
a ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ (1987) ಸಾ.ಶ.526 ರಿಂದ ನಡೆದಿರುವ 37 ದೊಡ್ಡ ಭೂಕಂಪಗಳ ಪಟ್ಟಿಯನ್ನು ಕೊಡುತ್ತದೆ. ಈ ಪಟ್ಟಿಯಲ್ಲಿ 65 ಶೇಕಡಾ 1914ರಿಂದ ಸಂಭವಿಸಿದೆ.