-
“ನಿನ್ನ ಸಾನ್ನಿಧ್ಯದ ಸೂಚನೆ ಏನಾಗಿರುವುದು?”ಕಾವಲಿನಬುರುಜು—1994 | ಫೆಬ್ರವರಿ 15
-
-
16. ಲೂಕ 21:24 ಯೇಸುವಿನ ಪ್ರವಾದನೆಗೆ ಯಾವ ವೈಶಿಷ್ಟ್ಯವನ್ನು ಕೂಡಿಸುತ್ತದೆ, ಮತ್ತು ಇದು ಯಾವ ಭಾವಾರ್ಥವನ್ನು ಹೊಂದಿದೆ?
16 ನಾವು ಮತ್ತಾಯ 24:15-28 ಮತ್ತು ಮಾರ್ಕ 13:14-23 ನ್ನು ಲೂಕ 21:20-24 ರೊಂದಿಗೆ ಹೋಲಿಸುವುದಾದರೆ, ಯೆರೂಸಲೇಮಿನ ನಾಶನವನ್ನು ದಾಟಿ ಬಹಳಷ್ಟು ಮುಂದಕ್ಕೆ ಯೇಸುವಿನ ಭವಿಷ್ಯದ್ವಾಣಿಯು ಚಾಚಿತ್ತು ಎಂಬುದಕ್ಕೆ ಎರಡನೆಯ ನಿರ್ದೇಶಕವನ್ನು ನಾವು ಕಂಡುಕೊಳ್ಳುತ್ತೇವೆ. ಕೇವಲ ಲೂಕನು ಮಾತ್ರ ಅಂಟುರೋಗಗಳ ಕುರಿತು ತಿಳಿಸಿದ್ದನೆಂಬದನ್ನು ಜ್ಞಾಪಿಸಿಕೊಳ್ಳಿರಿ. ತದ್ರೀತಿ, ಅವನೊಬ್ಬನೇ ಈ ಭಾಗವನ್ನು ಯೇಸುವಿನ ಮಾತುಗಳಿಂದ ಕೊನೆಗೊಳಿಸಿದನು: “ಅನ್ಯಜನಾಂಗಗಳ ನೇಮಿತ ಸಮಯವು [“ಅನ್ಯಜನಗಳ ಕಾಲ,” ಕಿಂಗ್ ಜೇಮ್ಸ್ ವರ್ಷನ್] ಪೂರೈಸಲ್ಪಡುವ ತನಕ ಅನ್ಯಜನಾಂಗಗಳಿಂದ ಯೆರೂಸಲೇಮ್ ತುಳಿದಾಡಲ್ಪಡುವುದು.”e (ಲೂಕ 21:24, NW) ಬಬಿಲೋನ್ಯರು ಸಾ.ಶ.ಪೂ. 607 ರಲ್ಲಿ ಯೆಹೂದ್ಯರ ಕೊನೆಯ ಅರಸನನ್ನು ಉಚ್ಚಾಟಿಸಿದ್ದರು ಮತ್ತು ಅದರ ನಂತರ, ದೇವರ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಯೆರೂಸಲೇಮ್ ತುಳಿಯಲ್ಪಟ್ಟಿತು. (2 ಅರಸು 25:1-26; 1 ಪೂರ್ವಕಾಲವೃತ್ತಾಂತ 29:23; ಯೆಹೆಜ್ಕೇಲ 21:25-27) ಲೂಕ 21:24ರಲ್ಲಿ, ಒಂದು ರಾಜ್ಯವನ್ನು ಪುನಃ ಸ್ಥಾಪಿಸುವ ದೇವರ ಸಮಯ ಬರುವ ತನಕ ಈ ಪರಿಸ್ಥಿತಿಯು ಭವಿಷ್ಯದಲ್ಲಿ ಮುಂದರಿಯಲಿರುವುದು ಎಂದು ಯೇಸು ಸೂಚಿಸಿದನು.
-
-
“ನಿನ್ನ ಸಾನ್ನಿಧ್ಯದ ಸೂಚನೆ ಏನಾಗಿರುವುದು?”ಕಾವಲಿನಬುರುಜು—1994 | ಫೆಬ್ರವರಿ 15
-
-
e ಲೂಕ 21:24ರ ಅನಂತರ ಲೂಕನ ವೃತ್ತಾಂತದಲ್ಲಿ ಒತ್ತಿನಲ್ಲಿ ಒಂದು ಬದಲಾವಣೆಯನ್ನು ಅನೇಕರು ಕಾಣುತ್ತಾರೆ. ಡಾ. ಲಿಯನ್ ಮೋರಿಸ್ ಗಮನಿಸುವುದು: “ಯೇಸು ಅನ್ಯಜನಗಳ ಕಾಲಗಳ ಕುರಿತು ಮಾತಾಡಲು ತೊಡಗುತ್ತಾನೆ. . . . ಹೆಚ್ಚಿನ ವಿದ್ವಾಂಸರ ಅಭಿಪ್ರಾಯದಲ್ಲಿ ಗಮನವು ಈಗ ಮನುಷ್ಯ ಕುಮಾರನ ಬರೋಣದೆಡೆಗೆ ಚಲಿಸುತ್ತದೆ.” ಪ್ರೊಫೆಸರ್ ಆರ್. ಗಿನ್ಸ್ ಬರೆಯುವುದು: “ಮನುಷ್ಯ ಕುಮಾರನ ಬರೋಣ—(ಮತ್ತಾ. 24:29-31; ಮಾರ್ಕ 13:24-27). ‘ಅನ್ಯಜನಗಳ ಕಾಲಗಳ’ದ ತಿಳಿಸುವಿಕೆಯು ಈ ಮುಖ್ಯ ವಿಷಯಕ್ಕೆ ಒಂದು ಪೀಠಿಕೆಯನ್ನು ಒದಗಿಸುತ್ತದೆ; [ಲೂಕನ] ನಿರೂಪಣೆಯು ಈಗ ಯೆರೂಸಲೇಮಿನ ಧ್ವಂಸದ ಆಚೇಕಡೆ ಮುಂದಣ ಭವಿಷ್ಯಕ್ಕೆ ಒಯ್ಯಲ್ಪಟ್ಟಿದೆ.”
f ಪ್ರೊಫೆಸರ್ ವಾಲರ್ಟ್ ಎಲ್. ಲೆಫೆಲ್ಡ್ ಬರೆಯುವುದು: “ಯೇಸುವಿನ ಭವಿಷ್ಯದ್ವಾಣಿಗಳು ಎರಡು ಹಂತಗಳನ್ನು ಸಂಘಟಿಸಿವೆಯೆಂದು ಊಹಿಸಲು ಖಂಡಿತ ಶಕ್ಯವಾಗಿದೆ: (1) ಆಲಯವನ್ನು ಒಳಗೂಡಿರುವ ಸಾ.ಶ. 70ರ ಘಟನೆಗಳು ಮತ್ತು (2) ಹೆಚ್ಚು ಭವಿಷ್ಯದ್ದರ್ಶನ ಪರಿಭಾಷೆಗಳಲ್ಲಿ ವರ್ಣಿಸಲಾದ, ದೂರದ ಭವಿಷ್ಯದಲ್ಲಿ ನಡೆಯಲಿರುವವುಗಳು.” ಜೆ.ಆರ್. ಡೆಮೆಲೊ ಇವರಿಂದ ಪ್ರಕಟವಾದ ವ್ಯಾಖ್ಯಾನವು ಅನ್ನುವುದು: “ಈ ಮಹಾ ಉಪನ್ಯಾಸದ ಅಧಿಕ ಗಂಭೀರ ಕಷ್ಟಗಳಲ್ಲಿ ಹೆಚ್ಚಿನವು ಮಾಯವಾಗುವುದು ಯಾವಾಗವೆಂದರೆ, ನಮ್ಮ ಕರ್ತನು ಅದರಲ್ಲಿ ಒಂದು ಘಟನೆಗಲ್ಲ, ಎರಡಕ್ಕೆ ನಿರ್ದೇಶಿಸಿದ್ದಾನೆ ಮತ್ತು ಮೊದಲನೆಯದು ಎರಡನೆಯದರ ಮುನ್‌ಸೂಚಕವಾಗಿದೆ ಎಂಬದನ್ನು ಅರಿತುಕೊಂಡಾಗಲೇ. . . . ‘ಅನ್ಯಜನಗಳ ಕಾಲಗಳ’ ಕುರಿತು ಮಾತಾಡುವ [ಲೂಕ] 21:24 ವಿಶೇಷವಾಗಿ, . . . ಯೆರೂಸಲೇಮಿನ ಪತನ ಮತ್ತು ಲೋಕದ ಅಂತ್ಯದ ನಡುವೆ ಒಂದು ಅನಿರ್ದಿಷ್ಟ ವಿರಾಮಕಾಲವನ್ನು ಇಡುತ್ತದೆ.”
-