“ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ”
1 ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತಾದ ತನ್ನ ಮಹಾ ಪ್ರವಾದನೆಯಲ್ಲಿ, ಜೀವನದ ಪ್ರತಿನಿತ್ಯದ ಕಾರ್ಯಕಲಾಪಗಳಲ್ಲೇ ಮುಳುಗಿರುವುದರ ವಿರುದ್ಧ ಯೇಸು ಎಚ್ಚರಿಸಿದನು. (ಮತ್ತಾ. 24:36-39; ಲೂಕ 21:34, 35) ಮಹಾ ಸಂಕಟವು ಯಾವುದೇ ಗಳಿಗೆಯಲ್ಲಿ ಪ್ರಾರಂಭವಾಗಲು ಸಾಧ್ಯವಿರುವುದರಿಂದ, ನಾವು ಯೇಸುವಿನ ಈ ಎಚ್ಚರಿಕೆಗೆ ಕಿವಿಗೊಡುವುದು ಅತಿ ಪ್ರಾಮುಖ್ಯವಾಗಿದೆ: “ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ, ಏಕೆಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ”. (ಮತ್ತಾ. 24:44, NW) ಈ ವಿಷಯದಲ್ಲಿ ನಮಗೆ ಯಾವುದು ಸಹಾಯಮಾಡಬಲ್ಲದು?
2 ಚಿಂತೆಗಳು ಮತ್ತು ಅಪಕರ್ಷಣೆಗಳನ್ನು ಎದುರಿಸಿ ನಿಲ್ಲುವುದು: ನಮ್ಮ ಆತ್ಮಿಕತೆಗೆ ಅಪಾಯವನ್ನೊಡುವಂಥವುಗಳಾಗಿದ್ದು, ನಾವು ಯಾವುದರ ವಿರುದ್ಧ ನಮ್ಮನ್ನು ಕಾಪಾಡಿಕೊಳ್ಳಬೇಕಾಗಿದೆಯೋ ಅಂಥ ವಿಷಯಗಳಲ್ಲಿ ಒಂದು ಜೀವನದ ಚಿಂತೆಯೇ ಆಗಿದೆ. (ಲೂಕ 21:34) ಕೆಲವು ದೇಶಗಳಲ್ಲಿ, ಬಡತನ, ನಿರುದ್ಯೋಗ, ಮತ್ತು ಬೆಲೆಯೇರುವಿಕೆಗಳು ಜೀವನದ ಅಗತ್ಯತೆಗಳನ್ನು ಪಡೆದುಕೊಳ್ಳುವುದನ್ನು ಕಷ್ಟಕರವನ್ನಾಗಿ ಮಾಡುತ್ತವೆ. ಆದರೆ ಬೇರೆ ದೇಶಗಳಲ್ಲಿ, ಪ್ರಾಪಂಚಿಕ ಸಿರಿಸಂಪತ್ತನ್ನು ಗಳಿಸುವುದು ಸರ್ವಸಾಮಾನ್ಯವಾಗಿದೆ. ಪ್ರಾಪಂಚಿಕ ವಿಷಯಗಳೇ ನಮ್ಮ ಪರಮ ಚಿಂತೆಯಾಗಿರುವಲ್ಲಿ, ರಾಜ್ಯದ ನಿಜತ್ವಗಳ ಮೇಲಿನ ನಮ್ಮ ಕೇಂದ್ರೀಕೃತ ಗಮನವನ್ನು ಕಳೆದುಕೊಳ್ಳುವ ಅಪಾಯಕ್ಕೆ ನಾವು ನಮ್ಮನ್ನು ಒಡ್ಡುತ್ತಿರಬಹುದು. (ಮತ್ತಾ. 6:19-24, 31-33) ಕ್ರೈಸ್ತ ಕೂಟಗಳು, ರಾಜ್ಯದ ನಿಜತ್ವಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವಂತೆ ನಮಗೆ ಸಹಾಯಮಾಡುತ್ತವೆ. ಪ್ರತಿಯೊಂದು ಕೂಟಕ್ಕೆ ಹಾಜರಾಗಬೇಕೆಂಬುದು ನಿಮ್ಮ ವೈಯಕ್ತಿಕ ಗುರಿಯಾಗಿದೆಯೋ?—ಇಬ್ರಿ. 10:24, 25.
3 ನಮ್ಮ ಅತ್ಯಮೂಲ್ಯವಾದ ಸಮಯವನ್ನು ಕದಿಯಬಲ್ಲ ಅಪಕರ್ಷಣೆಗಳಿಂದ ಈ ಲೋಕವು ತುಂಬಿಕೊಂಡಿದೆ. ಒಬ್ಬನು ಇಂಟರ್ನೆಟ್ನಲ್ಲಿ ಕಣ್ಣಾಡಿಸುವುದರಲ್ಲಿ, ಇ-ಮೇಲ್ ಓದಿ ಕಳುಹಿಸುವುದರಲ್ಲಿ, ಅಥವಾ ಕಂಪ್ಯೂಟರ್ ಆಟಗಳನ್ನು ಆಡುವುದರಲ್ಲಿ ಗೊತ್ತುಗುರಿಯಿಲ್ಲದಷ್ಟು ಸಮಯವನ್ನು ಕಳೆಯುವುದಾದರೆ ಕಂಪ್ಯೂಟರ್ ಉಪಯೋಗವು ಒಂದು ಪಾಶವಾಗಿ ಪರಿಣಮಿಸಬಲ್ಲದು. ಟಿವಿ, ಚಲನಚಿತ್ರಗಳು, ಹವ್ಯಾಸಗಳು, ಐಹಿಕ ಪುಸ್ತಕಗಳು, ಮತ್ತು ಆಟೋಟಗಳಲ್ಲಿ ಲೆಕ್ಕವಿಲ್ಲದಷ್ಟು ತಾಸುಗಳನ್ನು ಕಳೆಯುವುದು ಆತ್ಮಿಕ ಬೆನ್ನಟ್ಟುವಿಕೆಗಳಿಗಾಗಿ ನಮ್ಮಲ್ಲಿ ಸ್ವಲ್ಪವೇ ಸಮಯ ಅಥವಾ ಶಕ್ತಿಯನ್ನು ಉಳಿಸುವುದು. ವಿನೋದಾವಳಿಯೂ ಮತ್ತು ವಿಶ್ರಾಂತಿಯೂ ತಾತ್ಕಾಲಿಕವಾಗಿ ಚೈತನ್ಯವನ್ನು ನೀಡಬಲ್ಲದಾದರೂ, ವೈಯಕ್ತಿಕ ಮತ್ತು ಕೌಟುಂಬಿಕ ಬೈಬಲ್ ಅಧ್ಯಯನಗಳು ನಿತ್ಯಕಾಲ ಪ್ರಯೋಜನಗಳನ್ನು ತರುತ್ತವೆ. (1 ತಿಮೊ. 4:7, 8) ಪ್ರತಿದಿನವೂ ದೇವರ ವಾಕ್ಯದ ಕುರಿತು ಮನನ ಮಾಡಲು ನೀವು ಸಮಯವನ್ನು ಕೊಂಡುಕೊಳ್ಳುತ್ತೀರೋ?—ಎಫೆ. 5:15-17.
4 ನಾವು “ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ . . . ಪೂರ್ಣ ಶಕ್ತರಾಗುವಂತೆ” ಸಹಾಯಮಾಡಲಿಕ್ಕಾಗಿ ಯೆಹೋವನ ಸಂಸ್ಥೆಯು ಆತ್ಮಿಕ ಉಪದೇಶದ ಒಂದು ಕಾರ್ಯಕ್ರಮವನ್ನು ಏರ್ಪಡಿಸಿರುವುದಕ್ಕಾಗಿ ನಾವೆಷ್ಟು ಕೃತಜ್ಞರು! (ಲೂಕ 21:36) ನಾವು ಈ ಎಲ್ಲಾ ಒದಗಿಸುವಿಕೆಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಂಡು ‘ಸಿದ್ಧವಾಗಿದ್ದೇವೆಂಬುದನ್ನು ತೋರಿಸಿಕೊಡೋಣ’ ಮತ್ತು ಆಗ ನಮ್ಮ ನಂಬಿಕೆಯು “ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ [ನಮಗೆ] ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು.”—1 ಪೇತ್ರ 1:7.