ಶಿಸ್ತನ್ನು ಸ್ವೀಕರಿಸುವ ಮೂಲಕ ವಿಧೇಯತೆಯನ್ನು ಕಲಿಯಿರಿ
ಅಕ್ಷರಶಃ ಲೋಕದ ತುತ್ತತುದಿಯಲ್ಲಿರುವ ಭಾವದೊಂದಿಗೆ, ಒಂದು ಎತ್ತರವಾದ ಬೆಟ್ಟದ ಕಡಿದಾದ ಬಂಡೆಯ ಶಿಕರದಲ್ಲಿ ನಿಂತಿರುವುದನ್ನು ಊಹಿಸಿಕೊಳ್ಳಿರಿ. ಎಂಥ ಆನಂದಯುಕ್ತ ಸ್ವಾತಂತ್ರ್ಯದ ಭಾವವು!
ಆದರೂ ನಿಮ್ಮ ಸ್ವಾತಂತ್ರ್ಯ ನಿಜವಾಗಿ ಬಹಳ ಸೀಮಿತವುಳ್ಳದ್ದಾಗಿದೆ. ಗುರುತ್ವಾಕರ್ಷಣ ನಿಯಮವು ನಿಮ್ಮ ಪ್ರತಿಯೊಂದು ಚಲನೆಯನ್ನು ನಿರ್ಬಂಧಗೊಳಿಸುತ್ತದೆ; ಒಂದು ಏಕ ತಪ್ಪು ಹೆಜ್ಜೆಯು ಆಪತ್ಕಾರಕವಾಗಿ ಪರಿಣಮಿಸಬಹುದು. ಇನ್ನೊಂದು ಕಡೆ, ಅದೇ ಗುರುತ್ವಾಕರ್ಷಣ ನಿಯಮವು ನಿಮ್ಮನ್ನು ಬಾಹ್ಯಾಂತರಾಳದಲ್ಲಿ ಸಹಾಯಶೂನ್ಯರಾಗಿ ತೇಲಾಡುವುದರಿಂದ ತಡೆಯುತ್ತದೆಂದು ತಿಳಿದಿರುವುದು ಎಷ್ಟು ಸಂತೋಷಕರವು. ಹೀಗೆ ನಿಯಮವು ನಿಮ್ಮ ಸ್ವಂತ ಹಿತಕ್ಕಾಗಿಯೇ ಇದೆ ಎಂಬದು ವ್ಯಕ್ತ. ಆ ಬೆಟ್ಟದ ಶಿಕರದಲ್ಲಿ ನಿಮ್ಮ ಚಲನವಲನದ ಮೇಲೆ ಅದು ಇಡುವ ಸೀಮಿತಗಳನ್ನು ಸ್ವೀಕರಿಸುವುದು ಪ್ರಯೋಜನಕಾರಿಯು, ಜೀವರಕ್ಷಕವೂ ಆಗಿದೆ.
ಹೌದು, ಕೆಲವೊಮ್ಮೆ ನಿಯಮಗಳು ಮತ್ತು ಅವುಗಳಿಗೆ ವಿಧೇಯತೆಯು ನಮ್ಮ ಸ್ವಾತಂತ್ರ್ಯವನ್ನು ಸೀಮಿತಗೊಳಿಸಬಹುದು, ಆದರೆ ಇದು ವಿಧೇಯತೆಯನ್ನು ಅನಪೇಕ್ಷಣೀಯವಾಗಿ ಮಾಡುತ್ತದೋ?
ದೇವರು ವಿಧೇಯತೆಯನ್ನು ವೀಕ್ಷಿಸುವ ವಿಧ
“ಸೃಷ್ಟಿಕರ್ತ” ನೋಪಾದಿ, ಯೆಹೋವನು “ಜೀವದ ಬುಗ್ಗೆ” ಆಗಿದ್ದಾನೆ. ಈ ಕಾರಣದಿಂದಾಗಿ ಅವನ ಸೃಷ್ಟಿಜೀವಿಗಳೆಲ್ಲರೂ ಅವನಿಗೆ ನ್ಯಾಯವಾಗಿ ವಿಧೇಯತೆ ತೋರಿಸಲು ಬದ್ಧರಾಗಿದ್ದಾರೆ. ಆ ಯೋಗ್ಯ ಮನೋಭಾವವನ್ನು ಪ್ರದರ್ಶಿಸುತ್ತಾ, ಕೀರ್ತನೆಗಾರನು ಬರೆದದ್ದು: “ಬನ್ನಿರಿ, ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ. ಆತನು ನಮ್ಮ ದೇವರು; ನಾವೋ ಆತನು ಪಾಲಿಸುವ ಪ್ರಜೆಯೂ ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ.”—ಪ್ರಸಂಗಿ 12:1; ಕೀರ್ತನೆ 36:9; 95:6, 7.
ಆರಂಭದಿಂದಲೂ ಯೆಹೋವನು ತನ್ನ ಸೃಷ್ಟಿಜೀವಿಗಳಿಂದ ವಿಧೇಯತೆಯನ್ನು ಆವಶ್ಯಪಡಿಸಿದ್ದನು. ಪರದೈಸದಲ್ಲಿ ಆದಾಮ ಮತ್ತು ಹವ್ವರ ಮುಂದರಿಯುವ ಅಸ್ತಿತ್ವವು ವಿಧೇಯತೆಯ ಮೇಲೆ ಆತುಕೊಂಡಿತ್ತು. (ಆದಿಕಾಂಡ 2:16, 17) ಅದೇ ರೀತಿ ದೇವದೂತರಿಂದ, ಅವರು ಮಾನವರಿಗಿಂತ ಮೇಲರ್ತದ ಜೀವ ರಚನೆಯುಳ್ಳವರಾಗಿದ್ದರೂ, ವಿಧೇಯತೆಯು ಅಪೇಕ್ಷಿಸಲ್ಪಟ್ಟಿತ್ತು. ಈ ಆತ್ಮ ಜೀವಿಗಳಲ್ಲಿ ಕೆಲವರು, “ದೇವರು [ನೋಹನ ದಿನದಲ್ಲಿ] ದೀರ್ಘಶಾಂತಿಯಿಂದ ಕಾದಿದ್ದಾಗ ಆತನಿಗೆ ಅವಿಧೇಯರಾಗಿದ್ದ” ರಿಂದ, “ನ್ಯಾಯತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರಬೇಕೆಂದು ಕತ್ತಲೇ ಗುಂಡಿಗಳಿಗೆ” ಒಪ್ಪಿಸಲ್ಪಟ್ಟ ಮೂಲಕ ಶಿಕ್ಷಿಸಲ್ಪಟ್ಟರು.—1 ಪೇತ್ರ 3:19, 20; 2 ಪೇತ್ರ 2:4.
ಸರಳವಾಗಿ ಹೇಳುವುದಾದರೆ, ದೇವರು ವಿಧೇಯತೆಯನ್ನು ಆತನ ಅನುಗ್ರಹವನ್ನು ಪಡೆಯುವ ಒಂದು ಆವಶ್ಯಕತೆಯಾಗಿ ವೀಕ್ಷಿಸುತ್ತಾನೆ. ನಾವು ಓದುವುದು: “ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತು ಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ.”—1 ಸಮುವೇಲ 15:22.
ಅದನ್ನು ಕಲಿಯಬೇಕು—ಏಕೆ ಮತ್ತು ಹೇಗೆ
ವಿಧೇಯತೆಯು ದೇವರೊಂದಿಗೆ ನೀತಿಯುಳ್ಳ ಸ್ಥಾನಕ್ಕೆ ನಡಿಸುತ್ತದೆ, ಆದುದರಿಂದ ಅದನ್ನು ನಾವು ಕಲಿಯುವುದು ಎಷ್ಟು ಅತ್ಯಗತ್ಯವಾಗಿದೆ! ಒಂದು ವಿದೇಶಿ ಭಾಷೆಯನ್ನು ಕಲಿಯುವಂತೆ, ವಿಧೇಯತೆಯ ಹವ್ಯಾಸವನ್ನು ನಾವು ಚಿಕ್ಕವರಾಗಿರುವಾಗ ಕಲಿಯ ಸಾಧ್ಯವಿದೆ. ಆದುದರಿಂದಲೇ ಮಕ್ಕಳಿಗೆ ಅವರ ಬಾಲ್ಯದಿಂದ ತರಬೇತು ನೀಡುವುದನ್ನು ಬೈಬಲ್ ಒತ್ತಿಹೇಳುತ್ತದೆ.—ಯೆಹೋಶುವ 8:35.
ಮಕ್ಕಳ ವಿಧೇಯತೆಯನ್ನು ಆವಶ್ಯಪಡಿಸುವುದು ಮಾನಸಿಕ ಬಲಾತ್ಕಾರ ಸಂಭೋಗಕ್ಕೆ ಸರಿ ಸಮಾನವಾಗಿದೆ ಒಂದು ಹೇಳುತ್ತಾ, ಕೆಲವು ಆಧುನಿಕರು ಬೈಬಲ್ ವೀಕ್ಷಣೆಯನ್ನು ಪ್ರತಿಷೇಧಿಸುತ್ತಾರೆ. ಹೊರಗಿನ ಪ್ರಾಯಸರ್ಥ ಅಡಬ್ಡರುವಿಕೆ ಇಲ್ಲದೆ ಮಕ್ಕಳು ತಾವು ಜೀವಿಸತಕ್ಕ ತಮ್ಮ ಸ್ವಂತ ವೈಯಕ್ತಿಕ ವಿಚಾರಗಳನ್ನು ಮತ್ತು ಮಟ್ಟಗಳನ್ನು ಬೆಳಸುವಂತೆ ಬಿಡಲ್ಪಡಬೇಕು ಎಂದು ಅವರು ವಾದಿಸುತ್ತಾರೆ.
ಆದರೆ 1960 ರುಗಳಲ್ಲಿ ಅನೇಕ ಹೆತ್ತವರು ಈ ನೋಟವನ್ನು ಹಿಡಿದಿದ್ದಾಗ, ಉಪನ್ಯಾಸಕರೂ, ಸಂಪಾದಕರೂ, ಮತ್ತು ಮನೋವಿಜ್ಞಾನದ ಪ್ರೊಫೆಸರರೂ ಆಗಿದ್ದ ವಿಲ್ಹೆಲ್ಮ್ ಹ್ಯಾನ್ಸ್ನ್ ಮಾತ್ರ ಒಪ್ಪಿರಲಿಲ್ಲ. ಅವರು ಬರೆದದ್ದು: “ಒಂದು ಮಗುವಿಗೆ ಅದರ ಪ್ರಾಥಮಿಕ ಹಂತದಲ್ಲಿ, ಅದರ ಹೆತ್ತವರಿಗೆ ಅದರ ಸಂಬಂಧವು ಇನ್ನೂ ನಿರ್ಣಾಯಕವಾಗಿರುವ ಸಮಯದಲ್ಲಿ, ಹೆತ್ತವರು ನಿಷೇಧಿಸುವಂಥದ್ದು ‘ಕೆಟ್ಟ’ ದನ್ನು, ಮತ್ತು ಅವರು ಶಿಫಾರಸು ಯಾ ಸ್ತುತಿ ಮಾಡುವಂಥದ್ದು ‘ಒಳ್ಳೆಯ’ ದನ್ನು. ಹೀಗೆ, ವಿಧೇಯತೆ ಮಾತ್ರವೇ, ಮಗುವನ್ನು ನೈತಿಕತೆಯ ಮತ್ತು ಮುಖ್ಯ ಸದ್ಗುಣಗಳ ದಾರಿಯಲ್ಲಿ ನಡಿಸುವುದು, ಇದರ ಇರುವಿಕೆಯ ಮೇಲೆಯೇ ನೈತಿಕ ಕ್ರಮಕ್ಕೆ ಅವನ ಸಂಬಂಧವು ಆತುಕೊಂಡಿರುವುದು.”—ಜ್ಞಾನೋಕ್ತಿ 22:15 ಹೋಲಿಸಿರಿ.
ವಿಧೇಯತೆಯನ್ನು ಕಲಿಯುವ ಅಗತ್ಯತೆಯನ್ನು ದೇವರ ವಾಕ್ಯವು ಒತ್ತಿಹೇಳುತ್ತದೆ. ನಾವು ಓದುವುದು: “ಕರ್ತನೇ, ಮಾನವನ ಮಾರ್ಗಗಳು ಅವನ ಆಯ್ಕೆಯಲ್ಲಿಲ್ಲವೆಂದು ನನಗೆ ಗೊತ್ತು; ಜೀವಿತದಲ್ಲಿ ತನ್ನ ಮಾರ್ಗವನ್ನು ನಿರ್ಧರಿಸಲೂ ಮನುಷ್ಯನು ಶಕ್ತನಲ್ಲ.” (ಯೆರೆಮೀಯ 10:23, ದ ನ್ಯೂ ಇಂಗ್ಲಿಷ್ ಬೈಬಲ್) ಮಾನವರು ತಮ್ಮ ವೈಯಕ್ತಿಕ ಮಟ್ಟಗಳ ಅನುಸಾರ ತಮ್ಮ ಸ್ವಂತ ಮಾರ್ಗಕ್ರಮವನ್ನು ಯೋಜಿಸಿದ ಮತ್ತು ಹಾಗೆ ಮಾಡಿದರಿಂದಾಗಿ ಗಂಭೀರವಾದ ಕಷ್ಟಗಳಿಗೆ ಗುರಿಯಾದ ಉದಾಹರಣೆಗಳಿಂದ ಇತಿಹಾಸವು ತುಂಬಿಹೋಗಿದೆ. ಇದು ಅಡಿಗಡಿಗೆ ಸಂಭವಿಸುವುದೇಕೆ? ಏಕೆಂದರೆ ತಮ್ಮ ಜೀವಿತ ಕ್ರಮವನ್ನು ಸಹಾಯವಿಲ್ಲದೆ ಏರ್ಪಡಿಸಲು ಬೇಕಾದ ಜ್ಞಾನ, ವಿವೇಕ ಮತ್ತು ತಿಳುವಳಿಕೆಯಲ್ಲಿ ಮನುಷ್ಯರಿಗೆ ಕೊರತೆ ಇದೆ. ಅದಕ್ಕಿಂತಲೂ ಕೆಟ್ಟದ್ದಾಗಿ, ತಪ್ಪು ನಿರ್ಣಯಗಳನ್ನು ಮಾಡುವ ಪ್ರವೃತ್ತಿಯನ್ನು ಅವರು ಬಾಧ್ಯವಾಗಿ ಪಡೆದಿರುತ್ತಾರೆ. ಜಲಪ್ರಲಯದ ಅನಂತರ ಕೂಡಲೇ, ಯೆಹೋವನು ಮನುಷ್ಯನಿಗೆ ಅಂದದ್ದು: “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು.”—ಆದಿಕಾಂಡ 8:21.
ಆದಕಾರಣ, ಯೆಹೋವನಿಗೆ ವಿಧೇಯರಾಗುವ ಪ್ರವೃತ್ತಿಯನ್ನು ಯಾರೂ ಬಾಧ್ಯವಾಗಿ ಪಡೆಯುವುದಿಲ್ಲ. ನಾವು ಅದನ್ನು ನಮ್ಮ ಮಕ್ಕಳಲ್ಲಿ ಬೇರೂರಿಸಬೇಕು ಮತ್ತು ನಮ್ಮ ಜೀವಮಾನದಲ್ಲೆಲ್ಲಾ ಅದನ್ನು ಕಲಿಯುತ್ತಾ ಹೋಗಬೇಕು. ನಾವು ಪ್ರತಿಯೊಬ್ಬರು ಅರಸ ದಾವೀದನ ಹೃದಯ ಸ್ಥಿತಿಯನ್ನು ಬೆಳೆಸಿಕೊಳ್ಳಬೇಕು, ಅವನು ಬರೆದದ್ದು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ.”—ಕೀರ್ತನೆ 25:4, 5.
ವಿಧೇಯನಾಗಿರುವ ಮೂಲಕ ವಿಧೇಯತೆಯನ್ನು ಕಲಿಸು
ಯೇಸುವಿನ ತಾಯಿಗೆ ಮತ್ತು ದತ್ತಕ ತಂದೆಗೆ ಯೇಸುವಿನ ಜನನವನ್ನು ಆವರಿಸಿದ್ದ ಸ್ಥಿತಿಗತಿಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದ ಯೆಹೋವನ ಉದ್ದೇಶಗಳ ನೆರವೇರಿಕೆಯಲ್ಲಿ ಅವನಿಗೊಂದು ಮಹತ್ವದ ಪಾತ್ರ ವಹಿಸಲಿಕ್ಕಿದೆಯೆಂದು ಅವರು ಮನಗಂಡಿದ್ದರು. (ಲೂಕ 1:35, 46, 47 ಹೋಲಿಸಿರಿ.) ಅವರ ಸಂದರ್ಭದಲ್ಲಿ “ಪುತ್ರ ಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು” ಎಂಬ ಮಾತುಗಳಿಗೆ ಒಂದು ಅಪೂರ್ವ ಅರ್ಥವಿತ್ತು. (ಕೀರ್ತನೆ 127:3) ತಮಗಿರುವ ಪ್ರಚಂಡ ಜವಾಬ್ದಾರಿಕೆಯನ್ನು ಅವರು ಪೂರ್ತಿಯಾಗಿ ಅರಿತುಕೊಂಡರು, ಮತ್ತು ಐಗುಪ್ತಕ್ಕೆ ಓಡಿಹೋಗುವಂತೆ, ಅಥವಾ ಅನಂತರ ಗಲಿಲಾಯಕ್ಕೆ ಹೋಗುವಂತೆ ತಿಳಿಸಲ್ಪಟ್ಟಂಥ ಸಂದರ್ಭಗಳಲ್ಲಿ, ದೈವಿಕ ಮಾರ್ಗದರ್ಶನೆಗಳಿಗೆ ಒಡನೆಯೇ ವಿಧೇಯರಾದರು.—ಮತ್ತಾಯ 2:1-23.
ಶಿಸ್ತಿನ ಸಂಬಂಧದಲ್ಲಿ ತಮ್ಮ ಜವಾಬ್ದಾರಿಕೆಯನ್ನು ಸಹ ಯೇಸುವಿನ ಹೆತ್ತವರು ಮನಗಂಡಿದ್ದರು. ಅವನ ಮಾನವ ಪೂರ್ವದ ಅಸ್ತಿತ್ವದಲ್ಲಿ ಯೇಸು ಯಾವಾಗಲೂ ವಿಧೇಯನಾಗಿದ್ದನು ನಿಜ. ಆದರೆ ಭೂಮಿಯಲ್ಲಿದ್ದಾಗ, ಒಂದು ಪೂರಾ ಹೊಸತಾದ ಪರಿಸ್ಥಿತಿಗಳ ಕೆಳಗೆ ಅವನು ವಿಧೇಯನಾಗಿರಲು ಕಲಿತನು. ಒಂದು ಸಂಗತಿಯೇನಂದರೆ, ಅವನು ಅಪೂರ್ಣ ಹೆತ್ತವರಿಗೆ ವಿಧೇಯನಾಗಿರಬೇಕಿತ್ತು, ಯಾಕಂದರೆ ಒಂದು ಪರಿಪೂರ್ಣ ಮಗುವಿಗೆ ಸಹ ಸೂಚನೆ ಮತ್ತು ಶಿಕ್ಷಣದ ರೂಪದಲ್ಲಿ ಶಿಸ್ತಿನ ಅಗತ್ಯವಿದೆ. ಇದನ್ನು ಅವನ ಹೆತ್ತವರು ಒದಗಿಸಿದ್ದರು. ಇನ್ನೊಂದು ಕಡೆ, ಶಿಕ್ಷಾರೂಪದ ಶಿಸ್ತಾದರೋ ಅನಾವಶ್ಯಕವಾಗಿತ್ತು. ಯೇಸು ಯಾವಾಗಲೂ ವಿಧೇಯನಾಗಿದ್ದನು; ಅವನಿಗೆಂದೂ ಎರಡು ಸಾರಿ ಹೇಳಬೇಕಿರಲಿಲ್ಲ. ನಾವು ಓದುವುದು: “ಬಳಿಕ ಆತನು ಅವರ [ಹೆತ್ತವರ] ಜತೆಯಲ್ಲಿ ನಜರೇತಿಗೆ ಬಂದನು ಮತ್ತು ಅವರಿಗೆ ವಿಧೇಯನಾದನು.”—ಲೂಕ 2:51, ಫಿಲಿಪ್ಸ್.
ಮಾದರಿಯ ಮೂಲಕ ಯೇಸುವಿಗೆ ಹೇಗೆ ಕಲಿಸುವುದೆಂದು ಯೋಸೇಫ ಮತ್ತು ಮರಿಯಳಿಗೆ ತಿಳಿದಿತ್ತು. ಉದಾಹರಣೆಗೆ ನಾವು ಓದುವುದು: “ಆತನ ತಂದೆ ತಾಯಿಗಳು ಪ್ರತಿ ವರುಷವೂ ಪಸ್ಕ ಹಬ್ಬದ ಜಾತ್ರೆಗೆ ಯೆರೂಸಲೇಮಿಗೆ ಹೋಗುತ್ತಿದ್ದರು.” (ಲೂಕ 2:41) ತನ್ನ ಕುಟುಂಬವನ್ನು ಒಟ್ಟಿಗೆ ಕರಕೊಂಡು ಹೋಗಲು ಏರ್ಪಡಿಸಿದ ಮೂಲಕ ಯೋಸೇಫನು ತಾನು ಅವರ ಆತ್ಮಿಕ ಹಿತಚಿಂತನೆಯಲ್ಲಿ ಆಸಕ್ತನೆಂದೂ ಯೆಹೋವನ ಭಕ್ತಿಯನ್ನು ತಾನು ಗಂಭೀರವಾಗಿ ತಕ್ಕೊಳ್ಳುವವನೆಂದೂ ತೋರಿಸಿಕೊಟ್ಟನು. ತದ್ರೀತಿಯ ವಿಧಾನಗಳಲ್ಲಿ, ಹೆತ್ತವರು ಭಕ್ತಿಯ ವಿಷಯಗಳಲ್ಲಿ ತಮ್ಮ ಸ್ವಂತ ವಿಧೇಯತೆಯ ಮೂಲಕ ಇಂದು ತಮ್ಮ ಮಕ್ಕಳಿಗೆ ವಿಧೇಯತೆಯನ್ನು ಕಲಿಸಬಲ್ಲರು.
ಯೋಸೇಫ ಮತ್ತು ಮರಿಯ ನೀತಿಯಲ್ಲಿ ಕೊಟ್ಟ ಉತ್ತಮ ಶಿಸ್ತಿನ ಕಾರಣದಿಂದ, “ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು; ಇದಲ್ಲದೆ ದೇವರ ಮತ್ತು ಮನುಷ್ಯರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು.” ಕ್ರೈಸ್ತ ಹೆತ್ತವರಿಗೆ ಇಂದು ಅನುಸರಿಸಲಿಕ್ಕಾಗಿ ಎಂಥ ಉತ್ತಮ ಮಾದರಿಯು!—ಲೂಕ 2:52.
“ಎಲ್ಲಾ ವಿಷಯಗಳಲ್ಲಿ . . . ವಿಧೇಯರಾಗಿರಿ”
“ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆ ತಾಯಿಗಳ ಮಾತನ್ನು ಕೇಳಿರಿ [ವಿಧೇಯರಾಗಿರಿ, NW] ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.” (ಕೊಲೊಸ್ಸೆ 3:20) ಯೇಸು ಎಲ್ಲಾ ವಿಷಯಗಳಲ್ಲಿ ತನ್ನ ಹೆತ್ತವರಿಗೆ ವಿಧೇಯನಾಗಿರ ಸಾಧ್ಯವಿತ್ತು ಯಾಕಂದರೆ ಯೆಹೋವನಿಗೆ ಅವರ ವಿಧೇಯತೆಯು—ಯೇಸುವಿನಿಂದ ಅಥವಾ ಅವನ ಮಲ ತಮ್ಮಂದಿರು ಮತ್ತು ತಂಗಿಯಂದಿರಿಂದ—ಯೆಹೋವನ ಚಿತ್ತಕ್ಕೆ ವಿರುದ್ಧವಾದ ಯಾವುದೇ ವಿಷಯವನ್ನು ಮಾಡುವಂತೆ ನಿರ್ಬಂಧಿಸುವ ಮುಂಚೆಯೇ ತೋರಿಸಲ್ಪಡುತ್ತಿತ್ತು.
ಇಂದು ಸಹ ಅನೇಕ ಹೆತ್ತವರು ತಮ್ಮ ಮಕ್ಕಳು ಎಲ್ಲಾ ವಿಷಯಗಳಲ್ಲಿ ವಿಧೇಯರಾಗುವಂತೆ ಯಶಸ್ವಿಯಾಗಿ ಕಲಿಸುತ್ತಿದ್ದಾರೆ. ತಮ್ಮ ಮಕ್ಕಳ-ಪರಿಪಾಲನೆಯ ದಿನಗಳನ್ನು ಮುಗಿಸಿಬಿಟ್ಟಿರುವ ಹಾಗೂ ಈಗ ವಾಚ್ಟವರ್ ಸೊಸೈಟಿಯ ಒಂದು ಬ್ರಾಂಚ್ನಲ್ಲಿ ಸೇವೆಮಾಡುತ್ತಿರುವ ಮೂವರು ತಂದೆಯಂದಿರಿಗೆ ಕಿವಿಗೊಡಿರಿ.
ತಾನು ಮತ್ತು ತನ್ನ ಪತ್ನಿ ಐದು ಗಂಡು ಮಕ್ಕಳನ್ನು ಹೇಗೆ ಪಾಲಿಸಿದ್ದರೆಂಬದರ ಕುರಿತು ಥಿಯೊ ಹೇಳುತ್ತಾನೆ. ಅವನನ್ನುವುದು: “ಪ್ರಾಯಸ್ಥರಾದ ನಾವು ಸಹ ತಪ್ಪುಗಳನ್ನು ಮಾಡುತ್ತೇವೆಂದು ಆರಂಭದಿಂದಲೇ ಮಕ್ಕಳು ತಿಳಿಯುವಂತೆ ಮಾಡುವುದು ಪ್ರಾಮುಖ್ಯವಾಗಿದೆ. ಶೋಚನೀಯವಾಗಿ, ನಾವದನ್ನು ಬಾರಿಬಾರಿಗೂ ಮಾಡುತ್ತೇವೆ ಮತ್ತು ಎಡೆಬಿಡದೆ ನಮ್ಮ ಸ್ವರ್ಗೀಯ ತಂದೆಯೊಂದಿಗೆ ಕ್ಷಮೆ ಮತ್ತು ಸಹಾಯವನ್ನು ಯಾಚಿಸಬೇಕಾಗುತ್ತದೆ. ಅವರು ತಮ್ಮ ಯೌವನದ ಚಿಂತೆಗಳೊಂದಿಗೆ ಹೋರಾಡುತ್ತಿರುವಂತೆ ನಾವು ಸಹ ನಮ್ಮ ಪ್ರೌಢ ಚಿಂತೆಗಳೊಂದಿಗೆ ಹೋರಾಡುತ್ತಿದ್ದೇವೆಂಬದನ್ನು ನಮ್ಮ ಮಕ್ಕಳು ಕಾಣುವಂತೆ ನಾವು ಬುದ್ಧಿಪೂರ್ವಕವಾಗಿ ಬಿಟ್ಟೆವು.”
ಒಂದು ಮಗುವು ವಿಧೇಯತೆಯನ್ನು ಕಲಿಯಲಿಕ್ಕಿದ್ದರೆ, ಅವನೊಂದಿಗೆ ಮತ್ತು ಅವನ ಹೆತ್ತವರೊಂದಿಗೆ ಒಂದು ಪ್ರೀತಿಯುಳ್ಳ ಸಂಬಂಧವು ಅತ್ಯಾವಶ್ಯಕ. ಹರ್ಮನ್ ತನ್ನ ಪತ್ನಿಯ ಕುರಿತು ಹೇಳುವುದು: “ಅವಳು ಹುಡುಗರ ತಾಯಿ ಮಾತ್ರವೇ ಅಲ್ಲ ಅವರ ಸ್ನೇಹಿತೆಯೂ ಆಗಿದ್ದಳು. ಇದನ್ನು ಅವರು ಗಣ್ಯಮಾಡಿದ್ದರು, ಹೀಗೆ ವಿಧೇಯರಾಗಿರಲು ಅವರಿಗೆ ಕಷ್ಟವಾಗಲಿಲ್ಲ.” ಹೆತ್ತವ-ಮಗು ಸಂಬಂಧವನ್ನು ಉತ್ತಮಗೊಳಿಸುವ ಒಂದು ಉಪಯುಕ್ತ ಸಲಹೆಯನ್ನು ಅನಂತರ ಕೂಡಿಸುತ್ತಾ, ಅವನಂದದ್ದು: “ನಾವು ಬುದ್ಧಿಪೂರ್ವಕವಾಗಿ ಹಲವಾರು ವರ್ಷಗಳನ್ನು ಡಿಷ್ವಾಷರ್ ಇಲ್ಲದೆ ಕಳೆದೆವು, ಹೀಗೆ ಊಟದ ತಟ್ಟೆಗಳನ್ನು ಕೈಯಿಂದಲೇ ತೊಳೆದು ಒರಸಿಡಬೇಕಾಗಿತ್ತು. ನಮ್ಮ ಗಂಡು ಮಕ್ಕಳು ಸರದಿಯ ಮೇಲೆ, ಒರಸುವ ಕೆಲಸಕ್ಕೆ ನೇಮಿಸಲ್ಪಟ್ಟಿದ್ದರು. ಅನಿಯತ ಮಾತುಕತೆಗೆ ಇದಕ್ಕಿಂತ ಉತ್ತಮ ಸಮಯವಿರಲಿಲ್ಲ.”
ಒಂದು ಪ್ರೀತಿಯುಳ್ಳ ಹೆತ್ತವ-ಮಗು ಸಂಬಂಧವು, ಕ್ರೈಸ್ತನೊಬ್ಬನು ಯೆಹೋವನೊಂದಿಗೆ ಇಡಬೇಕಾದ ಸಂಬಂಧಕ್ಕಾಗಿ ಒಂದು ಒಳ್ಳೇ ನಮೂನೆಯಾಗಿ ಕಾರ್ಯನಡಿಸುತ್ತದೆ. ಅಂಥ ಒಂದು ಸಂಬಂಧವನ್ನು ಇಡಲು ತಾನು ಮತ್ತು ತನ್ನ ಪತ್ನಿ ತಮ್ಮ ಇಬ್ಬರು ಹುಡುಗರಿಗೆ ಹೇಗೆ ನೆರವಾದರೆಂಬದನ್ನು ರುಡೊಲ್ಫ್ ವಿವರಿಸುತ್ತಾನೆ: “ಒಂದು ಕ್ರಮದ ಕುಟುಂಬ ಅಭ್ಯಾಸವು ನಮ್ಮ ಮೂಲಾಧಾರವಾಗಿತ್ತು. ಸಂಶೋಧನೆಗಾಗಿ ಹಲವಾರು ತಕ್ಕದಾದ ವಿಷಯಗಳನ್ನು ಮಕ್ಕಳಿಗೆ ನಾವು ನೇಮಿಸಿದೆವು. ನಮ್ಮ ಬೈಬಲ್ ವಾಚನವನ್ನೂ ನಾವು ಒಟ್ಟಾಗಿ ನಡಿಸಿ, ಅನಂತರ ಸಮಾಚಾರದ ಚರ್ಚೆಯನ್ನು ಮಾಡುತ್ತಿದ್ದೆವು. ಯೆಹೋವನು ಕೇವಲ ಮಕ್ಕಳಿಂದಲ್ಲ, ಹೆತ್ತವರಿಂದಲೂ ವಿಧೇಯತೆಯನ್ನು ಅಪೇಕ್ಷಿಸುತ್ತಾನೆಂದು ನಮ್ಮ ಗಂಡು ಮಕ್ಕಳು ಕಾಣಶಕ್ತರಾದರು.”
“ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ” ಎಂಬ ಪ್ರೇರಿತ ವಚನವು ತಮಗೆ ಹಾಗೂ ತಮ್ಮ ಮಕ್ಕಳಿಗೆ ಅನ್ವಯಿಸುತ್ತದೆಂದು ಕ್ರೈಸ್ತ ಹೆತ್ತವರು ಮನಗಾಣುತ್ತಾರೆ. ಹೀಗೆ ಎಲ್ಲಾ ವಿಷಯಗಳಲ್ಲಿ ತಮ್ಮ ಹೆತ್ತವರಿಗೆ ವಿಧೇಯರಾಗುವ ಹಂಗು ಮಕ್ಕಳಿಗಿರುವಾಗ, ಹೆತ್ತವರು ಸಹ ಯೆಹೋವನು ಅವರಿಂದ ಆವಶ್ಯಪಡಿಸುವ ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿರಲೇ ಬೇಕು. ಹೆತ್ತವ-ಮಗು ಸಂಬಂಧವನ್ನು ಬಲಪಡಿಸುವ ಜೊತೆಯಲ್ಲಿ, ಹೆತ್ತವರು ಮತ್ತು ಮಕ್ಕಳು ದೇವರೊಂದಿಗೆ ತಮ್ಮ ಸಂಬಂಧವನ್ನು ಬಲಪಡಿಸಲು ಬಯಸುವವರಾಗಬೇಕು.—ಜ್ಞಾನೋಕ್ತಿ 6:23.
ವಿಧೇಯತೆಯನ್ನು ಸಕಾರಾತ್ಮಕವಾಗಿ ವೀಕ್ಷಿಸಿರಿ
ಮಕ್ಕಳ ಪಾಲನೆಯ ಕುರಿತು ದೇವರ ವಾಕ್ಯವು ಅಂಥ ವ್ಯಾವಹಾರ್ಯ ಸೂಚನೆಯನ್ನು ಒದಗಿಸುವುದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬಲ್ಲೆವು! (ಚೌಕಟ್ಟು ನೋಡಿರಿ.) ತಮ್ಮನ್ನು ನೀತಿಯಲ್ಲಿ ಶಿಸ್ತುಗೊಳಿಸುವ ಹೆತ್ತವರಿಂದ ವಿಧೇಯತೆಯನ್ನು ಕಲಿಯುವ ಮಕ್ಕಳು ಇಡೀ ಕ್ರೈಸ್ತ ಸಹೋದರತ್ವಕ್ಕೆ ಆನಂದದ ಒಂದು ನಿಜ ಮೂಲವಾಗಿದ್ದಾರೆ.
ದೇವರಿಗೆ ವಿಧೇಯತೆಯು ಜೀವದ ಅರ್ಥದಲ್ಲಿರುವುದರಿಂದ, ನಮ್ಮ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ದೇವರು ಹಾಕುವ ನಿರ್ಬಂಧಗಳನ್ನು—ಕ್ಷಣಮಾತ್ರಕ್ಕಾದರೂ ತಡೆದಿಡುವ ವಿಚಾರದೊಂದಿಗೆ ಚೆಲ್ಲಾಟವಾಡುವುದನ್ನು ನಾವು ವರ್ಜಿಸಬೇಕು. ದೃಷ್ಟಾಂತಕ್ಕಾಗಿ, ಗುರುತ್ವಾಕರ್ಷಣ ನಿಯಮವನ್ನು ನಾವು ಅಲ್ಪಕಾಲ ತಡೆದಿಡಲು ಸಾಧ್ಯವೆಂದು ಊಹಿಸಿಕೊಳ್ಳಿರಿ. ನಮ್ಮ ಅನಿರ್ಬಂಧಿತ ಸ್ವಾತಂತ್ರ್ಯದೊಂದಿಗೆ, ಒಂದು ಬೆಟ್ಟದ ಶಿಕರದಿಂದ ಆಕಾಶದೊಳಗೇರುತ್ತಾ ಹೋಗುವ ಅತ್ಯುಲ್ಲಾಸಕ್ಕೆ ನಾವೆಷ್ಟು ರೋಮಾಂಚಗೊಳ್ಳುವೆವು! ಆದರೆ ಒಮ್ಮೆ ವಿಷಯಗಳು ಸಾಮಾನ್ಯ ಸ್ಥಿತಿಗೆ ಬರುವಾಗ ಏನಾಗುವುದು? ನಮ್ಮನ್ನು ಕಾದಿರುವ ಬೀಳಿಕ್ವೆಯ ಕುರಿತು ಯೋಚಿಸಿರಿ!
ಶಿಸ್ತನ್ನು ಸ್ವೀಕರಿಸುವ ಮೂಲಕ ವಿಧೇಯತೆಯನ್ನು ಕಲಿಯುವುದು ಒಂದು ಸಮತೂಕದ ವ್ಯಕ್ತಿತ್ವವನ್ನು ಬೆಳೆಸುವುದಕ್ಕೆ ನೆರವಾಗುತ್ತದೆ ಮತ್ತು ನಮ್ಮ ಸೀಮಿತಗಳನ್ನು ತಿಳಿಯಲು ಸಹಾಯ ಮಾಡುತ್ತದೆ. ಇತರರ ಹಕ್ಕುಗಳಿಗೆ ಮತ್ತು ಅಗತ್ಯತೆಗಳಿಗೆ ತಗಾದೆ ಮಾಡುವುದನ್ನು ವರ್ಜಿಸುವಂತೆ ಮತ್ತು ವೇದನಾಶೂನ್ಯರಾಗಿರದಂತೆ ಅದು ಸಹಾಯ ಮಾಡುತ್ತದೆ. ಅನಿಶ್ಚಯತೆಯ ಕೆರಳಿಕೆಗಳಿಂದ ದೂರವಿರಲು ಅದು ನಮಗೆ ನೆರವಾಗುತ್ತದೆ. ಸಂಕ್ಷೇಪವಾಗಿ, ಅದು ಸಂತೋಷಕ್ಕೆ ದಾರಿಮಾಡುತ್ತದೆ.
ಹೀಗೆ ನೀವು ಪ್ರಾಯಸ್ಥರಾಗಿರಲಿ ಎಳೆಯರಾಗಿರಲಿ, ಶಿಸ್ತನ್ನು ಸ್ವೀಕರಿಸುವ ಮೂಲಕ ವಿಧೇಯತೆಯನ್ನು ಕಲಿಯಿರಿ, ಈ ಮೂಲಕ “ನಿಮಗೆ ಮೇಲಾಗುವದು” ಮತ್ತು ನೀವು “ಭೂಮಿಯ ಮೇಲೆ ಬಹುಕಾಲ ಬದುಕುವಿರಿ.” (ಎಫೆಸ 6:1-3) ಶಿಸ್ತನ್ನು ಸ್ವೀಕರಿಸದೆ ಇರುವ ಮೂಲಕ ವಿಧೇಯತೆಯನ್ನು ಕಲಿಯಲು ತಪ್ಪುವುದರಿಂದ ತನ್ನ ಸದಾ ಜೀವಿಸುವ ಪ್ರತೀಕ್ಷೆಯನ್ನು ಅಪಾಯಕ್ಕೊಡ್ಡಲು ಯಾರು ಬಯಸ್ಯಾನು?—ಯೋಹಾನ 11:26.
[ಪುಟ 31 ರಲ್ಲಿರುವ ಚೌಕ]
ಹೆತ್ತವರೇ, ನೀತಿಯಲ್ಲಿ ಶಿಕ್ಷಿಸುವ ಮೂಲಕ ವಿಧೇಯತೆಯನ್ನು ಕಲಿಸಿರಿ
1. ಶಾಸ್ತ್ರೀಯ ನಿಯಮಗಳ ಮತ್ತು ತತ್ವಗಳ ಆಧಾರದಲ್ಲಿ ಶಿಸ್ತು ನೀಡಿರಿ.
2. ವಿಧೇಯತೆಯನ್ನು ಕೇವಲ ನಿರ್ಬಂಧಿಸುವುದರಿಂದ ಮಾತ್ರವೇ ಅಲ್ಲ, ವಿಧೇಯತೆಯು ಹೇಗೆ ವಿವೇಕದ ಮಾರ್ಗವೆಂದು ವಿವರಿಸುವ ಮೂಲಕ ಶಿಸ್ತುಗೊಳಿಸಿರಿ.—ಮತ್ತಾಯ 11:19ಬಿ.
3. ಕೋಪದಿಂದಾಗಲಿ ಚೀರಾಟದಿಂದಾಗಲಿ ಶಿಕ್ಷಿಸಬೇಡಿರಿ.—ಎಫೆಸ 4:31, 32.
4. ಒಂದು ಪ್ರೀತಿಯುಳ್ಳ ಮತ್ತು ಪರಾಮರಿಕೆಯ ಸಂಬಂಧದ ಹೃತ್ಪೂರ್ವಕತೆಯಿಂದ ಶಿಸ್ತು ನೀಡಿರಿ.—ಕೊಲೊಸ್ಸೆ 3:21; 1 ಥೆಸಲೊನೀಕ 2:7, 8; ಇಬ್ರಿಯ 12:5-8.
5. ಮಕ್ಕಳನ್ನು ಬಾಲ್ಯದಿಂದಲೇ ಶಿಸ್ತುಗೊಳಿಸಿರಿ.—2 ತಿಮೊಥೆಯ 3:14, 15.
6. ಪದೇ ಪದೇ ಮತ್ತು ದೃಢತೆಯೊಂದಿಗೆ ಶಿಸ್ತು ನೀಡಿರಿ.—ಧರ್ಮೋಪದೇಶಕಾಂಡ 6:6-9; 1 ಥೆಸಲೊನೀಕ 2:11, 12.
7. ಮೊದಲಾಗಿ ನಿಮ್ಮನ್ನು ಶಿಸ್ತುಗೊಳಿಸಿರಿ, ಹೀಗೆ ಮಾದರಿಯ ಮೂಲಕ ಕಲಿಸಿರಿ.—ಯೋಹಾನ 13:15; ಹೋಲಿಸಿರಿ ಮತ್ತಾಯ 23:2, 3.
8. ಯೆಹೋವನಲ್ಲಿ ಪೂರ್ಣ ಆತುಕೊಂಡವರಾಗಿ, ಪ್ರಾರ್ಥನೆಯಲ್ಲಿ ಅವನ ಸಹಾಯಕ್ಕಾಗಿ ವಿಜ್ಞಾಪಿಸುತ್ತಾ ಶಿಸ್ತು ನೀಡಿರಿ.—ನ್ಯಾಯಸ್ಥಾಪಕರು 13:8-10.
[ಪುಟ 30 ರಲ್ಲಿರುವ ಚಿತ್ರ]
“ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ”