-
ಆತ್ಮ ಲೋಕದ ಅಧಿಪತಿಗಳುಕಾವಲಿನಬುರುಜು—1995 | ಜುಲೈ 15
-
-
ಯೇಸುವಿನ ದೀಕ್ಷಾಸ್ನಾನದ ಬಳಿಕ ಸ್ವಲ್ಪದರಲ್ಲಿ, ಪಿಶಾಚನಾದ ಸೈತಾನನೆಂಬ ಅದೃಶ್ಯ ಆತ್ಮ ಜೀವಿಯಿಂದ ಆತನು ಶೋಧಿಸಲ್ಪಟ್ಟನು. ಆ ಶೋಧನೆಗಳಲ್ಲೊಂದನ್ನು ಪ್ರಸ್ತಾಪಿಸುತ್ತಾ ಬೈಬಲನ್ನುವುದು: “ಸೈತಾನನು ಆತನನ್ನು [ಯೇಸುವನ್ನು] ಬಹಳ ಎತ್ತರವಾದ ಬೆಟ್ಟಕ್ಕೆ ಕರಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ” ದನು. (ಮತ್ತಾಯ 4:8) ಬಳಿಕ ಸೈತಾನನು ಯೇಸುವಿಗೆ ಅಂದದ್ದು: “ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಟ್ಟದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ; ನೀನು ನನ್ನ ಮುಂದೆ ಅಡ್ಡಬಿದ್ದರೆ ಅದೆಲ್ಲಾ ನಿನ್ನದಾಗುವದು.”—ಲೂಕ 4:6, 7.
ಈ ಲೋಕದ ಎಲ್ಲಾ ರಾಜ್ಯಗಳ ಅಥವಾ ಸರಕಾರಗಳ ಮೇಲಿನ ಅಧಿಕಾರವನ್ನು ತಾನು ಹೊಂದಿದವನೆಂದು ಸೈತಾನನು ವಾದಿಸಿದನು. ಈ ವಾದವನ್ನು ಯೇಸು ಅಲ್ಲಗಳೆದನೊ? ಇಲ್ಲ, ವಾಸ್ತವಿಕವಾಗಿ, ಇನ್ನೊಂದು ಸಂದರ್ಭದಲ್ಲಿ ಸೈತಾನನನ್ನು “ಇಹಲೋಕಾಧಿಪತಿ” ಎಂದು ನಿರ್ದೇಶಿಸುವ ಮೂಲಕ ಅವನು ಅದನ್ನು ದೃಢೀಕರಿಸಿದನು.—ಯೋಹಾನ 14:30.
ಬೈಬಲಿಗನುಸಾರವಾಗಿ, ಸೈತಾನನು ಮಹಾ ಶಕ್ತಿಯನ್ನು ಹೊಂದಿರುವ ಒಬ್ಬ ದುಷ್ಟ ದೇವದೂತನು. ಕ್ರೈಸ್ತ ಅಪೊಸ್ತಲ ಪೌಲನು ಸೈತಾನನನ್ನು “ದುರಾತ್ಮಗಳ ಸೇನೆ” ಯೊಂದಿಗೆ ಜತೆಗೂಡಿಸುತ್ತಾ ಅವರನ್ನು “ಈ ಅಂಧಕಾರದ ಲೋಕಾಧಿಪತಿಗಳು” ಎಂಬುದಾಗಿ ಮಾತಾಡುತ್ತಾನೆ. (ಎಫೆಸ 6:11, 12) ಅದಲ್ಲದೆ, ಅಪೊಸ್ತಲ ಯೋಹಾನನು “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ” ಎಂದು ಹೇಳಿದನು. (1 ಯೋಹಾನ 5:19) ಸೈತಾನನು “ಭೂಲೋಕದವರನ್ನೆಲ್ಲಾ ಮರುಳುಗೊಳಿಸು” ತ್ತಾನೆಂದು ಬೈಬಲಿನ ಪ್ರಕಟನೆ ಪುಸ್ತಕವು ಹೇಳುತ್ತದೆ. (ಪ್ರಕಟನೆ 12:9) ಸಾಂಕೇತಿಕ ಭಾಷೆಯಲ್ಲಿ, ಸೈತಾನನನ್ನು, ಲೋಕದ ರಾಜಕೀಯ ವ್ಯವಸ್ಥೆಗೆ “ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ” ಕೊಡುವ ಘಟಸರ್ಪನಾಗಿ ಸಹ ಪ್ರಕಟನೆಯು ಚಿತ್ರಿಸುತ್ತದೆ.—ಪ್ರಕಟನೆ 13:2.
ಮನುಷ್ಯರನ್ನು ಅವರ ಹಾನಿಗಾಗಿ ಕೌಶಲದಿಂದ ನಿರ್ವಹಿಸಿಕೊಳ್ಳುವ ಒಂದು ದುಷ್ಟ ಶಕ್ತಿಯಿದೆಯೆಂದು ಲೋಕ ಘಟನೆಗಳು ಸಹ ಸಾಕ್ಷ್ಯಕೊಡುತ್ತವೆ. ಬೇರೆ ಯಾವ ಕಾರಣಕ್ಕಾಗಿ ಮಾನವ ಸರ್ಕಾರಗಳು ಶಾಂತಿಯನ್ನು ಪ್ರವರ್ಧಿಸಲು ತಪ್ಪುತ್ತವೆ? ಒಬ್ಬರನ್ನೊಬ್ಬರು ದ್ವೇಷಿಸಲಿಕ್ಕೆ ಮತ್ತು ಸಂಹರಿಸಿಕೊಳ್ಳಲಿಕ್ಕೆ ಬೇರೆ ಯಾವುದು ಕಾರಣಮಾಡುತ್ತದೆ? ಒಂದು ಒಳಯುದ್ಧದಲ್ಲಿ ನಡೆದ ಕಗ್ಗೊಲೆ ಮತ್ತು ಸಾವಿನಿಂದಾಗಿ ದಿಗಿಲುಗೊಂಡ ಒಬ್ಬಾಕೆ ಪ್ರತ್ಯಕ್ಷ ಸಾಕ್ಷಿಯು ಅಂದದ್ದು: “ಈ ಅತ್ಯಾಚಾರವು ಹೇಗೆ ಸಂಭವಿಸಬಹುದಾಗಿತ್ತೆಂದು ನನಗೆ ತಿಳಿಯದು. ಅದು ದ್ವೇಷಕ್ಕಿಂತಲೂ ಅತೀತ. ಒಂದು ದುಷ್ಟ ಆತ್ಮವೆ ಈ ಮಾನವ ಜೀವಿಗಳು ಒಬ್ಬರನ್ನೊಬ್ಬರು ನಾಶಪಡಿಸಿಕೊಳ್ಳುವಂತೆ ಬಳಸುತ್ತಿದೆ.”
-
-
ಆತ್ಮ ಲೋಕದ ಅಧಿಪತಿಗಳುಕಾವಲಿನಬುರುಜು—1995 | ಜುಲೈ 15
-
-
ಸೈತಾನನನ್ನು ಆಳಲು ಬಿಟ್ಟದ್ದಕ್ಕೆ ಕಾರಣ
ಭೂಮಿಯ ಮೇಲಿನ ಅಧಿಕಾರದ ಕುರಿತು ಸೈತಾನನು ಯೇಸುವಿಗೆ ಏನಂದನೆಂಬುದು ನಿಮಗೆ ಜ್ಞಾಪಕವಿದೆಯೆ? “ಇವೆಲ್ಲವುಗಳ ಅಧಿಕಾರವನ್ನೂ . . . ನಿನಗೆ ಕೊಡುವೆನು. ಇದೆಲ್ಲ ನನಗೆ ಕೊಟ್ಟದೆ” ಅಂದನು ಸೈತಾನನು. (ಲೂಕ 4:6) ದೇವರ ಅನುಮತಿಯಿಂದ ಮಾತ್ರ ಪಿಶಾಚನಾದ ಸೈತಾನನು ಅಧಿಕಾರವನ್ನು ಬಳಸುತ್ತಾನೆಂದು ಈ ಹೇಳಿಕೆಯು ತೋರಿಸುತ್ತದೆ. ಆದರೆ ದೇವರು ಸೈತಾನನನ್ನು ಸಹಿಸಿಕೊಳ್ಳುವುದೇಕೆ?
-