ಬೈಬಲಿನ ದೃಷ್ಟಿಕೋನ
ಪಿಶಾಚನೊಬ್ಬನು ನಿಜವಾಗಿ ಇದ್ದಾನೋ?
ನೀವು ಮಗುವಾಗಿದ್ದಾಗ, ಕತ್ತಲೆ ಅಂದರೆ ಹೆದರುತ್ತಿದ್ದೀರೋ? ಪ್ರಾಯಶಃ ಒಂದು ಪೆಡಂಭೂತವು ನಿಮ್ಮ ಕಿಟಕಿಯ ಹತ್ತಿರ ಹೊಂಚು ಹಾಕುತ್ತಿದ್ದು, ನಿಮ್ಮನ್ನು ನಿಮ್ಮ ಹೆತ್ತವರಿಂದ ಎಳೆದು ಕೊಂಡು ಹೋಗಲು ಕಾದಿದ್ದಾನೆ ಎಂದು ನೀವು ಊಹಿಸಿದ್ದೀರಿ. ಈಗ ನೀವು ವಯಸ್ಕರಾಗಿರುವುದರಿಂದ ವಾಸ್ತವ ಸಂಗತಿಗಳನ್ನು ಓದಲು ಶಕ್ತರಾಗಿದ್ದೀರಿ ಮತ್ತು ಹೆಚ್ಚು ವಿವೇಚನಾಯುಕ್ತವಾಗಿ ಯೋಚಿಸ ಶಕ್ತರಾಗಿದ್ದೀರಿ, ಆದುದರಿಂದ ಬಾಲ್ಯತನದ ಹೆದರಿಕೆಗಳು ಅಸಂಗತವಾದವುಗಳು ಎಂದು ತೋಚುತ್ತವೆ. “ಆದುದರಿಂದ,” ಕೆಲವು ಠೀಕಾಗಾರರು ಹೇಳುವುದು, “ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪಿಶಾಚನನ್ನು ಅದೇ ವರ್ಗದಲ್ಲಿ ಯಾಕೆ ಇಡ ಬಾರದು—ಮಗುವಿನ ಊಹನಾತ್ಮಕ ಪೆಡಂಭೂತಕ್ಕಿಂತ ಹೆಚ್ಚೇನೂ ನೈಜನಾಗಿರುವುದಿಲ್ಲ?”
ನೈಜ ಪಿಶಾಚನಿಲ್ಲವೋ? ಒಂದು ಧಾರ್ಮಿಕ ಕರಪತ್ರವು ಅದನ್ನು ತಾನೇ ನಿಮಗೆ ಆಶ್ವಾಸನೆಯನ್ನೀಯುವುದು: “ಕೆಟ್ಟತನದ ಅಂತಹ ಒಂದು ಪೆಡಂಭೂತ ಇದೆ ಎಂದು ಬೈಬಲಿನಲ್ಲಿ ಏನೂ ತಿಳಿದಿರುವುದಿಲ್ಲ,” ಮತ್ತು “ಪಿಶಾಚ ಮತ್ತು ಸೈತಾನ ಎಂಬ ಪದನುಡಿಗಳಲ್ಲಿ ನಮಗೆ ಇರುವುದು . . . ಮಾನವ ಸ್ವಭಾವದಲ್ಲಿ ಅಂತರ್ಗತವಾಗಿ ಇರುವ ಪಾಪ ಮತ್ತು ಕೆಟ್ಟತನದ ತತ್ವವೇ.” ಇಲ್ಲವೇ ಅಮೆರಿಕಾದ ಭಾನುವಾರ-ಶಾಲೆಯ ಶಿಕ್ಷಕನು ಹೇಳಿದಂತಿರುತ್ತದೆ: “ಮನುಷ್ಯರು ತಾವೇ ಪಿಶಾಚಿಗಳು.” ಇದು ಬಹಳ ಸರಳವಾಗಿ ಕಂಡು ಬರುತ್ತದೋ—ಪ್ರಾಯಶಃ ಅತಿಯಾದ ಸರಳತೆಯಾಯಿತೋ?
ಮಾನವ ಸ್ವಭಾವವನ್ನು ವಿವರಿಸುವುದು
ನಾವು ಮನುಷ್ಯರು ತಾನೇ ಪಿಶಾಚಿಗಳಾಗಿರುವುದಾದರೆ, ನಮ್ಮಲ್ಲಿ ಹೆಚ್ಚಾಗಿ ಎಲ್ಲರೂ ನಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಯಾಕೆ ಗಮನ ಕೊಡುತ್ತೇವೆ? ಉದಾಹರಣೆಗೆ, ವ್ಯಕ್ತಿಗಳೋಪಾದಿ ಅವರ ಕುಟುಂಬಗಳಿಗೆ ಆಹಾರವನ್ನು ಒದಗಿಸುತ್ತಾರೆ; ಸ್ವತಹ ತಿಳಿದುಕೊಂಡೇ ವಿಷವನ್ನು ಸೇವಿಸುವುದಿಲ್ಲ, ಮತ್ತು ಜೀವಕ್ಕೆ ಮಾರಕವಾದ ಅಪಾಯಗಳನ್ನು ಅವರು ಹೋಗಲಾಡಿಸುತ್ತಾರೆ. ಅದರಲ್ಲೇನೂ ಪೈಶಾಚಿಕತೆ ಇಲ್ಲ! ಆದರೂ, ಅದೇ ಜನರು ರಾಷ್ಟ್ರಗಳೋಪಾದಿ ಹೊಂದಿಕೆಯಲ್ಲಿ ಕ್ರಿಯೆ ನಡಿಸುವಾಗ, ಅವರ ಸಾಮಾನ್ಯ ಶ್ರೇಯೋಭಿವೃದ್ಧಿಯ ಅವರ ನೋಟವು ಯಾವುದರಿಂದಲೋ ತಡೆಯಲ್ಪಡುತ್ತದೆ. ರಾಷ್ಟ್ರಗಳೋಪಾದಿ, ಅವರ ಹಸಿದಿರುವ ಜನತೆಗೆ ಆಹಾರವನ್ನು ವಿತರಿಸುವುದರ ಬದಲು, ಅವರು ಅದು ಕೊಳೆತು ಹಾಳಾಗಲು ಬಿಡುತ್ತಾರೆ. ಭೂಮಿಯ ಪರಿಸರವನ್ನು ಅವರು ಮಲಿನಗೊಳಿಸುತ್ತಾರೆ. ಅವರು ಪರಸ್ಪರ ನಿರ್ಮೂಲನ—ಅಣ್ವಸಸ್ತ್ರ ಯುದ್ಧ—ಕ್ಕಾಗಿ ತಮ್ಮನ್ನು ಶಸ್ತ್ರನ್ನದ್ಧರನ್ನಾಗಿ ಇಡುತ್ತಾರೆ. ಸೋಜಿಗದ, ಸ್ವ-ಘಾತದ ಸ್ವಭಾವ!
ಮಾನವ ಸ್ವಭಾವದಲ್ಲಿ ಈ ಕರಿಚುಕ್ಕೆಯ ದಾಖಲೆಗೆ ಪ್ರಭಾವಿತರನ್ನಾಗಿ ಮಾಡುವುದು ಯಾವುದು? ಜನಸಮೂಹ ಮನೋವೃತ್ತೀಯೇ? ಕೇವಲ ಕೆಲವೇ ವಿವೇಚನಾರಹಿತ ನೇತಾರರೇ? ಖಂಡಿತವಾಗಿಯೂ ಹೆಚ್ಚಿನದ್ದು ಒಳಗೂಡಿದೆ. ನಂಬಿಕೆಯಿಲ್ಲದ ಲೋಕವ್ಯಾಪಕ “ವಿಷಯಗಳ ವ್ಯವಸ್ಥೆಯ” ಜನರ “ಮನಸ್ಸನ್ನು ಮಂಕು ಮಾಡಿದ” ಒಬ್ಬನ ಕುರಿತು ಬೈಬಲು ಮಾತ್ರ ಗುರುತಿಸುತ್ತದೆ. ಯಾರು? “ಇಡೀ ನಿವಾಸಿತ ಭೂಮಿಯನ್ನು ಮರುಳುಗೊಳಿಸುವ ಪಿಶಾಚನೆಂತಲೂ, ಸೈತಾನನೆಂತಲೂ ಹೆಸರುಳ್ಳವನಾಗಿದ್ದಾನೆ.” ಅವನು ಸಂಸ್ಥಾಪಿಸಲ್ಪಟ್ಟ ಮಾನವ ಕುಲವನ್ನು ಎಷ್ಟೊಂದು ಯಶಸ್ವೀಯಾಗಿ ಜಾಣ್ಮೆಯಿಂದ ನಡಿಸುತ್ತಾನೆಂದರೆ ಬೈಬಲು ಅವನನ್ನು ಈ ಲೋಕ ವ್ಯವಸ್ಥೆಯ “ದೇವರು” ಎಂದು ಕರೆಯುತ್ತದೆ.—2 ಕೊರಿಂಥದವರಿಗೆ 4:4; ಪ್ರಕಟಣೆ 12:9,NW.
ಈ “ದೇವರು” ನಿಮ್ಮ ಕಿಟಕಿಯ ಹೊರಗಡೆಯಲ್ಲಿ ಗುಪ್ತವಾಗಿ ಅಡಗಿರುವ ಗುಮ್ಮನಲ್ಲ. ಆದರೆ ಅವನು ಒಬ್ಬ ಬಲಶಾಲೀ ರಾಜಕೀಯ ವ್ಯೂಹ ರಚಕನು, ಅದೃಶ್ಯನಾದ ಆತ್ಮೀಕ ಜೀವಿಯಾಗಿದ್ದು, ಅಪಜಯ ಹೊಂದಿದನಾದರೂ, ಯೇಸುವಿನ ನಿಷ್ಠತೆಗಾಗಿ ಲೋಕದ ಎಲ್ಲಾ ರಾಜ್ಯಗಳನ್ನು ಕೊಡಲು ಶಕ್ತನಾಗಿದ್ದನು. (ಲೂಕ 4:6, 7) ಯೇಸುವಿಗೆ ಅವನದನ್ನು ನೀಡುವ ಮೊದಲು ಅಂತಹ ಶಕ್ತಿಯನ್ನು ಸೈತಾನನು ಇತರರಿಗೂ ಕೊಟ್ಟಿದ್ದನು ಎಂಬದು ವಿದಿತವಾಗುತ್ತದೆ, ಬೈಬಲಿನ ದಾನಿಯೇಲನು ಪುಸ್ತಕದಲ್ಲಿ ಅವನ ನಿಯೋಜಿತ ಪ್ರತಿನಿಧಿಗಳೋಪಾದಿ, ದಂಗೆಕೋರ ದೇವದೂತರು ಲೋಕ ಸಾಮ್ರಾಜ್ಯಗಳ ಮೇಲೆ ಅಧಿಕಾರವನ್ನು, “ಪಾರಸಿಯ ರಾಜ್ಯದ ದಿವ್ಯಪಾಲಕನು” ಮತ್ತು “ಗ್ರೀಕ್ ರಾಜ್ಯದ ದಿವ್ಯಪಾಲಕನು” ಎಂಬಂತಹ ಅಧಿಕೃತ ಬಿರುದುಗಳೊಂದಿಗೆ ಅವರು ಸ್ವೀಕರಿಸಿದ್ದರು.—ದಾನಿಯೇಲನು 10:20, 21.
ಹೀಗೆ, ಸೈತಾನನು ಒಂದು ಬೃಹತ್ ಗಾತ್ರದ ಸಂಸ್ಥಾಪನೆಯನ್ನು ಕಟ್ಟಿದ್ದನು—ಅವನು “ಇಹಲೋಕದ (ದೃಶ್ಯ) ಅಧಿಪತಿಯೂ” ಮತ್ತು “ದೆವ್ವಗಳ (ಅದೃಶ್ಯ) ಒಡೆಯನೂ” ಆಗಿದ್ದಾನೆ. (ಯೋಹಾನ 14:30; 16:11; ಮತ್ತಾಯ 12:24) ಈ ಒಳನೋಟವು, ಪಿಶಾಚನು ಒಂದು ಲೋಕವ್ಯಾಪಕ ಸಂಸ್ಥಾಪನೆಯ ಮುಂದಾಳುತನ ವಹಿಸುತ್ತಾನೆ ಎಂಬದು ಬಹಳಷ್ಟನ್ನು ವಿವರಿಸುತ್ತದೆ.
ಅವನು ಯಾಕೆ ಸಂಸ್ಥಾಪನೆಯೊಂದರ ಮುಂದಾಳುವಾಗಿದ್ದಾನೆ
ಅನೇಕ ಕಾನೂನುಬಾಹಿರ ವ್ಯವಹಾರಗಳ ಮೇಲ್ವಿಚಾರಣೆ ನೋಡುವ—ಮಾದಕೌಷಧ, ಸೂಳೆಗಾರಿಕೆ, ಕಳ್ಳತನ, ಜೂಜಾಟ, ಕಳ್ಳಸಾಗಣೆ ಮತ್ತು ಇತ್ಯಾದಿ ಇನ್ನಿತರ— ಸಂಸ್ಥಾಪಿತ ಪಾತಕದ ಯಜಮಾನನೋಪಾದಿ ಅವನು ತನ್ನ ಕೈಕೆಳಗಿನವರಿಗೆಲ್ಲಾ ಸ್ವತಹ ಪರಿಚಯ ಪಡಿಸದೇ ಇರುವಂತೆಯೇ, ಸೈತಾನನು, ಅವನು ಸ್ವತಹ ಹತೋಟಿಯಲ್ಲಿಡಲು ಸಾಧ್ಯವಾಗುವುದಕ್ಕಿಂತ ಅಧಿಕ ಸಂಖ್ಯಾತಜನರನ್ನು ಹತೋಟಿಯಲ್ಲಿಡಲು ಒಂದು ಸಂಸ್ಥಾಪನೆಯನ್ನು ಬಳಸುತ್ತಾನೆ. ಅವನ ವ್ಯೂಹರಚನಾತಂತ್ರ? ವೈಯಕ್ತಿಕವಾಗಿ ಜನರಿಗೆ ಕಿರುಕುಳ ಕೊಡುವುದರೊಟ್ಟಿಗೆ, ಅವನು ಮತ್ತು ದೆವ್ವಗಳು ಜನಸಮೂಹಗಳು, ಜಾನುವಾರುಗಳ ಮಂದೆಯೋ ಎಂಬಂತೆ ನಡಿಸುತ್ತಾನೆ. ಪ್ರತಿಯೊಬ್ಬನನ್ನು ವ್ಯಕ್ತಿಶಃ ಮಾರ್ಗದರ್ಶಿಸುವ ಜರೂರಿಯಿರುವುದಿಲ್ಲ. ಮಂದೆಯ ಮುಂದುಗಡೆ ಕೇವಲ ಕೆಲವರನ್ನು ಸರಳವಾಗಿ ತಿರುಗಿಸಿದರೆ ಸೈ, ಆಗ ಅಧಿಕಾಂಶ ಜನರು ಹಿಂಬಾಲಿಸುತ್ತಾರೆ. ಅನಂತರ ದಾರಿ ಬಿಟ್ಟು ಹೋಗುವ ಕೆಲವರ ಮೇಲೆ ಗಮನವಿಟ್ಟರೆ ಆಯಿತು.
ಹೌದು, ಪಿಶಾಚನ ನೈಜನೆಂಬುದು ಸತ್ಯ, ಆದರೆ ಅವನ ನಿಜ ಗುರುತು ನಾವು ವ್ಯಂಗಚಿತ್ರಗಳಲ್ಲಿರುವ ವಿಡಂಬನಾತ್ಮಕತೆಗೆ ಇಲ್ಲವೇ ದೇವತಾ ಶಾಸ್ತ್ರಜ್ಞರ ಅಸ್ಪಷ್ಟ ಕಲ್ಪನೆಗಳಿಗೆ ತಾಳೆಯಾಗುವುದು ಅತಿ ಕೊಂಚವೇ. ಅಸ್ಪಷ್ಟ? ಹೌದು, ಸೆಟಾನ್, ಎ ಪೊರ್ಟ್ರೆಟ್ (ಸೈತಾನ, ಒಂದು ಭಾವಚಿತ್ರ) ಎಂಬ ಪುಸ್ತಕದಲ್ಲಿ ಗಮನಿಸಿದ್ದು: “ಸೈತಾನನಲ್ಲಿ ನಂಬಿಕೆಯು ಕಡಿಮೆ ಸ್ಫುಟವಾದದ್ದು” 19ನೆಯ ಶತಮಾನದಲ್ಲಿ, ಮತ್ತು ದೇವತಾ ಶಾಸ್ತ್ರಜ್ಞರು “ಒಬ್ಬ ವ್ಯಕ್ತಿಗತ ಆತ್ಮೀಕ ಜೀವಿಯಾಗಿರುವುದಕ್ಕಿಂತ ಬೇರೆಯೇ ಆಗಿದ್ದಾನೆ ಎಂದು ವಿವರಿಸಲು ಪ್ರಯತ್ನಿಸಿದರು.”
ಪಿಶಾಚನ ಕುರಿತು ಸತ್ಯ ಯಾರು ಹೇಳುತ್ತಾರೆ?
ಪಿಶಾಚನ ಕುರಿತು ಬೈಬಲು ಹೇಳುವುದನ್ನು ಆಧುನಿಕ ಧರ್ಮಗಳು ಸಂದೇಹಿಸಲು ಸಿದ್ಧರಾಗಿರುವುದು, ದ್ರವ್ಯ ವಾಸ್ತವತಾವಾದಿ ಸಮಾಜಕ್ಕೆ, ದೇವರು ತಾನೇ ಅವರಿಗೆ ಅನಿಶ್ಚಿಯತೆಯವನಾಗಿರುವುದಕ್ಕೆ ಬೇಕಾದುದನ್ನು ಒದಗಿಸುತ್ತದೆ. “ಇಂದು,” ರೂತ್ ಆನ್ಶೆರ್ ಅವಳ ಪುಸ್ತಕ, ದ ರಿಯಲಿಟಿ ಆಫ್ ಡೆವಿಲ್ (ಪಿಶಾಚನ ನೈಜತೆ) ದಲ್ಲಿ ಹೇಳುವುದು, “ಪಿಶಾಚನು ಕಾಣೆಯಾಗಿದ್ದಾನೆ ಮತ್ತು . . . ದೇವರು ಸ್ವತಹ ತನ್ನನ್ನು ಗಡಿಯ ಹೊರಮೈಯಲ್ಲಿ ಇಟ್ಟುಕೊಂಡಿದ್ದಾನೆ.”
ಬೈಬಲಿನ ದೃಷ್ಟಿಕೋನದ ಮೇಲೆ ಸಂದೇಹವನ್ನು ಬೀರುತ್ತಾ, ಆಧುನಿಕ ಧಾರ್ಮಿಕ “ತಜ್ಞರು” ಇತಿಹಾಸವು ಯಥೋಚಿತ ದೃಷ್ಟರೂಪಣದಲ್ಲಿಡುವ ಒಂದು ವಾಸ್ತವಾಂಶವನ್ನು ಅಲಕ್ಷಿಸುತ್ತಾರೆ. ರೊಮಾನಿಯನ್ ನಾಟಕಕಾರ ಯುಜೀನ್ ಐಯೊನೆಸ್ಕೊ ಒಂದು ವಾರ್ತಾ ಪತ್ರದಲ್ಲಿ ಒಪ್ಪಿದ್ದು: “ಪೈಶಾಚಿಕ ಘಟಕವನ್ನು ನಾವು ಬಿಟ್ಟು ಬಿಟ್ಟರೆ, ಇತಿಹಾಸವು ನಮ್ಮ ಗ್ರಹಿಕೆಗೆ ಮೀರಿದ್ದಾಗುವುದು.”—ವೆಲ್ಟ್ ಆಮ್ ಸೊನ್ನ್ಟಾಗ್, ಸಪ್ಟಂಬರ 2, 1979.
ಇಂದಿನ ಲೋಕದ ಸಂಕಟಗಳಲ್ಲಿ ಪಿಶಾಚನ ಪಾತ್ರದ ಕುರಿತು ಸತ್ಯವನ್ನು ಎತ್ತಿ ಹೇಳಲು ಯಾರಿಗಾದರೂ ಧೈರ್ಯವಿದೆಯೇ? ಸ್ಪಷ್ಟವಾಗಿ, ಹೌದು! 1928ರ ಸಂಮೇಳನವೊಂದರಲ್ಲಿ ಸರ್ವಾಂಗೀಕೃತವಾದ “ಸೈತಾನನ ವಿರುದ್ಧ ಮತ್ತು ಯೆಹೋವನ ಪರವಾಗಿ ಒಂದು ಘೋಷಣೆ”ಯನ್ನು ಪರಿಗಣಿಸಿರಿ. ಮನುಷ್ಯನ ಶತ್ರುವಾದ ಸೈತಾನನ ವಿರುದ್ಧ, ಬರಲಿರುವ ಮಹಾ ಯುದ್ಧವಾದ ಅರ್ಮೆಗೆದ್ದೋನ್ ಸೈತಾನನನ್ನೂ, ಅವನ ದುಷ್ಟ ಸಂಸ್ಥಾಪನೆಯನ್ನೂ ನಿಲ್ಲಿಸಲಾಗುವುದು ಎಂಬುದನ್ನು ಒಂದು ರಣಕಹಳೆಯೋಪಾದಿ ಘೋಷಿಸಲು ಯೆಹೋವನ ಸಾಕ್ಷಿಗಳು ಪಣ ತೊಟ್ಟರು.
ನಿಜವಾಗಿಯೂ, ಪಿಶಾಚನು ನಮ್ಮೆಲ್ಲಿ ಪ್ರತಿಯೊಬ್ಬರ ನಿಜ ಶತ್ರುವೆಂದು ಇತಿಹಾಸವು ಸಾಕ್ಷವನ್ನೀಯುತ್ತದೆ. ಆದರೆ, ಯೆಹೋವ ದೇವರು ನಮ್ಮನ್ನು ನಮ್ಮಷ್ಟಕ್ಕೆ ಬಿಡಲಿಲ್ಲವೆಂಬುದು ಸ್ಪಷ್ಟ. ಆದುದರಿಂದ ಹೆಚ್ಚನ್ನು ಯಾಕೆ ಕಲಿಯಬಾರದು? ನಮ್ಮ ಶತ್ರುವಿನ ಕುರಿತು ಕಲಿಯುವುದು ನಮಗೆ ಲಾಭದಾಯಕ, “ಸೈತಾನನು ನಮ್ಮನ್ನು ವಂಚಿಸಿ ನಷ್ಟಪಡಿಸಬಾರದು; ಅವನ ಯೋಚನೆಗಳನ್ನು ನಾವು ಅರಿಯದವರಲ್ಲವಲ್ಲಾ.”—2 ಕೊರಿಂಥದವರಿಗೆ 2:11. (g90 1/8)
[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಇಂದು ಪಿಶಾಚನು ಕಾಣೆಯಾಗಿದ್ದಾನೆ ಮತ್ತು . . . ದೇವರು ಸ್ವತಹ ತನ್ನನ್ನು ಗಡಿಯ ಹೊರಮೈಯಲ್ಲಿ ಇಟ್ಟುಕೊಂಡಿದ್ದಾನೆ.”
[ಪುಟ 12 ರಲ್ಲಿರುವಚಿತ್ರಗಳು]
ನಿಜ ಪಿಶಾಚನು ಧಾರ್ಮಿಕ ಚಿತ್ರಗಳಿಗೆ ಇಲ್ಲವೇ ದೇವತಾ ಶಾಸ್ತ್ರಜ್ಞರ ಅಸ್ಪಷ್ಟ ಕಲ್ಪನೆಗಳಿಗೆ ತಾಳೆಯಾಗುವುದು ಅತಿ ಕೊಂಚವೇ
[ಕೃಪೆ]
Gustave Doré