-
ಆಕೆ ‘ಆ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟು ಯೋಚಿಸುತ್ತಿದ್ದಳು’ಕಾವಲಿನಬುರುಜು—2009 | ಜನವರಿ 1
-
-
ಮರಿಯಳು ಕತ್ತೇಮರಿಯ ಮೇಲೆ ಹತ್ತಿ ಅತ್ತಿತ್ತ ಸರಿಯುತ್ತಾ ನೇರವಾಗಿ ಕೂತುಕೊಂಡಳು. ಆಕೆ ಸವಾರಿ ಮಾಡುತ್ತ ಅನೇಕ ತಾಸುಗಳ ಪಯಣವನ್ನು ಮಾಡಿದ್ದಳು. ತುಸು ಮುಂದಿನಿಂದ ಯೋಸೇಫನು ದಾರಿನಡೆಯುತ್ತಿದ್ದನು. ಅವರ ಪ್ರಯಾಣವು ದೂರದ ಬೇತ್ಲೆಹೇಮಿನ ಕಡೆಗಿತ್ತು. ತನ್ನ ಗರ್ಭದಲ್ಲಿದ್ದ ಮಗು ಚಲಿಸಿದ ಅನುಭವವು ಮರಿಯಳಿಗೆ ಇನ್ನೊಮ್ಮೆ ಆಯಿತು.
ಮರಿಯಳು ದಿನತುಂಬಿದ ಗರ್ಭಿಣಿಯಾಗಿದ್ದಳು. ಬೈಬಲ್ ಆಕೆಯ ಈ ಸ್ಥಿತಿಯನ್ನು “ಪೂರ್ಣಗರ್ಭಿಣಿ” ಎಂದು ವರ್ಣಿಸುತ್ತದೆ. (ಲೂಕ 2:6) ಈ ದಂಪತಿ ಪಯಣಿಸುವಾಗ ಹೊಲಗಳನ್ನು ದಾಟುತ್ತ ಹೋದಂತೆ, ಉಳುತ್ತಾ ಬಿತ್ತುತ್ತಾ ಇದ್ದ ಕೆಲವು ರೈತರು ತಮ್ಮ ಕೆಲಸವನ್ನು ಬಿಟ್ಟು ಅವರತ್ತ ನೋಡಿದ್ದಿರಬೇಕು ಮತ್ತು ಈ ಸ್ತ್ರೀ ಇಂಥಾ ಸ್ಥಿತಿಯಲ್ಲಿ ಏಕೆ ಪ್ರಯಾಣಿಸುತ್ತಿದ್ದಾಳೆ ಎಂದು ಪ್ರಾಯಶಃ ಯೋಚಿಸಿದ್ದಿರಬೇಕು. ನಜರೇತಿನ ತನ್ನ ಮನೆಯಿಂದ ಇಷ್ಟು ದೂರ ಪಯಣಿಸುವಂತೆ ಮರಿಯಳನ್ನು ಯಾವುದು ನಡಿಸಿದ್ದಿರಬೇಕು?
-
-
ಆಕೆ ‘ಆ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟು ಯೋಚಿಸುತ್ತಿದ್ದಳು’ಕಾವಲಿನಬುರುಜು—2009 | ಜನವರಿ 1
-
-
ಹೀಗಿದ್ದರೂ, ಯೋಸೇಫನು “ಹೆಸರುಬರಸಿಕೊಳ್ಳುವದಕ್ಕಾಗಿ ತನಗೆ ನಿಶ್ಚಿತಾರ್ಥವಾಗಿದ್ದ ಮರಿಯಳ ಸಂಗಡ” ಹೋದನೆಂದು ಬೈಬಲ್ ಲೇಖಕ ಲೂಕನು ಹೇಳುತ್ತಾನೆ. (ಲೂಕ 2:4, 5) ಯೋಸೇಫನ ಹೆಂಡತಿಯಾಗಿದ್ದ ಮರಿಯಳು ತನ್ನ ನಿರ್ಣಯಗಳಲ್ಲಿ ಬದಲಾವಣೆಯನ್ನು ಮಾಡುವ ಅಗತ್ಯವಿತ್ತು. ಆಕೆ ತನ್ನ ಪತಿಯನ್ನು ಆಧ್ಯಾತ್ಮಿಕ ಶಿರಸ್ಸಾಗಿ ವೀಕ್ಷಿಸಿ, ಅವನಿಗೆ ಸಹಕಾರಿಣಿ ಆಗಿರಬೇಕೆಂಬ ದೇವರು ನೇಮಿಸಿದ ಪಾತ್ರಕ್ಕೆ ತಲೆಬಾಗಿ ಯೋಸೇಫನ ನಿರ್ಣಯಗಳನ್ನು ಬೆಂಬಲಿಸಿದಳು.a ಹೀಗೆ ತನ್ನ ನಂಬಿಕೆಯ ಮೇಲೆ ಬರಬಹುದಾಗಿದ್ದ ಸವಾಲನ್ನು ಮರುಮಾತಿಲ್ಲದ ವಿಧೇಯತೆಯ ಮೂಲಕ ನಿಭಾಯಿಸಿದಳು.
-