“ಅವು ಅವನ ಸರ್ವವನ್ನು ಅರಿಯುತ್ತವೆ”
“ಯೆಹೋವನು ನನಗೆ ಕುರುಬನು.” ಇವು ಕೀರ್ತನೆ 23ರ ಆರಂಭದ ಮಾತುಗಳಾಗಿವೆ. ಯೆಶಾಯನ ಪ್ರವಾದನೆಯಲ್ಲಿ ಶಾಸ್ತ್ರವಚನಗಳು ಪುನಃ ಯೆಹೋವ ದೇವರನ್ನು ಒಬ್ಬ ಕುರುಬನಿಗೆ ಹೋಲಿಸುತ್ತವೆ, ಅದನ್ನುವುದು: “ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು. ಹಾಲು ಕುಡಿಸುವ ಕುರಿಗಳನ್ನು ಮೆಲ್ಲಗೆ ನಡಿಸುವನು.”—ಯೆಶಾಯ 40:11.
ತದ್ರೀತಿಯಲ್ಲಿ, ಯೇಸು ಕ್ರಿಸ್ತನು ಒಬ್ಬ ಕುರುಬನಿಗೆ ಹೋಲಿಸಲ್ಪಡುತ್ತಾನೆ. ಆತನಂದದ್ದು: “ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.” (ಯೋಹಾನ 10:11) ಯೇಸು ಹೇಳಿದ್ದೇನಂದರೆ, “ಕುರಿಗಳು ಅವನ [ಕುರುಬನ] ಸರ್ವಕ್ಕೆ ಕಿವಿಗೊಡುತ್ತವೆ. ಅವನು ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಹೊರಗೆ ಬಿಡುತ್ತಾನೆ.” ಆತನು ಕೂಡಿಸಿದ್ದು “ಕುರಿಗಳು ಅವನ [ಕುರುಬನ] ಸರ್ವವನ್ನು ತಿಳುಕೊಂಡು ಅವನ ಹಿಂದೆ ಹೋಗುತ್ತವೆ. ಅವು ಅನ್ಯರ ಸರ್ವವನ್ನು ತಿಳಿಯುವದಿಲ್ಲ; ಅನ್ಯನ ಹಿಂದೆ ಹೋಗದೆ ಅವನ ಬಳಿಯಿಂದ ಓಡಿಹೋಗುತ್ತವೆ.”—ಯೋಹಾನ 10:2-5.
ಯೆಹೋವ ದೇವರು ಮತ್ತು ಆತನ ಮಗನಾದ ಯೇಸು ಕ್ರಿಸ್ತನು ಇಬ್ಬರೂ, ಮೊದಲೇ ಹೇಳಿದ ಶಾಸ್ತ್ರವಚನಗಳಲ್ಲಿ ವರ್ಣಿಸಲ್ಪಟ್ಟ ಮಾದರಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ತಮ್ಮ ಸಾಂಕೇತಿಕ ಕುರಿಗಳನ್ನು ಕೋಮಲತೆಯಿಂದ ಮತ್ತು ಪ್ರೀತಿಪೂರ್ವಕ ಆರೈಕೆಯಿಂದ ಅವರು ಉಪಚರಿಸುತ್ತಾರೆ. ಫಲಿತಾಂಶವಾಗಿ, ಕುರಿಗಳಂತಹವರು ಪ್ರೀತಿಸಲ್ಪಟ್ಟ, ಭದ್ರತೆಯ, ಮತ್ತು ರಕ್ಷಿತ ಭಾವನೆಯನ್ನು ಅನುಭವಿಸುತ್ತಾರೆ.
ಈ ಸಂಬಂಧವು ಸೂಕ್ತವಾಗಿಯೇ ತಮ್ಮ ಕುರುಬನೊಂದಿಗಿರುವ ಅಕ್ಷರಾರ್ಥವಾದ ಕುರಿಗಳಿಗೆ ಹೋಲಿಸಲ್ಪಡುತ್ತದೆ. ಇಸವಿ 1831 ರಲ್ಲಿ, ಜಾನ್ ಹಾರ್ಟ್ಲಿ ಈ ವಿಷಯದ ಸಂಬಂಧವಾಗಿ ತನ್ನ ಅಭಿಪ್ರಾಯೋಕ್ತಿಗಳನ್ನು ಬರೆದನು. ಗ್ರೀಸ್ನಲ್ಲಿ ಕುರುಬರು ತಮ್ಮ ಕುರಿಗಳಿಗೆ ಹೆಸರಿಡುವುದು ಪದ್ಧತಿಯಾಗಿತ್ತು ಎಂದು ಅವನು ದಾಖಲಿಸಿದನು. ಹೆಸರಿನಿಂದ ಕರೆಯಲ್ಪಟ್ಟಾಗ, ಕುರಿಗಳು ಕುರುಬನ ಸರ್ವಕ್ಕೆ ಕಿವಿಗೊಡುತ್ತವೆ. ಸುಮಾರು 51 ವರುಷಗಳ ಬಳಿಕ, 1882 ರಲ್ಲಿ ಜೆ. ಎಲ್. ಪೋರ್ಟರ್ ತದ್ರೀತಿಯ ಅವಲೋಕನೆಗಳನ್ನು ಮಾಡಿದನು. ಕುರುಬರು “ವಿಚಿತ್ರವಾದ ಕೀರಲು ಕರೆಯನ್ನು . . . ಉಚ್ಚರಿಸುವುದನ್ನು,” ಅದಕ್ಕೆ ಕುರಿಗಳು ಕುರುಬರನ್ನು ವಿಧೇಯತೆಯಿಂದ ಹಿಂಬಾಲಿಸುವ ಮೂಲಕ ಪ್ರತಿಕ್ರಿಯಿಸುವುದನ್ನು ಅವನು ವೈಯಕ್ತಿಕವಾಗಿ ನೋಡಿದನು. ತಮ್ಮ ಕುರುಬನನ್ನು ಹಿಂಬಾಲಿಸಲು ಮತ್ತು ಅವನ ಸರ್ವವನ್ನು ಗುರುತಿಸಲು ಕುರಿಗಳಿಗೆ ಕಲಿಸಸಾಧ್ಯವಿದೆಯೆಂದು ಸ್ಥಿರಪಡಿಸಿದ ಪುನರಾವರ್ತಿತ ಪ್ರಯೋಗಗಳ ಕುರಿತು ಅದೇ ವರ್ಷದಲ್ಲಿ ವಿಲಿಯಮ್ ಎಮ್. ಥಾಮ್ಸನ್ ಬರೆದರು.
ಕುರುಬರು ಮತ್ತು ಅವರ ಕುರಿಗಳ ನಡುವಣ ಅಪೂರ್ವ ಸಂಬಂಧವು ತೀರ ಇತ್ತೀಚಿಗಿನ ಸಮಯಗಳಲ್ಲಿ ಅವಲೋಕಿಸಲ್ಪಟ್ಟಿದೆಯೊ? ಹೌದು. ನ್ಯಾಷನಲ್ ಜಿಆಗ್ರಾಫಿಕ್ನ ಸಪ್ಟಂಬರ 1993ರ ಸಂಚಿಕೆಯಲ್ಲಿ, ವಾಯುವ್ಯ ಭಾರತದಲ್ಲಿರುವ ರಾಬಾರಿ ಕುರುಬರ ಕುರಿತು, ಆಸ್ಟ್ರೇಲಿಯದ ಸಾಹಸಗಾರ್ತಿ ರಾಬಿನ್ ಡೇವಿಡ್ಸನ್ ಈ ರೀತಿ ಬರೆದರು: “ಪ್ರತಿಯೊಬ್ಬ ಕುರುಬನಿಗೆ ಒಂದು ಸರ್ವದಲ್ಲಿ ಬದಲಾವಣೆಗಳಿರುವ ಸ್ವಲ್ಪ ಬೇರೆ ಬೇರೆ ಕರೆಗಳು ಇವೆ. ಹೊರಗೆ ಹೋಗಲು ಬೆಳಗ್ಗಿನ ಕರೆಗಳಿವೆ, ಕುರಿಗಳನ್ನು ನೀರು ಕುಡಿಯಲಿಕ್ಕಾಗಿ ಕರೆದೊಯ್ಯಲು ಒಂದು ಕರೆ, ಮತ್ತು ಇನ್ನು ಮುಂತಾದವು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಕುರಿಗಳನ್ನು ತಿಳಿದಿದ್ದಾನೆ ಮತ್ತು ಪ್ರತಿಯಾಗಿ ಕುರಿಗಳೂ ಅವುಗಳ ಕುರುಬನನ್ನು ಅರಿಯುತ್ತವೆ, ಮತ್ತು ದೊಡ್ಡ ಮಂದೆಯಿಂದ ಅವನ ನಿರ್ದಿಷ್ಟವಾದ ಮಂದೆಯು ಸ್ವತಃ ತನ್ನನ್ನು ಬಿಡಿಸಿಕೊಳ್ಳುವುದು ಮತ್ತು ಪ್ರಾತಃಕಾಲದಲ್ಲಿ ಅವನ ಹಿಂದೆ ಹೊರಡುವುದು.”
ನಿಸ್ಸಂದೇಹವಾಗಿ, ಈಗ ತಾನೆ ಪ್ರಸ್ತಾಪಿಸಿದ ನಾಲ್ವರು ಪ್ರಯಾಣಿಕರಿಂದ ಏನು ವಿವರಿಸಲ್ಪಟ್ಟಿದೆಯೋ ಅದನ್ನು ಯೇಸು ಅವಲೋಕಿಸಿದನು. ಅವನ ಸರ್ವವನ್ನು ತಿಳಿದಿರುವ ಕುರಿಗಳ ಕುರಿತಾದ ಅವನ ದೃಷ್ಟಾಂತಕ್ಕೆ ಅವನ ಸ್ವಂತ ಅಭಿಪ್ರಾಯೋಕ್ತಿಗಳು ನೈಜತೆಯನ್ನು ಕೂಡಿಸಿವೆ. ಯೇಸುವಿನ ಕುರಿಗಳಲ್ಲಿ ನೀವೂ ಒಬ್ಬರಾಗಿದ್ದೀರೊ? ನಿಮಗೆ ಆತನ ಸರ್ವವು ತಿಳಿದಿದೆಯೊ ಮತ್ತು ನೀವು ಅದಕ್ಕೆ ಕಿವಿಗೊಡುತ್ತೀರೊ? ನೀವು ಆತನ ಬೋಧನೆಗಳನ್ನು ಗ್ರಹಿಸಿ, ಅಂಗೀಕರಿಸುವುದಾದರೆ ಮತ್ತು ಆತನ ಆಜೆಗ್ಞಳಿಗೆ ವಿಧೇಯರಾಗುವುದಾದರೆ, ಹಾಗೂ ಯೆಹೋವನನ್ನು ಆರಾಧಿಸುವುದರಲ್ಲಿ ಆತನ ಮುಂದಾಳುತನವನ್ನು ಅನುಸರಿಸುವುದಾದರೆ, ಆಗ ನೀವು ಯೆಹೋವ ದೇವರ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಪ್ರೀತಿಪೂರ್ವಕವಾದ ಮತ್ತು ಕೋಮಲವಾದ ಪಾಲನೆಯನ್ನು ಅನುಭವಿಸಬಲ್ಲಿರಿ.—ಯೋಹಾನ 15:10.