-
“ಪವಿತ್ರಾತ್ಮದಿಂದ ಉಂಟಾಗುವ ಫಲ” ದೇವರನ್ನು ಮಹಿಮೆಪಡಿಸುತ್ತದೆಕಾವಲಿನಬುರುಜು—2011 | ಏಪ್ರಿಲ್ 15
-
-
3. (ಎ) ‘ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು’ ನಾವು ಬೆಳೆಸಿಕೊಳ್ಳುವುದು ಹೇಗೆ ದೇವರನ್ನು ಮಹಿಮೆಪಡಿಸುತ್ತದೆ? (ಬಿ) ನಾವು ಯಾವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲಿದ್ದೇವೆ?
3 ಪವಿತ್ರಾತ್ಮವನ್ನು ಕೊಡುವಾತನು ಯೆಹೋವನೇ ಆಗಿರುವುದರಿಂದ ಪವಿತ್ರಾತ್ಮದ ಸಹಾಯದಿಂದ ನಮ್ಮಲ್ಲಿ ತೋರಿಕೊಳ್ಳುವ ಗುಣಗಳು ಸ್ವತಃ ಯೆಹೋವ ದೇವರ ವ್ಯಕ್ತಿತ್ವದ ಪ್ರತಿಬಿಂಬವಾಗಿರುತ್ತವೆ. (ಕೊಲೊ. 3:9, 10) ಕ್ರೈಸ್ತರು ದೇವರನ್ನು ಏಕೆ ಅನುಕರಿಸಬೇಕು ಎಂಬುದಕ್ಕೆ ಪ್ರಮುಖ ಕಾರಣವನ್ನು ಕೊಡುತ್ತಾ ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ನೀವು ಬಹಳ ಫಲವನ್ನು ಕೊಡುತ್ತಾ . . . ಇರುವಲ್ಲಿ, ನನ್ನ ತಂದೆಯು ಮಹಿಮೆಗೊಳಿಸಲ್ಪಡುತ್ತಾನೆ.”a (ಯೋಹಾ. 15:8) ನಾವು ‘ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು’ ಬೆಳೆಸಿಕೊಳ್ಳುವಾಗ ಅದು ನಮ್ಮ ಮಾತಿನಲ್ಲೂ ಕ್ರಿಯೆಯಲ್ಲೂ ಸ್ಪಷ್ಟವಾಗಿ ತೋರಿಬರುತ್ತದೆ. ಇದು ನಮ್ಮ ದೇವರಿಗೆ ಮಹಿಮೆಯನ್ನು ತರುತ್ತದೆ. (ಮತ್ತಾ. 5:16) ಪವಿತ್ರಾತ್ಮದಿಂದ ಉಂಟಾಗುವ ಫಲವು ಯಾವ ವಿಧಗಳಲ್ಲಿ ಸೈತಾನನ ಲೋಕದ ಪ್ರವೃತ್ತಿಗಳಿಗಿಂತ ಭಿನ್ನವಾಗಿದೆ? ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು? ಇದನ್ನು ಮಾಡುವುದು ಅಷ್ಟು ಸುಲಭವಾಗಿರಲಿಕ್ಕಿಲ್ಲ ಏಕೆ? ಪವಿತ್ರಾತ್ಮದಿಂದ ಉಂಟಾಗುವ ಫಲದ ಮೊದಲ ಮೂರು ಅಂಶಗಳಾದ ಪ್ರೀತಿ, ಆನಂದ ಮತ್ತು ಶಾಂತಿಯನ್ನು ಪರಿಗಣಿಸುವಾಗ ನಾವು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವೆವು.
-
-
“ಪವಿತ್ರಾತ್ಮದಿಂದ ಉಂಟಾಗುವ ಫಲ” ದೇವರನ್ನು ಮಹಿಮೆಪಡಿಸುತ್ತದೆಕಾವಲಿನಬುರುಜು—2011 | ಏಪ್ರಿಲ್ 15
-
-
a ಯೇಸು ತಿಳಿಸಿದ ಫಲದಲ್ಲಿ “ಪವಿತ್ರಾತ್ಮದಿಂದ ಉಂಟಾಗುವ ಫಲ” ಮಾತ್ರವಲ್ಲದೆ ‘ತುಟಿಗಳ ಫಲವೂ’ ಸೇರಿದೆ. ಇದನ್ನು ಕ್ರೈಸ್ತರು ರಾಜ್ಯದ ಕುರಿತು ಸಾರುವ ಮೂಲಕ ದೇವರಿಗೆ ಅರ್ಪಿಸುತ್ತಾರೆ.—ಇಬ್ರಿ. 13:15.
-