ಬಚ್ಚಿಟ್ಟ ನಿಕ್ಷೇಪಕ್ಕಾಗಿಯೋ ಎಂಬಂತೆ ಹುಡುಕುತ್ತಾ ಇರ್ರಿ
ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡು ಬರುವ ಜ್ಞಾನದ ಮಣಿಗಳು ಅವೆಷ್ಟು ಅತ್ಯಮೂಲ್ಯವು! ಈ ಒಡವೆಗಳು ದೈವಿಕ ಉದ್ದೇಶವನ್ನು ಪ್ರಕಟಿಸುತ್ತವೆ ಮತ್ತು ನಮ್ಮ ಮುಂದೆ ರೋಮಾಂಚಕ ಪ್ರತೀಕ್ಷೆಗಳನ್ನು ಇಡುತ್ತವೆ. ಅವು ನಮಗೆ ಆದರಣೆಯನ್ನು ಕೊಡುತ್ತವೆ ಮತ್ತು ದೇವರನ್ನು ಮೆಚ್ಚಿಸುವ ವಿಧಾನವನ್ನು ತಿಳಿಸುತ್ತವೆ. (ರೋಮಾಪುರ 15:4) ಈ ರತ್ನಗಳು ಇತರರೊಂದಿಗೆ ನಮ್ಮ ವ್ಯವಹಾರದಲ್ಲಿ ಸುಜ್ನರಾಗಿ ವ್ಯವಹರಿಸುವಂತೆ ಸಹಾಯವನ್ನೂ ಮಾಡುತ್ತವೆ. ನಿಶ್ಚಯವಾಗಿ ದೇವರ ಜ್ಞಾನವು, “ಜೀವಮಾರ್ಗದಲ್ಲಿ” ನಾವು ಸಂತೃಪ್ತಿಯಿಂದಲೂ ಸಂತೋಷದಿಂದಲೂ ನಡೆಯುವಂತೆ ನಮಗೆ ನೆರವಾಗುತ್ತದೆ.—ಕೀರ್ತನೆ 16:11; 119:105.
ಜ್ಞಾನದ ಪ್ರಯೋಜನಗಳು ಅನೇಕವಿರಲಾಗಿ, ನಾವದನ್ನು ಮಹತ್ತಾದ ಬಹುಮಾನವಾಗಿ ಹುಡುಕಬೇಕು. “ನನ್ನ ಮಾತುಗಳೆಲ್ಲಾ ನೀತಿಭರಿತವಾಗಿವೆ” ಎನ್ನುತ್ತಾನೆ ಜ್ಞಾನವೇ ಮೂರ್ತಿಮತ್ತಾಗಿರುವಾತನು. “ಅವುಗಳಲ್ಲಿ ಕಪಟವೂ ವಕ್ರತೆಯೂ ಇಲ್ಲ. ಅವೆಲ್ಲಾ ಗ್ರಹಿಕೆಯುಳ್ಳವನಿಗೆ ನ್ಯಾಯವಾಗಿಯೂ ತಿಳುವಳಿಕೆಯನ್ನು ಪಡೆದವರಿಗೆ ಯಥಾರ್ಥವಾಗಿಯೂ ತೋರುವುದು. ನನ್ನ ಬೋಧನೆಯನ್ನು ಬೆಳ್ಳಿಗಿಂತಲೂ ಜ್ಞಾನೋಪದೇಶವನ್ನು ಅಪರಂಜಿಗಿಂತಲೂ ಉತ್ತಮವೆಂದು ಹೊಂದಿಕೊಳ್ಳಿರಿ. ಜ್ಞಾನವು ಹವಳಕ್ಕಿಂತಲೂ ಶ್ರೇಷ್ಟ. ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.”—ಜ್ಞಾನೋಕ್ತಿ 8:8-11.
ಏಕೆ ಹುಡುಕುತ್ತಾ ಇರಬೇಕು?
ಸಾಮಾನ್ಯವಾಗಿ, ಬಚ್ಚಿಟ್ಟ ಒಡವೆ, ಬೆಳ್ಳಿ ಅಥವಾ ಬಂಗಾರಗಳಿಗಾಗಿ ಮಾಡುವ ಹುಡುಕಾಟವು ನಿಷ್ಪಲವಾಗುತ್ತದೆ. ಆದರೆ ದೈವಿಕ ಜ್ಞಾನಕ್ಕಾಗಿ ಮಾಡುವ ಶೋಧವು ಹಾಗಾಗುವ ಅಗತ್ಯವಿಲ್ಲ. ಆದರೆ ಈ ಶೋಧದಲ್ಲಿ ನಾವು ಸಾಫಲ್ಯ ಹೇಗೆ ಪಡೆದೇವು? ಒಳ್ಳೆದು, ಸಾಫಲ್ಯವು ನಾವೀ ನಿಕ್ಷೇಪವನ್ನು ಎಷ್ಟು ಉತ್ಕಟವಾಗಿ ಅಪೇಕ್ಷಿಸುತ್ತೇವೆ ಮತ್ತು ಅದನ್ನು ಕಂಡುಕೊಳ್ಳಲು ಎಷ್ಟು ಶ್ರಮವಹಿಸುತ್ತೇವೆ ಎಂಬದರಲ್ಲಿ ಹೊಂದಿಕೊಂಡಿದೆ. ಅದರ ನಿಜ ಬೆಲೆಯನ್ನು ನಾವು ಮನಗಂಡರೆ, ಬೇರೆಲ್ಲಾ ಸಂಪತ್ತುಗಳಿಗಿಂತ ನಾವದನ್ನು ಅತಿಯಾಗಿ ಇಷ್ಟೈಸುವೆವು. ಎಷ್ಟೆಂದರೂ, “ಬಂಗಾರಕ್ಕಿಂತಲೂ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು; ಬೆಳ್ಳಿಗಿಂತಲೂ ವಿವೇಕವನ್ನು ಹೊಂದುವದು ಲೇಸು.”—ಜ್ಞಾನೋಕ್ತಿ 16:16.
ಜ್ಞಾನೋಕ್ತಿ 2:1-6 ಪ್ರೋತ್ಸಾಹಿಸುವುದು: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ, ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ. ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು. ಆಗ ನೀನು ಯೆಹೋವನ ಭಯವನ್ನು ಅರಿತು ದೈವ ಜ್ಞಾನವನ್ನು ಪಡೆದುಕೊಳ್ಳುವಿ. ಯೆಹೋವನೇ, ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟುಬರುತ್ತವೆ.”
ಬಚ್ಚಿಟ್ಟ ನಿಕ್ಷೇಪಗಳು ಮರೆಯಾಗಿರುವುದರಿಂದ, ಅವುಗಳಿಗಾಗಿ ಹುಡುಕುವುದು ಆವಶ್ಯಕ. ಅದಕ್ಕಾಗಿ ಅಗೆಯುವಾಗ ಮನೋರಂಜನೆಯ ಸಮಯ, ಊಟ ಮತ್ತು ನಿದ್ರೆಯನ್ನು ಕೆಲವರು ತ್ಯಾಗಮಾಡುತ್ತಾರೆ. ಆದರೆ ನಿಕ್ಷೇಪವು ಕೈಸೇರಿದಾಗ ಅಂತಹ ಪ್ರಯತ್ನವು ಅದಕ್ಕೆ ನಿಜಕ್ಕೂ ಪಾತ್ರವು. ದೈವ ಜ್ಞಾನವನ್ನು ಹುಡುಕುವುದಕ್ಕಾಗಿ ತದ್ರೀತಿಯ ತ್ಯಾಗಗಳನ್ನು ನಾವು ಮಾಡುವ ಅಗತ್ಯವಿದೆ. ಹೂಣಲ್ಪಟ್ಟ ನಿಕ್ಷೇಪದ ಶೋಧನೆಗೆ ಪರಿಶ್ರಮದ ಅಗೆತ ಹೇಗೆ ಬೇಕೋ ಹಾಗೆ ಜ್ಞಾನಶೋಧಕ್ಕಾಗಿ ಎಡೆಬಿಡದ ಯತ್ನ ಅಗತ್ಯ. ಬೈಬಲನ್ನು ಮತ್ತು ಕ್ರೈಸ್ತ ಸಾಹಿತ್ಯವನ್ನು ಮೇಲೆ ಮೇಲೆ ಓದಿದರೆ ಸಾಲದು. ಆತ್ಮಿಕ ರತ್ನಗಳ ಶೋಧಕ್ಕಾಗಿ ಸಮಯ, ಸಂಶೋಧನೆ ಮತ್ತು ಮನನ ಅತ್ಯಗತ್ಯವು. ಆದರೆ, ಶಾಸ್ತ್ರವಚನಗಳ ಒಳನೋಟವನ್ನು ನಾವು ಗಳಿಸುವಾಗ ಅದೆಷ್ಟು ಉಲ್ಲಾಸಕರ!—ನೆಹೆಮೀಯ 8:13.
ಸಾಫಲ್ಯಕರವಾದ ನಿಕ್ಷೇಪ-ಶೋಧ
ಹೌದು, ದೇವರ ವಾಕ್ಯವನ್ನು ಅಗೆದು ಜ್ಞಾನದ ಮಣಿಗಳನ್ನು ಕಂಡುಕೊಳ್ಳುವದರಿಂದ ಸಂತೋಷವು ಲಭಿಸುತ್ತದೆ. (ಜ್ಞಾನೋಕ್ತಿ 3:13-18) ಇದಕ್ಕಾಗಿ ಒಂದು ಒಳ್ಳೆಯ ವೈಯಕ್ತಿಕ ಅಥವಾ ಕುಟುಂಬ ಲೈಬ್ರೆರಿಯನ್ನು ನಾವು ಇಡುವುದಾದರೆ ಅದು ವಿವೇಕಪ್ರದ. ಆದರೆ ಅದರಲ್ಲಿ ಏನೆಲ್ಲಾ ಇರಬೇಕು? ಒಂದು ಒಳ್ಳೇ ಶಬ್ದಕೋಶ ಇರಬೇಕು ಮಾತ್ರವಲ್ಲದೆ, ಪವಿತ್ರಶಾಸ್ತ್ರದ ಹಲವಾರು ಭಾಷಾಂತರಗಳು, ಪ್ರತಿವರ್ಷದ ವಾಚ್ಟವರ್ ಮತ್ತು ಅದರ ಜೊತೆ ಪತ್ರಿಕೆ ಎವೇಕ್!ನ ಸಂಚಿಕೆಗಳನ್ನು ಇಡುವುದು ಉಪಯುಕ್ತವೆಂದು ಯೆಹೋವನ ಸಾಕ್ಷಿಗಳು ಕಂಡಿದ್ದಾರೆ. ನಿಶ್ಚಯವಾಗಿ ನಿಕ್ಷೇಪ ಶೋಧದಲ್ಲಿ ಸಹಾಯ ಸಿಗಬೇಕಾದ್ರೆ ನಾವಾ ಲೈಬ್ರೆರಿಯನ್ನು ಯೋಗ್ಯವಾಗಿ ಉಪಯೋಗಿಸಲೇ ಬೇಕು.
ಜ್ಞಾನಕ್ಕಾಗಿ ನಮ್ಮ ಶೋಧದಲ್ಲಿ, ವಾಚ್ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್ ಅಥವಾ ವಾಚ್ಟವರ್ ಸೊಸೈಟಿಯ ಪುಸ್ತಕಗಳ ಯಾ ಪತ್ರಿಕೆಯ ಬೌಂಡ್ ಸಂಪುಟಗಳ ಹಿಂದಿರುವ ವಿಷಯ ಮತ್ತು ಶಾಸ್ತ್ರವಚನಗಳ ಭಾಗಗಳನ್ನು ಸಂಪರ್ಕಿಸ ಸಾಧ್ಯವಿದೆ. ದೈವ ಜ್ಞಾನವನ್ನು ಹುಡುಕುವರೇ ಇವು ಮೂಲಭೂತ ಉಪಕರಣಗಳಾಗಿವೆ. ವಾಸ್ತವದಲ್ಲಿ, ದಿವ್ಯಜ್ಞಾನದ ‘ಗುಪ್ತ ನಿಕ್ಷೇಪ’ ಕ್ಕೆ ನಡಿಸಬಲ್ಲ ಒಂದು ನಕ್ಷೆಯಂತೆ ಅವು ಇವೆ. (ಜ್ಞಾನೋಕ್ತಿ 2:4) ಸಂಶೋಧನೆಗಾಗಿ ಬೇಕಾದ ಕೆಲವು ಸಾಹಿತ್ಯಗಳು ನಮ್ಮಲ್ಲಿಲ್ಲವಾದರೆ, ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹಗಳಲ್ಲಿ ಒಂದುವೇಳೆ ಅವು ದೊರೆಯಬಹುದು.
ನಾವೀಗ ಒಂದು ಸಾಫಲ್ಯ ನಿಕ್ಷೇಪ ಶೋಧವನ್ನು ದೃಷ್ಟಾಂತಿಸೋಣ. ನಮ್ಮ ಬೈಬಲ್ ವಾಚನದಲ್ಲಿ, ಯೇಸು ಕ್ರಿಸ್ತನನ್ನು ಹಿಡುಕೊಟ್ಟ ಬಳಿಕ ಇಸ್ಕಾರಿಯೇತ ಯೂದನು ಸತ್ತದ್ದು ಹೇಗೆ ಎಂದು ಒಂದುವೇಳೆ ನಾವು ಯೋಚಿಸಿರಬಹುದು. ಯೂದನು “ಹೊರಟುಹೋಗಿ ಉರ್ಲುಹಾಕಿಕೊಂಡು ಸತ್ತನು” ಎಂದು ಮತ್ತಾಯ 27:5 ಹೇಳುತ್ತದೆ. ಆದರೆ ಅಪೋಸ್ತಲರ ಕೃತ್ಯ 1:18 ಹೇಳುವುದು: “ಅವನು ತಲೆಕೆಳಗಾಗಿ ಬಿದ್ದು ಅವನ ಹೊಟ್ಟೆಒಡೆದು ಕರುಳುಗಳೆಲ್ಲಾ ಹೊರಗೆ ಸುರಿದವು.” ಹಾಗಾದರೆ, ಯೂದನು ಸತ್ತದ್ದು ಹೇಗೆ? ಉತ್ತರವು ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಪುಸ್ತಕದ “ಸ್ಕ್ರಿಪ್ಚರ್ ಇಂಡೆಕ್ಸ್” ನಲ್ಲಿ ಈ ವಚನಗಳ ಪಟ್ಟಿಯನ್ನು ಪರೀಕ್ಷಿಸುವ ಮೂಲಕ ಸಿಕ್ಕ ಸಾಧ್ಯವಿದೆ. ಅದು ಹೇಳುವುದು: “ಮತ್ತಾಯನು ನಮಗೆ ಆತ್ಮಹತ್ಯೆಯ ಯತ್ನದ ವಿಧಾನ ವನ್ನು ತಿಳಿಸುವಾಗ, ಅಪೋಸ್ತಲಕೃತ್ಯವಾದರೋ ಅಂತಿಮ ಫಲಿತಾಂಶ ವನ್ನು ವರ್ಣಿಸುತ್ತದೆ. ಎರಡೂ ವೃತ್ತಾಂತವನ್ನು ಜತೆಗೂಡಿಸುವಲ್ಲಿ, ಯೂದನು ಪ್ರಪಾತದಲ್ಲಿ ಉರ್ಲುಹಾಕಿಕೊಳ್ಳ ಪ್ರಯತ್ನಿಸಿದನು ಆದರೆ ಹಗ್ಗ ಅಥವಾ ಮರದಕೊಂಬೆಯು ಮುರಿದುಬಿದದ್ದರಿಂದ ಅವನು ತಳದ ಬಂಡೆಗಳ ಮೇಲೆ ಕುಸಿದುಬಿದ್ದು ಅವನ ಹೊಟ್ಟೆಯೊಡೆದಿರಬೇಕು. ಯೆರೂಸಲೇಮಿನ ಸುತ್ತಣ ನಕ್ಷಾನಿರೂಪಣೆಯು ಅಂತಹ ಒಂದು ಘಟನೆಯು ನಡಿಯುವದನ್ನು ನಾವು ಗ್ರಹಿಸಸಾಧ್ಯವಿದೆ.”
ಕನ್ಕಾರ್ಡೆನ್ಸ್ನ ಉಪಯೋಗವು ಬೈಬಲ್ ವಚನಗಳನ್ನು ಕಂಡುಹಿಡಿಯಲು ನಮಗೆ ಸಹಾಯಮಾಡುತ್ತದೆ. ನಿಶ್ಚಯವಾಗಿ, ನಾವು ಒಂದು ವಚನವನ್ನು ಚಚಿಸುವಾಗ, ಅದರ ಪೂರ್ವಾಪರ ಸಂಬಂಧವನ್ನು ನಾವು ಗಮನಿಸಬೇಕು. ಇದನ್ನು ದೃಷ್ಟಾಂತಿಸಲು, ಕೀರ್ತನೆ 144:12-14ನೇ ವಚನಗಳನ್ನು ನಾವು ಚರ್ಚಿಸೋಣ. ಕೆಲವು ಜನರು ಹೀಗೆ ಹೇಳುವುದನ್ನು ಈ ವಚನಗಳು ಪ್ರತಿನಿಧಿಸುತ್ತವೆ: “ಯೌವನಸ್ಥರಾದ ನಮ್ಮ ಗಂಡು ಮಕ್ಕಳು ಹೊರವಾಗಿ ಬೆಳೆದಿರುವ ಸಸಿಗಳಂತಿರುವರು; ಹೆಣ್ಣು ಮಕ್ಕಳು ಅರಮನೆಯಲ್ಲಿರುವ ವಿಚಿತ್ರವಾಗಿ ಕೆತ್ತಿದ ಮೂಲೆಗಂಬದಂತಿರುವರು. ನಮ್ಮ ಹೊಲಗಳಲ್ಲಿರುವ ಕುರಿಗಳು ಸಾವಿರಾರು ಮರಿಗಳನ್ನು ಈಯುವವು.” ಈ ಮಾತುಗಳು ದೇವಜನರಿಗೆ ಅನ್ವಯಿಸುತ್ತದೆಂದು ನಾವು ಒಂದುವೇಳೆ ನೆನಸಬಹುದು. ಆದರೆ ಹಿಂದುಮುಂದಿನ ಸಂದರ್ಭಗಳು ಹಾಗಲ್ಲವೆನ್ನುತ್ತವೆ. 11ನೇ ವಚನದಲ್ಲಿ ಕೀರ್ತನೆಗಾರ ದಾವೀದನು ಕಪಟಮಾತಿನವರ ಕೈಯಿಂದ ತನ್ನನ್ನು ಬಿಡಿಸಿ ಕಾಪಾಡುವಂತೆ ಮೊರೆಯಿಡುತ್ತಾನೆ. ಅವರು ತಮ್ಮ ಗಂಡುಹೆಣ್ಣುಮಕ್ಕಳ ಕುರಿತಾಗಿ, ತಮ್ಮ ಎತ್ತು ಕುರಿ ಮಂದೆಗಳ ಕುರಿತಾಗಿ ಜಂಬ ಕೊಚ್ಚಿದ್ದರು. 15ನೇ ವಚನಕ್ಕನುಸಾರವಾಗಿ, ಅಂತಹ ತಪ್ಪುಗಾರರು, “ಇಂಥ ಸುಸ್ಥಿತಿಯಲ್ಲಿರುವ ಜನರು ಧನ್ಯರು” ಎಂದು ಹೇಳಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದಾವೀದನಾದರೋ, “ಯಾರಿಗೆ ಯೆಹೋವನು ದೇವರಾಗಿರುವನೋ ಅವರು ಭಾಗ್ಯವಂತರು!” ಎಂದಿದ್ದಾನೆ.
ಆತ್ಮಿಕ ರತ್ನಗಳೋ ಹೇರಳ!
ಜ್ಞಾನಕ್ಕಾಗಿ ಸಾಫಲ್ಯಕರ ಶೋಧದಿಂದ ಖಂಡಿತವಾಗಿ ಸಂತೋಷವು ಪರಿಣಮಿಸುತ್ತದೆ. ಮತ್ತು ಸಂಶೋಧನೆಯಿಂದ ಸಿಗುವ ಆತ್ಮಿಕ ರತ್ನಗಳಲ್ಲಿ ಬೈಬಲಿನ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಗಳು ಒಳಗೂಡಿರುತ್ತವೆ. ನಾವು ಹುಡುಕುತ್ತಾ ಇರುವುದಾದರೆ ಎಂತಹ ಉತ್ತರಗಳು ನಮಗೆ ನಮಗೆ ದೊರೆಯುವವು! ಉದಾಹರಣೆಗಾಗಿ, ಕಾಯಿನನಿಗೆ ಅವನ ಪತ್ನಿಯು ದೊರೆತದ್ದು ಎಲ್ಲಿಂದ? ವಾಚ್ಟವರ್ (ಒಕ್ಟೋಬರ 1, 1981) ಹೇಳಿದ್ದು: “ಆದಾಮ ಮತ್ತು ಹವ್ವರಿಗೆ ಕೇವಲ ಇಬ್ಬರೇ [ಕಾಯಿನ್ ಮತ್ತು ಹೇಬೆಲ] ಅಲ್ಲ, ಅನೇಕ ಮಕ್ಕಳಿದ್ದರೆಂದು ಬೈಬಲ್ ನಮಗೆ ಹೇಳುತ್ತದೆ. “ಸೇತ [ಇನೊಬ್ಬ ಮಗ] ನು ಹುಟ್ಟಿದ ಮೇಲೆ ಆದಾಮನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರು ವರುಷ ಬದುಕಿದನು.” (ಆದಿ. 5:4) ಈ ಸಮಾಚಾರ ಪಡೆದವರಾಗಿ ಕಾಯಿನನಿಗೆ ಅವನ ಪತ್ನಿ ಎಲ್ಲಿಂದ ಸಿಕ್ಕಿದಳು ಎಂದು ನೀವನ್ನುವಿರಿ? ಹೌದು, ಅವನು ತನ್ನ ಸೋದರಿಯರಲ್ಲಿ ಒಬ್ಬಳನ್ನು ಮದುವೆಯಾಗಿರಬೇಕು. ಇಂದು ಇಂತಹ ಆಪ್ತ ಸಂಬಂಧಿ ಹೆತ್ತವರಿಗೆ ಹುಟ್ಟುವ ಯಾವುದೇ ಮಕ್ಕಳಿಗೆ ಅದು ಹಾನಿಕಾರಕವಾಗಬಹುದು. ಆದರೆ ಮಾನವ ಇತಿಹಾಸದ ಅತ್ಯಾರಂಭದಲ್ಲಿ, ಮಾನವಕುಲವು ಪರಿಪೂರ್ಣತೆಗೆ ಅಷ್ಟು ಹತ್ತಿರವಿದ್ದಾಗ ಅದೇನೂ ಒಂದು ಸಮಸ್ಯೆಯಾಗಿರಲಿಲ್ಲ.
ನಾವು ಬೈಬಲ್ ಪುಸ್ತಕವಾದ ಜ್ಞಾನೋಕ್ತಿಯನ್ನು ಓದುತ್ತೇವೆಂದು ನೆನಸೋಣ. ಜ್ಞಾನೋಕ್ತಿ 1:7 ರಲ್ಲಿ ಏನಂದಿದೆಯೋ ಅದನ್ನು ಗಮನಿಸುವಲ್ಲಿ, “ಯೆಹೋವನ ಭಯವೆಂದರೇನು?” ಎಂದು ಒಂದುವೇಳೆ ನಾವು ಯೋಚಿಸಬಹುದು. ಸಂಶೋಧನೆಯು ನಮ್ಮನ್ನು ವಾಚ್ಟವರ್ ಮೇ 15, 1987ಕ್ಕೆ ನಡಿಸಬಹುದು. ಅದನ್ನುವುದು: “ಅದು ಭಯಭಕ್ತಿ, ಪರಮ ಪೂಜ್ಯಭಾವ ಮತ್ತು ಆತನನ್ನು ಅಪ್ರಸನ್ನಗೊಳಿಸದಿರುವ ಹಿತಕರವಾದ ಭಯ, ಯಾಕೆಂದರೆ ಆತನ ಕೃಪಾತಿಶಯ ಮತ್ತು ಒಳ್ಳೇತನವನ್ನು ನಾವು ಗಣ್ಯಮಾಡುತ್ತೇವೆ. ‘ಯೆಹೋವನ ಭಯ’ ಎಂದರೆ ಆತನು ಸರ್ವಶ್ರೇಷ್ಟ ನ್ಯಾಯಾಧಿಪತಿ ಮತ್ತು ಸರ್ವಶಕ್ತನೆಂದೂ, ಆತನಿಗೆ ಅವಿಧೇಯರಾಗುವವರಿಗೆ ಶಿಕ್ಷೆ ಅಥವಾ ಸಾವನ್ನು ತರುವ ಹಕ್ಕು ಮತ್ತು ಶಕ್ತಿ ಆತನಿಗಿದೆಂದು ಅಂಗೀಕರಿಸುವುದೇ ಆಗಿದೆ. ದೇವರನ್ನು ನಂಬಿಗಸ್ತತೆಯಿಂದ ಸೇವಿಸುವುದು, ಅವನಲ್ಲಿ ಪೂರ್ಣವಾಗಿ ಭರವಸವಿಡುವದು ಮತ್ತು ಅವನ ದೃಷ್ಟಿಯಲ್ಲಿ ಕೆಟ್ಟದಾಗಿರುವುದನ್ನು ದ್ವೇಷಿಸುವುದೂ ಎಂದದರ ಅರ್ಥ.”
ಹುಡುಕುತ್ತಾ ಇರ್ರಿ!
ಜ್ಞಾನಾನ್ವೇಷಕರಿಗೆ ಅಮೂಲ್ಯವಾದ ಆತ್ಮಿಕ ರತ್ನಗಳನ್ನು ಕಂಡುಕೊಳ್ಳಲು ಸಹಾಯ ಮಾಡುವರೇ ಕಾವಲಿನಬುರುಜು ಪ್ರಕಾಶಿಸಲ್ಪಡುತ್ತದೆ. ದೇವ ವಾಕ್ಯದ ಜ್ಞಾನ ಮತ್ತು ತಿಳುವಳಿಕೆಯ ಅಗತ್ಯವು ನಮಗೆಲ್ಲರಿಗೂ ಅದೆ. ಜ್ಞಾನೋಕ್ತಿ 4:7, 8 ಅನ್ನುವುದು: “ಜ್ಞಾನವನ್ನು ಪಡೆಯಬೇಕೆಂಬದೇ ಜ್ಞಾನಬೋಧೆಯ ಪ್ರಥಮಪಾಠ; ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು ಪಡೆ, ತಿಳುವಳಿಕೆಯನ್ನು ಪಡೆದು ಅದನ್ನು ಶ್ರೇಷ್ಟವೆಂದೆಣಿಸು. ಅದು ನಿನ್ನನ್ನು ಉನ್ನತಿಗೆ ತರುವುದು. ನೀನದನ್ನು ಅಪ್ಪಿಕೊಂಡರೆ ಅದು ನಿನ್ನನ್ನು ಘನಪಡಿಸುವುದು.”
ಶಾಸ್ತ್ರವಚನಗಳ ಒಳನೋಟವನ್ನು ಪಡೆಯುವುದರಿಂದ ಮತ್ತು ಜ್ಞಾನವನ್ನು ಸರಿಯಾಗಿ ಉಪಯೋಗಿಸುವದರಿಂದ ಮಾತ್ರವೇ ನಾವು ನಿಜ ಸಂತೋಷವನ್ನು ಕಂಡುಕೊಳ್ಳಬಲ್ಲೆವು. ಹೌದು, ಮತ್ತು ದೇವಜ್ಞಾನವನ್ನು ಅಭ್ಯಾಸಿಸುವ ಮೂಲಕ ಮಾತ್ರವೇ ನಾವು ಯೆಹೋವನನ್ನು ಮೆಚ್ಚಿಸಬಲ್ಲೆವು. ಆದುದರಿಂದ, ಗುಪ್ತ ನಿಕ್ಷೇಪಕ್ಕಾಗಿಯೋ ಎಂಬಂತೆ ಜ್ಞಾನಕ್ಕಾಗಿ ಹುಡುಕುವುದರಿಂದ ನಿಮ್ಮನ್ನು ಯಾವುದೂ ತಡೆಯುವಂತೆ ಬಿಡಬೇಡಿರಿ. (w89 3/15)
[ಪುಟ 4,5 ರಲ್ಲಿರುವಚಿತ್ರಗಳು]
ಹೂಣಲ್ಪಟ್ಟ ನಿಕ್ಷೇಪದ ಶೋಧನೆಗೆ ಪರಿಶ್ರಮದ ಅಗೆತ ಬೇಕು. ಹಾಗಾದರೆ ದೇವಜ್ಞಾನ ಶೋಧಕ್ಕಾಗಿ ಎಡೆಬಿಡದ ಯತ್ನ ಅಗತ್ಯ ಇರಬೇಕಲ್ಲವೋ?