ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೀವು ಹೊಸ ವಿಚಾರಗಳಿಗೆ ತೆರೆದಿರುವಿರೋ?
    ಕಾವಲಿನಬುರುಜು—1990 | ಮೇ 1
    • ಆದಾಗ್ಯೂ ಅವರ ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಹಿಮ್ಮೆಟ್ಟಿಸಲು ಇಚ್ಚಿಸಿದ ಜನರು ಅಲಿದ್ದರು. ಉದಾಹರಣೆಗೆ, ಬೆರೋಯದ ನಿವಾಸಿಗಳು ಅಪೋಸ್ತಲ ಪೌಲ ಮತ್ತು ಅವನ ಸಂಗಾತಿ ಸೀಲನಿಂದ ಸಾರಲ್ಪಟ್ಟ ಸುವಾರ್ತೆಗೆ ಹೇಗೆ ಪ್ರತಿವರ್ತಿಸಿದರು? ಬೆರೋಯದವರ ಕುರಿತಾಗಿ ಬೈಬಲ್‌ ಲೇಖಕ ಲೂಕನು ಹೇಳಿದ್ದು: “ಆ ಸಭೆಯವರು ಥೆಸಲೋನಿಕದವರಿಗಿಂತ ಸದ್ಗುಣವುಳ್ಳವರಾಗಿದ್ದು ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.” (ಅ. ಕೃತ್ಯಗಳು 17:11) ಬೆರೋಯದವರಂತೆ ನೀವೂ “ಸದ್ಗುಣ” ಉಳ್ಳವರೋ?

      ಮಸಾಜಿಯ ವಿಷಯವನ್ನು ದಯಮಾಡಿ ಗಮನಿಸಿರಿ. ಒಂದು ಸಮಯದಲ್ಲಿ, ಕ್ರೈಸ್ತತ್ವದ ಕಡೆಗೆ ಬಲವಾದ ವಿರೋಧವು ಅವನಿಗಿತ್ತು. ಜಪಾನಿನ ತೆರೆಯುವಿಕೆಯ ಕಡೆಗೆ ವಿರೋಧವಿದ್ದ ಪ್ರತ್ಯೇಕವಾದಿಗಳಂತೆ ಅವನಿದ್ದನು. ಅವನ ಹೆಂಡತಿ, ಸಾಶಿಕೋ ಬೈಬಲನ್ನು ಅಭ್ಯಾಸಿಸಲು ಆರಂಭ ಮಾಡಿದಾಗ ಅವನು ಉಗ್ರವಾಗಿ ಅವಳನ್ನು ವಿರೋಧಿಸಿದನು. ಅವನು ತನ್ನ ಕುಟುಂಬವನ್ನು ಕೊಂದು ತನ್ನನ್ನೂ ಹತಿಸಿಕೊಳ್ಳುವದನ್ನೂ ಯೋಚಿಸಿದ್ದನು. ಅವನ ಹಿಂಸೆಯ ಕಾರಣ ಉತ್ತರ ಜಾಪಾನಿನಲ್ಲಿರುವ ಸಾಶಿಕೋಳ ಮನೆಗೆ ಅವನ ಹೆಂಡತಿ ಓಡಿಹೋಗಬೇಕಾಯಿತು.

      ಕೊನೆಗೆ ಮಸಾಜಿ ತನ್ನ ಮನಸ್ಸನ್ನು ಕೊಂಚ ತೆರೆದು, ತನ್ನ ಹೆಂಡತಿಯ ಧರ್ಮವನ್ನು ಪರೀಕ್ಷಿಸಲು ನಿರ್ಧರಿಸಿದನು. ಬೈಬಲಿನ ಕೆಲವು ಸಾಹಿತ್ಯಗಳನ್ನು ಓದಿದ ನಂತರ ಬದಲಾವಣೆಗಳನ್ನು ಮಾಡಬೇಕಾದ ಅವಶ್ಯಕತೆಯನ್ನು ಮನಗಂಡನು. ಅವನು ಶಾಸ್ತ್ರವಚನಗಳನ್ನು ಪರೀಕ್ಷಿಸಿದಂತೆಯೇ ಅವನ ಹಿಂಸಾಚಾರದ ಮನೋಭಾವವು ದೇವರ ಆತ್ಮದ ಫಲಗಳು ಪ್ರತಿಬಿಂಬಿಸುವಂತೆ ಬದಲಾವಣೆಗೊಂಡವು. (ಗಲಾತ್ಯ 5:22, 23) ಸಾಕ್ಷಿಗಳ ವಿರುದ್ಧ ತಾನು ಗೈದ ಹಿಂಸೆಯ ಕಾರಣ ಅವರು ಸೇಡು ತೀರಿಸಬಹುದೆಂದು ಮಸಾಜಿಯು ಹೆದರಿ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಲು ಸ್ವಲ್ಪ ಹಿಂಜರಿದನು. ಆದರೆ ಕೊನೆಗೆ, ಅವನು ರಾಜ್ಯ ಸಭಾಗೃಹಕ್ಕೆ ಭೇಟಿ ನೀಡಿದಾಗ ಅವನನ್ನು ಎಷ್ಟೊಂದು ಹುರುಪಿನಿಂದ ಸ್ವಾಗತಿಸಲಾಯಿತೆಂದರೆ ಅವನಲ್ಲಿ ಕಣ್ಣೀರಕೋಡಿ ಹರಿಯಿತು.

  • ನೀವು ಹೊಸ ವಿಚಾರಗಳಿಗೆ ತೆರೆದಿರುವಿರೋ?
    ಕಾವಲಿನಬುರುಜು—1990 | ಮೇ 1
    • ಇದರಿಂದ ನಾವೇನು ಕಲಿಯಬಹುದು? ಹೊಸ ವಿಚಾರಗಳನ್ನು ಸ್ವೀಕರಿಸುವುದರಲ್ಲಿ ನಾವು ಆರಿಸುವರಾಗಿರಬೇಕೆಂದೇ. “ಇವರು ಹೇಳುವ ಮಾತು (ಪೌಲನಿಂದ ಕಲಿಸಲ್ಪಟ್ಟದ್ದು) ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದ” ಬೆರೋಯದವರನ್ನು ನಾವು ಅನುಸರಿಸಿದರೆ ಒಳ್ಳೇದನ್ನು ಮಾಡುವೆವು. (ಅ.ಕೃತ್ಯಗಳು 17:11) ಇಲ್ಲಿ ಹೇಳಲ್ಪಟ್ಟ “ಶೋಧಿಸು” ಎಂಬ ಗ್ರೀಕ್‌ ಶಬ್ದದ ಅರ್ಥ “ನ್ಯಾಯಾಂಗ ಕಾರ್ಯವಿಧಾನಗಳಲ್ಲಿ ಹೇಗೋ ಹಾಗೆ ಜಾಗ್ರತೆಯ ಮತ್ತು ನಿಖರವಾದ ಪರಿಶೋಧನೆ” ಎಂದಾಗಿದೆ. (ವರ್ಡ್‌ ಪಿಚ್ಚರ್ಸ್‌ ಇನ್‌ ದ ನ್ಯೂ ಟೆಸ್ಟಮೆಂಟ್‌- ಎ. ಟಿ.  ರಾಬರ್ಟ್‌ಸನ್‌ರಿಂದ) ನಮಗೆ ಸಾದರ ಪಡಿಸಿದ ಎಲ್ಲಾ ಹೊಸ ವಿಚಾರಗಳನ್ನು ಕುರುಡುತನದಿಂದ ಸ್ವೀಕರಿಸುವ ಬದಲು, ಒಂದು ಕಾನೂನು ವ್ಯಾಜ್ಯವನ್ನು ಆಲಿಸುವಾಗ ನ್ಯಾಯಾಧೀಶನು ಮಾಡುವಂತೆ ನಾವು ಜಾಗ್ರತೆಯ ಮತ್ತು ನಿಖರವಾದ ಶೋಧನೆಯನ್ನು ಮಾಡುವ ಅಗತ್ಯವಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ